Reserve Bank Of India: ಸತತ ನಾಲ್ಕನೇ ಬಾರಿ ರೆಪೋ ದರ ಇಳಿಸಿದ ಆರ್​ಬಿಐ

RBI Cuts Repo Rate By 35 Points: ಆರ್​ಬಿಐನ ರೆಪೋ ದರದಲ್ಲಿ 35 ಪಾಯಿಂಟ್ ಇಳಿಕೆಯಾಗಿದೆ. ಇದರೊಂದಿಗೆ ರೆಪೋ ದರ 5.15 ಪ್ರತಿಶತಕ್ಕೆ ಇಳಿದಂತಾಗಿದೆ.

news18
Updated:August 7, 2019, 1:40 PM IST
Reserve Bank Of India: ಸತತ ನಾಲ್ಕನೇ ಬಾರಿ ರೆಪೋ ದರ ಇಳಿಸಿದ ಆರ್​ಬಿಐ
ಭಾರತೀಯ ರಿಸರ್ವ್ ಬ್ಯಾಂಕ್
news18
Updated: August 7, 2019, 1:40 PM IST
ನವದೆಹಲಿ(ಆ. 07): ಆರ್ಥಿಕ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು 35 ಮೂಲಾಂಕಗಳಷ್ಟು ಇಳಿಕೆ ಮಾಡಿದೆ. ಇದರೊಂದಿಗೆ ಆರ್​ಬಿಐನ ರೆಪೋ ದರ 5.40 ಪ್ರತಿಶತಕ್ಕೆ ಇಳಿಕೆಯಾಗಿದೆ. ಹಾಗೆಯೇ, ರಿವರ್ಸ್ ರೆಪೋ ದರವನ್ನು ಶೇ. 5.15ಕ್ಕೆ ನಿಗದಿ ಮಾಡಿದೆ. ಇವತ್ತು ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಆರ್​ಬಿಐ ಈ ನಿರ್ಧಾರ ತೆಗೆದುಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಇಳಿಕೆ ಮಾಡುತ್ತಿರುವುದು ಇದು ಸತತ ನಾಲ್ಕನೇ ಬಾರಿಯಾಗಿದೆ. ಒಟ್ಟಾರೆಯಾಗಿ 110 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆಯಾದಂತಾಗಿದೆ. ಕುಸಿಯುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಆರ್​ಬಿಐ ರೆಪೋ ದರ 25 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆ ಮಾಡಬಹುದೆಂಬ ನಿರೀಕ್ಷೆಗಳಿದ್ದವು. ಆರು ಸದಸ್ಯರಿರುವ ಎಂಪಿಸಿ ಕೂಡ ಇದೇ ಸಲಹೆ ನೀಡಿತ್ತು. ಆದರೆ, ಆರ್ಥಿಕತೆಗೆ ಪುಷ್ಟಿ ನೀಡಲು ಇದು ಸಾಕಾಗುವುದಿಲ್ಲವೆಂದು ಭಾವಿಸಿ 35 ಬೇಸಿಸ್ ಪಾಯಿಂಟ್​ನಷ್ಟು ಇಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: Sushma Swaraj Obituary: ಅಪ್ಪಟ ರಾಪ್ಟ್ರೀಯವಾದಿ, ಕಾಂಗ್ರೆಸ್ ವಿರೋಧಿ ಹಾಗೂ ರೆಬೆಲ್ ನಾಯಕಿ; 1970-2019 ಸುಷ್ಮಾ ಸ್ವರಾಜ್ ಸವೆಸಿದ ರಾಜಕೀಯ ಹೋರಾಟದ ಹಾದಿ!

ಆಟೋಮೊಬೈಲ್ ಮೊದಲಾದ ಕ್ಷೇತ್ರಗಳಲ್ಲಿ ವ್ಯವಹಾರ ದಿನೇ ದಿನೇ ಕುಂಠಿತಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ. ಹಾಗೆಯೇ, ಅಮೆರಿಕ-ಚೀನಾ ಮಧ್ಯೆಯ ವ್ಯಾಪಾರ ಬಿಕ್ಕಟ್ಟು ಕೂಡ ಈ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ತನ್ನ ರೆಪೋ ದರವನ್ನು ಗಣನೀಯವಾಗಿ ಇಳಿಕೆ ಮಾಡಲು ಕಾರಣವಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಈ ಫೋಟೋ ಗ್ಯಾಲರಿ ನೋಡಿ: ಭಾರತ ಕಂಡ ಅಪರೂಪದ ಮಹಿಳಾ ರಾಜಕಾರಣಿ ಸುಷ್ಮಾ ಸ್ವರಾಜ್​; ಇನ್ನು ಕೇವಲ ನೆನಪು ಮಾತ್ರ

ಏನಿದು ರೆಪೋ ದರ?
Loading...

ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್​ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ಇದನ್ನೂ ಓದಿ: Kashmir Tension: ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆ; ಒಬ್ಬನ ಸಾವು; ಆರ್ವರಿಗೆ ಗಾಯ

ರಿವರ್ಸ್ ರೆಪೋ ದರ ಎಂದರೇನು?

ವಾಣಿಜ್ಯ ಬ್ಯಾಂಕುಗಳಿಂದ ಠೇವಣಿ ಪಡೆಯುವ ಹಣಕ್ಕೆ ರಿಸರ್ವ್ ಬ್ಯಾಂಕ್ ನೀಡುವ ಬಡ್ಡಿ ದರವೇ ರಿವರ್ಸ್ ರಿಪೋ ರೇಟ್ ಆಗಿದೆ. ಬ್ಯಾಂಕಿಂಗ್ ವಲಯದಲ್ಲಿ ತೀರಾ ಹೆಚ್ಚು ಹಣ ಚಲಾವಣೆಯಲ್ಲಿದ್ದಾಗ ಆರ್​ಬಿಐ ತನ್ನಲ್ಲಿ ಠೇವಣಿ ಇಡಲು ಬ್ಯಾಂಕುಗಳಿಗೆ ಪ್ರೇರೇಪಿಸುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೋ ದರ ಪ್ರಮುಖ ಪಾತ್ರ ವಹಿಸುತ್ತದೆ.

ರೆಪೋ ದರ ಇಳಿಕೆಯಿಂದ ಲಾಭವೇನು?

ಆರ್​ಬಿಐನಿಂದ ಕಡಿಮೆ ಬಡ್ಡಿಗೆ ಹಣ ಸಿಗುವುದರಿಂದ ಅದರ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೂ ವರ್ಗಾಯಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಾಗುತ್ತದೆ. ಇದು ಆರ್ಥಿಕತೆಗೆ ಪುಷ್ಟಿ ನೀಡುವ ಅಂದಾಜು ಇದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...