• Home
  • »
  • News
  • »
  • national-international
  • »
  • Traffic Rules Break: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬ್ರಿಟನ್‌ ದಳಪತಿ, ಖಡಕ್ ತೀರ್ಪು ನೀಡಿದ ನ್ಯಾಯಾಲಯ

Traffic Rules Break: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬ್ರಿಟನ್‌ ದಳಪತಿ, ಖಡಕ್ ತೀರ್ಪು ನೀಡಿದ ನ್ಯಾಯಾಲಯ

ಫಿಟ್ಜಲನ್-ಹೊವಾರ್ಡ್

ಫಿಟ್ಜಲನ್-ಹೊವಾರ್ಡ್

Traffic Rules Break: ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸುತ್ತಿರುವ ಎಡ್ವರ್ಡ್ ಫಿಟ್ಜಲನ್-ಹೊವಾರ್ಡ್ ಮಾಡಿದ್ದೇನು ಅನ್ನೋದನ್ನು ತಿಳಿಬೇಕಾದ್ರೆ ಈ ಆರ್ಟಿಕಲ್ ಓದಿ.

  • Share this:

ಅಮೆರಿಕ (America), ಬ್ರಿಟನ್‌ ನಂತಹ ರಾಷ್ಟ್ರಗಳಲ್ಲಿ (President) ಟ್ರಾಫಿಕ್‌ ರೂಲ್ಸ್‌ ಗಳು ಕಠಿಣವಾಗಿವೆ. ಚಿಕ್ಕ ತಪ್ಪು ಸಿಕ್ಕಿದರೂ ಸಾಕು, ಅವರು ಶ್ರೀಮಂತರೇ ಆಗಲಿ ಅಥವಾ ಬಡವರೇ ಆಗಲಿ ಅವರನ್ನು ಹಿಡಿದು ಶಿಕ್ಷೆ ವಿಧಿಸಲಾಗುತ್ತೆ. ಅಲ್ಲಿ ಶಿಕ್ಷೆ ಆಯ್ತು ಅಂತಾನೇ ಲೆಕ್ಕ. ಇದಕ್ಕೆ ಉದಾಹರಣೆಯಾಗಿ ಇತ್ತೀಚಿಗಷ್ಟೇ ಬ್ರಿಟನ್‌ ರಾಣಿ ಅಂತ್ಯಕ್ರಿಯೆಯನ್ನು ಆಯೋಜಿಸಿದ್ದ ಬ್ರಿಟನ್‌ ನ ಶ್ರೀಮಂತ (Rich) ಹಾಗೂ ಪ್ರಭಾವಶಾಲಿ ವ್ಯಕ್ತಿ ಎಡ್ವರ್ಡ್‌ ಫಿಟ್ಜಲನ್ ಹೊವರ್ಡ್‌ ರ ಡ್ರೈವಿಂಗ್‌ (Driving) ನಿಷೇಧಿಸಲಾಗಿದೆ. ಅಷ್ಟಕ್ಕೂ ಬ್ರಿಟನ್‌ ನ ನಾರ್ಫೋಕ್‌ನ ದಳಪತಿ ಎಡ್ವರ್ಡ್ ಫಿಟ್ಜಲನ್-ಹೊವಾರ್ಡ್ ಮಾಡಿದ್ದೇನು ಅಂತ ತಿಳಿಯೋಕೆ ಈ ಆರ್ಟಿಕಲ್ ಓದಿ.


ಅಷ್ಟಕ್ಕೂ ಬ್ರಿಟನ್‌ ನ ನಾರ್ಫೋಕ್‌ನ ದಳಪತಿ ಎಡ್ವರ್ಡ್ ಫಿಟ್ಜಲನ್-ಹೊವಾರ್ಡ್ ಮಾಡಿದ್ದೇನು ಅನ್ನೋದನ್ನು ನೋಡೋದಾದ್ರೆ ಎಡ್ವರ್ಡ್‌, ಏಪ್ರಿಲ್ 7 ರಂದು ತನ್ನ BMW ಕಾರ್‌ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ್ದಾನೆ. ಅಲ್ಲದೇ ಕೆಂಪು ದೀಪ ಇರೋವಾಗಲೂ ಚಾಲನೆ ಮುಂದುವರಿಸಿದ್ದಾನೆ. ಈ ಬಗ್ಗೆ ಸ್ವತಃ ಎಡ್ವರ್ಡ್‌ ತಪ್ಪೊಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಆತನ ಡ್ರೈವಿಂಗ್‌ ನಿಷೇಧ ಮಾಡಿ ಲಂಡನ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ.


ಎಡ್ವರ್ಡ್ ಮಾಡಿದ್ದ ಯಡವಟ್ಟು


ಈ ಮಧ್ಯೆ ನ್ಯಾಯಾಲಯದಲ್ಲಿ ಎಡ್ವರ್ಡ್‌, ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕದ ವ್ಯವಸ್ಥೆ ಮಾಡಲು ತನ್ನ ಕಾರು ಬೇಕು ಎಂದು ವಾದಿಸಿದರೂ ಕೇಳದ ನ್ಯಾಯಾಲಯ ಈ ಬ್ರಿಟಿಷ್‌ ಶ್ರೀಮಂತನಿಗೆ ಚಾಲನೆ ನಿಷೇಧ ವಿಧಿಸಿದೆ.ಬ್ರಿಟನ್‌ ನಲ್ಲಿ ಎಡ್ವರ್ಡ್‌ ಅವರದ್ದು ದೊಡ್ಡ ಹೆಸರು. ಇವರು ಅತ್ಯುನ್ನತ ರ್‍ಯಾಂಕಿಂಗ್‌ ದಳಪತಿ ಅಂತ ಕರೆಯಲ್ಪಡುತ್ತಿದ್ದರು. ಅಲ್ಲದೇ ಅರ್ಲ್ ಮಾರ್ಷಲ್ ಎಂಬ ಬಿರುದನ್ನು ಕೂಡ ಹೊಂದಿದ್ದಾರೆ ಈ ಡ್ಯೂಕ್‌.


ಆದರೀಗ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸುತ್ತಿದಾರೆ. ಅಂಹಾಗೆ ಈ ಮೊದಲು ಕೂಡ ಎರಡು ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿರೋ ಆರೋಪ ಎಡ್ವರ್ಡ್‌ ಮೇಲಿತ್ತು. 2019 ರಲ್ಲಿ ವೇಗದ ಚಾಲನೆಯ ಆರೋಪವನ್ನು ಹೊಂದಿದ್ದರು. ಆದರೆ ಈ ಬಾರಿಯ ತಪ್ಪಿಗೆ ನ್ಯಾಯಾಲಯ ನಿಷೇಧದ ಶಿಕ್ಷೆ ನೀಡಿದೆ.


ಇದನ್ನೂ ಓದಿ: ಪ್ರವಾಸೋದ್ಯಮವು ಆರ್ಥಿಕತೆ ಜೊತೆಗೆ ಉದ್ಯೋಗವಕಾಶ ಸೃಷ್ಟಿಸುವಲ್ಲಿ ಹೇಗೆ ಸಹಕಾರಿಯಾಗಿದೆ?


ವಾದ ತಳ್ಳಿ ಹಾಕಿದ ಕೋರ್ಟ್‌ !


65 ವರ್ಷ ವಯಸ್ಸಿನ ಎಡ್ವರ್ಡ್‌ ಅವರ ವಕೀಲರಾದ ನತಾಶಾ ದರ್ದಷ್ಟಿ ಅವರು ಮುಂದಿನ ವರ್ಷ ಕಿಂಗ್ ಚಾರ್ಲ್ಸ್ III ಅವರ ಪಟ್ಟಾಭಿಷೇಕ ನಡೆಯಲಿದೆ. ಈ ರಾಯಲ್‌ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಎಡ್ವರ್ಡ್‌ ರದ್ದು ಮಹತ್ವದ ಪಾತ್ರ ಇದೆ. ಹಾಗಾಗಿ ನಿಷೇಧವನ್ನು ಜಾರಿಗೊಳಿಸದಂತೆ ನ್ಯಾಯಾಧೀಶರನ್ನು ಮನವಿ ಮಾಡಿದರು. ಅಲ್ಲದೇ, ಇದು ಅತ್ಯಂತ ವಿಚಿತ್ರವಾದ ಸನ್ನಿವೇಶವಾಗಿದೆ. ಆದರೆ, ಅವರು ರಾಯಲ್ ಹೈನೆಸ್ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕದ ಜವಾಬ್ದಾರಿಯನ್ನು ಹೊಂದಿರುವ ದೇಶದ ವ್ಯಕ್ತಿ.


ಶಿಕ್ಷೆ ರದ್ದು ಮಾಡಲು ಕೋರಿಕೆ


ಹಾಗಾಗಿ ಈ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಕೇಳಿಕೊಂಡರು. ಅಲ್ಲದೇ ಸಂಭಾವ್ಯ ರಾಷ್ಟ್ರೀಯ ಭದ್ರತಾ ಸಮಸ್ಯೆಗಳಿಂದಾಗಿ ವಾದದ ವಿವರಗಳನ್ನು ಕೇಳಲು ವಕೀಲರು ಮುಚ್ಚಿದ ಬಾಗಿಲುಗಳ ವಿಚಾರಣೆಗೆ ಅರ್ಜಿ ಸಲ್ಲಿಸಿದರು.ಆದರೆ ಮ್ಯಾಜಿಸ್ಟ್ರೇಟ್‌ಗಳ ಪೀಠವು ಅವರ ಅರ್ಜಿಯನ್ನು ತಿರಸ್ಕರಿಸಿದೆ. ರಾಜನ ಪಟ್ಟಾಭಿಷೇಕ ಹಾಗೂ ಇಡೀ ಸಮಾಜದಲ್ಲಿ ಇದೊಂದು ವಿಶಷ್ಟ ಪ್ರಕರಣ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅವರನ್ನು ರಸ್ತೆಗಳಿಂದ ನಿಷೇಧಿಸಿದರೆ ಅವರು "ಅಸಾಧಾರಣ ತೊಂದರೆ" ಅನುಭವಿಸುತ್ತಾರೆ ಎಂದು ಪೀಠದ ಅಧ್ಯಕ್ಷೆ ಜುಡಿತ್ ವ್ರೇ ಹೇಳಿದರು.


ಇದನ್ನೂ ಓದಿ: ರಾಜಸ್ಥಾನದಲ್ಲಿ ಸಿಎಂ ಗಾದಿಗಾಗಿ ಕಿತ್ತಾಟ: ಬಿಕ್ಕಟ್ಟಿನ ಮಧ್ಯೆ ಬಗೆಹರಿಯದ ಆ 5 ಪ್ರಶ್ನೆಗಳು, ಈವರೆಗೂ ಸಿಕ್ಕಿಲ್ಲ ಉತ್ತರ


ಇನ್ನು ಬ್ರಿಟನ್‌ ರಾಣಿ ಎಲಿಜಬೆತ್‌ ಅವರ ಅಂತ್ಯಕ್ರಿಯೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶ್ವದ ಗಣ್ಯಾತಿಗಣ್ಯರು, ವಿಶ್ವ ನಾಯಕರು, ವಿದೇಶಿ ರಾಜಮನೆತನದವರು ಸೇರಿದಂತೆ ಸುಮಾರು 2 ಸಾವಿರ ಜನರು ಸೇರಿದ್ದರು. ಈ ರಾಯಲ್‌ ಮನೆತನದ ಅಂತ್ಯಕ್ರಿಯೆ ಕಾರ್ಯಕ್ರಮವನ್ನು ಸಂಯೋಜಿಸುವ ಜವಾಬ್ದಾರಿಯನ್ನು ಫಿಟ್ಜಾಲನ್-ಹೋವರ್ಡ್ ಅವರೇ ವಹಿಸಿಕೊಂಡಿದ್ದರು.

First published: