• Home
  • »
  • News
  • »
  • national-international
  • »
  • Murder Case: ಗುಂಡು ಹಾರಿಸಿ ಹೋಟೆಲ್ ಮಾಲೀಕನ ಹತ್ಯೆ- ಮೂವರು ಆರೋಪಿಗಳ ಬಂಧನ

Murder Case: ಗುಂಡು ಹಾರಿಸಿ ಹೋಟೆಲ್ ಮಾಲೀಕನ ಹತ್ಯೆ- ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hotel Owner Murder: ಆಹಾರದ ಆರ್ಡರ್ ಸಂಗ್ರಹಿಸಲು ಡೆಲಿವರಿ ಬಾಯ್ ರೆಸ್ಟೋರೆಂಟ್ ತಲುಪಿದಾಗ ಸ್ವಿಗ್ಗಿ ಏಜೆಂಟ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿಯ ನಡುವೆ ಜಗಳ ನಡೆದಿದೆ ಎಂದು ಮೂಲಗಳು ವರದಿ ಮಾಡಿವೆ

  • Share this:

Noida:  ಗ್ರೇಟರ್ ನೋಯ್ಡಾದ ರೆಸ್ಟೋರೆಂಟ್ ಮಾಲೀಕನನ್ನು ಆಹಾರ ತಯಾರಿಸುವುದರಲ್ಲಿ ವಿಳಂಬವಾದ ಹಿನ್ನಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಪ್ರಕರಣವೊಂದು  ನಡೆದಿದೆ.  ಇನ್ನು ಪ್ರಕರಣದ ಪ್ರಮುಖ ಆರೋಪಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದು, ಆತ ನೀಡಿದ್ದ ಆಹಾರದ ಆರ್ಡರ್ ತಡವಾಗಿದ್ದ ಕಾರಣ ಗಲಾಟೆ ಮಾಡಿದ್ದ ಎಂದು ವರದಿಯಾಗಿತ್ತು. ಆದರೆ ನೋಯ್ಡಾ ಪೊಲೀಸರ ಪ್ರಕಾರ ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.


ಈಗಾಗಲೇ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸ್ವಿಗ್ಗಿ ಡೆಲಿವರಿ ಬಾಯ್ ಈ ಪ್ರಕರಣದಲ್ಲಿ ಶಾಮೀಲಾಗಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.   ಇನ್ನು ಹತ್ಯೆಗೊಳಗಾದ ರೆಸ್ಟೋರೆಂಟ್ ಮಾಲೀಕನನ್ನು ಸುನಿಲ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಮಿತ್ರಾ ಎಂಬ ವಸತಿ ಸಂಕೀರ್ಣದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.


ಆಹಾರದ ಆರ್ಡರ್ ಸಂಗ್ರಹಿಸಲು ಡೆಲಿವರಿ ಬಾಯ್ ರೆಸ್ಟೋರೆಂಟ್ ತಲುಪಿದಾಗ ಸ್ವಿಗ್ಗಿ ಏಜೆಂಟ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿಯ ನಡುವೆ ಜಗಳ ನಡೆದಿದೆ ಎಂದು ಮೂಲಗಳು ವರದಿ ಮಾಡಿವೆ.  ಇನ್ನು ಆಹಾರ ಪದಾರ್ಥ ಸಿದ್ಧವಾಗಿಲ್ಲ, ತಯಾರಿಸಲಾಗುತ್ತಿದೆ ಹಾಗಾಗಿ ಕಾಯುವಂತೆ  ಆತನಿಗೆ ಮನವಿ ಮಾಡಿದಾಗ, ಹೋಟೆಲ್  ಸಿಬ್ಬಂದಿ ಮತ್ತು ಸ್ವಿಗ್ಗಿ ಏಜೆಂಟ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ.  ಇಬ್ಬರ ನಡುವೆ ವಾದ ಮುಂದುವರಿದಾಗ, ಮಾಲೀಕ ಅಗರ್ವಾಲ್ ಅವರು ಜಗಳ ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ, ಆತನ ತಲೆಗೆ ಗುಂಡು ಹಾರಿಸಲಾಗಿದೆ.


ಆದರೆ, ಇಡೀ ಘಟನೆಯನ್ನು ಪೊಲೀಸರು ಇನ್ನೊಂದು ಆಯಾಮದಲ್ಲಿ ವಿವರಿಸಿದ್ದಾರೆ. ಬಂಧಿಸಲಾಗಿರುವ ಆರೋಪಿಗಳ ಹೇಳಿಕೆಯ ಪ್ರಕಾರ ಕೆಲವು ಡೆಲಿವರಿ ಬಾಯ್‌ಗಳು ರೆಸ್ಟೋರೆಂಟ್‌ ಬಳಿ ನಿಂತಿದ್ದರು ಮತ್ತು  ಅವರಲ್ಲೊಬರು ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ತೀವ್ರವಾಗಿ ವಾದ ವಿವಾದಗಳು ನಡೆಯುತ್ತಿದ್ದವು.  ಈ ಸಮಯದಲ್ಲಿ ಮದ್ಯಪಾನ ಮಾಡಿದ್ದ ಈ ಮೂವರು ವ್ಯಕ್ತಿಗಳು ಜಗಳ ಮಾಡಲು ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಮಾಲೀಕರು ರಕ್ಷಣೆಗೆ ಬಂದಿದ್ದು.  ಆದರೆ ಅಲ್ಲಿದ್ದ ಜನರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಮಾಲೀಕರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಯಲಿಲ್ಲ ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಕೇರಳದಲ್ಲಿ ಮತ್ತೆ ನಿಪಾ ಪ್ರತ್ಯಕ್ಷ; 12 ವರ್ಷದ ಬಾಲಕ ಬಲಿ- ಕೋವಿಡ್ ಮಧ್ಯೆ ನಿಪಾ ಆತಂಕದಲ್ಲಿ ದೇವರ ನಾಡು


ನಾವು ಈ ಆರೋಪಿಗಳ ಇತಿಹಾಸವನ್ನು ತನಿಖೆ ಮಾಡುತ್ತಿದ್ದೇವೆ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.  ಬಂಧಿತ ಮೂವರು ಹಿಂದಿನ ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಅವರಲ್ಲಿ ಇಬ್ಬರು ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದು ಮಾತ್ರವಲ್ಲದೆ ಅವರನ್ನು ಹುಡುಕುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾರೆ.  ವಿಕಾಸ್ ಚೌಧರಿ ಎಂಬ ಒಬ್ಬ ಆರೋಪಿಗೆ ಗುಂಡಿನ ಚಕಮಕಿಯಲ್ಲಿ ಕಾಲಿಗೆ ಗುಂಡು ತಗುಲಿದ್ದು,  ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ.


ಅಲ್ಲದೇ  ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದ ಇಬ್ಬರು ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದು,  ಅವರಿಂದ ಗುಂಡುಗಳು ಮತ್ತು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಈ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Sandhya M
First published: