Coming Soon: ಪ್ರಧಾನಿ ಕಚೇರಿಗೆ ನೇರ ಸುರಂಗ ಮಾರ್ಗ! ಏನಿದು ಹೊಸ ಯೋಜನೆ?

ಪ್ರಧಾನಿ ಕಚೇರಿಗೆ ನೇರ ಸುರಂಗ ಮಾರ್ಗ ಸಂಪರ್ಕ ಹೊಂದಿರುವ ವಸತಿ ಸಂಕೀರ್ಣ

ಪ್ರಧಾನಿ ಕಚೇರಿಗೆ ನೇರ ಸುರಂಗ ಮಾರ್ಗ ಸಂಪರ್ಕ ಹೊಂದಿರುವ ವಸತಿ ಸಂಕೀರ್ಣ

ಕೇಂದ್ರ ಸರ್ಕಾರವು ತನ್ನ ಪ್ರತಿಷ್ಠಿತ ಸೆಂಟ್ರಲ್ ವಿಸ್ತಾ ರಿಡೆವೆಲಪ್ಮೆಂಟ್ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿಯವರ ವಸತಿ ಸಂಕೀರ್ಣದ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿರುವುದಾಗಿ ವರದಿ ಮಾಡಿದೆ. ಇದು ಯೋಜನೆಯ ಅತಿ ಮಹತ್ತರ ಘಟಕಗಳಲ್ಲಿ ಉನ್ನತ ಸ್ಥಾನ ಮಾನ ಹೊಂದಿದ್ದು ಬ್ಲಾಕ್ ಎ ಮತ್ತು ಬ್ಲಾಕ್ ಬಿ ಎಂಬ ಎರಡು ಪ್ರತ್ಯೇಕ ಘಟಕಗಳಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ಈಗಾಗಲೇ ಪ್ರಿಂಟ್ ಸುದ್ದಿ ಮಾಧ್ಯಮದ ಪ್ರಕಾರ, ಕೇಂದ್ರ ಸರ್ಕಾರವು (Central Government) ತನ್ನ ಪ್ರತಿಷ್ಠಿತ ಸೆಂಟ್ರಲ್ ವಿಸ್ತಾ ರಿಡೆವೆಲಪ್ಮೆಂಟ್ (Central Vista Redevelopment) ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿಯವರ ವಸತಿ ಸಂಕೀರ್ಣದ (Prime Minister's Residential Complex) ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿರುವುದಾಗಿ ವರದಿ ಮಾಡಿದೆ. ಇದು ಯೋಜನೆಯ ಅತಿ ಮಹತ್ತರ ಘಟಕಗಳಲ್ಲಿ ಉನ್ನತ ಸ್ಥಾನ ಮಾನ ಹೊಂದಿದ್ದು ಬ್ಲಾಕ್ ಎ ಮತ್ತು ಬ್ಲಾಕ್ ಬಿ ಎಂಬ ಎರಡು ಪ್ರತ್ಯೇಕ ಘಟಕಗಳಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ದಕ್ಷಿಣ ದೆಹಲಿಯ (South Delhi) ದಾರಾ ಶಿಕೋಹ್ ರಸ್ತೆಯ ಬಳಿ ಭೂಮಿಯನ್ನು ಗುರುತಿಸಲಾಗಿದೆ ಎಂದು ಪ್ರಿಂಟ್ ಮಾಧ್ಯಮ ವರದಿ ಮಾಡಿದೆ.


ಈ ವಸತಿ ಸಂಕೀರ್ಣದ ವಿಸ್ತಾರವೆಷ್ಟು?
ವರದಿಯ ಅನುಸಾರ, ಈ ಒಟ್ಟಾರೆ ವಸತಿ ಸಂಕೀರ್ಣವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು ಇದು 2,26,203 ಚ.ಅಡಿಗಳಷ್ಟು ವಿಸ್ತಾರವಾಗಿರಲಿದೆ ಹಾಗೂ ಇದಕ್ಕಾಗಿ ತಗಲುವ ವೆಚ್ಚ ಸುಮಾರು 467 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಈ ಒಟ್ಟಾರೆ ವಸತಿ ಸಮುಚ್ಛಯದಲ್ಲಿ ಪ್ರಧಾನಿಯವರ ವಸತಿ ಗ್ರಹವು ಸುಮಾರು 36,328 ಚ.ಅಡಿಗಳಷ್ಟು ವಿಸ್ತಾರವಾಗಿರುತ್ತದೆ ಎನ್ನಲಾಗಿದೆ.


ಇದರ ವೈಶಿಷ್ಠ್ಯ ಹಾಗೂ ಸೌಲಭ್ಯಗಳೇನು?
ಈ ವಸತಿ ಸಂಕೀರ್ಣವು ಹಲವಾರು ವೈಶಿಷ್ಠ್ಯ ಹಾಗೂ ಸೌಲಭ್ಯಗಳನ್ನೂ ಸಹ ಹೊಂದಿರಲಿದೆ ಎನ್ನಲಾಗಿದ್ದು ಅದರಲ್ಲಿ ಪ್ರಧಾನಿಯವರ ಮುಖ್ಯ ವಸತಿ ನಿಲಯವು ನೆಲ ಹಾಗೂ ಮೊದಲ ಮಹಡಿಗಳನ್ನು ಹೊಂದಿರುತ್ತದೆ. ದಕ್ಷಿಣ ಬ್ಲಾಕಿನಲ್ಲಿ ಸ್ಥಿತವಿರುವ ಈ ಸಂಕೀರ್ಣವು ಪ್ರಧಾನಿಯವರ ಗೃಹ ಕಚೇರಿ, ಕ್ರೀಡಾ ಸೌಲಭ್ಯ, ಸಹಾಯಕ ಸಿಬ್ಬಂದಿಗಳ ಕ್ವಾರ್ಟರ್ಸ್, ಎಸ್.ಪಿ.ಜಿ ಅಂದರೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಕಚೇರಿ, ಸೆಕ್ಯೂರಿಟಿ ಕೋಣೆ, ಸೇವಾಸದನ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.


ಈ ಒಟ್ಟಾರೆ ವಸತಿ ಸಂಕೀರ್ಣದ ವಿನ್ಯಾಸದ ಒಂದು ಮಹತ್ತರ ಅಂಶವೆಂದರೆ ಇದು ಸಬ್ ಟೆರೆನಿಯನ್ ವಿಐಪಿ ಸುರಂಗ ಮಾರ್ಗ ಹೊಂದಿರುವುದು. ಈ ಸುರಂಗ ಮಾರ್ಗವು ನೇರವಾಗಿ ಪ್ರಧಾನಿಯವರ ವಸತಿಯಿಂದ ಪ್ರಧಾನಿಯವರ ಗೃಹ ಕಚೇರಿಗೆ ಸಂಪರ್ಕ ಕಲ್ಪಿಸಲಿದೆ. ಈ ಮೂಲಕ ಈ ಸುರಂಗ ಮಾರ್ಗವು ಹೊಸ ಪಾರ್ಲಿಯಾಮೆಂಟ್ ಕಟ್ಟಡ ಹಾಗೂ ಉಪ ರಾಷ್ಟ್ರಪತಿಯವರ ನಿಲಯಕ್ಕೂ ಸಂಪರ್ಕ ಕಲ್ಪಿಸಲಿದೆ.


ಸುರಂಗ ಮಾರ್ಗವೂ ಇರಲಿದ್ಯಂತೆ ಈ ಸಂಕೀರ್ಣಕ್ಕೆ 
ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಈ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆಯನ್ನು, ಈಗಾಗಲೇ ಪ್ರಧಾನಿಯವರ ಚಲನವಲನಗಳಿದ್ದಾಗ ರಸ್ತೆಯಲ್ಲಿ ಉಂಟಾಗುವ ಹಲವು ಬ್ಲಾಕೇಡ್ ಗಳು ಹಾಗೂ ಅದರಿಂದಾಗುವ ಇತರೆ ವ್ಯತ್ಯಯಗಳನ್ನು ದೂರವಿಡುವ ದೃಷ್ಟಿಯಿಂದ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: IISc Bengaluru: ಹೊಸ ಸಂಶೋಧನೆ; ಮೀನಿನ ಕಿವಿ ಮೂಳೆಯಿಂದ ಸಮುದ್ರದ ನೀರಿನ ತಾಪಮಾನ ಪರೀಕ್ಷೆ!


ಈ ಒಟ್ಟಾರೆ ವಸತಿ ಸಂಕೀರ್ಣ ನಿರ್ಮಾಣ ಜವಾಬ್ದಾರಿ ಹೊಂದಿರುವ ಸೆಂಟ್ರಲ್ ವಿಸ್ತಾ ರಿಡೆವೆಲಪ್ಮೆಂಟ್ ಯೋಜನೆಯ ಮೇಲುಸ್ತುವಾರಿಯನ್ನು ದಿ ಯುನಿಯನ್ ಹೌಸಿಂಗ್ ಮತ್ತು ಅರ್ಬನ್ ಅಫೇರ್ಸ್ ಮಂತ್ರಾಲಯವು ಹೊತ್ತುಕೊಂಡಿದ್ದು ಈ ಯೋಜನೆಯನ್ನು ಸಂಪೂರ್ಣಗೊಳಿಸಿ ಹಸ್ತಾಂತರಿಸಲು ಸೆಪ್ಟೆಂಬರ್ 2024 ಅನ್ನು ಅಂತಿಮ ಸಮಯವನ್ನಾಗಿ ನಿಗದಿಪಡಿಸಿಕೊಂಡಿದೆ. ಸರ್ಕಾರಿ ಮೂಲಗಳು ಸುದ್ದಿ ಮಾಧ್ಯಮಕ್ಕೆ ತಿಳಿಸಿರುವಂತೆ ಅನುಮೋದನೆಗಾಗಿ ಈ ಒಟ್ಟಾರೆ ಯೋಜನೆಯ ಸಂಪೂರ್ಣ ಪ್ರಸ್ತಾವನೆಯು ಶೀಘದಲ್ಲೇ ಹಣಕಾಸು ಮಂತ್ರಾಲಯದ ಎಕ್ಸ್ಪೆಂಡಿಚರ್ ಹಾಗೂ ಫೈನಾನ್ಸ್ ಕಮೀಟಿಯ (EFC) ಮುಂದೆ ಬರಲಿದೆ. ಏಕೆಂದರೆ, ಸಾರ್ವಜನಿಕ ಹಣದ ಹೂಡಿಕೆಯಿರುವ ಎಲ್ಲ ರೀತಿಯ ಯೋಜನೆಗಳನ್ನು EFC ಪರಿಶೀಲಿಸಿ ಅನುಮೋದನೆ ನೀಡಬೇಕಾಗಿರುತ್ತದೆ.


ಈ ಪ್ರಕ್ರಿಯೆಯಲ್ಲಿ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೆಂದು ಕೇಂದ್ರ ಗೃಹ ಮಂತ್ರಾಲಯದ ಅನುದಾನವನ್ನು ಬಳಸಿಕೊಳ್ಳಲಾಗುವುದು. 2022-23ರ ಇತ್ತೀಚಿನ ಆಯವ್ಯಯದಲ್ಲಿ ಇದಕ್ಕಾಗಿ ಎಂದೇ 70 ಕೋಟಿ ರೂಪಾಯಿಯ ಅನುದಾನವನ್ನು ಇರಿಸಲಾಗಿತ್ತು. ಗೃಹ ಮಂತ್ರಾಲಯವು ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಎನ್ವೈರ್ನ್ಮೆಂಟ್ ಕ್ಲಿಯರನ್ಸ್ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು ಇನ್ನುಳಿದ ಅವಶ್ಯಕ ಪ್ರಮಾಣ ಪತ್ರಗಳನ್ನು ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯುವ ಪ್ರಕ್ರಿಯೆಯು ಈ ವರ್ಷದ ಡಿಸೆಂಬರ್ ಒಳಗೆ ಮುಕ್ತಾಯವಾಗಲಿದೆ ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ.


ಏನಿದು ಸೆಂಟ್ರಲ್ ವಿಸ್ತಾ ಯೋಜನೆ
ಇದೊಂದು ಪ್ರಧಾನಿ ನರೇಂದ್ರ ಮೋದಿಯವರ ಮರು ವಿನ್ಯಾಸದ ಮಹತ್ವದ ಯೋಜನೆಯಾಗಿದ್ದು ಇದು ದೆಹಲಿಯನ್ನು ಇನ್ನಷ್ಟು ಶಕ್ತಿಕೇಂದ್ರಾನ್ನಾಗಿ ಹಾಗೂ ಪರಿಣಾಮಕಾರಿಯನ್ನಾಗಿ ರೂಪಿಸುವ ಹಲವು ಅಂಶಗಳನ್ನು ಒಳಗೊಂಡಿದೆ. ಇದೊಂದು ಕಂಪ್ಲೀಟ್ ಮೇಕ್ ಓವರ್ ಎಂದು ಹೇಳಬಹುದಾಗಿದೆ. ಈ ಒಟ್ಟಾರೆ ಯೋಜನೆಯು ಹೊಸ ಲೋಕಸಭಾ ಭವನದ ನಿರ್ಮಾಣ, ಎಲ್ಲ ಕೇಂದ್ರ ಮಂತ್ರಾಲಯಗಳು ಮತ್ತು ಇಲಾಖೆಗಳನ್ನು ಒಳಗೊಂಡಿರುವ ಕಾಮನ್ ಸೆಂಟ್ರಲ್ ಸೆಕ್ರೆಟ್ರಿಯಾಟ್ ನಿರ್ಮಾಣ, ಸೆಂಟ್ರಲ್ ವಿಸ್ತಾ ಅವೆನ್ಯೂ ಹಾಗೂ ಎಕ್ಸಕ್ಯೂಟಿವ್ ಎನ್ಕ್ಲೇವ್ ಗಳನ್ನು ಒಳಗೊಂಡಿದೆ.


ಇದನ್ನೂ ಓದಿ:  Smallest Rocket: 75 ಶಾಲೆಗಳ 750 ವಿದ್ಯಾರ್ಥಿಗಳಿಂದ ತಯಾರಾದ 75 ಪೆಲೋಡ್ ನಭಕ್ಕೆ; ತ್ರಿವರ್ಣ ಧ್ವಜ ಹೊತ್ತು ಸಾಗಲಿದೆ SSLV ರಾಕೆಟ್!


ತ್ರಿಕೋನಾಕಾರದಲ್ಲಿರುವ ಹೊಸದಾದ ಪಾರ್ಲಿಯಾಮೆಂಟ್ ಕಟ್ಟಡದ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯು ಈಗಾಗಲೇ ಚಾಲ್ತಿಯಲ್ಲಿದೆ. ಇದು ನವೆಂಬರ್ ವರೆಗೂ ಸಿದ್ಧವಾಗಲಿದ್ದು ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗಲಿದೆ ಎನ್ನಲಾಗಿದೆ. ಇದಲ್ಲದೆ, ಈಗ ಕಾಮನ್ ಸೆಕ್ರೆಟ್ರಿಯಾಟ್ ನಿರ್ಮಾಣ ಕಾಮಗಾರಿಯೂ ಚಾಲ್ತಿಯಲ್ಲಿದೆ. ಇನ್ನು, ಯೋಜನೆಯ ಭಾಗವಾಗಿ ಹೊಸ ಪಿಎಂ ಕಚೇರಿಯು ಎಕ್ಸಕ್ಯೂಟಿವ್ ಎನ್ಕ್ಲೇವ್ ನಲ್ಲಿರಲಿದ್ದು ಅದರ ನಿರ್ಮಾಣದ ವೆಚ್ಚ 1200 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಎಕ್ಸಕ್ಯೂಟಿವ್ ಎನ್ಕ್ಲೇವ್ ನಲ್ಲಿ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಸೆಕ್ರೆಟ್ರಿಯಾಟ್ ಹಾಗೂ ಕ್ಯಾಬಿನೆಟ್ ಸೆಕ್ರೆಟ್ರಿಯಾಟ್ ಸಹ ಇರಲಿವೆ.

top videos
    First published: