• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bernard Arnault: ಸಾಮ್ರಾಜ್ಯದ ಉತ್ತರಾಧಿಕಾರಿಯನ್ನು ಹೇಗೆ ಆಯ್ಕೆ ಮಾಡುತ್ತಾರೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

Bernard Arnault: ಸಾಮ್ರಾಜ್ಯದ ಉತ್ತರಾಧಿಕಾರಿಯನ್ನು ಹೇಗೆ ಆಯ್ಕೆ ಮಾಡುತ್ತಾರೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬರ್ನಾರ್ಡ್‌ ಅರ್ನಾಲ್ಟ್‌ ಮತ್ತು ಮಕ್ಕಳ ಭೋಜನಕೂಟ ಕಾರ್ಯಕ್ರಮವನ್ನು LVMH Moet Hennessy Louis Viitton SE ನ ಪ್ರಧಾನ ಕಛೇರಿಯ ಖಾಸಗಿ ಊಟದ ಕೋಣೆಯಲ್ಲಿ ಆಯೋಜಿಸಲಾಗಿದೆ ಎಂದು ವರದಿಯಾಗಿದೆ.

  • Share this:

ವಿಶ್ವದ ಶ್ರೀಮಂತ ವ್ಯಕ್ತಿ, ಸಿಇಒ ಮತ್ತು ಲೂಯಿ ವಿಟಾನ್ (LVMH) ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್ ಮಕ್ಕಳಲ್ಲಿ (Childrens) ಯಾರು ಸಮರ್ಥರು ಎಂಬುದನ್ನು ನಿರ್ಧರಿಸಲು ಮಕ್ಕಳ ಜೊತೆ ಊಟದ ಕೂಟವನ್ನು ಯೋಜಿಸುತ್ತಿದ್ದಾರೆ. ಸದಾ ಬ್ಯುಸಿಯಾಗಿರುವ ಇವರು ತಮ್ಮ ಐವರು ಮಕ್ಕಳ ಜೊತೆ ತಿಂಗಳಿಗೊಮ್ಮೆ ಊಟ (Dinner) ಮಾಡುವ ಮೂಲಕ ತಮ್ಮ ಬಹುದೊಡ್ಡ ಸಾಮ್ರಾಜ್ಯವನ್ನು ನಡೆಸುವ ಸಾಮರ್ಥ್ಯ ಯಾರಿಗೆ ಇದೆ ಎಂದು ತಿಳಿಯಲು ಈ ಕೂಟ ಕಾರ್ಯಕ್ರಮವನ್ನು (Program) ಯೋಜಿಸಿದ್ದಾರೆ.


ಊಟದ ಸಮಯದಲ್ಲಿ ಮಕ್ಕಳ ಪರೀಕ್ಷೆ


ಬರ್ನಾರ್ಡ್‌ ಅರ್ನಾಲ್ಟ್‌ ಮತ್ತು ಮಕ್ಕಳ ಭೋಜನಕೂಟ ಕಾರ್ಯಕ್ರಮವನ್ನು LVMH Moet Hennessy Louis Viitton SE ನ ಪ್ರಧಾನ ಕಛೇರಿಯ ಖಾಸಗಿ ಊಟದ ಕೋಣೆಯಲ್ಲಿ ಆಯೋಜಿಸಲಾಗಿದೆ ಎಂದು ವರದಿಯಾಗಿದೆ.


90 ನಿಮಿಷಗಳ ಕಾಲ ನಡೆಯುವ ಭೋಜನ ಕೂಟ


ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದ ವರದಿಯ ಪ್ರಕಾರ, ಉಪಾಹಾರ ಕೂಟವು 90 ನಿಮಿಷಗಳ ಕಾಲ ನಡೆಯುತ್ತದೆ ಎಂದು ತಿಳಿದುಬಂದಿದೆ. ಖಾಸಗಿ ಸಭೆಯಲ್ಲಿ, ಅರ್ನಾಲ್ಟ್ ತಮ್ಮ ಮಕ್ಕಳೊಂದಿಗೆ ತಮ್ಮ ಐಷಾರಾಮಿ ವ್ಯಾಪಾರ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ವ್ಯಾಪಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ತಮ್ಮ ಐದು ವಯಸ್ಕ ಮಕ್ಕಳಿಂದ ವ್ಯಾಪಾರ ತಂತ್ರಗಳ ಬಗ್ಗೆ ಸಲಹೆ ಕೇಳಲಿದ್ದಾರೆ ಬರ್ನಾರ್ಡ್.‌


ಇದನ್ನೂ ಓದಿ: Success Story: ಒಂದೆಡೆ ಸುಂಸ್ಕೃತ ಗೃಹಿಣಿರು ಇನ್ನೊಂದೆಡೆ ದೇಶ ಕಾಯುವ ಧೀರ ವನಿತೆಯರು; CRPF ಮಹಿಳಾ ಸಶಸ್ತ್ರಪಡೆ ಬಗ್ಗೆ ಇಲ್ಲಿದೆ ಮಾಹಿತಿ


ಏನೆಲ್ಲಾ ಚರ್ಚೆ ನಡೆಯಬಹುದು?


ಅರ್ನಾಲ್ಟ್ ಕಂಪನಿಯಲ್ಲಿ ನೇಮಕಗೊಂಡಿರುವ ನಿರ್ದಿಷ್ಟ ಮ್ಯಾನೇಜರ್‌ಗಳ ಕುರಿತು ಮಕ್ಕಳ ಅಭಿಪ್ರಾಯವನ್ನು ಕೇಳಬಹುದು ಎನ್ನಲಾಗಿದೆ. ಹಾಗೆಯೇ LVMH ಹೊಂದಿರುವ ಅನೇಕ ಬ್ರಾಂಡ್‌ಗಳ ಬಗ್ಗೆಯೂ ಚರ್ಚಿಸುವ ಸಂಭವ ಇದೆ. ಈ ಕೆಲ ವಿಷಯಗಳ ಜೊತೆ ಹಲವು ವಿಷಯಗಳನ್ನು ಚರ್ಚಿಸಲಿರುವ ಆರ್ನಾಲ್ಟ್‌ ಮಕ್ಕಳು ನೀಡುವ ಉತ್ತರ, ಸಲಹೆ ಮೇರೆಗೆ ತನ್ನ ಉತ್ತರಾಧಿಕಾರಿ ಯಾರೆಂದು ಆಯ್ಕೆ ಮಾಡುತ್ತಾರೆ.


ಕೇವಲ ಶುದ್ಧ ಅರ್ಹತೆಯ ಆಧಾರದ ಮೇಲೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ವಿಧಾನವನ್ನು ಕಡ್ಡಾಯವಾಗಿ ಪಾಲಿಸಲಿರುವ ಬರ್ನಾರ್ಡ್‌ ಅರ್ನಾಲ್ಟ್‌ ಮುಂದೆ ಯಾರಿಗೆ ಪಟ್ಟಾಭಿಷೇಕ ಮಾಡುತ್ತಾರೆ ಎಂಬ ಕುತೂಹಲ ಈಗ ಹೆಚ್ಚಾಗಿದೆ. ಅರ್ನಾಲ್ಟ್‌ಗೆ ಸಹ ವಯಸ್ಸಾಗುತ್ತಾ ಬಂದಿದ್ದು, ತಮ್ಮ ಬಿಲಿಯನ್‌ ಡಾಲರ್‌ ಮೌಲ್ಯದ ಸಾಮ್ರಾಜ್ಯವನ್ನು ಯಾರ ಕೈಗೆ ಇಡಬೇಕೆಂಬುದರ ಬಗ್ಗೆ ಹೆಚ್ಚಿನ ಕಾಳಜಿವಹಿಸಿರುವ ಇವರು ಕಂಪನಿಯ ಬಗ್ಗೆ ಕುರಿತಂತೆ ಮತ್ತು ಕಂಪನಿ ನಡೆಸಲು ಬೇಕಿರುವ ಎಲ್ಲಾ ತರಬೇತಿ ನೀಡಲು ಯೋಜನೆ ರೂಪಿಸಿಕೊಂಡಿದ್ದಾರೆ.


ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಅರ್ನಾಲ್ಟ್ ಕಳೆದ ವರ್ಷ ಟೆಸ್ಲಾ ಸಿಇಒ ಎಲೋನ್ ಮಸ್ಕ್‌ರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದರು. ಏಪ್ರಿಲ್ 19 ರಂದು, ಸೂಚ್ಯಂಕದ ಪ್ರಕಾರ, ಇವರ ಸಂಪತ್ತು $ 208 ಬಿಲಿಯನ್ ಆಗಿದೆ.
ಬಹುದೊಡ್ಡ ಉದ್ಯಮ ಕಟ್ಟಿದ ಅರ್ನಾಲ್ಟ್


ಪ್ರಮುಖ ಐಷಾರಾಮಿ ಬ್ರಾಂಡ್ ಕಂಪನಿಗಳಲ್ಲಿ ಅರ್ಧದಷ್ಟು ಅರ್ನಾಲ್ಟ್ ಒಡೆತನದಲ್ಲಿದೆ. 1989 ರಲ್ಲಿ, ಬಿಲಿಯನೇರ್ LVMH ನಲ್ಲಿ ನಿಯಂತ್ರಕ ಪಾಲನ್ನು ಸ್ವಾಧೀನಪಡಿಸಿಕೊಂಡರು.


ಕಂಪನಿಯ ಪೋರ್ಟ್‌ಫೋಲಿಯೊದ ಭಾಗವಾಗಿರುವ ಹಲವಾರು ಐಷಾರಾಮಿ ಬ್ರಾಂಡ್‌ಗಳಾದ ಲೂಯಿ ವಿಟಾನ್, ಬಲ್ಗರಿ, ಟಿಫಾನಿ, ಸೆಫೊರಾ, TAG ಹ್ಯೂರ್ ಮತ್ತು ಡೊಮ್ ಪೆರಿಗ್ನಾನ್ ಷಾಂಪೇನ್ ಇದಕ್ಕೆ ಸೇರಿವೆ. ಅರ್ನಾಲ್ಟ್ ಅವರ ಮಕ್ಕಳನ್ನು ಈಗಾಗಲೇ ಕಂಪನಿಯ ಪ್ರಮುಖ ಹುದ್ದೆಗಳಿಗೆ ನೇಮಿಸಲಾಗಿದೆ. ಅವರ ಐದು ಮಕ್ಕಳಲ್ಲಿ ಹಿರಿಯ, ಡೆಲ್ಫಿನ್, ಸಾಮ್ರಾಜ್ಯದ ಎರಡನೇ ಅತಿದೊಡ್ಡ ಬ್ರ್ಯಾಂಡ್ ಕ್ರಿಶ್ಚಿಯನ್ ಡಿಯರ್ನ ಮುಖ್ಯಸ್ಥರಾಗಿದ್ದಾರೆ.


ಫ್ರೆಡೆರಿಕ್ ಅರ್ನಾಲ್ಟ್ ಅವರು TAG ಹ್ಯೂಯರ್‌ನ CEO ಸ್ಥಾನವನ್ನು ಹೊಂದಿದ್ದಾರೆ ಮತ್ತು ಅಲೆಕ್ಸಾಂಡ್ರೆ ಅರ್ನಾಲ್ಟ್ ಟಿಫಾನಿಯಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಐದು ಮಕ್ಕಳಲ್ಲಿ ಕಿರಿಯ, ಜೀನ್ ಅರ್ನಾಲ್ಟ್ ಅವರು ಲೂಯಿ ವಿಟಾನ್‌ನ ವಾಚ್ ವಿಭಾಗಕ್ಕೆ ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ನಿರ್ವಹಿಸುತ್ತಿದ್ದಾರೆ. ಈಗಾಗ್ಲೇ ಕಂಪನಿಯ ವಾತವಾರಣ, ಕೆಲಸದ ಬಗ್ಗೆ ಗೊತ್ತಿರುವ ಮಕ್ಕಳಿಗೆ ಮತ್ತಷ್ಟು ತರಬೇತಿ ನೀಡುವ ಗುರಿ ಹೊಂದಿದ್ದಾರೆ ಬಿಲಿಯನೇರ್‌ ಅರ್ನಾಲ್ಟ್.

top videos
    First published: