Legal Heir: ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಂಡರೆ ಮಾತ್ರ ಆಸ್ತಿಯ ಉತ್ತರಾಧಿಕಾರದ ಹಕ್ಕು

ಮಿಜೋಗಳು ಪೋಷಕರನ್ನು ನೋಡಿಕೊಳ್ಳದೇ ಇದ್ದರೆ ಅವರ ಗಂಡು ಮಕ್ಕಳಿಗೆ ಆಸ್ತಿ ಹಕ್ಕು ಸಿಗುವುದಿಲ್ಲ. ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಹಕ್ಕುಗಳನ್ನು ದೃಢಪಡಿಸಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ, ಆದಾಗ್ಯೂ ಹಲವರು ಪೋಷಕರಿಗೆ (Parents) ವಯಸ್ಸಾಗುತ್ತಿದ್ದಂತೆ ವೃದ್ಧಾಶ್ರಮಕ್ಕೆ (Oldage) ಸೇರಿಸುವುದು, ಇಲ್ಲ ಅವರನ್ನು ನೋಡಿಕೊಳ್ಳದೇ ಕಡೆಗಣಿಸಿ ಬಿಡುತ್ತಾರೆ. ಇಂಥ ಮಕ್ಕಳಿಗಾಗಿ ಮಿಜೋರಾಂನಲ್ಲಿ (Mizoram) ಒಂದು ಉತ್ತಮ ಕಾನೂನನ್ನು ಮಾಡಲಾಗಿದೆ. 

ಈಶಾನ್ಯ ಭಾಗದ ಕೆಲವು ಜನಾಂಗೀಯ ಸಮುದಾಯಗಳಲ್ಲಿ, ಆಸ್ತಿಯ ಉತ್ತರಾಧಿಕಾರದ ಹಕ್ಕು, ವೃದ್ಧಾಪ್ಯದಲ್ಲಿ ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಾರೆಯೇ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ. ಪೋಷಕರನ್ನು ಅವರ, ವೃದ್ಧಾಪ್ಯದಲ್ಲಿ ನೋಡಿಕೊಂಡರೆ ಮಾತ್ರ ಅವರ ಆಸ್ತಿಯ ಮೇಲೆ ಮಕ್ಕಳಿಗೆ ಹಕ್ಕು ಸಿಗುತ್ತದೆ.  

ನೋಡಿಕೊಳ್ಳುವವರಿಗೆ ಆಸ್ತಿ ಹಕ್ಕು

ಮಿಜೋರಾಂನಲ್ಲಿ, 'ಮಿಜೋ ಕಸ್ಟಮರಿ ಕಾನೂನು' ಈ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಈ ಕಾನೂನನ್ನು ಇತ್ತೀಚೆಗೆ ಆಸ್ತಿ ವಿವಾದದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಮಿಜೋಗಳು ಪೋಷಕರನ್ನು ನೋಡಿಕೊಳ್ಳದೇ ಇದ್ದರೆ ಅವರ ಗಂಡು ಮಕ್ಕಳಿಗೆ ಆಸ್ತಿ ಹಕ್ಕು ಸಿಗುವುದಿಲ್ಲ. ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಹಕ್ಕುಗಳನ್ನು ದೃಢಪಡಿಸಿದೆ. ಮಿಜೋಗಳು ಮಿಜೋರಾಂ ಮತ್ತು ನೆರೆಯ ಪ್ರದೇಶಗಳ ಸ್ಥಳೀಯ ಜನಾಂಗೀಯ ಗುಂಪು.
ಮಿಜೋರಾಂನ 'ಅಹಿಂಸಾ' ಎಂಬ ಕುಟುಂಬದ ಮನೆಯ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪನ್ನು ಘೋಷಿಸಿದೆ.

ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್. ಮಿಜೋ ಕಸ್ಟಮರಿ ಕಾನೂನಿನ ಮೇಲೆ ಗೌಹಾಟಿ ಹೈಕೋರ್ಟಿನ (HC) ಅವಲೋಕನಗಳನ್ನು ಅವರು ಒಪ್ಪಿಕೊಂಡರು, ಅದರ ಅಡಿಯಲ್ಲಿ, "ಒಬ್ಬ ವ್ಯಕ್ತಿಯು ತನ್ನ ವೃದ್ಧಾಪ್ಯದಲ್ಲಿ ಹೆತ್ತವರನ್ನು ನೋಡಿಕೊಂಡಿದ್ದಾರೆ ಅಥವಾ ಇಲ್ಲವೇ ಎಂಬುವುದರ ಮೇಲೆ ಉತ್ತರಾಧಿಕಾರವು ಅವಲಂಬಿತವಾಗಿರುತ್ತದೆ" ಎಂದು ಪೀಠವು ಹೇಳಿದೆ.

ವಿವಾದ
ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ಪ್ರಕಾರ,  'ಅಹಿಂಸಾ’ ಕುಟುಂಬದ ದಹ್ರಾವ್ಕಾ ಮತ್ತು ಅವರ ಪತ್ನಿ ಕೈತುವಾಮಿ 1927ರಲ್ಲಿ ವಿವಾಹವಾದರು. ಅವರಿಗೆ ಎಂಟು ಮಕ್ಕಳು, ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದರು. ಅಹಿಂಸಾ ಕುಟುಂಬದ ಪಿ.ಎಸ್. ದಹ್ರಾವ್ಕಾ ಮಾರ್ಚ್ 1978ರಲ್ಲಿ ನಿಧನರಾದರು. ಅವರ ಕಿರಿಯ ಮಗಳು ತನ್ಸಂಗಿ ಹುಹಾ, ವಿಚ್ಛೇದನ ಪಡೆದರು ಮತ್ತು 1997ರಲ್ಲಿ ತನ್ನ ತಾಯಿ ಕೈತುವಾಮಿಯೊಂದಿಗೆ ವಾಸಿಸಲು ಹೋದರು. 1996ರಲ್ಲಿ  ದಹ್ರಾವ್ಕಾ ಅವರ ಏಕೈಕ ಪುತ್ರ, ಥನ್ನುನಾ ಅವರು ಸಹ ನಿಧನವಾದರು.

ಇದನ್ನು ಓದಿ: 2 ಕೋಟಿ ರೂಪಾಯಿ ಗೆದ್ದು ಶ್ರೀಮಂತನಾದ ಚಾಲಕ; 49 ರೂಪಾಯಿಗೆ ಹೊಡೆಯಿತು ಜಾಕ್‌ಪಾಟ್!

ಕುಟುಂಬದ ಮನೆ ಸೇರಿದಂತೆ ದಹ್ರಾವ್ಕಾ ಅವರ ಆಸ್ತಿಗಳ ವಿವಾದವು ಅವರ ಹೆಣ್ಣುಮಕ್ಕಳು, ಮೊಮ್ಮಕ್ಕಳು ಮತ್ತು ಮಗನ ಕುಟುಂಬದ ನಡುವೆ ನ್ಯಾಯಾಲಯದ ಮೆಟ್ಟಿಲೇರಿತು. ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಸುತ್ತಿನ ವ್ಯಾಜ್ಯಗಳ ನಂತರ, ಫೆಬ್ರವರಿ 2006ರಲ್ಲಿ ಜಿಲ್ಲಾ ಕೌನ್ಸಿಲ್ ನ್ಯಾಯಾಲಯವು ತನ್ಸಂಗಿ ಹುಹಾ ಅವರನ್ನು ಉತ್ತರಾಧಿಕಾರಿಯಾಗುವಂತೆ ನಿರ್ದೇಶಿಸಿತು. ಅಲ್ಲದೇ ಲಾಲ್ಮುವಾನ್‌ಪುಯಿ ಹುಹಾ - ದಹ್ರಾವ್ಕಾ ಅವರ ಮೊಮ್ಮಗಳು ಸಹ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತಾರೆ ಎಂದು ಘೊಷಿಸಿತು.

ಕಾನೂನುಬದ್ಧ ಉತ್ತರಾಧಿಕಾರಿ ನಿರ್ವಹಣೆ

ಜಿಲ್ಲಾ ಕೌನ್ಸಿಲ್ ನ್ಯಾಯಾಲಯವು ಮಿಜೋ ಕಸ್ಟಮರಿ ಕಾನೂನಿನ ಸೆಕ್ಷನ್ 109(3) ಮತ್ತು 109(10) ಅನ್ನು ಉಲ್ಲೇಖಿಸಿ, ಈ ಕಾನೂನಿನ ಪ್ರಕಾರ ಕಿರಿಯ ಮಗನು ತಂದೆಯ ಆಸ್ತಿಯನ್ನು ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದರೂ, “ನ್ಯಾಯಯುತ ಮತ್ತು ಸಮಂಜಸವಾದ ರೀತಿಯಲ್ಲಿ ಆಸ್ತಿಯ ಹಂಚಿಕೆಗೆ ಸಾಕಷ್ಟು ಅವಕಾಶವಿದೆ.” ಎಂದು ಹೇಳಿದೆ. ಸಾಂಪ್ರದಾಯಿಕ ಕಾನೂನಿನ ಪ್ರಕಾರ, ಉತ್ತರಾಧಿಕಾರವು "ಕಾನೂನುಬದ್ಧ ಉತ್ತರಾಧಿಕಾರಿ ನಿರ್ವಹಿಸುವ ಜವಾಬ್ದಾರಿಗಳ" ಮೇಲೆ ಅವಲಂಬಿತವಾಗಿರುತ್ತದೆ ಎಂದು ನ್ಯಾಯಪೀಠ ಪ್ರತಿಪಾದಿಸಿತು.

ಇದನ್ನು ಓದಿ: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

ಜಿಲ್ಲಾ ಕೌನ್ಸಿಲ್ ನ್ಯಾಯಾಲಯವು ಇತರ ಹೆಣ್ಣುಮಕ್ಕಳು ವಿವಾಹವಾಗಿರುವುದರಿಂದ, ಅವರು ಯಾವುದೇ ಪಾಲು ಪಡೆಯಲು ಅರ್ಹರಲ್ಲ ಎಂದು ಹೇಳಿದೆ. ತಂಸಂಗಿಯ ತನ್ನ ತಾಯಿಯನ್ನು ಸಾಯುವವರೆಗೂ ನೋಡಿಕೊಂಡಿದ್ದಾಳೆ  ಹೀಗಾಗಿ ಆಸ್ತಿಯ ಮೇಲೆ ಆಕೆಗೆ ಹಕ್ಕಿದೆ ಎಂದು ಹೇಳಿದೆ.

'ಜವಾಬ್ದಾರಿಗಳೊಂದಿಗೆ ಆನುವಂಶಿಕ  ಹಕ್ಕುಗಳು'
ಜಿಲ್ಲಾ ಕೌನ್ಸಿಲ್ ನ್ಯಾಯಾಲಯದ ಆದೇಶವನ್ನು ಥನ್ನುನಾ ಅವರ ಕುಟುಂಬವು ಗೌಹಾಟಿ ಹೈಕೋರ್ಟ್‌ನಲ್ಲಿ (HC) ಪ್ರಶ್ನಿಸಿತು, ಇದು ನವೆಂಬರ್ 2007ರಲ್ಲಿ ಹಿಂದಿನ ನಿರ್ಧಾರವನ್ನು ರದ್ದುಗೊಳಿಸಿ ಹೈಕೋರ್ಟ್‌ ತನ್‌ನುನಾ ಕಾನೂನು ಉತ್ತರಾಧಿಕಾರಿ ಎಂದು ತೀರ್ಪು ನೀಡಿತು.  ಈ ತೀರ್ಪಿನ ನಂತರ ಇತರ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು.

ಸರ್ವೋಚ್ಚ ನ್ಯಾಯಾಲಯದ ಮುಂದೆ, ತನ್ಸಂಗಿ ಅವರ ವಕೀಲರು, ಮಿಜೋ ಕಸ್ಟಮರಿ ಕಾನೂನಿನಡಿಯಲ್ಲಿ, "ಇದು ಹಕ್ಕುಗಳು ಮಾತ್ರವಲ್ಲ, ಜವಾಬ್ದಾರಿಗಳೂ ಸಹ ಪಿತ್ರಾರ್ಜಿತವಾಗಿ ಬಂದಿವೆ" ಎಂದು ವಾದಿಸಿದರು. ಆದ್ದರಿಂದ, ಉತ್ತರಾಧಿಕಾರವು ಕಾನೂನುಬದ್ಧ ಉತ್ತರಾಧಿಕಾರಿಗಳು ತಮ್ಮ ಪೋಷಕರಿಗೆ ವಹಿಸುವ ಜವಾಬ್ದಾರಿಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.

ಮಿಜೋರಾಂ ಕಸ್ಟಮರಿ ಕಾನೂನು
ಭಾರತದಲ್ಲಿ, ನ್ಯಾಯಾಲಯಗಳು ಸಮುದಾಯಕ್ಕೆ ಅತ್ಯಗತ್ಯವಾಗಿರುವ ಪದ್ಧತಿಗಳು ಮತ್ತು ಆಚರಣೆಗಳನ್ನು ರೂಪಿಸುವ ಕೆಲವು ಸಾಂಪ್ರದಾಯಿಕ ಕಾನೂನುಗಳನ್ನು ಗುರುತಿಸುತ್ತವೆ. ಮಿಜೋರಾಂ ಕಸ್ಟಮರಿ ಕಾನೂನನ್ನು ಮಿಜೋರಾಂ ಜಿಲ್ಲಾ ಕೌನ್ಸಿಲ್‌ನ ಕಾರ್ಯದರ್ಶಿ 1957 ರಲ್ಲಿ ಕ್ರೋಡೀಕರಿಸಿದರು. ಇದು ಮಿಜೋ ಸಮುದಾಯಕ್ಕೆ ಮಾತ್ರ ಅನ್ವಯಿಸುತ್ತದೆ.
IOSR ಜರ್ನಲ್ ಆಫ್ ಹ್ಯುಮಾನಿಟೀಸ್ ಅಂಡ್ ಸೋಶಿಯಲ್ ಸೈನ್ಸ್‌ನಲ್ಲಿ ಪ್ರಕಟವಾದ 2017ರ ಪತ್ರಿಕೆಯ ಪ್ರಕಾರ, ಈಶಾನ್ಯದಲ್ಲಿರುವ ಬೋಡೋ ಸಮುದಾಯದ ಪರಂಪರೆಯ ಸಾಂಪ್ರದಾಯಿಕ ರೂಢಿಗಳು ಉತ್ತರಾಧಿಕಾರಿಯ ಮೇಲೆ ಇದೇ ಕಾನೂನನ್ನು ಅನುಸರಿಸುತ್ತವೆ. ವಾರಸುದಾರನು ತಂದೆ-ತಾಯಿಯ ಅಂತಿಮ ಸಂಸ್ಕಾರವನ್ನು ಮಾಡಲು ಬದ್ಧನಾಗಿರುತ್ತಾನೆ ಮತ್ತು ಅವರಲ್ಲಿ ಒಬ್ಬರ ಮರಣದ ಸಂದರ್ಭದಲ್ಲಿ, ಉಳಿದ ಪೋಷಕರನ್ನು ನೋಡಿಕೊಳ್ಳಬೇಕು ಎಂದು ಪತ್ರಿಕೆ ಹೇಳುತ್ತದೆ.

ಖಾಸಿ ಬುಡಕಟ್ಟು, ಮಾತೃವಂಶೀಯ ವ್ಯವಸ್ಥೆಯನ್ನು ಹೊಂದಿದೆ ಮತ್ತು ಹೆಣ್ಣುಮಕ್ಕಳ ಮೇಲೆ ಉತ್ತರಾಧಿಕಾರದ ಹಕ್ಕನ್ನು ಹೊಂದಿದೆ, ಅವರ ಮೇಲೂ ಸಹ ಇದೇ ರೀತಿಯ ಕರ್ತವ್ಯಗಳನ್ನು ವಿಧಿಸುತ್ತದೆ. ಮಗಳು ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಬೇಕು, ತನ್ನ ಹೆತ್ತವರನ್ನು ಅವರು ಬದುಕಿರುವವರೆಗೂ ನೋಡಿಕೊಳ್ಳಬೇಕು.
Published by:Seema R
First published: