200, 2000 ಮೌಲ್ಯದ ಹರಿದ ನೋಟುಗಳ ಬದಲಾವಣೆಗೆ ಆರ್​ಬಿಐನಿಂದ ಹೊಸ ನಿಯಮ ಜಾರಿ

news18
Updated:September 9, 2018, 5:05 PM IST
200, 2000 ಮೌಲ್ಯದ ಹರಿದ ನೋಟುಗಳ ಬದಲಾವಣೆಗೆ ಆರ್​ಬಿಐನಿಂದ ಹೊಸ ನಿಯಮ ಜಾರಿ
news18
Updated: September 9, 2018, 5:05 PM IST
-ನ್ಯೂಸ್​ 18 ಕನ್ನಡ

ನವದೆಹಲಿ, (ಸೆ.21): ಹರಿದ ನೋಟುಗಳ ಬದಲಾವಣೆಗೆ ಆರ್​ಬಿಐ ಹೊಸ ನಿಯಮ ಜಾರಿಗೆ ತಂದಿದ್ದು, 200 ಮತ್ತು 2000 ಮೌಲ್ಯದ ನೋಟು ಸೇರಿದಂತೆ ಹರಿದ ಎಲ್ಲಾ ಹೊಸ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ನೋಟು ಅಮಾನ್ಯೀಕರಣದ ನಂತರ ಬಿಡುಗಡೆಯಾದ ಹೊಸ ನೋಟುಗಳ ಬದಲಾವಣೆಗೆ ಆರ್​ಬಿಐ ಈ ಹೊಸ ನಿಯಮವನ್ನು ರೂಪಿಸಿದೆ. ಈ ಹಿಂದೆ ಬಿಡುಗಡೆ ಮಾಡಿದ ಆರ್​ಬಿಐ ನಿಯಮಾವಳಿಗಳಲ್ಲಿ ಹರಿದ 2 ಸಾವಿರ ಹೊಸ ನೋಟುಗಳ ಬದಲಾವಣೆಗೆ ನಿಯಮಗಳನ್ನು ಸೇರಿಸಿರಲಿಲ್ಲ. ಹಾಗಾಗಿ ಈ ನೋಟುಗಳ ಬದಲಾವಣೆ ಸಾಧ್ಯವಾಗಿರಲಿಲ್ಲ.

ಇದೀಗ ಆರ್​ಬಿಐ ಹೊಸ ನಿಯಮ ಜಾರಿಗೆ ತಂದಿದ್ದು, ಹರಿದ ನೋಟುಗಳ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ವಾಪಸ್​ ಪಡೆಯಬಹುದಾಗಿದೆ. ಎಷ್ಟು ಅಳತೆಯಲ್ಲಿ ಹರಿದ ನೋಟುಗಳಿಗೆ ಎಷ್ಟು ಮೌಲ್ಯ ನೀಡಲಾಗುತ್ತದೆ ಎಂದು ಆರ್​ಬಿಐ ನಿಯಮಾವಳಿ ಪ್ರಕಟಿಸಿದೆ.  ಹೊಸ 2 ಸಾವಿರ ನೋಟಿನ ಒಟ್ಟು ಅಳತೆ 109.56 ಚದರ ಸೆ.ಮೀ ಇದ್ದು, ಕನಿಷ್ಟ 80 ಚದರ ಸೆಂಟಿಮೀಟರ್​​ ಹರಿದ 2 ಸಾವಿರ ನೋಟಿಗೆ ಅದರ ಪೂರ್ಣ ಮೌಲ್ಯವನ್ನು ಪಡೆಯಬಹುದಾಗಿದೆ. 80 ಚದರ ಸೆಂಟಿಮೀಟರ್​ಗಿಂತಲೂ ಹೆಚ್ಚು ಹರಿದ ಹಾಗೂ 40 ಚದರ ಸೆಂಟಿಮೀಟರ್​ಗಿಂತಲೂ ಕಡಿಮೆ ಹರಿದ 2 ಸಾವಿರ ಮೌಲ್ಯದ ನೋಟಿಗೆ ಅರ್ಧ ಮೌಲ್ಯವನ್ನು ಪಡೆಯಬಹುದಾಗಿದೆ.

ಆರ್​ಬಿಐ ಬಿಡುಗಡೆ ಮಾಡಿರುವ ಹೊಸ ನೋಟುಗಳಾದ 500, 200, 100, 50, 20, 10 ಎಲ್ಲ ನೋಟುಗಳನ್ನು ಹೊಸ ನಿಯಮದ ಅನ್ವಯ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಬದಲಾವಣೆ ಮಾಡಲು ಹಾಗೂ ಮೌಲ್ಯ ಪಡೆಯಲು ನೋಟುಗಳು ಹರಿದಿರಬೇಕಾದ ಪರಿಮಾಣವನ್ನು ಆರ್​ಬಿಐ ತಿಳಿಸಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626