• Home
  • »
  • News
  • »
  • national-international
  • »
  • Vijay Rupani: ರಾತ್ರೋ ರಾತ್ರಿ ರಾಜೀನಾಮೆ: ವರ್ಷದ ಬಳಿಕ 'ಹೈಕಮಾಂಡ್​' ರಹಸ್ಯ ಬಿಚ್ಚಿಟ್ಟ ಗುಜರಾತ್ ಮಾಜಿ ಸಿಎಂ ರೂಪಾನಿ!

Vijay Rupani: ರಾತ್ರೋ ರಾತ್ರಿ ರಾಜೀನಾಮೆ: ವರ್ಷದ ಬಳಿಕ 'ಹೈಕಮಾಂಡ್​' ರಹಸ್ಯ ಬಿಚ್ಚಿಟ್ಟ ಗುಜರಾತ್ ಮಾಜಿ ಸಿಎಂ ರೂಪಾನಿ!

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ

Resigned as CM after being told only the previous night by BJP high command Says Gujarat Former CM Rupani Vijay Rupani: ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ತೊರೆದ ಒಂದು ವರ್ಷದ ನಂತರ ವಿಜಯ್ ರೂಪಾನಿ ದೊಡ್ಡ ಬಹಿರಂಗಪಡಿಸಿದ್ದಾರೆ. ರಾಜೀನಾಮೆ ನೀಡುವ ಹಿಂದಿನ ರಾತ್ರಿ ಬಿಜೆಪಿಯ "ಹೈಕಮಾಂಡ್" ರಾಜೀನಾಮೆ ನೀಡುವಂತೆ ಕೇಳಿಕೊಂಡಿತ್ತು ಎಂದು ರೂಪಾನಿ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜೀನಾಮೆ ನೀಡಲು ಹೇಳಿದ ಬೆನ್ನಲ್ಲೇ ಮರುದಿನ ಅವರು ಸಿಎಂ ಸ್ಥಾನವನ್ನು ತೊರೆದಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ(ಸೆ.28): ಗುಜರಾತ್ ಮುಖ್ಯಮಂತ್ರಿಯಾಗಿ(Chief Minister Of Gujarat) ಅಧಿಕಾರ ತೊರೆದ ಒಂದು ವರ್ಷದ ನಂತರ ವಿಜಯ್ ರೂಪಾನಿ ಪ್ರಮುಖ ವಿಚಾರ ಬಹಿರಂಗಪಡಿಸಿದ್ದಾರೆ. ರಾಜೀನಾಮೆ ನೀಡುವ ಹಿಂದಿನ ರಾತ್ರಿ ಬಿಜೆಪಿಯ "ಹೈಕಮಾಂಡ್" ರಾಜೀನಾಮೆ (Resignation) ನೀಡುವಂತೆ ಕೇಳಿಕೊಂಡಿತ್ತು ಎಂದು ರೂಪಾನಿ (Vijay Rupani) ಹೇಳಿದ್ದಾರೆ. ರೂಪಾನಿ 11 ಸೆಪ್ಟೆಂಬರ್ 2021 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಬಿಜೆಪಿ ಹೈಕಮಾಂಡ್ ತಮ್ಮ ರಾಜೀನಾಮೆ ಕೇಳಿದರು ಮತ್ತು ಮರುದಿನ ಅವರು ಹುದ್ದೆಯನ್ನು ತೊರೆದರು ಎಂದು ಹೇಳಿದರು. ಇನ್ನು ಹೈಕಮಾಂಡ್‌ಗೆ ಕಾರಣ ಕೇಳಿಲ್ಲ, ಯಾರೂ ಕಾರಣ ಹೇಳಿಲ್ಲ ಎಂದರು.


ಇದನ್ನೂ ಓದಿ: Kerala Govt: ನೆರೆ ರಾಜ್ಯ ಕೇರಳದಲ್ಲಿನ್ನು ಗುಜರಾತ್​​ ಮಾದರಿ ಆಡಳಿತ!


ಕಾರಣ ನಾನು ಕೇಳಲಿಲ್ಲ


ನಾನು ಕಾರಣವನ್ನು ಕೇಳಿದ್ದರೆ ಅವರು ನನಗೆ ಕಾರಣವನ್ನು ಹೇಳುತ್ತಿದ್ದರು ಎಂಬ ಭರವಸೆ ನನಗಿತ್ತು ಎಂದು ಅವರು ಸಂದರ್ಶನದಲ್ಲಿ ಹೇಳಿದರು. ಆದರೆ ನಾನು ಯಾವಾಗಲೂ ಪಕ್ಷದ ಶಿಸ್ತಿನ ಕಾರ್ಯಕರ್ತ. ನಾನು ಯಾವತ್ತೂ ಪಕ್ಷ ಕೇಳಿದ್ದನ್ನೇ ಮಾಡಿದ್ದೇನೆ. ಪಕ್ಷ ನನಗೆ ಮುಖ್ಯಮಂತ್ರಿಯಾಗಲು ಆದೇಶ ನೀಡಿದಾಗ ನಾನೇ ಆದೆ. ಪಕ್ಷದವರು ನನ್ನ ಹುದ್ದೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಹೇಳಿದಾಗ ನಾನು ಸಂತೋಷದಿಂದ ಹಾಗೆ ಮಾಡಿದೆ ಎಂದಿದ್ದಾರೆ.


ನಗುಮುಖದಿಂದಲೇ ರಾಜೀನಾಮೆ ಹಸ್ತಾಂತರ


ತಮ್ಮ ಪಕ್ಷದಿಂದ ಸೂಚನೆಗಳನ್ನು ಸ್ವೀಕರಿಸಿದ ಗಂಟೆಗಳ ನಂತರ, ಅವರು ಯಾವುದೇ ವಿರೋಧ ತೋರಿಸದೆ ಅಥವಾ ಕೋಪವಿಲ್ಲದೆ 21 ಸೆಪ್ಟೆಂಬರ್ 2021 ರಂದು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದರು ಎಂದು ಅವರು ಹೇಳಿದರು. ಉತ್ತಮ ಕಾರ್ಯಕರ್ತನಾಗಿ ನಾನು ಯಾವತ್ತೂ ಪಕ್ಷದ ನೀತಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ರೂಪಾನಿ ಹೇಳಿದ್ದಾರೆ. ನಾನು ನನ್ನ ರಾಜೀನಾಮೆಯನ್ನು ನಗು ಮುಖದಿಂದ ಸಲ್ಲಿಸಿದ್ದೇನೆಯೇ ಹೊರತು ದುಃಖದ ಮುಖದಿಂದಲ್ಲ ಎಂದಿದ್ದಾರೆ.


ಒಂದು ವರ್ಷದ ನಂತರ ಬಿಜೆಪಿ ಪಂಜಾಬ್‌ನ ಉಸ್ತುವಾರಿಯಾಗಿ ನೇಮಿಸಿತು


ರೂಪಾನಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಒಂದು ವರ್ಷದ ನಂತರ, ಬಿಜೆಪಿ ಅವರನ್ನು ಪಂಜಾಬ್‌ನ ಉಸ್ತುವಾರಿಯನ್ನಾಗಿ ನೇಮಿಸಿದೆ. ಅವರು ಈ ಹೊಸ ಕೆಲಸವನ್ನು ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪ್ರಗತಿ ಎಂದು ನೋಡುತ್ತಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷವು ನನಗೆ ಮೊದಲು ನಗರ ಮಟ್ಟದಲ್ಲಿ, ನಂತರ ಪ್ರಾದೇಶಿಕ ಮಟ್ಟದಲ್ಲಿ ಕೆಲಸ ನೀಡಿದ್ದು, ಅದರಂತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನೀಡಿ ಕೊನೆಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು. ಈಗ ನನಗೆ ರಾಷ್ಟ್ರಮಟ್ಟದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ: Gujarat Political Crisis: ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ!


ಈ ವರ್ಷಾಂತ್ಯದಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಾವು ತೀವ್ರ ಆಸಕ್ತಿ ವಹಿಸುವುದಾಗಿ ಮತ್ತು ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುವುದನ್ನು ಖಚಿತಪಡಿಸಿಕೊಳ್ಳುವುದಾಗಿಯೂ ರೂಪಾನಿ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಪಂಜಾಬ್‌ನಲ್ಲಿ ಬಿಜೆಪಿಯನ್ನು ಪ್ರಬಲ ಪ್ರತಿಪಕ್ಷವನ್ನಾಗಿ ಮಾಡಲು ಮತ್ತು 2027 ರಲ್ಲಿ ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಜನಪ್ರಿಯತೆಯನ್ನು ಬಂಡವಾಳವಾಗಿಸಿ ಅಧಿಕಾರವನ್ನು ಗಳಿಸುವುದು ತಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

Published by:Precilla Olivia Dias
First published: