ಅನೈತಿಕ ಸಂಬಂಧದ ಶಂಕೆ; ಮೊಮ್ಮಕ್ಕಳ ಎದುರೇ ಹೆಂಡತಿ, ಸೊಸೆಯನ್ನು ಬರ್ಬರವಾಗಿ ಕೊಂದ ನಿವೃತ್ತ ಶಿಕ್ಷಕ

ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಸತೀಶ್ ಚೌಧರಿ ಎಂಬ 64 ವರ್ಷದ ವ್ಯಕ್ತಿ ಕೊಲೆಯ ಆರೋಪಿ. ತನ್ನ ಪತ್ನಿ ಸ್ನೇಹಲತಾ (62), ಹಿರಿಯ ಸೊಸೆ ಪ್ರಜ್ಞಾ ಚೌಧರಿ (35) ರೂಮಿನಲ್ಲಿ ಮಲಗಿದ್ದಾಗ ಇಬ್ಬರು ಮೊಮ್ಮಕ್ಕಳ ಎದುರಿನಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

news18-kannada
Updated:December 7, 2019, 12:34 PM IST
ಅನೈತಿಕ ಸಂಬಂಧದ ಶಂಕೆ; ಮೊಮ್ಮಕ್ಕಳ ಎದುರೇ ಹೆಂಡತಿ, ಸೊಸೆಯನ್ನು ಬರ್ಬರವಾಗಿ ಕೊಂದ ನಿವೃತ್ತ ಶಿಕ್ಷಕ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಡಿ. 7): ತನ್ನ ಹೆಂಡತಿ ಮತ್ತು ಸೊಸೆ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ 64 ವರ್ಷದ ನಿವೃತ್ತ ಶಿಕ್ಷಕನೊಬ್ಬ ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಸತೀಶ್ ಚೌಧರಿ ಎಂಬ 64 ವರ್ಷದ ವ್ಯಕ್ತಿ ಕೊಲೆಯ ಆರೋಪಿ. ತನ್ನ ಪತ್ನಿ ಸ್ನೇಹಲತಾ (62), ಹಿರಿಯ ಸೊಸೆ ಪ್ರಜ್ಞಾ ಚೌಧರಿ (35) ರೂಮಿನಲ್ಲಿ ಮಲಗಿದ್ದಾಗ ಇಬ್ಬರು ಮೊಮ್ಮಕ್ಕಳ ಎದುರಿನಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಕಿರಿಯ ಮಗ ಸೌರಭ್ ಚೌಧರಿ ಆಫೀಸಿಗೆ ರಜೆ ಹಾಕಿ ದೆಹಲಿಯಲ್ಲಿರುವ ಮನೆಗೆ ಹೋಗಿದ್ದರು.

ಪಕ್ಕದ ರೂಮಿನಲ್ಲಿ ಮಲಗಿದ್ದ ಅವರಿಗೆ ರಾತ್ರಿ ಅಣ್ಣನ ಮಕ್ಕಳು ಜೋರಾಗಿ ಅಳುತ್ತಿದ್ದ ಶಬ್ದ ಕೇಳಿದ್ದರಿಂದ ಗಾಬರಿಯಿಂದ ಎದ್ದು ಬಂದು ನೋಡಿದಾಗ ಅಮ್ಮ ಮತ್ತು ಅತ್ತಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಚಾಕು ಹಿಡಿದು ನಿಂತಿದ್ದ ಅಪ್ಪನನ್ನು ನೋಡಿ ಭಯಗೊಂಡು ಮಕ್ಕಳಿಬ್ಬರನ್ನೂ ತನ್ನ ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿದ್ದರು.

ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣ; ಆಸ್ಪತ್ರೆಯಲ್ಲೇ ದುರಂತ ಅಂತ್ಯ ಕಂಡ ಯುವತಿ

ನಂತರ ತನ್ನ ತಂದೆ ಮಾಡಿದ ಕೊಲೆಯ ಬಗ್ಗೆ ಸೌರಭ್​ ಚೌಧರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಕ್ಕಳನ್ನು ತನ್ನ ರೂಮಿಗೆ ಕರೆದುಕೊಂಡು ಹೋಗುವಾಗ ಸೌರಭ್​ ಮೇಲೂ ಸತೀಶ್ ಚೌಧರಿ ಹಲ್ಲೆ ನಡೆಸಿದ್ದಾರೆ. ಸೌರಭ್ ಮೈಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಜ್ಞಾ ಮತ್ತು ಸ್ನೇಹಲತಾ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.

ಬೆಂಕಿ ಹಚ್ಚಿದವರು ನೇಣಿಗೇರುವುದನ್ನು ನೋಡಿಯೇ ನಾನು ಸಾಯಬೇಕು; ಉನ್ನಾವೋ ಸಂತ್ರಸ್ತೆಯ ಆಸೆ ಕೊನೆಗೂ ಈಡೇರಲೇ ಇಲ್ಲ!

ಪ್ರಜ್ಞಾ ಚೌಧರಿ ಅವರ ಗಂಡ ಗೌರವ್ ಚೌಧರಿ ಸಿಂಗಾಪುರ್​ನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾರೆ. ಪ್ರಜ್ಞಾ ಚೌಧರಿ ಇಂಡಿಗೋ ಏರ್​ಲೈನ್ಸ್​ನಲ್ಲಿ ಏರ್​ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಾರೆ. ಈ ವಿಷಯವನ್ನು ಈಗಾಗಲೇ ಪ್ರಜ್ಞಾ ಚೌಧರಿ ಗಂಡನಿಗೆ ತಿಳಿಸಲಾಗಿದೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಸತೀಶ್ ಚೌಧರಿ ನನ್ನ ಕುಟುಂಬದವರು ನನಗೆ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನವಿತ್ತು. ಈ ಕಾರಣದಿಂದ ಅವರನ್ನು ಬೇರೆ ಕಡೆ ಇರಿಸಲು ಪ್ರಯತ್ನಪಟ್ಟಿದ್ದೆ. ನನ್ನ ಹೆಂಡತಿ ಮತ್ತು ಸೊಸೆ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ನನಗಿತ್ತು. ಅದೇ ಕಾರಣಕ್ಕೆ ಅವರಿಬ್ಬರನ್ನೂ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ