ಅಭಿವೃದ್ಧಿ ಮಾದರಿ ಬಿಹಾರ ಜನರ ಹೃದಯ ಗೆದ್ದಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ; ಪ್ರಧಾನಿ ಮೋದಿ
ಬಿಹಾರದಲ್ಲಿ ಅಭಿವೃದ್ಧಿ ಗೆದ್ದಿದೆ. ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಎನ್ಡಿಎ ಪ್ರತಿಯೊಂದು ಉದ್ದೇಶವನ್ನು ಸಾಧಿಸಲಿದೆ. ಬಿಹಾರದಲ್ಲಿ ಮೂರು ಅವಧಿಗೆ ಅಧಿಕಾರದಲ್ಲಿದ್ದ ಮತ್ತು ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡ ಏಕೈಕ ಪಕ್ಷ ನಮ್ಮದು. ನಮ್ಮ ಆಡಳಿತ ಮಾದರಿ ನಮ್ಮ ಯಶಸ್ಸಿನ ಗುಟ್ಟು ಎಂದು ಹೇಳಿದರು.
news18-kannada Updated:November 11, 2020, 8:32 PM IST

ನರೇಂದ್ರ ಮೋದಿ.
- News18 Kannada
- Last Updated: November 11, 2020, 8:32 PM IST
ನವದೆಹಲಿ: ದೇಶದ ಪ್ರತಿಯೊಬ್ಬರ ನಾಗರಿಕರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ದೇಶದ ಮೂಲೆ ಮೂಲೆಯಲ್ಲೂ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಅಲ್ಲ, ಬದಲಾಗಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರೋತ್ಸಾಹದಿಂದ ಪಾಲ್ಗೊಂಡಿದ್ದಕ್ಕೆ ದೇಶದ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರದ ಗದ್ದುಗೆ ಹಿಡಿದ ಬೆನ್ನಲ್ಲೇ ದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನೆರೇಂದ್ರ ಮೋದಿ ಅವರು, ಕುಟುಂಬ ರಾಜಕೀಯ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಒಂದು ಕುಟುಂಬಕ್ಕೆ ಸೇರಿದ ರಾಷ್ಟ್ರೀಯ ಪಕ್ಷವಿದೆ. ಇದು ಬಿಜೆಪಿಯಂತಹ ಪಕ್ಷದ ಮಹತ್ವವನ್ನು ಹೆಚ್ಚಿಸಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದರು. ಇದನ್ನು ಓದಿ: Bihar Election Result 2020: ಬಿಹಾರದಲ್ಲಿ ಜಯಭೇರಿ ಬಾರಿಸಿದ ಎನ್ಡಿಎ; ನಿತೀಶ್ ಕುಮಾರ್ಗೆ ಮತ್ತೊಮ್ಮೆ ಸಿಎಂ ಪಟ್ಟ ಖಚಿತ
ಮಾರಕ ಕೊರೋನಾ ಸಾಂಕ್ರಾಮಿಕ ಸೋಂಕಿನ ವಿರುದ್ಧ ನಾವು ಜನತಾ ಕರ್ಫ್ಯೂಯಿಂದ ಈ ದಿನದವರೆಗೆ ಹೋರಾಡಿದರ ಪರಿಣಾಮವೇ ಈ ಫಲಿತಾಂಶ. ಕೋವಿಡ್ನಿಂದ ಉಳಿದ ಪ್ರತಿಯೊಂದು ಜೀವವೂ ಭಾರತಕ್ಕೆ ಯಶಸ್ಸಿನ ಕತೆ ಎಂದು ಹೇಳಿದರು.
ಬಿಜೆಪಿಗೆ ಮೌನ ಮತದಾರರ ತಂಡವಿದೆ. ಅವರು ನಿರಂತರವಾಗಿ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿ ದೇಶದ ಮಹಿಳಾ ಮತದಾರರು ಕೂಡ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬಿಹಾರದಲ್ಲಿ ಅಭಿವೃದ್ಧಿ ಗೆದ್ದಿದೆ. ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಎನ್ಡಿಎ ಪ್ರತಿಯೊಂದು ಉದ್ದೇಶವನ್ನು ಸಾಧಿಸಲಿದೆ. ಬಿಹಾರದಲ್ಲಿ ಮೂರು ಅವಧಿಗೆ ಅಧಿಕಾರದಲ್ಲಿದ್ದ ಮತ್ತು ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡ ಏಕೈಕ ಪಕ್ಷ ನಮ್ಮದು. ನಮ್ಮ ಆಡಳಿತ ಮಾದರಿ ನಮ್ಮ ಯಶಸ್ಸಿನ ಗುಟ್ಟು. ಅಭಿವೃದ್ಧಿ ಕಾರ್ಯಸೂಚಿ ಬಿಹಾರ ಜನರ ಹೃದಯ ಗೆದ್ದಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂದು ಹೇಳಿದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರದ ಗದ್ದುಗೆ ಹಿಡಿದ ಬೆನ್ನಲ್ಲೇ ದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನೆರೇಂದ್ರ ಮೋದಿ ಅವರು, ಕುಟುಂಬ ರಾಜಕೀಯ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಒಂದು ಕುಟುಂಬಕ್ಕೆ ಸೇರಿದ ರಾಷ್ಟ್ರೀಯ ಪಕ್ಷವಿದೆ. ಇದು ಬಿಜೆಪಿಯಂತಹ ಪಕ್ಷದ ಮಹತ್ವವನ್ನು ಹೆಚ್ಚಿಸಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದರು.