• Home
  • »
  • News
  • »
  • national-international
  • »
  • Research: 541 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಪಾಚಿ ಪಳೆಯುಳಿಕೆ ಪತ್ತೆ, ಸಂಶೋಧಕರು ಹೇಳಿದ್ದೇನು ಗೊತ್ತಾ?

Research: 541 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಪಾಚಿ ಪಳೆಯುಳಿಕೆ ಪತ್ತೆ, ಸಂಶೋಧಕರು ಹೇಳಿದ್ದೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Research: ಪಳೆಯುಳಿಕೆಯು ಈ ಯುಗದಿಂದ ಮೂರು ಆಯಾಮಗಳಲ್ಲಿ ಸಂರಕ್ಷಿಸಲ್ಪಟ್ಟ ಮೊದಲ ಮತ್ತು ಆರಂಭಿಕ ಹಸಿರು ಪಾಚಿಯಾಗಿದೆ, ವಿಜ್ಞಾನಿಗಳು ಅದರ ಆಂತರಿಕ ರಚನೆಯನ್ನು ವಿಶ್ಲೇಷಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

  • Share this:

ಚೀನಾದಲ್ಲಿ (China) ಪ್ರಾಚೀನ ಪಾಚಿಯ ಪಳೆಯುಳಿಕೆಯನ್ನು (Fossil) ಪ್ಯಾಲಿಯಂಟಾಲಜಿಸ್ಟ್‌ಗಳು ಕಂಡುಹಿಡಿದಿದ್ದಾರೆ. ಅದಕ್ಕೆ ಪ್ರೊಟೊಕೊಡಿಯಮ್ ಸೈನೆನ್ಸ್ ಎಂದು ಹೆಸರಿಸಿದ್ದಾರೆ, ಇದು ಹೊಸ ಕುಲ ಮತ್ತು ಪ್ರಭೇಧವಾಗಿದೆ.ಈ 541 ಮಿಲಿಯನ್ ವರ್ಷದ ಹಳೆಯ (Old) ಪಳೆಯುಳಿಕೆಯು ಭೂಮಿ ಮತ್ತು ಸಸ್ಯಗಳಿಗಿಂತ ಮುಂಚಿತವಾಗಿರುವುದಾಗಿದೆ ಎಂದು ಸಂಶೋಧಕರು (Researcher) ಅಭಿಪ್ರಾಯಪಟ್ಟಿದ್ದಾರೆ. ಇದು ಸಸ್ಯ ಸಾಮ್ರಾಜ್ಯದ ಆರಂಭಿಕ ವೈವಿಧ್ಯತೆಗಳ ಬಗ್ಗೆ ವಿಜ್ಞಾನಿಗಳಿಗೆ ಹೊಸ ವಿಚಾರಗಳನ್ನು ಒದಗಿಸುವುದೆಂಬ ವಿಶ್ವಾಸ (Confidence) ವ್ಯಕ್ತಪಡಿಸಿದ್ದಾರೆ.


ಪ್ಯಾಲಿಯಂಟಾಲಜಿಸ್ಟ್‌


ಪ್ಯಾಲಿಯಂಟಾಲಜಿಸ್ಟ್‌ ಎಂದರೆ ʼಪಳೆಯುಳಿಕೆ ಪ್ರಾಣಿಗಳು ಮತ್ತು ಸಸ್ಯಗಳಿಗೆ ಸಂಬಂಧಿಸಿದ ವಿಜ್ಞಾನದ ಶಾಖೆಯಲ್ಲಿ ಅಧ್ಯಯನ ಮಾಡುವ ತಜ್ಞರುʼ ಎಂದು ಹೇಳಬಹುದು.ಇದಲ್ಲದೆ, ಪಳೆಯುಳಿಕೆಯು ಈ ಯುಗದಿಂದ ಮೂರು ಆಯಾಮಗಳಲ್ಲಿ ಸಂರಕ್ಷಿಸಲ್ಪಟ್ಟ ಮೊದಲ ಮತ್ತು ಆರಂಭಿಕ ಹಸಿರು ಪಾಚಿಯಾಗಿದೆ, ವಿಜ್ಞಾನಿಗಳು ಅದರ ಆಂತರಿಕ ರಚನೆಯನ್ನು ವಿಶ್ಲೇಷಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.


ಪ್ರೊಟೊಕೊಡಿಯಮ್, ಅದರ ನಿಕಟ ಸಂಬಂಧಿ ಕೋಡಿಯಮ್ ಅನ್ನು ಹೋಲುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದರು. ಇದು ಇಂದು ಅನೇಕ ಜಲಮೂಲಗಳಲ್ಲಿ ಹೆಸರುವಾಸಿಯಾಗಿರುವ ಹಸಿರು ಪಾಚಿಗಳ ಒಂದು ರೂಪವಾಗಿದೆ. ಹಸಿರು ಪಾಚಿ ಮತ್ತು ಭೂಮಿ ಸಸ್ಯಗಳು ಪ್ರಾಚೀನ ಪಾಚಿಗಳ ಬಗ್ಗೆ ಅಧ್ಯಯನ ನಡೆಸಲು ಅನುವು ಮಾಡಿಕೊಡುತ್ತವೆ.


ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಂಶಗಳು


ಈ ಸಂಶೋಧನೆಗಳು BMC ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿವೆ. “ಪ್ರೊಟೊಕೊಡಿಯಮ್” ಹಸಿರು ವಂಶಾವಳಿಗೆ ಸೇರಿದೆ” ಎಂದು ಟೊರೊಂಟೊ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವಿಜ್ಞಾನ ಮತ್ತು ವಿಕಸನದ ಜೀವಶಾಸ್ತ್ರ ವಿಭಾಗದಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಮತ್ತು ಕೆನಡಾದ ರಾಯಲ್ ಒಂಟಾರಿಯೊ ಮ್ಯೂಸಿಯಂ (ROM) ನಲ್ಲಿ ನೆಲೆಗೊಂಡಿರುವ ಅಧ್ಯಯನದ ಸಹ ಲೇಖಕರಾದ ಸೆಡ್ರಿಕ್ ಆರಿಯಾ ಅವರು ಹೇಳಿದರು. ಈ ಪಾಚಿಗಳು ಎಡಿಯಾಕಾರನ್ ಅವಧಿಯ ಅಂತ್ಯದ ಮೊದಲು ಉತ್ತಮ ರೀತಿಯಲ್ಲಿ ವೈವಿಧ್ಯಗೊಂಡಿವೆ ಎಂದು ತೋರಿಸುತ್ತದೆ. ಇದರ ಆವಿಷ್ಕಾರವು ಇಡೀ ಸಸ್ಯ ಸಾಮ್ರಾಜ್ಯದ ಮೂಲವನ್ನು ತಿಳಿಯಲು ಸಹಾಯವಾಗುತ್ತದೆ.


ಹಸಿರು ಪಾಚಿಗಳು ದ್ಯುತಿಸಂಶ್ಲೇಷಣೆ ಪ್ರಕ್ರಿಯೆ


ಹಸಿರು ಪಾಚಿಗಳು ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯನ್ನು ಮಾಡುತ್ತವೆ. ಅಂದರೆ ಅವು ಬೆಳಕು ಮತ್ತು ಕಾರ್ಬನ್‌ ಡೈಆಕ್ಸೈಡ್ ಅನ್ನು ಕಾರ್ಬೋಹೈಡ್ರೇಟ್‌ಗಳು ಮತ್ತು ಆಮ್ಲಜನಕವಾಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತವೆ.ಆದ್ದರಿಂದ ಅವು ಭೂಮಿಯ ಆರಂಭಿಕ ಪರಿಸರ ವ್ಯವಸ್ಥೆಗಳ ನಿರ್ಣಾಯಕ ಆಧಾರಗಳಾಗಿವೆ. ಈ ಸಂಶೋಧನೆಗಳು ಸೂಚಿಸುವ ಪ್ರಕಾರ ಹಸಿರು ಪಾಚಿಗಳು ಕ್ಯಾಂಬ್ರಿಯನ್ ಸ್ಫೋಟದ ಮೊದಲು ಪ್ರಪಂಚದ ಆಳವಿಲ್ಲದ ನೀರಿನಲ್ಲಿ ಕಾರ್ಬನ್‌ ಡೈಆಕ್ಸೈಡ್ ಮರುಬಳಕೆ ಮತ್ತು ಆಮ್ಲಜನಕ ತಯಾರಕರಾಗಿ ಇದ್ದವು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.


ಇದನ್ನೂ ಓದಿ: ಅಬ್ಬಬ್ಬಾ, ತಿರುಪತಿ ತಿಮ್ಮಪ್ಪಾ! ವೆಂಕಟೇಶ್ವರನ ಆಸ್ತಿ ಇಷ್ಟೊಂದಾ?


ಪ್ರೋಟೋಕೋಡಿಯಮ್ ಅನ್ನು ಗಯೋಜಿಯಾಶನ್ ಬಯೋಟಾದ ಭಾಗವಾಗಿ ಕಂಡುಹಿಡಿಯಲಾಯಿತು. ಗಯೋಜಿಯಾಶನ್ ಬಯೋಟಾ ಎಂದ್ರೆ ವಾಯುವ್ಯ ಚೀನಾದಲ್ಲಿನ ದಕ್ಷಿಣ ಶಾಂಕ್ಸಿ ಪ್ರಾಂತ್ಯದಲ್ಲಿ ಡೆಂಗ್ಯಿಂಗ್ ರಚನೆಯಲ್ಲಿ ಅಗೆದುಕೊಂಡಿರುವ ಅಸಾಮಾನ್ಯವಾಗಿರುವ ಸಂರಕ್ಷಿಸಲ್ಪಟ್ಟ ಪಳೆಯುಳಿಕೆಗಳ ಒಂದು ದೊಡ್ಡ ಗುಂಪು ಆಗಿದೆ.ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್‌ನಲ್ಲಿರುವ ನಾರ್ತ್‌ವೆಸ್ಟ್ ವಿಶ್ವವಿದ್ಯಾನಿಲಯದ ಪೋಸ್ಟ್‌ಡಾಕ್ಟರಲ್ ಸಂಶೋಧಕರು ಮತ್ತು ಅಧ್ಯಯನದ ಮೊದಲ ಲೇಖಕರಾದ ಡಾ.ಶು.ಚಾಯ್ ಅವರು “ಕಡಲಕಳೆ ತರಹದ ಪಳೆಯುಳಿಕೆಗಳು ಕನಿಷ್ಠ ಒಂದು ಶತಕೋಟಿ ವರ್ಷಗಳಷ್ಟು ಹಳೆಯವು ಎಂದು ನಮಗೆ ತಿಳಿದಿದೆ” ಎಂದು ಹೇಳಿದ್ದಾರೆ.


ಸಂಶೋಧನೆಯ ಪ್ರಕ್ರಿಯೆ


ಸಂಪೂರ್ಣ ಪಳೆಯುಳಿಕೆ ಮತ್ತು ಅದರ ಸೂಕ್ಷ್ಮ ಸೆಲ್ಯುಲಾರ್ ವಿವರಗಳನ್ನು ಫಾಸ್ಫಟೈಸೇಶನ್ ಎಂದು ಕರೆಯಲಾಗುವ ಪ್ರಕ್ರಿಯೆಯ ಮೂಲಕ ಮೂರು ಆಯಾಮಗಳಲ್ಲಿ ಉಳಿಸಿಕೊಳ್ಳಲಾಯಿತು.ಇದರಲ್ಲಿ ಮೂಲ ಸಾವಯವ ವಸ್ತುವನ್ನು ಫಾಸ್ಫೇಟ್‌ನಿಂದ ಬದಲಾಯಿಸಲಾಯಿತು. ಸಂಶೋಧಕರಿಗೆ, ಎಲೆಕ್ಟ್ರಾನ್ ಮತ್ತು ಎಕ್ಸ್-ರೇ ಬಳಸಿ ಅದರ ಆಂತರಿಕ ರಚನೆಗಳನ್ನು ಸೂಕ್ಷ್ಮದರ್ಶಕದ ಮೂಲಕ ಅನಾವರಣಗೊಳಿಸಲು ಪಳೆಯುಳಿಕೆಯು ಸಹಾಯ ಮಾಡುತ್ತದೆ.


ಇದನ್ನೂ ಓದಿ: PFI ಮುಖಂಡರಿಗೆ ಮುಗಿಯದ ಕಂಟಕ, ಅನುಮಾನಾಸ್ಪದರ ವಿಚಾರಣೆ; ಪೊಲೀಸರಿಂದ ಮಾರ್ನಿಂಗ್ ಶಾಕ್


ಪ್ರೊಟೊಕೊಡಿಯಮ್ ಪಳೆಯುಳಿಕೆಗಳು


ಪ್ರೊಟೊಕೊಡಿಯಮ್ ಪಳೆಯುಳಿಕೆಗಳು ಗೋಳಾಕಾರದಲ್ಲಿದ್ದು ಮತ್ತು ಚಿಕ್ಕದಾಗಿರುತ್ತವೆ (ಅಂದಾಜು ಅರ್ಧ ಮಿಲಿಮೀಟರ್ ನಷ್ಟು) ಹಾಗೂ ಅನೇಕ ಚಿಕ್ಕ ಚಿಕ್ಕ ಗುಮ್ಮಟಗಳು ಅದರ ಮೇಲ್ಮೈಯನ್ನು ಆವರಿಸಿರುತ್ತವೆ. ಈ ಕೋಶವು ಬಲ್ಬ್-ಆಕಾರದ ರಚನೆಗಳ ಏಕರೂಪದ ಪದರದಿಂದ ಸುತ್ತುವರೆದಿರುವ ಸೈಫನ್ಸ್ ಎಂಬ ತೆಳುವಾದ ಎಳೆಗಳನ್ನು ಹೊಂದಿದೆ. ಇದು ಕೋಡಿಯಮ್ ಕುಲದ ಕೆಲವು ಆಧುನಿಕ ಏಕಕೋಶೀಯ ಕಡಲಕಳೆ ಪಾಚಿಯಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವಾಗಿದೆ.

First published: