HOME » NEWS » National-international » RIDICULOUS RAHUL GANDHI ON GOVERNMENTS NEED NOT WANT VACCINE LOGIC MAK

Rahul Gandhi: ಅಗತ್ಯವಿರುವವರಿಗೆ ಮಾತ್ರ ಕೊರೋನಾ ಲಸಿಕೆ ನೀಡಿದರೆ ಉಳಿದವರ ಕಥೆ ಏನು?; ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಅಗತ್ಯಗಳು ಮತ್ತು ಬಯಕೆಗಳು ಎಂಬ ಚರ್ಚೆ ಹಾಸ್ಯಾಸ್ಪದವಾಗಿದೆ. ಪ್ರತಿಯೊಬ್ಬ ಭಾರತೀಯನು ಸುರಕ್ಷಿತ ಜೀವನಕ್ಕೆ ಅರ್ಹನಾಗಿದ್ದಾನೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎಲ್ಲರಿಗೂ ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕು ಎಂದಿದ್ದಾರೆ.

news18-kannada
Updated:April 7, 2021, 5:09 PM IST
Rahul Gandhi: ಅಗತ್ಯವಿರುವವರಿಗೆ ಮಾತ್ರ ಕೊರೋನಾ ಲಸಿಕೆ ನೀಡಿದರೆ ಉಳಿದವರ ಕಥೆ ಏನು?; ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ
ರಾಹುಲ್ ಗಾಂಧಿ.
  • Share this:
ನವ ದೆಹಲಿ (ಏಪ್ರಿಲ್ 07); ದೇಶದಲ್ಲಿ ಕೊರೋನಾ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೋಂಕು ಪೀಡಿತರ ಸಂಖ್ಯೆ ಎಲ್ಲಾ ರಾಜ್ಯದಲ್ಲೂ ಏರಿಕೆಯಾಗುತ್ತಲೇ ಇದೆ. ಮತ್ತೊಂದೆಡೆ ಕೊರೋನಾ ಲಸಿಕೆ ನೀಡುವ ಕೆಲಸವು ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಲಸಿಕೆ ಅಗತ್ಯ ಇರುವವರು ಮಾತ್ರ ತೆಗೆದುಕೊಳ್ಳಿ. ಲಸಿಕೆ ತೆಗೆದುಕೊಳ್ಳುವುದು ಬಿಡುವುದು ಜನರ ನಿರ್ಧಾರ ಎಂದು ತಿಳಿಸಿದೆ. ಹೀಗಾಗಿ ಬಹುಪಾಲು ಜನ ಕೊರೋನಾ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ ಸರ್ಕಾರ ಈ ಕ್ರಮವನ್ನು ಟೀಕಿಸಿರುವ ರಾಹುಲ್ ಗಾಂಧಿ, "ಕೊರೋನಾ ಲಸಿಕೆ ಅಗತ್ಯವಿದ್ದರೆ ಹಾಕಿಸಿಕೊಳ್ಳಿ ಎನ್ನುವುದು ಸರಿಯೇ? ಪ್ರತಿಯೊಬ್ಬ ಭಾರತೀಯನೂ ಸುರಕ್ಷಿತ ಜೀವನಕ್ಕೆ ಅರ್ಹನಾಗಿರುತ್ತಾನೆ" ಎಂದು ಟ್ವೀಟ್ ಮಾಡುವ ಮೂಲಕ ದೇಶದ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, "ಅಗತ್ಯಗಳು ಮತ್ತು ಬಯಕೆಗಳು ಎಂಬ ಚರ್ಚೆ ಹಾಸ್ಯಾಸ್ಪದವಾಗಿದೆ. ಪ್ರತಿಯೊಬ್ಬ ಭಾರತೀಯನು ಸುರಕ್ಷಿತ ಜೀವನಕ್ಕೆ ಅರ್ಹನಾಗಿದ್ದಾನೆ" ಎಂದು 50 ವರ್ಷದ ರಾಹುಲ್ ಗಾಂಧಿ #CovidVaccine ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ, "ಲಸಿಕೆಯನ್ನು ಬಯಸುವವರಿಗೆ ನೀಡುವುದು ಇದರ ಉದ್ದೇಶವಲ್ಲ, ಆದರೆ ಅಗತ್ಯವಿರುವವರಿಗೆ ನೀಡಲಾಗುತ್ತದೆ. ಲಸಿಕೆಗಳ ಸೀಮಿತ ಪೂರೈಕೆಯಿಂದಾಗಿ ಕೆಲವು ಗುಂಪುಗಳಿಗೆ ಆದ್ಯತೆ ನೀಡಲಾಗಿದೆ" ಎಂದಿದ್ದರು.

"ನಾವು ಕೆಲವು ಗುಂಪುಗಳಿಗೆ ಇತರರಿಗಿಂತ ಏಕೆ ಆದ್ಯತೆ ನೀಡಿದ್ದೇವೆ? ಎಂದರೆ, ಜುಲೈವರೆಗೆ ನಡೆಯಲಿರುವ ವ್ಯಾಕ್ಸಿನೇಷನ್‌ನಲ್ಲಿ ಲಸಿಕೆಗಳು ಸೀಮಿತವಾಗಿವೆ" ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಹಿಂದೆ ತಮ್ಮ ಟ್ವೀಟ್‌ಗಳ ಮೂಲಕ ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸಿ ಮತ್ತು ಸೋಂಕುಗಳು ಹೆಚ್ಚಾಗುತ್ತಿದ್ದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕೆಂದು ಒತ್ತಾಯಿಸಿದ್ದರು.

ಇದನ್ನೂ ಓದಿ: CoronaVirus: ಕೊರೋನಾ ತಡೆಗಾಗಿ ಪಂಜಾಬ್​ನಲ್ಲಿ ರಾತ್ರಿ ಕರ್ಪ್ಯೂ ಜಾರಿ; ರಾಜಕೀಯ ರ‍್ಯಾಲಿಗಳನ್ನು ಅಮರೀಂದರ್ ಸಿಂಗ್ ಸರ್ಕಾರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೊಪೆ "20 ರಿಂದ 40 ವರ್ಷದೊಳಗಿನ ಜನರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕು ಎಂದು ನಾವು ಕೇಂದ್ರವನ್ನು ಒತ್ತಾಯಿಸಿದ್ದೇವೆ" ಎಂದಿದ್ದಾರೆ. ಆದರೂ ಮೊದಲು ಅತ್ಯಂತ ದುರ್ಬಲರಿಗೆ ಲಸಿಕೆ ಹಾಕುವ ಅಗತ್ಯವನ್ನು ಕೇಂದ್ರ ಸರ್ಕಾರ ಒತ್ತಿಹೇಳಿದೆ.

ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಸೋಂಕಿರುವ ರಾಜ್ಯವಾದ ಮಹಾರಾಷ್ಟ್ರದ ಹಲವಾರು ವ್ಯಾಕ್ಸಿನೇಷನ್ ಕೇಂದ್ರಗಳು ಲಸಿಕೆಗಳ ಕೊರತೆಯನ್ನು ಅನುಭವಿಸುತ್ತಿವೆ. ಲಸಿಕೆಯ ಕೊರತೆಯಿಂದಾಗಿ ಜನರನ್ನು ಹಿಂತಿರುಗುವಂತೆ ಹೇಳಲಾಗುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ.
Published by: MAshok Kumar
First published: April 7, 2021, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories