ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ ಈ ಕೋಟ್ಯಧಿಪತಿ..!

ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಬಾಹ್ಯಾಕಾಶ ನೌಕೆಯ ಮುಂದಿನ ಪರೀಕ್ಷೆಯನ್ನು ಫೆಬ್ರವರಿ 20 ಕ್ಕೆ ಮಾಡಲಾಗುತ್ತದೆ. ಜುಲೈನಲ್ಲಿ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಅದೇ ತಿಂಗಳಲ್ಲಿ ಚಂದ್ರಲೋಕಕ್ಕೆ ತೆರಳುತ್ತಿದ್ದೇವೆ ಎಂದು ಬ್ರಾನ್ಸನ್​ ಹೇಳಿದ್ದಾರೆ. 

Latha CG | news18
Updated:February 8, 2019, 5:50 PM IST
ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ ಈ ಕೋಟ್ಯಧಿಪತಿ..!
ರಿಚರ್ಡ್​ ಬ್ರಾನ್ಸನ್​​​
  • News18
  • Last Updated: February 8, 2019, 5:50 PM IST
  • Share this:
ವಾಷಿಂಗ್ಟನ್​,(ಫೆ.8): ಇಂಗ್ಲೆಂಡ್​ನ ಕೋಟ್ಯಧಿಪತಿ, ಅತೀ ದೊಡ್ಡ ಶ್ರೀಮಂತ ರಿಚರ್ಡ್​​ ಬ್ರಾನ್ಸನ್​ ಇನ್ನು ನಾಲ್ಕೈದು ತಿಂಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ. ಅದು ಕೂಡ ತಮ್ಮ ಸ್ವಂತ ವರ್ಜಿನ್​ ಗ್ಯಾಲಕ್ಟಿಕ್​ ಬಾಹ್ಯಾಕಾಶ ನೌಕೆಯಲ್ಲಿ.

'ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ 50 ನೇ ವರ್ಷದ ನೆನಪಿಗಾಗಿ ಚಂದ್ರಲೋಕಕ್ಕೆ ಹೋಗುವ ಆಸೆ ಇದೆ. ಹೀಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಬ್ರಾನ್ಸನ್​ ಜೊತೆಗೆ 6 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್​​​ಗಳು  ಚಂದ್ರಲೋಕಕ್ಕೆ ತೆರಳಲಿದ್ದಾರೆ. ಇಬ್ಬರು ಪೈಲಟ್​ಗಳು ಬಾಹ್ಯಾಕಾಶ ನೌಕೆಯನ್ನು ನಡೆಸಲಿದ್ದಾರೆ.

2021 ರ ಡಿಸೆಂಬರ್​ನಲ್ಲಿ ಮಾನವ ಸಹಿತ ಗಗನಯಾನ; ಇಸ್ರೋ ಅಧ್ಯಕ್ಷ ಕೆ.ಶಿವನ್​

ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಬಾಹ್ಯಾಕಾಶ ನೌಕೆಯ ಮುಂದಿನ ಪರೀಕ್ಷೆಯನ್ನು ಫೆಬ್ರವರಿ 20 ಕ್ಕೆ ಮಾಡಲಾಗುತ್ತದೆ. ಜುಲೈನಲ್ಲಿ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದ್ದು, ಅದೇ ತಿಂಗಳಲ್ಲಿ ಚಂದ್ರಲೋಕಕ್ಕೆ ತೆರಳುತ್ತಿದ್ದೇವೆ ಎಂದು ಬ್ರಾನ್ಸನ್​ ಹೇಳಿದ್ದಾರೆ.

ಬ್ರಾನ್ಸನ್​​ ಅವರು ವರ್ಜಿನ್​ ಗ್ರೂಪ್​ ನ ಮುಖ್ಯಸ್ಥರು. ವರ್ಜಿನ್​ ಗ್ಯಾಲಾಟಿಕ್​ ಮತ್ತು ಬ್ಲೂ ವರಿಜಿನ್​ ಎರಡು ಕಂಪನಿಗಳು ಜನರನ್ನು ಚಂದ್ರಲೋಕಕ್ಕೆ ಕಳುಹಿಸುವ ಕಾರ್ಯದಲ್ಲಿ ನಿರತವಾಗಿವೆ. ಈ ಕಂಪನಿಗಳು 'ಸಬ್​ ಆರ್ಬಿಟಲ್'​ ವಿಮಾನಗಳಲ್ಲಿ ನೂರು ಅಥವಾ ಸಾವಿರ ಜನರನ್ನು ಚಂದ್ರಲೋಕಕ್ಕೆ ಕಳುಹಿಸುತ್ತವೆ.

2023 ರ ಹೊತ್ತಿಗೆ ಜಪಾನಿನ ಕೋಟ್ಯಧಿಪತಿಯನ್ನು ಚಂದ್ರಲೋಕಕ್ಕೆ ಕಳುಹಿಸಲು ಯೋಜಿಸಲಾಗಿದೆ. ಅಮೆರಿಕಾದ ಅಪೋಲೋ 11 ಮಿಷನ್​ 1969 ರ ಜುಲೈ 20 ರಂದು ಚಂದ್ರನ ಮೇಲೆ ಕಾಲಿಟ್ಟಿತ್ತು.

First published:February 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ