ಪುರೋಹಿತರ ನಿವೃತ್ತಿ ವಯಸ್ಸು ಹೆಚ್ಚಳ, ಸಂಬಳ ಏರಿಕೆ ಸೇರಿ ಹಲವು ಯೋಜನೆ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್

news18
Updated:September 2, 2018, 4:28 PM IST
ಪುರೋಹಿತರ ನಿವೃತ್ತಿ ವಯಸ್ಸು ಹೆಚ್ಚಳ, ಸಂಬಳ ಏರಿಕೆ ಸೇರಿ ಹಲವು ಯೋಜನೆ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್
  • Advertorial
  • Last Updated: September 2, 2018, 4:28 PM IST
  • Share this:
ನ್ಯೂಸ್ 18 ಕನ್ನಡ

ಹೈದರಾಬಾದ್ (ಸೆ.2): ಅವಧಿಪೂರ್ಣಕ್ಕೂ ಮುನ್ನ ತೆಲಂಗಾಣ ವಿಧಾನಸಭೆ ವಿಸರ್ಜಿಸುವ ಕುರಿತು ಭಾನುವಾರ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಲಂಗಾಣಕ್ಕೆ ಹಲವು ಜನಪರ ಯೋಜನೆಗಳನ್ನು ಘೋಷಿಸಲಾಗಿದೆ.

ಪುರೋಹಿತರ ನಿವೃತ್ತಿ ವಯಸ್ಸು ಹೆಚ್ಚಳ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಇಲಾಖೆಯಲ್ಲಿನ ಗುತ್ತಿಗೆ ಆಧಾರ ಸಿಬ್ಬಂದಿ ಸಂಬಳ ಹೆಚ್ಚಳ ಮಾಡಲಾಗಿದೆ. ಚುನಾವಣೆ ದೃಷ್ಟಿಯಲ್ಲಿ ರಾಜ್ಯದಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿರುವ ಈ ವರ್ಗಗಳಿಗೆ ಅನುಕೂಲ ಕಲ್ಪಿಸಿ, ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಲಾಗುತ್ತಿದೆ.

ತೆಲಂಗಾಣದ ಟಿಆರ್​ಎಸ್​ ಸರ್ಕಾರದ ಅವಧಿ ಇನ್ನು ಎಂಟು ತಿಂಗಳು ಇದ್ದು, ಅದಕ್ಕೂ ಮೊದಲೇ ವಿಧಾನಸಭೆ ವಿಸರ್ಜಿಸಿ ಇದೇ ವರ್ಷದ ಡಿಸೆಂಬರ್​ನಲ್ಲಿ ಚುನಾವಣೆ ನಡೆಸುವ ಚಿಂತನೆ ಮುಖ್ಯಮಂತ್ರಿ ಚಂದ್ರರಾವ್​ಶೇಖರ್​ ರಾವ್​ ಅವರದ್ದು. ಈ ಕುರಿತಾಗಿ ಚರ್ಚಿಸುವ ಸಲುವಾಗಿಯೇ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಕೆಸಿಆರ್​ ಅವರು ಈ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸಚಿವ ಸಂಪುಟದಲ್ಲಿ ನಿರ್ಣಯಿಸಲಾದ ಯೋಜನೆಗಳು

1. ಸರ್ಕಾರಿ ಉದ್ಯೋಗಿಗಳು ಎಂದು ಪರಿಗಣಿಸಲ್ಪಟ್ಟಿರುವ ತೆಲಂಗಾಣದ ಪುರೋಹಿತರ ನಿವೃತ್ತಿ ವಯಸ್ಸನ್ನು 58 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಲಾಗಿದೆ.

2. ವೈದ್ಯಕೀಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸಂಬಳ ಹೆಚ್ಚಳ3. ಆಶಾ ಕಾರ್ಯಕರ್ತೆಯರ ಸಂಬಳ 7,500 ರೂ.ಗೆ ಏರಿಕೆ. ಈ ಮೊದಲು ಆಶಾ ಕಾರ್ಯಕರ್ತೆಯರು ತಿಂಗಳಿಗೆ 1,000 ರೂ.ನಿಂದ 1,500 ರೂ. ತೆಗೆದುಕೊಳ್ಳುತ್ತಿದ್ದರು. 2017ರಲ್ಲಿ ಈ ಸಂಬಳವನ್ನು 6,000 ರೂ.ಗೆ ಏರಿಕೆ ಮಾಡಲಾಗಿತ್ತು.

4. ಗುತ್ತಿಗೆ ಆಧಾರದಲ್ಲಿ 30 ಸಾವಿರ ರೂ. ಸಂಬಳ ಪಡೆಯುತ್ತಿದ್ದ ವೈದ್ಯರ ಸಂಬಳ 40 ಸಾವಿರ ರೂಪಾಯಿಗೆ ಏರಿಕೆ.

5. ಹೈದರಾಬಾದ್​ನಲ್ಲಿ ರೆಡ್ಡಿ ಹಾಸ್ಟೆಲ್​ಗಳಿಗೆ 5 ಎಕರೆಯಿಂದ 10 ಎಕರೆಗೆ ನಿಗದಿ.

6.  ಸಹಾಯಕ ಮತ್ತು ಮಧ್ಯಮ ಶುಶ್ರೂಷಕಿಯರಿಗೆ 10 ಸಾವಿರ ಸಂಬಳ ಏರಿಕೆ ಮಾಡಲಾಗಿದೆ. ಈ ಮೊದಲು ಅವರು 11 ಸಾವಿರ ರೂಪಾಯಿ ಸಂಬಳ ಪಡೆದುಕೊಳ್ಳುತ್ತಿದ್ದರು.

7. ಗೋಪಾಲ ಮಿತ್ರ (ಗೋ ಪಾಲಕರು) ರಿಗೆ ಗೌರವಧನವನ್ನು 5 ಸಾವಿರದಿಂದ 8,500 ಸಾವಿರಕ್ಕೆ ಹೆಚ್ಚಿಸಲಾಗಿದೆ.

8. ವಿವಿಧ ಜಾತಿಯ ಜನರಿಗೆ ಸ್ವ ಗೌರವ ಕಟ್ಟಡ ನಿರ್ಮಾಣಕ್ಕೆ 70 ಕೋಟಿ ರೂ. ಹಣ ಮತ್ತು 70 ಎಕರೆ ಜಾಗ ಮೀಸಲುಗೊಳಿಸಿ, ಸರ್ಕಾರ ಹೊಸ ಯೋಜನೆಗಳನ್ನು ಭಾನುವಾರ ಪ್ರಕಟಿಸಿದೆ.
First published:September 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ