• Home
  • »
  • News
  • »
  • national-international
  • »
  • Javed Bajwa: ಬರೀ 6 ವರ್ಷದಲ್ಲಿ ಶತಕೋಟ್ಯಾಧಿಪತಿಯಾದ ಪಾಕ್ ಮಾಜಿ ಆರ್ಮಿ ಚೀಫ್! ಬೆಚ್ಚಿಬೀಳಿಸಿದ ವರದಿ

Javed Bajwa: ಬರೀ 6 ವರ್ಷದಲ್ಲಿ ಶತಕೋಟ್ಯಾಧಿಪತಿಯಾದ ಪಾಕ್ ಮಾಜಿ ಆರ್ಮಿ ಚೀಫ್! ಬೆಚ್ಚಿಬೀಳಿಸಿದ ವರದಿ

ಜಾವೇದ್ ಬಜ್ವಾ

ಜಾವೇದ್ ಬಜ್ವಾ

ಪಾಕಿಸ್ತಾನದಲ್ಲಿ ಸೇನೆಯ ಅಧಿಪತ್ಯ, ಅಧಿಕಾರದ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಪಾಕ್ ಮಾಜಿ ಸೇನಾ ಮುಖ್ಯಸ್ಥರ ಆಸ್ತಿ ವಿವರ ಬಹಿರಂಗಪಡಿಸಿದ ವರದಿಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

  • Trending Desk
  • Last Updated :
  • Bangalore, India
  • Share this:

ಆರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ (Pakistan) ಮಾಜಿ ಸೇನಾ ಮುಖ್ಯಸ್ಥ  (Army Chief) ಜನರಲ್ ಕಮರ್ ಜಾವೇದ್ ಬಾಜ್ವಾ ಅವರ ಕುಟುಂಬ ಎಷ್ಟೊಂದು ಆಸ್ತಿ ಗಳಿಸಿದೆ ಗೊತ್ತೇ? 6 ವರ್ಷದಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ಆಸ್ತಿ ಮಾಡಬಹುದಪ್ಪಾ? ಆದರೆ ಇವರು ಕೋಟ್ಯಾಧಿಪತಿಯಲ್ಲ ಶತಕೋಟ್ಯಾಧಿಪತಿಯೇ ಆಗಿಬಿಟ್ಟಿದ್ದಾರೆ. ಪಾಕಿಸ್ತಾನದ ಮಾಜಿ ಆರ್ಮಿ ಚೀಫ್ ಅವರ ಕುಟುಂಬ ಹಾಗೂ ಆಪ್ತ ಕುಟುಂಬ ಸದಸ್ಯರ ಸಂಪತ್ತಿನಲ್ಲಿ ತೀವ್ರ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಜನರಲ್ ಕಮರ್ ಜಾವೇದ್ ಬಜ್ವಾ ಅವರ ಅಧಿಕಾರಾವಧಿ ನವೆಂಬರ್ 29ರಂದು ಕೊನೆಗೊಂಡಿದ್ದುಈ ಸಮಯದಲ್ಲಿ ಅವರ ಆಸ್ತಿ ಕುರಿತ ಮಾಹಿತಿ ಲಭ್ಯವಾಗಿದೆ.


ಪಾಕಿಸ್ತಾನಿ ಪತ್ರಕರ್ತ ಅಹ್ಮದ್ ನೂರಾನಿ ತಿಳಿಸಿರುವಂತೆ ಕಮರ್ ಜಾವೇದ್ ಬಜ್ವಾ ಆಪ್ತ ಕುಟುಂಬದ ಸದಸ್ಯರು ಹೊಸ ಬ್ಯುಸಿನೆಸ್​​ಗಳನ್ನು ಆರಂಭಿಸಿದ್ದು ಮಾತ್ರವಲ್ಲದೆ ಪಾಕಿಸ್ತಾನದ ಫಾರ್ಮ್ ಹೌಸ್‌ಗಳ ಮಾಲೀಕರಾಗುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ ಎನ್ನಲಾಗಿದೆ. ಇದಲ್ಲದೆ ವಿದೇಶಿ ಆಸ್ತಿಗಳನ್ನು ಖರೀದಿಸಿದ್ದು ಶತಕೋಟಿ ಡಾಲರ್‌ಗಳ ಸಂಪತ್ತನ್ನು ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.


ಬಾಜ್ವಾ ಹಾಗೂ ಕುಟುಂಬಸ್ಥರ ಬಳಿ ಇರುವ ಆಸ್ತಿ ಎಷ್ಟು?


ಆರು ವರ್ಷಗಳಲ್ಲಿ ಬಾಜ್ವಾ ಸಂಬಂಧಿತ ಎರಡೂ ಕುಟುಂಬಗಳು ಕೋಟ್ಯಾಧಿಪತಿಗಳಾಗಿದ್ದು, ಅಂತರಾಷ್ಟ್ರೀಯ ವ್ಯಾಪಾರವನ್ನು ಆರಂಭಿಸಿದ್ದಾರೆ. ಜೊತೆಗೆ ಬಹು ವಿದೇಶಿ ಆಸ್ತಿಗಳನ್ನು ಖರೀದಿಸಿದ್ದಾರೆ. ವಿದೇಶಕ್ಕೂ ಬಂಡವಾಳವನ್ನು ವರ್ಗಾಯಿಸಲು ಆರಂಭಿಸಿದ್ದಾರೆ ಎಂಬುದಾಗಿ ನೂರಾನಿ ತಿಳಿಸಿದ್ದಾರೆ.


ವಾಣಿಜ್ಯ ಪ್ಲಾಜಾಗಳು, ವಾಣಿಜ್ಯ ಫ್ಲ್ಯಾಟ್‌ಗಳು, ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲಿ ಬೃಹತ್ ಫಾರ್ಮ್ ಹೌಸ್, ಲಾಹೋರ್‌ನಲ್ಲಿ ಹೆಚ್ಚಿನ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊ ಮೊದಲಾದ ಸಂಪತ್ತನ್ನು ಗಳಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಬಾಜ್ವಾ ಕುಟುಂಬವು ಪಾಕಿಸ್ತಾನದ ಒಳಗೆ ಮತ್ತು ಹೊರಗಿನಿಂದ ಸಂಗ್ರಹಿಸಿದ ಆಸ್ತಿಗಳು ಮತ್ತು ವ್ಯವಹಾರಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವು ರೂ12.7 ಶತಕೋಟಿಗಿಂತ ಹೆಚ್ಚು ಎಂದು ನೂರಾನಿ ಬಹಿರಂಗಪಡಿಸಿದ ವರದಿಯಲ್ಲಿ ರಿವೀಲ್ ಆಗಿದೆ.


ಸಂಪತ್ತಿನ ವರದಿ ಪರಿಷ್ಕರಣೆ


2013 ಮತ್ತು 2017 ರ ನಡುವೆ ಕಮರ್ ಜಾವೇದ್ ಬಜ್ವಾ ಅವರು 2013 ರ ಫಿನಾನ್ಶಿಯಲ್ ಸ್ಟೇಟ್​ಮೆಂಟ್  ಮೂರು ಬಾರಿ ಪರಿಷ್ಕರಿಸಿದ್ದಾರೆ ಎಂಬುದನ್ನು ವರದಿಯು ಸೂಚಿಸಿದೆ. 2013 ರ ಪರಿಷ್ಕೃತ ಫಿನಾನ್ಶಿಯಲ್ ಸ್ಟೇಟ್​ಮೆಂಟ್​ನಲ್ಲಿ ಜನರಲ್ ಬಜ್ವಾ ತಾವು ಖರೀದಿಸಿದ DHA ಲಾಹೋರ್‌ನ VIII ಹಂತದಲ್ಲಿರುವ ವಾಣಿಜ್ಯ ಫ್ಲ್ಯಾಟ್ ಒಂದನ್ನು ಸೇರಿಸಿದ್ದಾರೆ.


ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಜ್ವಾ ವಾಸ್ತವವಾಗಿ ತಾವು ಈ ಫ್ಲ್ಯಾಟ್ ಅನ್ನು 2013 ರಲ್ಲಿ ಖರೀದಿಸಿದ್ದೆ. ಅದನ್ನು ಫಿನಾನ್ಶಿಯಲ್ ಸ್ಟೇಟ್​​ಮೆಂಟ್​​ನಲ್ಲಿ ಸೇರಿಸಲು ಮರೆತಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿ ಮುಂದಿನ ನಾಲ್ಕು ವರ್ಷಗಳು ಹೀಗೆಯೇ ಖರೀದಿಸಿದ ವಸ್ತುಗಳನ್ನು ಮರೆತುಬಿಡುತ್ತಾರೆ. ಸೇನಾ ಮುಖ್ಯಸ್ಥರಾದ ಒಂದು ವರ್ಷದ ನಂತರ 2017 ರಲ್ಲಿ ತಾವು ಮರೆತುಹೋಗಿರುವುದನ್ನು ಮಾತ್ರ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವರದಿಯಲ್ಲಿ ವ್ಯಂಗ್ಯ ಮಾಡಲಾಗಿದೆ.


ಬಾಜ್ವಾರ ಪತ್ನಿ ಹಾಗೂ ಸೊಸೆಯ ನಿವ್ವಳ ಆಸ್ತಿ ಮೌಲ್ಯವೆಷ್ಟು?


ಬಾಜ್ವಾರ ಪತ್ನಿ ಆಯೆಷಾ ಅಮ್‌ಜಾದ್ ಹಾಗೂ ಸೊಸೆ ಮಹ್ನೂರ್ ಸಾಬಿರ್ ಹಾಗೂ ಇತರ ನಿಕಟ ಕುಟುಂಬಸ್ಥರ ಆರ್ಥಿಕ ಸ್ಥಿತಿ, ಸಂಪತ್ತಿನ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ಫ್ಯಾಕ್ಟ್ ಫೋಕಸ್ ತನಿಖಾ ವರದಿ ತಿಳಿಸಿದೆ.


2016 ರಲ್ಲಿ ಅಯೆಷಾ ಅಮ್‌ಜಾದ್ ಯಾವುದೇ ವಿವರಗಳನ್ನು ನೀಡದೇ ಎಂಟು ಸ್ವತ್ತುಗಳನ್ನು ಘೋಷಿಸಿದ್ದರು. ಬಾಜ್ವಾ ಪಾಕ್‌ನ ಸೇನಾ ಮುಖ್ಯಸ್ಥರಾದ ನಂತರ ಇದನ್ನು ಏಪ್ರಿಲ್ 17, 2018 ರಲ್ಲಿ ಪರಿಷ್ಕರಿಸಲಾಯಿತು. 2015 ರಲ್ಲಿ ಅಯೆಷಾ ತಮ್ಮ ಹಿಂದಿನ ಆರ್ಥಿಕ ವರ್ಷದ ಸ್ವತ್ತುಗಳ ಒಟ್ಟು ಮೌಲ್ಯವನ್ನು ಶೂನ್ಯವೆಂದು ಘೋಷಿಸಿದ್ದಾರೆ.


Jan Shatabdi Express: ವಂದೇ ಭಾರತ್​ ಎಕ್ಸ್​ಪ್ರೆಸ್​ ಪರಿಣಾಮ; ಈ ಪ್ರಮುಖ ರೈಲು ರದ್ದು?


ಆದರೆ ಆರು ವರ್ಷಗಳೊಳಗೆ ಅನೇಕ ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳ ಖರೀದಿ ಸೇರಿದಂತೆ ಆಕೆಯ ನಿವ್ವಳ ಆಸ್ತಿ ಮೌಲ್ಯವು 2016 ರಲ್ಲಿ ಶೂನ್ಯದಿಂದ 2.2 ಬಿಲಿಯನ್‌ಗೆ ಏರಿಕೆಯಾಗಿದೆ ಎಂಬುದಾಗಿ ತನಿಖಾ ವರದಿ ಪತ್ತೆಹಚ್ಚಿದೆ. ಇದು ವಾಣಿಕ್ಯ ಹಾಗೂ ವಸತಿ ಸಂಕೀರ್ಣಗಳು, ಪ್ಲಾಟ್‌ಗಳು ಅಲ್ಲದೆ ಆಕೆಯ ಪತಿಗೆ ಸೇನೆಯು ನೀಡಿರುವ ಮನೆಗಳನ್ನು ಸೇರಿ ಕಲೆಹಾಕಿರುವ ಲೆಕ್ಕಾಚಾರವಾಗಿದೆ ಎಂದು ವರದಿ ತಿಳಿಸಿದೆ


ಬಾಜ್ವಾ ಅವರ ಸೊಸೆ ಮಹ್ನೂರ್ ಸಾಬಿರ್ ಅಕ್ಟೋಬರ್ 2018 ರ ಕೊನೆಯ ವಾರದಲ್ಲಿ ಒಟ್ಟು ಆಸ್ತಿ ಮೌಲ್ಯ ಶೂನ್ಯ ಎಂದು ಘೋಷಿಸಿದ್ದರು ಆದರೆ ಮಹ್ನೂರ್ ವಿವಾಹಕ್ಕೆ ಒಂದು ವಾರದ ಮೊದಲು ಅಂದರೆ ನವೆಂಬರ್ 02, 2018 ರಂದು ಆಕೆಯ ಆಸ್ತಿಯು ಒಂದು ಶತಕೋಟಿ (ರೂ1271 ಮಿಲಿಯನ್) ಗಿಂತ ಹೆಚ್ಚಾಗಿದೆ ಎಂದು ವರದಿ ದಾಖಲಿಸಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು