• Home
  • »
  • News
  • »
  • national-international
  • »
  • Indian Army: ದತ್ತು ಸ್ವೀಕಾರಕ್ಕಾಗಿ ಕಾಯುತ್ತಿವೆ ಭಾರತೀಯ ಸೇನೆಯಿಂದ ನಿವೃತ್ತಗೊಂಡ ಶ್ವಾನಗಳು, ದತ್ತು ತೆಗೆದುಕೊಳ್ಳುವುದು ಹೇಗೆ ಗೊತ್ತೇ?

Indian Army: ದತ್ತು ಸ್ವೀಕಾರಕ್ಕಾಗಿ ಕಾಯುತ್ತಿವೆ ಭಾರತೀಯ ಸೇನೆಯಿಂದ ನಿವೃತ್ತಗೊಂಡ ಶ್ವಾನಗಳು, ದತ್ತು ತೆಗೆದುಕೊಳ್ಳುವುದು ಹೇಗೆ ಗೊತ್ತೇ?

Army dogs

Army dogs

Indian Army: ಈಗಿನ ಕಾಲದಲ್ಲಿ ಪ್ರಾಣಿಗಳನ್ನು ಸಾಕುವುದು ಪ್ಯಾಷನ್ ಆಗಿ ಬಿಟ್ಟದೆ. ಅದರಲ್ಲೂ ನಾಯಿ, ಬೆಕ್ಕುಗಳನ್ನು ಸಾಕುವುದು ಫುಲ್ ಟ್ರೆಂಡ್ ಅಲ್ಲಿಇದೆ ಬಿಡಿ. ಇದೀಗ ಶ್ವಾನ ಪ್ರಿಯರಿಗೊಂದು ಗುಡ್ ನ್ಯೂಸ್!

  • Share this:

ಸಾಮಾನ್ಯವಾಗಿ ನಾವು ಒಂದು ನಾಯಿಯನ್ನು (Dog) ಮನೆಯಲ್ಲಿ ಸಾಕಿಕೊಳ್ಳಬೇಕು ಅಂತಾದಾಗ ಎಲ್ಲೋ ಪರಿಚಯದವರ ಹತ್ತಿರ ಹೋಗಿ ಅವರು ಕೇಳಿದಷ್ಟು ದುಡ್ಡು ಕೊಟ್ಟು ಆ ನಾಯಿಯನ್ನು ಮನೆಗೆ ತಂದು ಸಾಕಿಕೊಳ್ಳುತ್ತೇವೆ. ಅನಂತರ ಅದಕ್ಕೆ ನಮ್ಮ ಮನೆಯಲ್ಲಿನ ರೀತಿ ನೀತಿಗಳನ್ನು ಮತ್ತು ಅದರ ಕೆಲಸಗಳನ್ನು ಅದಕ್ಕೆ ಕೆಲವು ದಿನಗಳ ಕಾಲ ಹೇಳಿ ಕೊಡಬೇಕಾಗುತ್ತದೆ. ಹೀಗೆ ಮಾಡಿದ್ದಲ್ಲಿ ಅವು ನಮ್ಮ ಮನೆಗಳಿಗೆ ಮತ್ತು ಮನೆಯಲ್ಲಿರುವ ಸದಸ್ಯರಿಗೆ ಹೊಂದಿಕೊಳ್ಳುತ್ತವೆ. ನಾವು ಇದೇ ರೀತಿ ಪೊಲೀಸ್ (Police) ಇಲಾಖೆಯಲ್ಲಿ ಮತ್ತು ಸೈನ್ಯದಲ್ಲಿ ವಿಶೇಷವಾದ ತರಬೇತಿ ಪಡೆದ ಶ್ವಾನಗಳನ್ನು ಸಹ ನೋಡಿರುತ್ತೇವೆ.


ಅವುಗಳಲ್ಲಿ ವಿಭಿನ್ನ ರೀತಿಯ ಒಂದು ಶಿಸ್ತು, ಅದಮ್ಯ ಹೋರಾಟ, ಆಜ್ಞೆಗಳ ಮೇಲೆ ಪರಿಪೂರ್ಣ ಹಿಡಿತ ಮತ್ತು ಅಸಾಧಾರಣವಾದ ಅದ್ಭುತ ವಾಸನೆ ಗ್ರಹಿಕೆ ಎಲ್ಲವೂ ಇರುವುದನ್ನು ನಾವು ನೋಡಿರುತ್ತೇವೆ. ಈಗ ಭಾರತೀಯ ಸೈನ್ಯದಲ್ಲಿ ಕೆಲಸ ಮಾಡಿ, ನಿವೃತ್ತಿ ಹೊಂದಿದ ಶ್ವಾನಗಳನ್ನು ಯಾರಾದರೂ ದತ್ತು ತೆಗೆದುಕೊಳ್ಳುತ್ತಾರೆಯೇ ಅಂತ ಕಾಯುವ ಹಾಗಿದೆ ನೋಡಿ.


ಸೇನೆಯ ಕೆಲಸದಲ್ಲಿ ಇದ್ದಾಗ ಈ ಶ್ವಾನಗಳನನ್ನು ತುಂಬಾನೇ ಗೌರವದಿಂದ ನೋಡಿಕೊಳ್ಳಲಾಗುತ್ತದೆ, ಆದರೆ ನಿವೃತ್ತಿಯ ಬಳಿಕ ಇವುಗಳ ಸ್ಥಿತಿ ಅಷ್ಟೊಂದು ಹೇಳಿಕೊಳ್ಳುವಂತಿರುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ನಿವೃತ್ತಿಯ ನಂತರ ಅವುಗಳನ್ನು ಯಾರು ದತ್ತು ತೆಗೆದುಕೊಂಡು ಹೋಗುತ್ತಾರೆ ಅಥವಾ ಅವುಗಳನ್ನು ಯಾರು ತೆಗೆದುಕೊಂಡು ಹೋಗುವುದಿಲ್ಲವೋ ಅಂತ ಒಂದು ಪ್ರಶ್ನೆ ಸದಾ ಇದ್ದೇ ಇರುತ್ತದೆ.


ಇದನ್ನೂ ಓದಿ: ಭೂತಾನ್ ದೇಶದಿಂದ ಹಸಿ ಅಡಿಕೆ ಆಮದು, ರಾಜ್ಯ ಅಡಿಕೆ ಬೆಳೆಗಾರರಲ್ಲಿ ಆತಂಕ


ಎಲ್ಲಿಯವರೆಗೆ ಶ್ವಾನಗಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ಇರುತ್ತವೆಯೋ, ಅಲ್ಲಿಯವರೆಗೆ ಮಿಲಿಟರಿ ನಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಆದರೆ ನಿವೃತ್ತಿ ಹೊಂದಿದ ಮೇಲೆ ಕೆಲವು ಶ್ವಾನಗಳು ಅಲ್ಲಿಯೇ ಕಾವಲು ನಾಯಿಗಳಾಗಿ ಕೆಲಸ ಮುಂದುವರೆಸಿಕೊಂಡು ಹೋಗಬಹುದು. ಅನೇಕ ಶ್ವಾನಗಳು ನಿವೃತ್ತಿಯಾದಾಗ ನಾಯಿ ಆಶ್ರಯಗಳಲ್ಲಿ ಪುನರ್ವಸತಿ ಪಡೆಯುತ್ತವೆ.


ಸೇನೆಯಲ್ಲಿ ಶ್ವಾನಗಳು ಹೇಗೆ ತರಬೇತಿ ಪಡೆಯುತ್ತವೆ ಗೊತ್ತೇ?


ಇಲ್ಲಿ ಶ್ವಾನದ ಮರಿಗಳು ಆರು ತಿಂಗಳ ವಯಸ್ಸಿನಲ್ಲಿಯೇ ತರಬೇತಿಯನ್ನು ಪ್ರಾರಂಭಿಸುತ್ತವೆ. ಅವು ಸುಮಾರು ಒಂದು ವರ್ಷ ವಯಸ್ಸಿನದಾಗಿದ್ದಾಗ, ಮೂಸಿ ನೋಡುವುದು ಮತ್ತು ಜನರನ್ನು ರಕ್ಷಿಸುವುದು ಮುಂತಾದ ವಿಶೇಷ ಕಾರ್ಯಗಳನ್ನು ನಿರ್ವಹಿಸಲು ಕಲಿಸಲಾಗುತ್ತದೆ ಎಂದು ಪತ್ರಕರ್ತೆ ನವ್ಯಾ ಸಿಂಗ್ ಹೇಳುತ್ತಾರೆ.


ಅವುಗಳಿಗೆ ಸುಮಾರು ಎಂಟು ವರ್ಷ ತುಂಬುವವರೆಗೆ, ಒಂದು ರೀತಿಯ ಕಠಿಣವಾದ ದಿನಚರಿಗಳನ್ನು ಅನುಸರಿಸಲು ಕಲಿಸಲಾಗುವುದು ಮತ್ತು ಇದರ ಪರಿಣಾಮವಾಗಿ ಅವುಗಳು ಅತ್ಯಂತ ಸದೃಢವಾಗಿರುತ್ತವೆ.


"ಸೇನೆಯಲ್ಲಿ ಕೆಲಸ ಮಾಡುವ ಶ್ವಾನಗಳ ಅವಶ್ಯಕತೆಗಳು ಸಾಮಾನ್ಯ ಸಾಕು ನಾಯಿಗಿಂತ ತುಂಬಾನೇ ಭಿನ್ನವಾಗಿರುತ್ತವೆ" ಎಂದು ಸಿಂಗ್ ವಿವರಿಸುತ್ತಾರೆ. "ದೈಹಿಕವಾಗಿ ತುಂಬಾ ಸಕ್ರಿಯವಾಗಿರುವ ನಾಯಿಗೆ ಕೆನೆಲ್ ಉಳಿಯಲು ತುಂಬಾ ಕಷ್ಟವಾಗುತ್ತದೆ. ಇದರಿಂದ ಅವುಗಳು ಹೃದ್ರೋಗ ಸಮಸ್ಯೆ ಮತ್ತು ಮಾನಸಿಕ ಆಘಾತಕ್ಕೆ ಒಳಗಾಗುವಂತೆ ಮಾಡುತ್ತದೆ" ಎಂದು ಹೇಳುತ್ತಾರೆ.


ಏಳು ವರ್ಷಗಳ ಹಿಂದೆ ಈ ಸೇನಾ ಶ್ವಾನಗಳನ್ನು ದತ್ತು ತೆಗೆದುಕೊಳ್ಳುವುದು ಆಯ್ಕೆಯನ್ನು ಕೈಬಿಡಲಾಗಿತ್ತು, ಆದರೆ ಈಗ ಮತ್ತೆ ಈ ಒಂದು ದತ್ತು ತೆಗೆದುಕೊಳ್ಳುವ ಆಯ್ಕೆಯನ್ನು ಮತ್ತೆ ಶುರುಮಾಡಿದ್ದಾರೆ. ಇದು ಆ ಶ್ವಾನಗಳಿಗೆ ತಮ್ಮ ನಿವೃತ್ತಿಯ ನಂತರದ ಜೀವನದಲ್ಲಿ ಅರ್ಹವಾದ ಜೀವನವನ್ನು ನಡೆಸಲು ಒಂದು ಅವಕಾಶವನ್ನು ನೀಡುತ್ತದೆ ಎಂದು ಹೇಳಬಹುದು.


ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?


ದತ್ತು ಪಡೆದ ನಾಯಿ ಪೋಷಕರು ಮೀರತ್ ಕಂಟೋನ್ಮೆಂಟ್ ನಲ್ಲಿರುವ ಆರ್‌ವಿಎಸ್ ಸೆಂಟರ್ ಮತ್ತು ಕಾಲೇಜು ಅಥವಾ ದೆಹಲಿಯ ತಮ್ಮ ಪ್ರಧಾನ ಕಚೇರಿಗೆ ಅಫಿಡವಿಟ್ ಸಲ್ಲಿಸಬಹುದು.


ಇದನ್ನೂ ಓದಿ: ಸೀರೆ ಉಟ್ಟ ಮಹಿಳೆಯರ ಮೇಲೆ ದಾಳಿ; ಅಮೆರಿಕದಲ್ಲಿ‌ ಹೆಚ್ಚಿದ ಹಿಂದೂ ವಿರೋಧಿ ಚಟುವಟಿಕೆ


ನೀವು ಆ ಶ್ವಾನವನ್ನು ನಿಮ್ಮ ಮನೆಗೆ ಕರೆತರಲು ನಿರ್ಧರಿಸಿದರೆ, ಶಿಫಾರಸು ಮಾಡಿದ ಆಹಾರ ಮತ್ತು ಫಿಟ್ನೆಸ್ ಅನ್ನು ಅನುಸರಿಸುವುದರಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವಂತದಲ್ಲ. ಬಜೆಟ್ ದೃಷ್ಟಿಕೋನದಿಂದ, ಇದು ತುಲನಾತ್ಮಕವಾಗಿ ದುಬಾರಿ ಎಂದು ಕೆಲವರಿಗೆ ಅನ್ನಿಸಬಹುದು.


ವಿಧಿಯಲ್ಲಿ ಬದಲಾವಣೆ


2015 ರವರೆಗೆ, ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ ಶ್ವಾನಗಳನ್ನು ಅವುಗಳ ಸೇವೆಯ ಅಂತ್ಯದ ನಂತರ ಅಥವಾ ಅವುಗಳನ್ನು ಅನರ್ಹವೆಂದು ಪರಿಗಣಿಸುತ್ತಿದ್ದರು. ಆದರೆ ದೆಹಲಿ ಹೈಕೋರ್ಟ್ ಆದೇಶವು ಈ ಅಭ್ಯಾಸವನ್ನು ನಿಷೇಧಿಸಿತು, ಅವುಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿಕೊಡಲು ಅನುವು ಮಾಡಿಕೊಟ್ಟಿತು.

First published: