Research: ಮಹಿಳೆಯರು 7.2 ಗಂಟೆ ಮನೆಕೆಲಸದಲ್ಲಿ ಸಮಯ ಕಳೆದರೆ, ಪುರುಷರು 2.8 ಗಂಟೆ ವ್ಯಯಿಸುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

15ರಿಂದ 60 ವರ್ಷ ವಯೋಮಾನದ ಮಹಿಳೆಯರು ದಿನದಲ್ಲಿ 7.2 ಗಂಟೆ ಕಾಲ ವೇತನರಹಿತ ಮನೆಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೇ ವೇಳೆ ಪುರುಷರು 2.8 ಗಂಟೆ ಕಾಲ ವೇತನರಹಿತ ಮನೆಗೆಲಸದಲ್ಲಿ ತೊಡಗಿರುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.

  • Trending Desk
  • 2-MIN READ
  • Last Updated :
  • Share this:

ಮನೆಯಲ್ಲಿರುವ ಹೆಂಗಸರಿಗೆ(Women) ಸಾಮಾನ್ಯವಾಗಿ ಮನೆಯಲ್ಲಿದ್ದವರಿಗೆ ಏನು ಕೆಲಸ ಇರುತ್ತದೆ? ಇಡೀ ದಿನ ಏನು ಮಾಡುತ್ತೀರಾ ಅಂತಾ ಕೇಳೋದನ್ನ ನೋಡಬಹುದು. ಆದರೆ ಮಹಿಳೆಯರಿಗೆ ಮಾಡಿ ಮುಗಿಯದಷ್ಟು ಕೆಲಸಗಳು ಮನೆಯಲ್ಲಿರುತ್ತವೆ. ಇದು ಕೇವಲ ಮನೆಯಲ್ಲಿರುವ ಮಹಿಳೆಯರಿಗೆ ಮಾತ್ರವಲ್ಲದೇ, ಕೆಲಸಕ್ಕೆ ಹೋಗುವ ಮಹಿಳೆಯರಿಗೂ ಅನ್ವಯಿಸುತ್ತದೆ. ಕೆಲಸಕ್ಕೆ(Work) ಹೋಗುವ ಗಂಡಸರಿಗಿಂತ(Men) ಹೆಚ್ಚಿನ ಕೆಲಸದಲ್ಲಿ ಇವರು ತೊಡಗಿರುತ್ತಾರೆ. ಮನೆಗೆಲಸ, ಬಟ್ಟೆ-ಪಾತ್ರೆ ತೊಳೆಯುವುದು, ಮಕ್ಕಳನ್ನು ನೋಡಿಕೊಳ್ಳುವುದು, ಅಡಿಗೆ ಅಂತಾ ಮುಗಿಯದಷ್ಟು ಕೆಲಸ ಇರುತ್ತದೆ. ಅದು ಕೂಡ ಇದು ವೇತನರಹಿತ ಕೆಲಸ(Salary Less Job).


ಮನೆಕೆಲಸದಲ್ಲಿ 7.2 ಗಂಟೆ ಕಳೆಯುವ ಮಹಿಳೆಯರು
ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ನಡೆಸಿದ ಹೊಸ ಸಂಶೋಧನೆಯು ಮಹಿಳೆಯರು ಮನೆಗೆಲಸದಲ್ಲಿ ಪುರುಷರಿಗಿಂತ ಹೆಚ್ಚಿನ ಸಮಯ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದೆ.


ಸಂಶೋಧನೆ ಹೇಳಿದ್ದೇನು?
15ರಿಂದ 60 ವರ್ಷ ವಯೋಮಾನದ ಮಹಿಳೆಯರು ದಿನದಲ್ಲಿ 7.2 ಗಂಟೆ ಕಾಲ ವೇತನರಹಿತ ಮನೆಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೇ ವೇಳೆ ಪುರುಷರು 2.8 ಗಂಟೆ ಕಾಲ ವೇತನರಹಿತ ಮನೆಗೆಲಸದಲ್ಲಿ ತೊಡಗಿರುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.


ಇದನ್ನೂ ಓದಿ: Explained: ಕೊಡೈಕೆನಾಲ್‌ನಲ್ಲಿ ಇನ್ನೂ ಇದೆ ಪಾದರಸದ ವಿಷಕಾರಿ ಎಫೆಕ್ಟ್!


ಶಿಕ್ಷಕಿ ನಮ್ರತಾ ಚಿಂದಾರ್ಕರ್ ಈ ಸಂಶೋಧನೆಯನ್ನು ನಡೆಸಿದ್ದು, ಕೆಲಸಕ್ಕೆ ಹೋಗುವ ಮಹಿಳೆ ಕೂಡಾ ಉದ್ಯೋಗದಲ್ಲಿರುವ ಪುರಷನಿಗಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ಮನೆ ಕೆಲಸಗಳಲ್ಲಿ ಕಳೆಯುತ್ತಾಳೆ. ಮನೆ ಸ್ವಚ್ಛಗೊಳಿಸುವಿಕೆ, ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು ಸೇರಿ ಇನ್ನೂ ಹಲವು ಕೆಲಸಗಳಲ್ಲಿ ಮಹಿಳೆಯರು ಪಾವತಿಸದ ಮನೆಕೆಲಸದಲ್ಲಿ ದುಪ್ಪಟ್ಟು ಸಮಯವನ್ನು ಕಳೆಯುತ್ತಾರೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎಸ್ಎಸ್ಎಸ್ಒ) ಸಮಯ ಆಧಾರಿತ ಸಮೀಕ್ಷೆಯಿಂದ (ಟಿಯುಎಸ್) ತಿಳಿದುಬಂದಿದೆ ಎಂದು ಅವರು ಸಂಶೋಧನೆಯಲ್ಲಿ ತಿಳಿಸಿದ್ದಾರೆ.


"ಅಧ್ಯಯನದ ಮೂಲಕ ನಾವು ಈಗ ಕೆಲಸದ ವಯಸ್ಸಿನ ವರ್ಗದ ಮಹಿಳೆಯರು ಪಾವತಿಸದ ಮನೆಕೆಲಸದಲ್ಲಿ ಕಳೆಯುವ ನಿಖರವಾದ ಸಮಯವನ್ನು ಲೆಕ್ಕಹಾಕಬಹುದು. ಭಾರತೀಯ ಮಹಿಳೆಯರು ತಮ್ಮ ದೈನಂದಿನ ಸಮಯದ 7.2 ಗಂಟೆಗಳ ಕಾಲವನ್ನು ಮನೆಕೆಲಸದಲ್ಲಿ ಕಳೆಯುತ್ತಾರೆ. ಅದೇ ಇಂತಹ ಕೆಲಸಕ್ಕೆ ಪುರುಷರು ಕೇವಲ 2.8 ಗಂಟೆಗಳ ಕಾಲ ಕಳೆಯುತ್ತಾರೆ" ಎಂದು ಐಐಎಂಎ ಪ್ರೊಫೆಸರ್ ನಮ್ರತಾ ಚಿಂದಾರ್ಕರ್ ತಿಳಿಸಿದ್ದಾರೆ.


ಮಹಿಳೆಯರು ಪಾವತಿಸದ ಮನೆಯ ಚಟುವಟಿಕೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂಬುದು ತಿಳಿದಿರುವ ಸಂಗತಿಯಾದರೂ, "ಟೈಮ್ ಯೂಸ್ ಡೇಟಾ: ಎ ಟೂಲ್ ಫಾರ್‌ ಜೆಂಡರ್‌ ಪಾಲಿಸಿ ಅನಾಲಿಸಿಸ್‌" ಶೀರ್ಷಿಕೆ ಸಂಶೋಧನಾ ಪ್ರಬಂಧವು ಮೊದಲ ಬಾರಿಗೆ ಭಾರತದಲ್ಲಿ ಮಹಿಳೆಯರು ಮನೆಕೆಲಸದಲ್ಲಿ ಕಳೆಯುವ ಸಮಯವನ್ನು ಲೆಕ್ಕ ಹಾಕುತ್ತದೆ ಎಂದು ಹೇಳುತ್ತದೆ.



ಮಹಿಳೆಯರಿಗೆ ಕಡಿಮೆ ಬಿಡುವಿನ ಅವಧಿ
ವಾರದಲ್ಲಿ 50 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಅದನ್ನು ಸಮಯದ ಅಭಾವ ಎಂದು ಕರೆಯಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಶೇ.24ರಷ್ಟು ಕಡಿಮೆ ಬಿಡುವಿನ ಅವಧಿಯನ್ನು ಹೊಂದಿರುತ್ತಾರೆ.


ಮನೆಯಲ್ಲಿ ಆಧುನಿಕ ಸೌಕರ್ಯ ಹೊಂದಿದವರಿಗೆ ಹೆಚ್ಚಿನ ವಿಶ್ರಾಂತಿ ಸಮಯ ಲಭ್ಯ
ಅಡುಗೆ ಮಾಡಲು ಅಡುಗೆ ಅನಿಲ ಅಥವಾ ಮತ್ತಿತ್ತರ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದಾರೆ ಈ ಸೌಲಭ್ಯಗಳನನ್ನು ಹೊಂದಿರದ ಮಹಿಳೆಯರಿಗಿಂತ 41 ನಿಮಿಷದಿಂದ 80 ನಿಮಿಷ ಹೆಚ್ಚು ಬಿಡುವು ಪಡೆಯುತ್ತಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: IT raid on BBC: ಬಿಬಿಸಿಗೆ ಆದಾಯ ತೆರಿಗೆ ಅಧಿಕಾರಿಗಳ ಶಾಕ್; ದೆಹಲಿ, ಮುಂಬೈ ಕಚೇರಿಯಲ್ಲಿ ಐಟಿ ರೇಡ್


ವಿದ್ಯುಚ್ಛಕ್ತಿ ಸೌಲಭ್ಯವಿದ್ದರೆ ಮಹಿಳೆಯರಿಗೆ, ಗೃಹ ಚಟುವಟಿಕೆಗಳಲ್ಲಿ ಕಳೆಯುವ ಸಮಯ ಸುಮಾರು 20 ನಿಮಿಷಗಳಷ್ಟು ಕಡಿಮೆಯಾಗಿದೆ ಎಂದು ಅದು ಸಂಶೋಧನೆ ಹೇಳಿದೆ. ಅದೇ ಸಮಯದಲ್ಲಿ ಪ್ರಾಥಮಿಕ ಬೆಳಕಿನ ಮೂಲವಾಗಿ ವಿದ್ಯುತ್ ಹೊಂದಿಲ್ಲದವರಿಗೆ ಹೋಲಿಸಿದರೆ ಸುಮಾರು 35 ನಿಮಿಷಗಳು ಹೆಚ್ಚು ವಿಶ್ರಾಂತಿಯನ್ನು ಮಹಿಳೆಯರು ಪಡೆಯುತ್ತಾರೆ ಎಂದು ಸಂಶೋಧನೆ ಹೇಳಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು