ಯೆಸ್ ಬ್ಯಾಂಕ್​ ಪುನಶ್ಚೇತನಕ್ಕೆ ಕ್ರಮ; ಎಸ್​ಬಿಐನಿಂದ ಶೇ. 49ರಷ್ಟು ಹೂಡಿಕೆ

ಕೆಟ್ಟ ಸಾಲಗಳಿಂದಾಗಿ ವಿಪರೀತ ಆರ್ಥಿಕ ನಷ್ಟದಲ್ಲಿರುವ ಯೆಸ್ ಬ್ಯಾಂಕನ್ನು ಮೊನ್ನೆ ರಾತ್ರಿ ಆರ್​ಬಿಐ ಸೂಪರ್ ಸೀಡ್ ಮಾಡಿತು. ಯೆಸ್ ಬ್ಯಾಂಕ್​ನ ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚು ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಾರದು ಎಂದು ನಿರ್ಬಂಧ ಹೇರಿದೆ.

G Hareeshkumar | news18-kannada
Updated:March 7, 2020, 4:33 PM IST
ಯೆಸ್ ಬ್ಯಾಂಕ್​ ಪುನಶ್ಚೇತನಕ್ಕೆ ಕ್ರಮ; ಎಸ್​ಬಿಐನಿಂದ ಶೇ. 49ರಷ್ಟು ಹೂಡಿಕೆ
ಯೆಸ್ ಬ್ಯಾಂಕ್​ನಲ್ಲಿ ಹಣ ವಿತ್​ಡ್ರಾ ಮಾಡಲು ಕ್ಯೂ
  • Share this:
ಮಂಬೈ(ಮಾ. 07): ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್​​​​​​​​​​​​ನ ಶೇ. 49 ರಷ್ಟು ಪಾಲನ್ನು ಖರೀದಿಸಬೇಕಾದರೆ 2,450 ಕೋಟಿ​​ ರೂಪಾಯಿ ಹೂಡಿಕೆ ಮಾಡುವ ಅಗತ್ಯವಿದೆ ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ​​​ ಹೇಳಿದೆ. ಯೆಸ್ ಬ್ಯಾಂಕನ್ನು ಸೂಪರ್​ಸೀಡ್ ಮಾಡಿರುವ ಆರ್​ಬಿಐ ಆ ಬ್ಯಾಂಕ್​ನ ಪುನಶ್ಚೇತನಕ್ಕೆ ರೂಪುರೇಖೆ ಹಾಕಿದೆ. ಅದರಂತೆ, ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡುವವರು ಶೇ. 49 ಪಾಲನ್ನು ಖರೀದಿಸಬೇಕು ಎಂಬ ಷರತ್ತೂ ಇದೆ. ಮೂಲಗಳ ಪ್ರಕಾರ, ಎಸ್​ಬಿಐ 2,450 ಕೋಟಿ ಹಣ ಹೂಡಲು ನಿರ್ಧರಿಸಿದೆ ಎನ್ನಲಾಗಿದೆ.

ಇವತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ಬಿಐ ಅಧ್ಯಕ್ಷ ರಜನೀಶ್ ಕುಮಾರ್, ಯೆಸ್ ಬ್ಯಾಂಕನ್ನು ರಕ್ಷಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಯೆಸ್ ಬ್ಯಾಂಕ್​ನ ಪುನಶ್ಚೇತನಕ್ಕೆ ರೂಪಿಸಲಾಗಿರುವ ಕರಡು ಯೋಜನೆಯ ಪ್ರತಿ ತಮಗೆ ಸಿಕ್ಕಿದೆ. ಈ ನಿಟ್ಟಿನಲ್ಲಿ ನಮ್ಮ ಹೂಡಿಕೆ ತಂಡ ಹಾಗೂ ಕಾನೂನು ತಂಡ ಕಾರ್ಯೋನ್ಮುಖರಾಗಿವೆ. ಈ ಕರಡು ಯೋಜನೆಯನ್ನು ನೋಡಿ ಅನೇಕ ಸಂಭಾವ್ಯ ಹೂಡಿಕೆದಾರರು ಎಸ್​ಬಿಐ ಬಳಿ ಬರುತ್ತಿದ್ದಾರೆ ಎಂದು ರಜನೀಶ್ ಕುಮಾರ್ ಹೇಳಿದರು.

ಬಂಡವಾಳ ಸೃಷ್ಟಿಗೆ ಎಸ್​ಬಿಐ ವಿವಿಧ ಹೂಡಿಕೆದಾರರನ್ನು ಆಹ್ವಾನಿಸುತ್ತಿದೆ. ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡಲು ಹಲವರಿಗೆ ಉತ್ಸಾಹ ಇದೆ. ಶೇ. 5ಕ್ಕಿಂತ ಹೆಚ್ಚು ಪಾಲಿನಷ್ಟು ಹಣ ಹೂಡಿಕೆ ಮಾಡಬಲ್ಲಂಥವರನ್ನು ಹುಡುಕುತ್ತಿದ್ದೇವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರು ತಿಳಿಸಿದರು.

ಯೆಸ್ ಬ್ಯಾಂಕ್​ನ ಪುನರ್ನಿರ್ಮಾಣಕ್ಕೆ ರೂಪಿಸಲಾಗಿರುವ ಕರಡು ಯೋಜನೆ ಪ್ರಕಾರ ಆ ಬ್ಯಾಂಕ್​ನಲ್ಲಿ  ಹೂಡಿಕೆ ಮಾಡುವವರು ಶೇ. 49ರಷ್ಟು ಪಾಲನ್ನು ಖರೀದಿಸಬೇಕಾಗುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಈ ಪಾಲು ಶೇ. 26ಕ್ಕಿಂತ ಕಡಿಮೆ ಇರಕೂಡದು.

ಕೆಟ್ಟ ಸಾಲಗಳಿಂದಾಗಿ ವಿಪರೀತ ಆರ್ಥಿಕ ನಷ್ಟದಲ್ಲಿರುವ ಯೆಸ್ ಬ್ಯಾಂಕನ್ನು ಮೊನ್ನೆ ರಾತ್ರಿ ಆರ್​ಬಿಐ ಸೂಪರ್ ಸೀಡ್ ಮಾಡಿತು. ಯೆಸ್ ಬ್ಯಾಂಕ್​ನ ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚು ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಾರದು ಎಂದು ನಿರ್ಬಂಧ ಹೇರಿದೆ.

ಇದನ್ನೂ ಓದಿ : YES Bank Crisis | ಹಣ ಸುರಕ್ಷಿತವಾಗಿದೆ; ಹೂಡಿಕೆದಾರರಿಗೆ ಭರವಸೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಆತಂಕಗೊಂಡಿರುವ ಗ್ರಾಹಕರು ನಿತ್ಯವೂ ಯೆಸ್ ಬ್ಯಾಂಕ್ ಕಚೇರಿಗಳಿಗೆ ಅಲೆದಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ, ಹಣಕಾಸು ಸಚಿವರು, ಹಣಕಾಸು ಅಧಿಕಾರಿಗಳು, ಆರ್ಥಿಕ ಸಲಹೆಗಾರರು ಯೆಸ್ ಬ್ಯಾಂಕ್ ಗ್ರಾಹಕರ ಹಣಕ್ಕೆ ಏನೂ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡುತ್ತಾ ಬಂದಿದ್ದಾರೆ. ಈಗ ಯೆಸ್ ಬ್ಯಾಂಕ್​ಗೆ ಎಸ್​ಬಿಐನ ಸಹಾಯಹಸ್ತ ಸಿಗುತ್ತಿರುವುದು ಗ್ರಾಹಕರಲ್ಲಿ ಸ್ವಲ್ಪ ಸಮಾಧಾನ ತಂದಿರಬಹುದೆನ್ನಲಾಗಿದೆ.
First published: March 7, 2020, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading