• Home
  • »
  • News
  • »
  • national-international
  • »
  • Ghaziabad: ಕಾರ್ ಪಾರ್ಕಿಂಗ್ ವಿವಾದ, ನಿವೃತ್ತ ಪೊಲೀಸ್ ಅಧಿಕಾರಿಯ ಮಗನ ಹತ್ಯೆ

Ghaziabad: ಕಾರ್ ಪಾರ್ಕಿಂಗ್ ವಿವಾದ, ನಿವೃತ್ತ ಪೊಲೀಸ್ ಅಧಿಕಾರಿಯ ಮಗನ ಹತ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶದ ಗಾಜಿಯಾಬಾದ್​ನ ಮಾಮುಲ್‌ನಲ್ಲಿ ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ 4-5 ಅಪರಿಚಿತ ಯುವಕರು ನಿವೃತ್ತ ಪೊಲೀಸರೊಬ್ಬರ ಮಗನಿಗೆ ಥಳಿಸಿದ್ದಾರೆ. ವಾಹನ ನಿಲುಗಡೆ ವಿವಾದದ ನಂತರ ದಾಳಿಕೋರರು ಯುವಕನಿಗೆ ತೀವ್ರವಾಗಿ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • News18 Kannada
  • Last Updated :
  • Ghaziabad, India
  • Share this:

ಲಕ್ನೋ(ಅ.26): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Uttar Pradesh's Ghaziabad) ನಡೆದ ಗಲಭೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. 4-5 ಅಪರಿಚಿತ ದುಷ್ಕರ್ಮಿಗಳು ಸೇರಿ ಸಣ್ಣ ಪಾರ್ಕಿಂಗ್ (Parking) ವಿವಾದವನ್ನು ಕೊಲೆಯಲ್ಲಿ (Murder) ಅಂತ್ಯಗೊಳಿಸಿದ್ದಾರೆ. ಘಟನೆಯಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರ ಸಾವನ್ನಪ್ಪಿದ್ದಾನೆ. ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೈದವರಿಗಾಗಿ ತೀವ್ರ ಶೋಧ ಆರಂಭವಾಗಿದೆ. ಪೊಲೀಸರ ಪ್ರಕಾರ, ಗಲಭೆಗೆ ಬಲಿಯಾದ ಯುವಕ ಅರುಣ್ (35) ತಿಲಾ ಮೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ಜವಳಿ ಗ್ರಾಮದವನು ಎನ್ನಲಾಗಿದೆ.


ಸ್ನೇಹಿತರ ಜೊತೆ ಊಟ ಮಾಡಲು ಹೋದಾಗ ಗಲಭೆ


ಮಂಗಳವಾರ ರಾತ್ರಿ 9.30ರ ಸುಮಾರಿಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಊಟ ಮಾಡಲು ಹೋಗಿದ್ದರು. ಈ ವೇಳೆ ಕೆಲ ಅಪರಿಚಿತ ಯುವಕರೊಂದಿಗೆ ಕಾರು ಪಾರ್ಕಿಂಗ್ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾನೆ. ವಿವಾದ ಎಷ್ಟು ಉಲ್ಬಣಗೊಂಡಿತೆಂದರೆ 5-6 ಅಪರಿಚಿತ ಯುವಕರು ಅರುಣ್ ನನ್ನು ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಅರುಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಅವರನ್ನು ತಕ್ಷಣವೇ ದೆಹಲಿಯ ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಪರೀಕ್ಷೆಯ ನಂತರ ಗಾಯಾಳು ಅರುಣ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.


ಇದನ್ನೂ ಓದಿ: Karva Chauth Viral Video: ಪ್ರೇಯಸಿ ಜೊತೆ ಕರ್ವಾ ಚೌತ್ ಶಾಪಿಂಗ್, ಬೀದಿಯಲ್ಲೇ ಗಂಡನ ಗ್ರಹಚಾರ ಬಿಡಿಸಿದ ಪತ್ನಿ! ವೈರಲ್ ವಿಡಿಯೋ ಇಲ್ಲಿದೆ ನೋಡಿ


ವೈರಲ್ ಆಯ್ತು ಹತ್ಯೆಯ ವಿಡಿಯೋ


ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯುವಕನೊಬ್ಬ ನೆಲದ ಮೇಲೆ ಮಲಗಿದ್ದ ಯುವಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸುತ್ತಿರುವ ದೃಶ್ಯಗಳಿವೆ. ಘಟನೆ ಬಳಿಕ ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ಗಲಭೆ ಸೇರಿದಂತೆ ಹಲವು ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಮೃತ ಯುವಕ ಅರುಣ್ ನಿವೃತ್ತ ಪೊಲೀಸ್ ಅಧಿಕಾರಿ ಕುನ್ವರ್ ಸಿಂಗ್ ಅವರ ಪುತ್ರ ಎಂಬುವುದು ಉಲ್ಲೇಖನೀಯ.


ನೋಯ್ಡಾದಲ್ಲಿಯೂ ಇಂತಹುದೇ ಘಟನೆ ಬೆಳಕಿಗೆ


ಯುಪಿಯ ನೋಯ್ಡಾದಲ್ಲಿಯೂ ಇಂತಹದೊಂದು ಘಟನೆ ಮುನ್ನೆಲೆಗೆ ಬಂದಿದೆ. ಇಲ್ಲಿ ಮೇ 1, 2022 ರಂದು, ಕಾರಿನಲ್ಲಿ ಸ್ಕ್ರಾಚ್‌ನ ಮಾಡಿದ ವಿವಾದದಲ್ಲಿ ಚಾಲಕನೊಬ್ಬ ಇನ್ನೊಬ್ಬ ಯುವಕನನ್ನು ಡಿಕ್ಕಿ ಹೊಡೆಯಲು ಯತ್ನಿಸಿದ್ದ. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಚಾಲಕ ಏಕಾಏಕಿ ಕಾರನ್ನು ಹಿಮ್ಮೆಟ್ಟಿಸಿ ಯುವಕನಿಗೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!


ಗಂಡ ಹೆಂಡತಿ ಜಗಳ ಬಿಡಿಸಲು ಬಂದವನಿಗೆ ಸಾವೇ ಗತಿ!


ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅಂತಾರೆ. ಆದರೆ ಇಲ್ಲಿ ಗಂಡ ಹೆಂಡತಿ ಜಗಳದಲ್ಲಿ ಮೂರನೇ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿದ್ದಾನೆ. ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ ಸಮೀಪದ ಊರಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ನಾನ್ ವೆಜ್‌ ಅಡುಗೆ ಮಾಡಿಲ್ಲ ಅಂತ ಹೆಂಡತಿಯನ್ನು ಬೀದಿಯಲ್ಲಿ ಎಳೆದುಕೊಂಡು ಬಂದು ಥಳಿಸಿದ್ದಾನೆ. ಈ ವೇಳೆ ಪಕ್ಕದ ಮನೆಯವನೊಬ್ಬ ಬಂದು ಗಂಡ ಹೆಂಡತಿ ಜಗಳ ಬಿಡಿಸಲು ಪ್ರಯತ್ನಿಸಿದ್ದಾನೆ. ಈಗ ಜಗಳ ವಿಕೋಪಕ್ಕೆ ಹೋಗಿದೆ. ಕೊನೆಗೆ ಜಗಳ ಬಿಡಿಸಲು ಬಂದ ವ್ಯಕ್ತಿಯನ್ನೇ ಈ ಗಂಡ ಹೊಡೆದು ಕೊಂದಿದ್ದಾನೆ!

Published by:Precilla Olivia Dias
First published: