HOME » NEWS » National-international » RESERVES OF LITHIUM CRITICAL FOR EV BATTERIES FOUND IN MANDYA RH

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಯಲ್ಲಿ ನಿರ್ಣಾಯಕವಾದ ಅಪರೂಪದ ಲಿಥಿಯಂ ಲೋಹ ಮಂಡ್ಯದಲ್ಲಿ ಪತ್ತೆ

ಸದ್ಯದ ದತ್ತಾಂಶಗಳ ಮಾಹಿತಿ ಪ್ರಕಾರ 0.5 ಕಿ.ಮೀ. x 5 ಕಿ.ಮೀ ವ್ಯಾಪ್ತಿಯಲ್ಲಿ ಲಭ್ಯವಿರುವ Li20 ನಲ್ಲಿ ಒಟ್ಟು 30,300 ಟನ್​ ಲಿಥಿಯಂ ಗುರುತು ಮಾಡಲಾಗಿದ್ದು, 14,100 ಟನ್​ ಲಿಥಿಯಂ ಲೋಹ ಸಿಗಲಿದೆ ಎಂದು ಐಐಟಿ ಪ್ರಾಧ್ಯಾಪಕ ಮತ್ತು ಬ್ಯಾಟರಿ ತಂತ್ರಜ್ಞಾನದ ಪರಿಣಿತರಾದ ಪ್ರೊ.ಎನ್​. ಮುನಿಚಂದ್ರಯ್ಯ ತಿಳಿಸಿದ್ದಾರೆ. 

news18-kannada
Updated:February 18, 2020, 2:58 PM IST
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಯಲ್ಲಿ ನಿರ್ಣಾಯಕವಾದ ಅಪರೂಪದ ಲಿಥಿಯಂ ಲೋಹ ಮಂಡ್ಯದಲ್ಲಿ ಪತ್ತೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳಿಗೆ ಶುಭ ಶಕುನ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ನಿರ್ಣಾಯಕವಾದ ಅಪರೂಪದ ಲೋಹ ಲಿಥಿಯಂ ಅನ್ನು ಬೆಂಗಳೂರಿನಿಂದ ನೂರು ಕಿ.ಮೀ. ದೂರದಲ್ಲಿರುವ ಮಂಡ್ಯದಲ್ಲಿ ಪತ್ತೆ ಮಾಡಲಾಗಿದೆ. ಸ್ಥಳೀಯವಾಗಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಇದು ಉತ್ತೇಜನ ನೀಡಿದೆ.

ಮುಂಬರಲಿರುವ ಕರೆಂಟ್ ಸೈನ್ಸ್​ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಕಾರ, ಪರಮಾಣು ಖನಿಗಳ ನಿರ್ದೇಶನಾಲಯ (ಆಟೋಮಿಕ್ ಮಿನರಲ್ಸ್​ ಡೈರೆಕ್ಟೊರೆಟ್) ಮತ್ತು ಭಾರತೀಯ ಪರಮಾಣು ಶಕ್ತಿ ಆಯೋಗದ (ಇಂಡಿಯಾ ಆಟೋಮಿಕ್ ಎನರ್ಜಿ ಕಮಿಷನ್)​ಸಂಶೋಧನಕಾರರು, ದಕ್ಷಿಣ ಕರ್ನಾಟಕದ ಜಿಲ್ಲೆಯ ಸಣ್ಣ ಪ್ರದೇಶದಲ್ಲಿ 14,100 ಟನ್​ ಲಿಥಿಯಂ ಇರುವುದನ್ನು ಸಮೀಕ್ಷೆ ಮೂಲಕ ಗುರುತು ಮಾಡಿದ್ದಾರೆ.

ಸದ್ಯದ ದತ್ತಾಂಶಗಳ ಮಾಹಿತಿ ಪ್ರಕಾರ 0.5 ಕಿ.ಮೀ. x 5 ಕಿ.ಮೀ ವ್ಯಾಪ್ತಿಯಲ್ಲಿ ಲಭ್ಯವಿರುವ Li20 ನಲ್ಲಿ ಒಟ್ಟು 30,300 ಟನ್​ ಲಿಥಿಯಂ ಗುರುತು ಮಾಡಲಾಗಿದ್ದು, 14,100 ಟನ್​ ಲಿಥಿಯಂ ಲೋಹ ಸಿಗಲಿದೆ ಎಂದು ಐಐಟಿ ಪ್ರಾಧ್ಯಾಪಕ ಮತ್ತು ಬ್ಯಾಟರಿ ತಂತ್ರಜ್ಞಾನದ ಪರಿಣಿತರಾದ ಪ್ರೊ.ಎನ್​. ಮುನಿಚಂದ್ರಯ್ಯ ತಿಳಿಸಿದ್ದಾರೆ.

ಇದನ್ನು ಓದಿ: ಅಹಮದಾಬಾದ್​ನಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಬೆಂಕಿ; ತಪ್ಪಿದ ಭಾರೀ ಅನಾಹುತ

ಆದರೆ ಇತರೆ ಲಿಥಿಯಂ ಉತ್ಪಾದನೆಗಳಿಗೆ ಹೊಲಿಕೆ ಮಾಡಿದರೆ ಇದು ತುಂಬಾ ಸಣ್ಣ ಪ್ರಮಾಣದ್ದಾಗಿದೆ ಎಂದು ಪ್ರಾಧ್ಯಾಪಕರು ಹೇಳುತ್ತಾರೆ. ಚಿಲಿಯಲ್ಲಿ 8.6 ಮಿಲಿಯನ್ ಟನ್​, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೈನಾದಲ್ಲಿ 1.7 ಮಿಲಿಯನ್ ಅಥವಾ ಪೊರ್ಚುಗಲ್​ನಲ್ಲಿ ದೊರೆಯುವ 60,000 ಟನ್​ಗಳಿಗೆ ಹೊಲಿಕೆ ಮಾಡಿದರೆ ಇಲ್ಲಿ ದೊರಕಿರುವ 14,100 ಟನ್​ ತುಂಬಾ ಸಣ್ಣ ಪ್ರಮಾಣದ್ದು ಎಂದು ಹೇಳುತ್ತಾರೆ.
First published: February 18, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading