• Home
 • »
 • News
 • »
 • national-international
 • »
 • Joshimath: ಕುಸಿಯುತ್ತಿರೋ ಜೋಶಿಮಠದಿಂದ 4,000 ಮಂದಿ ಶಿಫ್ಟ್, ಕಟ್ಟಡಗಳ ನೆಲಸಮ ಕಾರ್ಯ ಆರಂಭ!

Joshimath: ಕುಸಿಯುತ್ತಿರೋ ಜೋಶಿಮಠದಿಂದ 4,000 ಮಂದಿ ಶಿಫ್ಟ್, ಕಟ್ಟಡಗಳ ನೆಲಸಮ ಕಾರ್ಯ ಆರಂಭ!

ಕುಸಿಯುತ್ತಿರೋ ಜೋಶಿಮಠದಲ್ಲಿ ಕಟ್ಟಡ ಧ್ವಂಸ ಕಾರ್ಯ ಆರಂಭ

ಕುಸಿಯುತ್ತಿರೋ ಜೋಶಿಮಠದಲ್ಲಿ ಕಟ್ಟಡ ಧ್ವಂಸ ಕಾರ್ಯ ಆರಂಭ

ಜೋಶಿಮಠದ 600ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಹಾನಿಗೊಳಗಾದವುಗಳನ್ನು ಕೆಡವಲಾಗುತ್ತದೆ. ಜೋಶಿಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

 • News18 Kannada
 • 4-MIN READ
 • Last Updated :
 • Joshimath (Jyotirmath), India
 • Share this:

ಜೋಶಿಮಠ(ಜ.10): ಉತ್ತರಾಖಂಡದ (Uttarakhand) ಪ್ರಸಿದ್ಧ ಪಟ್ಟಣ ಜೋಶಿಮಠ (Joshimath) ನಿರಂತರವಾಗಿ ಕುಸಿಯುತ್ತಿದ್ದು, ಇಲ್ಲಿನ ಬಹುತೇಕ ಮನೆಗಳು ಮತ್ತು ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಬಿರುಕು ಬಿಟ್ಟಿರುವ ಈ ಕಟ್ಟಡ ಹಾಗೂ ಮನೆಗಳನ್ನು ನೆಲಸಮಗೊಳಿಸಲು (Building Demolition) ನಿರ್ಧರಿಸಲಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ ಉತ್ತರಾಖಂಡದ ಜೋಶಿಮಠದ ಕುಸಿತದಲ್ಲಿ ಬಿರುಕು ಬಿಟ್ಟಿರುವ ಹಾಗೂ ತೀವ್ರ ಹಾನಿಗೊಳಗಾಗಿರುವ ಕಟ್ಟಡಗಳನ್ನು ಇಂದಿನಿಂದ ನೆಲಸಮ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೋಶಿಮಠವನ್ನು 'ಡೇಂಜರ್', 'ಬಫರ್' ಮತ್ತು 'ಸಂಪೂರ್ಣವಾಗಿ ಸುರಕ್ಷಿತ' ಎಂದು ಮೂರು ವಲಯಗಳಾಗಿ ವಿಂಗಡಿಸಲಾಗಿದೆ.


ಜೋಶಿಮಠದ 600ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಹಾನಿಗೊಳಗಾದವುಗಳನ್ನು ಕೆಡವಲಾಗುತ್ತದೆ. ಜೋಶಿಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೋಶಿಮಠದ ಶೇ.30ರಷ್ಟು ಭಾಗ ಬಾಧಿತವಾಗಿರುವಂತಿದೆ, ತಜ್ಞರ ಸಮಿತಿಯಿಂದ ವರದಿ ಸಿದ್ಧಪಡಿಸಲಾಗುತ್ತಿದ್ದು, ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.


ಇದನ್ನೂ ಓದಿ: Uttarakhand: ಧರ್ಮ ಮುಚ್ಚಿಟ್ಟು ಮದುವೆ ನಾಟಕ: ವಿವಾಹದ ಹಿಂದಿನ ದಿನ ಸಿಕ್ಕಿಬಿದ್ದ ಕಿರಾತಕ!


ಹೋಟೆಲ್‌ಗಳನ್ನು ನೆಲಸಮಗೊಳಿಸಲು ರೂರ್ಕಿಯಿಂದ ತಜ್ಞರ ತಂಡವನ್ನು ಕರೆಸಲಾಗಿದೆ. ಇನ್ನು ಕುಸಿತದಿಂದ ಅನೇಕ ಪ್ರದೇಶಗಳಿಗೆ ಅಪಾಯ ಎದುರಾಗುವಂತಿರುವ ಹೋಟೆಲ್‌ಳನ್ನಷ್ಟೇ ಮುಂಜಾಗೃತಾ ಕ್ರಮವಾಗಿ ನಿರ್ಧರಿಸಿದೆ. ಇಂದೇ ನೆಲಸಮ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಸಂಚಾರಕ್ಕಾಗಿ ರಸ್ತೆಯನ್ನು ಮುಚ್ಚುವ ಪ್ರಕ್ರಿಯೆ ಆರಂಭವಾಗಿದೆ. ಇದರೊಂದಿಗೆ ಭದ್ರತೆಯ ದೃಷ್ಟಿಯಿಂದ ಸುತ್ತಮುತ್ತಲಿನ ಪ್ರದೇಶದಿಂದ ವಾಹನಗಳನ್ನು ತೆಗೆಯಲಾಗುತ್ತಿದೆ. ತಜ್ಞರ ತಂಡ ಇನ್ನೂ ಬಂದಿಲ್ಲ.


ಮಹಡಿವಾರು ಹೋಟೆಲ್ ಅನ್ನು ನೆಲಸಮಗೊಳಿಸಲಾಗುವುದು ಎಂದು ಎಸ್‌ಡಿಆರ್‌ಎಫ್ ವಿಶೇಷ ಸಂವಾದದಲ್ಲಿ ತಿಳಿಸಿದೆ. ಯಾವುದೇ ಕಟ್ಟಡವನ್ನು ಒಂದೇ ಬಾರಿ ಸಂಪೂರ್ಣವಾಗಿ ನೆಲಸಮಗೊಳಿಸುವುದಿಲ್ಲ ಎಂದು ವರದಿ ತಿಳಿಸಿದೆ. ಮೂಲಗಳ ಪ್ರಕಾರ, ಜೋಶಿಮಠ ಪೊಲೀಸ್, ಎಸ್‌ಡಿಆರ್‌ಎಫ್, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ರೂರ್ಕಿ ತಂಡ, ಎನ್‌ಡಿಆರ್‌ಎಫ್ ಸ್ಟ್ಯಾಂಡ್‌ಬೈ ತಂಡ, ಪಿಡಬ್ಲ್ಯೂಡಿ ತಂಡದ ಮೇಲ್ವಿಚಾರಣೆಯಲ್ಲಿ ಈ ಸಂಪೂರ್ಣ ಕೆಲಸ ನಡೆಯಲಿದೆ. ಎಲ್ಲರೂ ತಂಡವಾಗಿ ಕೆಲಸ ಮಾಡಿ ನಗರ ಉಳಿಸಿ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.


ಜೋಶಿಮಠದಲ್ಲಿ ಭೂ ಕುಸಿತದ ಮೌಲ್ಯಮಾಪನ ನಡೆಸಿದ ತಜ್ಞರ ಸಮಿತಿಯು ಹಾನಿಗೊಳಗಾದ ಮನೆಗಳನ್ನು ಕೆಡವಲು ಶಿಫಾರಸು ಮಾಡಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ತಂಡದ ಮೇಲ್ವಿಚಾರಣೆಯಲ್ಲಿ ನೆಲಸಮವನ್ನು ನಡೆಸಲಾಗುವುದು, ಆದರೆ ಅವರಿಗೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅನ್ನು ಕರೆಯಲಾಗಿದೆ. ಜೋಶಿಮಠದಲ್ಲಿ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿರುವ ಪರಿಹಾರ ಶಿಬಿರಗಳಲ್ಲಿ ಮೂಲ ಸೌಕರ್ಯಗಳ ಬಗ್ಗೆ ಆಡಳಿತ ನಿರಂತರವಾಗಿ ನಿಗಾ ವಹಿಸುತ್ತಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Uttarakhand: ಉತ್ತರಾಖಂಡದ ಧನೌಲ್ತಿ ಒಂದು ಸುಂದರವಾದ ಪ್ರವಾಸಿ ತಾಣ, ಇದರ ಬಗ್ಗೆ ಒಂದಿಷ್ಟು ಮಾಹಿತಿ


ಜೋಶಿಮಠವು ಪ್ರಮುಖ ಯಾತ್ರಾ ಸ್ಥಳಗಳಿಗೆ ಹೆಬ್ಬಾಗಿಲು ಕೂಡ ಆಗಿದೆ. ಜಲವಿದ್ಯುತ್ ಯೋಜನೆಗಳು ಸೇರಿದಂತೆ ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿಯು ಆತಂಕಕಾರಿ ಪರಿಸ್ಥಿತಿಗೆ ಕಾರಣವೆಂದು ತಜ್ಞರು ಆರೋಪಿಸಿದ್ದಾರೆ. ಎನ್‌ಟಿಪಿಸಿಯ ಜಲವಿದ್ಯುತ್ ಯೋಜನೆಯೇ ಇದಕ್ಕೆ ಕಾರಣ ಎಂದು ಹಲವರು ಪರಿಗಣಿಸುತ್ತಿದ್ದರೂ. ಎನ್‌ಟಿಪಿಸಿ ಯೋಜನೆಯ ಸುರಂಗಗಳ ಸ್ಫೋಟದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿ ಕಳೆದ ತಿಂಗಳು ಮುಖ್ಯಮಂತ್ರಿಗಳಿಗೆ ಮೂರು ಬಾರಿ ಪತ್ರ ಬರೆದಿದ್ದೇವೆ ಎಂದು ಜೋಶಿಮಠದ ಜನರು ಹೇಳಿದ್ದಾರೆ. ಆದಾಗ್ಯೂ, NTPC ತನ್ನ ಯೋಜನೆ ಮತ್ತು ಜೋಶಿಮಠದ ಪರಿಸ್ಥಿತಿಯ ನಡುವೆ ಯಾವುದೇ ಸಂಬಂಧವನ್ನು ನಿರಾಕರಿಸಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು