• Home
  • »
  • News
  • »
  • national-international
  • »
  • Rescue Operation: ಫಲಿಸಿತು 100 ಗಂಟೆಗಳ ಕಾರ್ಯಾಚರಣೆ; ಬದುಕಿ ಬಂದ ಬೋರ್​​ವೆಲ್​​ನಲ್ಲಿ ಬಿದ್ದಿದ್ದ 10 ವರ್ಷದ ಬಾಲಕ

Rescue Operation: ಫಲಿಸಿತು 100 ಗಂಟೆಗಳ ಕಾರ್ಯಾಚರಣೆ; ಬದುಕಿ ಬಂದ ಬೋರ್​​ವೆಲ್​​ನಲ್ಲಿ ಬಿದ್ದಿದ್ದ 10 ವರ್ಷದ ಬಾಲಕ

ಬದುಕುಳಿದ ರಾಹುಲ್​​

ಬದುಕುಳಿದ ರಾಹುಲ್​​

ರಾಹುಲ್​​​ ಸ್ಥಿತಿ ಸ್ಥಿರವಾಗಿದೆ, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾನೆ. ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಬಿಲಾಸ್‌ಪುರ ಜಿಲ್ಲೆಯ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

  • Share this:

ಜಂಜಗೀರ್ ಚಂಪಾ : ಬರೋಬ್ಬರಿ 100 ಗಂಟೆಗಳ ರಕ್ಷಣಾ ಕಾರ್ಯಾಚರಣೆ (Rescue Operation) ಫಲ ನೀಡಿದೆ. ಬೋರ್​​ಬೆಲ್​ನಲ್ಲಿ ಸಿಲುಕಿದ್ದ (Trapped in Borewell) ಬಾಲಕ ಕೊನೆಗೂ ಬದುಕಿ ಬಂದಿದ್ದಾನೆ. ಛತ್ತೀಸ್‌ಗಢದ ಜಂಜಗೀರ್ ಚಂಪಾ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ 10 ವರ್ಷದ ಬಾಲಕ ರಾಹುಲ್ ಸಾಹುವನ್ನು (Rahul Sahu) ಮಂಗಳವಾರ (ಜೂನ್ 14) ರಾತ್ರಿ 104 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ (ಜೂನ್ 10) ಸಂಜೆಯಿಂದ ನಡೆಯುತ್ತಿರುವ ಬೃಹತ್ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಭಾರತೀಯ ಸೇನೆ, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಸೇರಿದಂತೆ 500 ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದಾರೆ.


ಸಂತಸ ವ್ಯಕ್ತಪಡಿಸಿದ ಛತ್ತೀಸ್‌ಗಢ ಸಿಎಂ


ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವೀಟ್ ಮಾಡಿ, “ಎಲ್ಲರ ಪ್ರಾರ್ಥನೆ ಮತ್ತು ರಕ್ಷಣಾ ತಂಡದ ನಿರಂತರ ಪ್ರಯತ್ನಗಳಿಂದ, ರಾಹುಲ್ ಸಾಹು ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬಾಲಕ ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಬೋರ್‌ವೆಲ್‌ನಿಂದ ಪಾರಾದ ನಂತರ, 10 ವರ್ಷದ ರಾಹುಲ್ ಸಾಹು ಅವರನ್ನು ಬಿಲಾಸ್‌ಪುರ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಬಾಲಕನನ್ನು ತಜ್ಞ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಐಸಿಯುನಲ್ಲಿ ಇರಿಸಲಾಗಿದೆ ಎಂದು ಛತ್ತೀಸ್‌ಗಢ ಸರ್ಕಾರ ಬುಧವಾರ (ಜೂನ್ 15) ಮಾಹಿತಿ ನೀಡಿದೆ.


ಇದನ್ನೂ ಓದಿ: Viral Video: ಭೀಕರ ಅಪಘಾತದಿಂದ ಮಗುವನ್ನು ರಕ್ಷಿಸಿದ ಪೊಲೀಸ್! ಭೇಷ್ ಎಂದ ನೆಟ್ಟಿಗರು


ಹೇಗಿದ್ದಾನೆ ರಾಹುಲ್ ಸಾಹು?


ರಾಹುಲ್​​​ ಸ್ಥಿತಿ ಸ್ಥಿರವಾಗಿದೆ, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾನೆ. ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಬಿಲಾಸ್‌ಪುರ ಜಿಲ್ಲೆಯ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  ಸುಮಾರು 100 ಕಿ.ಮೀ   ತ್ವರಿತ ಚಲನೆಗೆ ಅನುಕೂಲವಾಗುವಂತೆ ಝಿರೋ ಟ್ರಾಫಿಕ್​​ ರಚಿಸಲಾಗಿತ್ತು ಎಂದು ಬಿಲಾಸ್‌ಪುರ್ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಹೇಳಿದರು. ನಾವು ಗೆದ್ದಿದ್ದೇವೆ, ನಮ್ಮ ತಂಡ ಗೆದ್ದಿದೆ. ಇದು ಸವಾಲಿನ ಪರಿಸ್ಥಿತಿಯಾಗಿತ್ತು. ಆಡಳಿತದಿಂದ ನಮಗೆ ಎಲ್ಲಾ ರೀತಿಯ ನೆರವು ನೀಡಲಾಯಿತು. ಸಿಎಂ ಭೂಪೇಶ್ ಬಾಘೇಲ್ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದರು. ನಾವು ರಾಹುಲ್ ಅನ್ನು ನೇರವಾಗಿ ಬಿಲಾಸ್‌ಪುರದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ" ಎಂದು ಜಿಲ್ಲಾಧಿಕಾರಿ ಹೇಳಿದರು.


ರಾಹುಲ್ ಸಾಹು ಬೋರ್ ವೆಲ್ ಗೆ ಬಿದ್ದಿದ್ದು ಹೇಗೆ?


ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಟವಾಡುತ್ತಿದ್ದಾಗ ಸಾಹು ಮಲ್ಖರೋಡ ಡೆವಲಪ್‌ಮೆಂಟ್ ಬ್ಲಾಕ್‌ನ ಪಿಹ್ರಿದ್ ಗ್ರಾಮದ ತನ್ನ ಮನೆಯ ಹಿಂಬದಿಯಲ್ಲಿರುವ ಬಳಕೆಯಾಗದ 80 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ. ಸುಮಾರು 60 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಆಮ್ಲಜನಕ ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿತ್ತು. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಜಿಲ್ಲಾಡಳಿತ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು.


ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದರು. ಗುಜರಾತ್‌ನಿಂದ ರಿಮೋಟ್-ಆಪರೇಟೆಡ್ ಬೋರ್‌ವೆಲ್ 'ರೆಸ್ಕ್ಯೂ ರೋಬೋಟ್' ಯಂತ್ರವನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿತ್ತು. ಛತ್ತೀಸ್‌ಗಢದ ಮಲ್ಖರೋಡಾ ಡೆವಲಪ್‌ಮೆಂಟ್ ಬ್ಲಾಕ್‌ನಲ್ಲಿರುವ ಪಿಹ್ರಿದ್ ಗ್ರಾಮದ ತನ್ನ ಮನೆಯ ಹಿತ್ತಲಿನಲ್ಲಿದ್ದ 80 ಅಡಿ ಆಳದ ಬೋರ್‌ವೆಲ್‌ಗೆ ಮಗು ರಾಹುಲ್ ಸಾಹು ಬಿದ್ದಿದ್ದಾನೆ.

Published by:Kavya V
First published: