• Home
  • »
  • News
  • »
  • national-international
  • »
  • Heart Tissue DNA: ಕೋವಿಡ್-19 ನೇರವಾಗಿ ಹೃದಯ ಅಂಗಾಂಶ ಡಿಎನ್‌ಎಗೆ ಹಾನಿ ಮಾಡುತ್ತದೆಯಂತೆ!

Heart Tissue DNA: ಕೋವಿಡ್-19 ನೇರವಾಗಿ ಹೃದಯ ಅಂಗಾಂಶ ಡಿಎನ್‌ಎಗೆ ಹಾನಿ ಮಾಡುತ್ತದೆಯಂತೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೋವಿಡ್ ಪರಿಸ್ಥಿತಿಗೆ ಉತ್ತಮ ಚಿಕಿತ್ಸೆಯನ್ನು ಕಲ್ಪಿಸಲು ಈ ಸಂಶೋಧನೆಯು ಸಹಾಯ ಮಾಡುತ್ತದೆ. ಇಮ್ಯುನಾಲಜಿ ಜರ್ನಲ್‌ನಲ್ಲಿ ಈ ಸಂಶೋಧನೆಯು ಪ್ರಕಟವಾಗಿದ್ದು ಬ್ರೆಜಿಲ್‌ನ ಕೋವಿಡ್-19 ನಿಂದ ಸಾವನ್ನಪ್ಪಿದ ಏಳು ರೋಗಿಗಳು, ಇನ್ಫ್ಲುಯೆನ್ಸದಿಂದ ಸಾವನ್ನಪ್ಪಿದ ಇಬ್ಬರು ಮತ್ತು ಆರು ಕ್ಲಿನಿಕಲ್ ಪ್ರಯೋಗಕ್ಕೊಳಗಾದವರ ಶವಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾದ ಹೃದಯ ಅಂಗಾಂಶಗಳನ್ನು ಅಧ್ಯಯನದಲ್ಲಿ ಬಳಸಲಾಗಿದೆ.

ಮುಂದೆ ಓದಿ ...
  • Share this:

ಕೋವಿಡ್-19 (COVID-19) ಸೋಂಕು ಹೃದಯದ ಅಂಗಾಂಶವನ್ನು ಹಾನಿಗೊಳಿಸುತ್ತದೆ ಎಂಬುದಾಗಿ ಸಂಶೋಧಕರು ಕಂಡುಹಿಡಿದಿದ್ದಾರೆ. ಕೋವಿಡ್ ಪರಿಸ್ಥಿತಿಗೆ ಉತ್ತಮ ಚಿಕಿತ್ಸೆಯನ್ನು (Treatment) ಕಲ್ಪಿಸಲು ಈ ಸಂಶೋಧನೆಯು ಸಹಾಯ ಮಾಡುತ್ತದೆ. ಇಮ್ಯುನಾಲಜಿ ಜರ್ನಲ್‌ನಲ್ಲಿ ಈ ಸಂಶೋಧನೆಯು ಪ್ರಕಟವಾಗಿದ್ದು ಬ್ರೆಜಿಲ್‌ನ (Brazil) ಕೋವಿಡ್-19 ನಿಂದ ಸಾವನ್ನಪ್ಪಿದ ಏಳು ರೋಗಿಗಳು, ಇನ್ಫ್ಲುಯೆನ್ಸದಿಂದ ಸಾವನ್ನಪ್ಪಿದ ಇಬ್ಬರು ಮತ್ತು ಆರು ಕ್ಲಿನಿಕಲ್ ಪ್ರಯೋಗಕ್ಕೊಳಗಾದವರ ಶವಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾದ ಹೃದಯ ಅಂಗಾಂಶಗಳನ್ನು (Heart Tissue) ಅಧ್ಯಯನದಲ್ಲಿ ಬಳಸಲಾಗಿದೆ. ಕೋವಿಡ್-19 ಹೃದಯ ಅಂಗಾಂಶದಲ್ಲಿನ ಡಿಎನ್‌ಎಯನ್ನು ಹಾನಿಗೊಳಿಸಿದೆ ಎಂದು ಅಧ್ಯಯನವು ಪತ್ತೆಹಚ್ಚಿದ್ದು, ಇದು ಇನ್ಫ್ಲುಯೆನ್ಸ (Influenza) ಮಾದರಿಗಳಲ್ಲಿ ಪತ್ತೆಯಾಗಿಲ್ಲ.


ಕೋವಿಡ್ 19 ನಿಂದ ಹೃದಯ ಅಂಗಾಂಶದಲ್ಲಿನ ಡಿಎನ್‌ಎಗೆ ಹಾನಿ
ಕೋವಿಡ್ -19 ಮತ್ತು ಇನ್ಫ್ಲುಯೆನ್ಸ ಎರಡೂ ತೀವ್ರವಾದ ಉಸಿರಾಟದ ವೈರಸ್‌ಗಳಾಗಿದ್ದರೂ, ಅವು ಹೃದಯ ಅಂಗಾಂಶದ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


2009 ರ ಫ್ಲೂ ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ, ಕೋವಿಡ್ ಹೆಚ್ಚು ತೀವ್ರವಾದ ಮತ್ತು ದೀರ್ಘಕಾಲದ ಹೃದಯರಕ್ತನಾಳದ ಕಾಯಿಲೆಗೆ ಕಾರಣವಾಗಿದೆ ಆದರೆ ಇದಕ್ಕೆ ಕಾರಣವೇನು ಎಂಬುದು ನಿರ್ದಿಷ್ಟವಾಗಿ ತಿಳಿದಿಲ್ಲ ಎಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಅರುತ ಕುಲಸಿಂಗ್ ತಿಳಿಸಿದ್ದಾರೆ.


ಅಧ್ಯಯನದ ಸಮಯದಲ್ಲಿ ಕೋವಿಡ್-19 ರೋಗಿಗಳ ಹೃದಯ ಅಂಗಾಂಶಗಳಲ್ಲಿ ವೈರಲ್ ಕಣಗಳನ್ನು ಅನ್ವೇಷಿಸಲು ಸಾಧ್ಯವಾಗಲಿಲ್ಲ ಆದರೆ ಡಿಎನ್‌ಎ ಹಾನಿ ಹಾಗೂ ಸರಿಪಡಿಸುವಿಕೆಗೆ ಸಂಬಂಧಿಸಿದ ಅಂಗಾಂಶ ಬದಲಾವಣೆಗಳನ್ನು ಕಂಡುಕೊಂಡಿರುವುದಾಗಿ ಕುಲಸಿಂಗ್ ತಿಳಿಸಿದ್ದಾರೆ.


ರಕ್ತದ ಬಯೋಮಾರ್ಕರ್‌ಗಳು ಮತ್ತು ಶಾರೀರಿಕ ಮಾಪನಕ್ಕೆ ಸೀಮಿತ
ಡಿಎನ್‌ಎ ಹಾನಿ ಹಾಗೂ ಸರಿಪಡಿಸುವ ವಿಧಾನಗಳು ಮಧುಮೇಹ, ಕ್ಯಾನ್ಸರ್, ಅಪಧಮನಿ ಮತ್ತು ನ್ಯೂರೋ ಡಿಜೆನೆರೆಟಿವ್ ಡಿಸಾರ್ಡರ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿವೆ, ಹಾಗಾಗಿ ಕೋವಿಡ್ -19 ರೋಗಿಗಳಲ್ಲಿ ಇದು ಏಕೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಇದನ್ನೂ ಓದಿ:  Khosta-2: ಮತ್ತೆ ವೈರಸ್​ ಆತಂಕ, ಲಸಿಕೆಗೂ ಜಗ್ಗಲ್ಲ ಕೊರೋನಾದ ಹೊಸ ರೂಪಾಂತರ!


ಕೋವಿಡ್ -19 ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ
ಹೃದಯದ ಮೇಲೆ ಕೋವಿಡ್-19 ಪ್ರಭಾವಕ್ಕೆ ಸಂಬಂಧಿಸಿದ ಅಂಕಿಅಂಶವು ಈ ಹಿಂದೆ ರಕ್ತದ ಬಯೋಮಾರ್ಕರ್‌ಗಳು ಮತ್ತು ಶಾರೀರಿಕ ಮಾಪನಕ್ಕೆ ಸೀಮಿತವಾಗಿತ್ತು, ಏಕೆಂದರೆ ಹೃದಯ ಬಯಾಪ್ಸಿ ಮಾದರಿಗಳನ್ನು ಪಡೆಯುವುದು ದಾಳಿ ನಡೆಸುವಂತಿರುತ್ತದೆ ಎಂಬುದು ಕುಲಸಿಂಗ್ ಮಾತಾಗಿದೆ.


ಉಸಿರಾಟದ ಇತರ ವೈರಸ್‌ಗಳಿಗೆ ಹೋಲಿಸಿದರೆ ಕೋವಿಡ್ -19 ದೇಹದ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದರ ಕುರಿತು ಸಂಶೋಧನೆಗಳು ವಿವರಗಳನ್ನು ಒದಗಿಸಿವೆ.


ವೈರಲ್ ಕಣಗಳನ್ನು ಅನ್ವೇಷಿಸಲು ಸಾಧ್ಯವಾಗಲಿಲ್ಲ
ಇನ್ಫ್ಲುಯೆನ್ಸ ಹೃದಯ ಅಂಗಾಂಶದ ಮಾದರಿಗಳನ್ನು ನೋಡಿದಾಗ, ಇದು ಹೆಚ್ಚಿನ ಉರಿಯೂತವನ್ನು ಉಂಟುಮಾಡಿದೆ ಎಂಬುದನ್ನು ಗುರುತಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕೋವಿಡ್ -19 ಕ್ರಿಟಿಕಲ್ ಕೇರ್ ಕನ್ಸೋರ್ಟಿಯಂ ಸ್ಥಾಪಕರಾದ ಪ್ರೊಫೆಸರ್ ಜಾನ್ ಫ್ರೇಸರ್ ತಿಳಿಸಿದ್ದಾರೆ. ಕೋವಿಡ್ -19 ಹೃದಯದ ಡಿಎನ್‌ಎ ಮೇಲೆ ದಾಳಿ ಮಾಡಿದೆ ಎಂಬುದು ಪತ್ತೆಯಾಗಿದೆ ಇದು ನೇರವಾಗಿ ಉಂಟಾಗಿದೆ ಎಂಬುದು ಫ್ರೇಸರ್ ಹೇಳಿಕೆಯಾಗಿದೆ.


ಎರಡು ವೈರಸ್‌ಗಳು ಹೃದಯದ ಅಂಗಾಂಶದ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತವೆ ಎಂದು ಅಧ್ಯಯನವು ಉಲ್ಲೇಖಿಸಿದ್ದು, ಸಂಶೋಧಕರು ಅತ್ಯುತ್ತಮವಾದ ಅಧ್ಯಯನಗಳಲ್ಲಿ ಉತ್ತಮ ಮಾಹಿತಿಯನ್ನು ಪಡೆಯಲು ಬಯಸುತ್ತಾರೆ ಎಂದು ಹೇಳಿದ್ದು ಸಾಕ್ಷ್ಯಾಧಾರಗಳಿಲ್ಲದೆ ಕೋವಿಡ್‌ ಹೃದಯಕ್ಕೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲಾಗುವುದಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಕೋವಿಡ್‌ನಂತೆ ತೋರಿಸಿರುವುದು ಸಾಮಾನ್ಯ ಜ್ವರದಂತೆ ಅಲ್ಲ ಎಂಬುದನ್ನು ಫ್ರೇಸರ್ ತಿಳಿಸಿದ್ದಾರೆ.


ಇದನ್ನೂ ಓದಿ:  Pfizer Vaccination: ತಂದೆಯ ಹಠಾತ್ ಸಾವಿಗೆ ಕಾರಣವಾಯ್ತಂತೆ ಫೈಜರ್ ಲಸಿಕೆ! ಬ್ರಿಟಿಷ್ ಭಾರತೀಯ ಹೃದ್ರೋಗ ತಜ್ಞನ ಗಂಭೀರ ಆರೋಪ


"ಈ ಅಧ್ಯಯನವು ಕೋವಿಡ್ -19 ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ಆ ಹೃದಯವನ್ನು ಸರಿಪಡಿಸಲು ಯಾವ ಚಿಕಿತ್ಸೆಗಳು ಉತ್ತಮವೆಂದು ಕೆಲಸ ಮಾಡುವ ಮೊದಲ ಹಂತವಾಗಿದೆ" ಎಂದು ಫ್ರೇಸರ್ ತಿಳಿಸಿದ್ದಾರೆ.

Published by:Ashwini Prabhu
First published: