Gujarat| ಅಹಮದಾಬಾದ್ನ ಲೇಕ್ ಗಾರ್ಡನ್ನಲ್ಲಿ ನಮಾಜ್ ಆರೋಪ; ಸ್ಥಳ ಶುದ್ದೀಕರಣ ಮಾಡಿದ VHP
ಕೆಲವು ದಿನಗಳ ಹಿಂದೆ, ನಗರದ ಜನಪ್ರಿಯ ಹ್ಯಾಂಗ್ಔಟ್ ಆಗಿರುವ ವಸ್ತ್ರಾಪುರ ಲೇಕ್ ಗಾರ್ಡ್ನ್ನಲ್ಲಿ ನಾಲ್ಕು ಮಂದಿ ಮುಸ್ಲಿಂ ಪುರುಷರು ಮತ್ತು ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು.
ಲೇಕ್ ಗಾರ್ಡನ್ನಲ್ಲಿ ಬೀಡು ಬಿಟ್ಟಿರುವ ಗುಜರಾತ್ ಪೊಲೀಸರು.
ಅಹಮದಾಬಾದ್ (ನವೆಂಬರ್ 16); ಗುಜರಾತ್ನ (Gujarat) ಅಹಮದಾಬಾದ್ (Ahmedabad) ನಲ್ಲಿರುವ ಐಷಾರಾಮಿ ವಸ್ತ್ರಪುರ್ ಪ್ರದೇಶದಲ್ಲಿನ ಲೇಕ್ ಗಾರ್ಡ್ನ್ನಲ್ಲಿ (Lake Garden) ನವೆಂಬರ್ 15 ರಂದು ಕೆಲವು ಮುಸ್ಲೀಂ ಸಮಾಜದವರು ನಮಾಜ್ (0 ಸಲ್ಲಿಸಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (VHP) ಸದಸ್ಯರು ಇಂದು ಸ್ಥಳವನ್ನು ಶುದ್ಧೀಕರಣ ನಡೆಸಿರುವ ಘಟನೆ ವರದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಎಫ್ಐಆರ್ (FIR) ದಾಖಲಾಗಿಲ್ಲ ಮತ್ತು ನವೆಂಬರ್ 15 ರಂದು ನಡೆದ ಶುದ್ಧೀಕರಣ ಘಟನೆಯ ಬಗ್ಗೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ವಸ್ತ್ರಾಪುರ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ಖಂಬ್ಲಾ ಹೇಳಿದ್ದಾರೆ.
ಲೇಕ್ ಗಾರ್ಡನ್ನಲ್ಲಿ ನಮಾಜ್:
ಕೆಲವು ದಿನಗಳ ಹಿಂದೆ, ನಗರದ ಜನಪ್ರಿಯ ಹ್ಯಾಂಗ್ಔಟ್ ಆಗಿರುವ ವಸ್ತ್ರಾಪುರ ಲೇಕ್ ಗಾರ್ಡ್ನ್ನಲ್ಲಿ ನಾಲ್ಕು ಮಂದಿ ಮುಸ್ಲಿಂ ಪುರುಷರು ಮತ್ತು ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು. ಗಾರ್ಡ್ನ್ ಸಮೀಪವಿರುವ ಕಟ್ಟಡದ ನಿವಾಸಿಯೊಬ್ಬರು ಈ ವಿಡಿಯೊವನ್ನು ಚಿತ್ರೀಕರಿಸಿರಬಹುದು ಎನ್ನಲಾಗಿದೆ.
"ಸೋಮವಾರ ಸಂಜೆ, ಕೆಲವು ವಿಎಚ್ಪಿ ಕಾರ್ಯಕರ್ತರು ಸ್ಥಳವನ್ನು ಶುದ್ಧೀಕರಿಸಲು ಉದ್ಯಾನವನ್ನು ತಲುಪಿದ್ದರು. ಅವರು ಮಂತ್ರಗಳನ್ನು ಪಠಿಸಿ, ಸ್ಥಳದಲ್ಲಿ ಗಂಗಾಜಲ ಚಿಮುಕಿಸಿದ್ದಾರೆ. ಇದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಆಗಿತ್ತು. ಇಂತಹ ನಮಾಜ್ ಅಂತಿಮವಾಗಿ ಆ ತುಂಡು ಭೂಮಿಯ ಮೇಲೆ ಹಕ್ಕು ಸಾಧಿಸಲು ಕಾರಣವಾಗುತ್ತದೆ" ಎಂದು ಗುಜರಾತ್ ವಿಎಚ್ಪಿ ಕಾರ್ಯದರ್ಶಿ ಅಶೋಕ್ ರಾವಲ್ ಅವರನ್ನು ದಿ ಹಿಂದೂ ಉಲ್ಲೇಖಿಸಿದೆ.
ಮೂಲಗಳ ಪ್ರಕಾರ, ವೀಡಿಯೊದಲ್ಲಿ ನಮಾಜ್ ಮಾಡುತ್ತಿರುವವರು ಈ ಲೇಕ್ ಗಾರ್ಡ್ನ್ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಕರನ್ನು ನೋಡಲು ಬಂದಿರಬಹುದು ಎನ್ನಲಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ