• Home
  • »
  • News
  • »
  • national-international
  • »
  • Crime Nerws: ಮೈದುನನ ಪ್ರೀತಿಯಲ್ಲಿ ಬಿದ್ದಾಕೆಯಿಂದ ಗಂಡನಿಗೆ ವಿಷ, ಒಂದೂವರೆ ವರ್ಷದ ಬಳಿಕ ಬಯಲಾಯ್ತು ರಹಸ್ಯ!

Crime Nerws: ಮೈದುನನ ಪ್ರೀತಿಯಲ್ಲಿ ಬಿದ್ದಾಕೆಯಿಂದ ಗಂಡನಿಗೆ ವಿಷ, ಒಂದೂವರೆ ವರ್ಷದ ಬಳಿಕ ಬಯಲಾಯ್ತು ರಹಸ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಮೀನಿನ ಆಸೆ ಮತ್ತು ಅಕ್ರಮ ಸಂಬಂಧ ಅದೆಷ್ಟು ಕುರುಡಾಗಿಸಿದೆ ಎಂದರೆ ಇಲ್ಲೊಬ್ಬ ಹೆಂತಿ ತನ್ನ ಗಂಡನನ್ನೇ ಕೊಲೆಗೈದಿದ್ದಾಳೆ. ಸಾಲದೆಂಬಂತೆ ತಾಳಿ ಕಟ್ಟಿನ ಗಂಡನ ದೇಹವನ್ನು ಹುಲ್ಲಿನ ರಾಶಿಯಲ್ಲಿ ಬರೋಬ್ಬರಿ ಒಂದೂವರೆ ವರ್ಷ ಮುಚ್ಚಿಟ್ಟಿದ್ದಾಳೆ. ಬಳಿಕ ಅದನ್ನು ಸ್ಥಿಪಂಜರವನ್ನು ಮರೆಮಾಡಲು, ಆಕೆ ಅದನ್ನು ಕಾಡಿಗೆಸೆದಿದ್ದಾಳೆ. ಆದರೀಗ ಪೊಲೀಸರು ಈ ರಹಸ್ಯವನ್ನು ಬೇಧಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Madhya Pradesh, India
  • Share this:

ರೇವಾ(ಅ.31): ಮಧ್ಯಪ್ರದೇಶದ ರೇವಾ (Reva, Madhya Pradesh) ಜಿಲ್ಲೆಯ ಮೌಗಂಜ್ ಪೊಲೀಸ್ ಠಾಣೆಯು ಸುಮಾರು ಒಂದೂವರೆ ವರ್ಷಗಳ ಹಿಂದೆ ನಡೆದ ಹತ್ಯೆ ಪ್ರಕರಣವನ್ನು ಬೇಧಿಸಿದೆ. ಮೃತನ ಎರಡನೇ ಪತ್ನಿ ತನ್ನ ಕಿರಿಯ ಮೈದುನನ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದಳು. ಒಂದೂವರೆ ವರ್ಷದ ಹಿಂದೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಪತಿಗೆ ಚಾಟ್​ಗೆ ಇಲಿ ಸಾಯಿಸುವ ಮದ್ದು ನೀಡಿ ಸಾಯಿಸಿದ್ದಾಳೆ. ನಂತರ ಹರಿತವಾದ ಆಯುಧದಿಂದ ಕತ್ತು ಕೊಯ್ದು ಗೋಣಿಚೀಲದಲ್ಲಿ ತುಂಬಿ ಕೊಠಡಿಯೊಂದರಲ್ಲಿ ಹುಲ್ಲಿನ ಕೆಳಗೆ ಹೂತು ಹಾಕಿದ್ದಾಳೆ.


ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ವೇಳೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಕಾಡಿನಲ್ಲಿ ಅಸ್ಥಿಪಂಜರ ಕಾಣಿಸಿಕೊಮಡಿರುವಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಮತ್ತು ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಆಗಮಿಸಿ ಪುರಾವೆಗಳನ್ನು ಸಂಗ್ರಹಿಸಿದ್ದು, ಈ ಅಸ್ಥಿಪಂಜರ ಒಂದೂವರೆ ವರ್ಷಗಳಿಂದ ನಾಪತ್ತೆಯಾಗಿದ್ದ ರಾಮ್‌ಸುಶೀಲ್ ಪಾಲ್​ರದ್ದೆಂದು ತಿಳಿದು ಬಂದಿದೆ.


ಇದನ್ನೂ ಓದಿ: SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ


ಮೌಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಕಾಡಿನಲ್ಲಿ ಮಾನವ ಅಸ್ಥಿಪಂಜರ ಕಾಣಿಸಿಕೊಂಡಿರು ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸ್ ತಂಡ ತನಿಖೆ ನಡೆಸಿದಾಗ ಮೃತನ ಎರಡನೇ ಪತ್ನಿಯ ಸುತ್ತ ಅನುಮಾನದ ಹುಟ್ಟಿಕೊಂಡಿತ್ತು. ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಮೃತ ರಾಮ್​ಸುಶೀಲ್ ಪಾಲ್ ಅವರ ಎರಡನೇ ಪತ್ನಿ ರಂಜನಾ ಪಾಲ್ ತನ್ನ ಕಿರಿಯ ಮೈದುನನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಮೃತ ವ್ಯಕ್ತಿ ಮತ್ತು ಅವರ ಕುಟುಂಬದ ನಡುವೆ ಹಿಂದಿನಿಂದಲೂ ಜಮೀನು ವಿವಾದವಿತ್ತು.


ಸಮೋಸಾದಲ್ಲಿ ಇಲಿ ಔಷಧ ಬೆರೆಸಿ ತಿನ್ನಿಸಿದಳು


ಸುಮಾರು ಒಂದೂವರೆ ವರ್ಷಗಳ ಹಿಂದೆ ಮೃತನ ಎರಡನೇ ಪತ್ನಿ ಮತ್ತು ಆಕೆಯ ಮೈದುನ ಗುಲಾಬ್ ಪಾಲ್ ರಾಮ್‌ಸುಶೀಲ್‌ನನ್ನು ಕೊಲ್ಲಲು ಭೀಕರ ಸಂಚು ರೂಪಿಸಿದ್ದರು ಎಂದು ಎಸ್‌ಪಿ ನವನೀತ್ ಭಾಸಿನ್ ಹೇಳಿದ್ದಾರೆ. ಪತ್ನಿ ಮಾರುಕಟ್ಟೆಯಿಂದ ಸಮೋಸಾ ಇರುವ ಚಾಟ್ ಆರ್ಡರ್ ಮಾಡಿ ಇಲಿ ಕೊಲ್ಲುವ ಔಷಧಿ ಬೆರೆಸಿ ಪತಿಗೆ ತಿನ್ನಿಸಿದ್ದಾರೆ.


ಇದನ್ನೂ ಓದಿ:  Crime News: ಗಂಡನ ಕೊಲೆ ಮಾಡಿಸಿದ್ದ ಹೆಂಡತಿಗಿದ್ದರು ಬಾಯ್‌ ಫ್ರೆಂಡ್ಸ್! ಪತಿ ಮರ್ಮಾಂಗ ಕತ್ತರಿಸಿದವಳ ಹಿಸ್ಟರಿಯೇ ಭಯಾನಕ!


ಸಾವಿನ ನಂತರ, ಅವಳು ತನ್ನ ಪ್ರಿಯಕರ, ಮೈದುನ ಗುಲಾಬ್ ಪಾಲ್‌ಗೆ ತನ್ನ ಗಂಡನ ಸಾವಿನ ಬಗ್ಗೆ ತಿಳಿಸಿದಳು. ನಂತರ ಗುಲಾಬ್ ಪಾಲ್ ತನ್ನ ಸಹೋದರ ಅಂಜನಿ ಪಾಲ್ ಜೊತೆಗೂಡಿ ಎರಡನೇ ದಿನ ಹರಿತವಾದ ಆಯುಧದಿಂದ ಕತ್ತು ಕೊಯ್ದಿದ್ದಾನೆ. ಮೃತ ದೇಹವನ್ನು ಅಪರಾಧದ ಸ್ಥಳದಿಂದ ತೆಗೆದುಕೊಂಡು ಹೋಗಿ ಕೋಣೆಯಲ್ಲಿ ಇರಿಸಲಾದ ಒಣಹುಲ್ಲಿನ ರಾಶಿಯ ಅಡಿಯಲ್ಲಿ ಹೂತು ಹಾಕಿದ್ದಾರೆ.

Published by:Precilla Olivia Dias
First published: