• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Republic Day Special: ಜನವರಿ 26ರ ಪರೇಡ್​ ಆರಂಭವಾಗಿದ್ದು ಯಾವಾಗ? ಟ್ಯಾಬ್ಲೋ ಇತಿಹಾಸ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

Republic Day Special: ಜನವರಿ 26ರ ಪರೇಡ್​ ಆರಂಭವಾಗಿದ್ದು ಯಾವಾಗ? ಟ್ಯಾಬ್ಲೋ ಇತಿಹಾಸ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕರ್ತವ್ಯಪಥದಲ್ಲಿ ಸಾಗಿದ ಪರೇಡ್

ಕರ್ತವ್ಯಪಥದಲ್ಲಿ ಸಾಗಿದ ಪರೇಡ್

Republic Day Parade: ಪ್ರತಿ ವರ್ಷ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದಿಂದ ಕೆಂಪು ಕೋಟೆಯವರೆಗೆ ಭವ್ಯವಾದ ಪರೇಡ್ ನಡೆಯುತ್ತದೆ. ಈ ಬಾರಿಯೂ ದೆಹಲಿಯ ಕರ್ತವ್ಯಪಥ ಇಂತಹುದೇ ಆಕರ್ಷಕ ಪರೇಡ್​ಗೆ ಸಾಕ್ಷಿಯಾಗಿದೆ. ಆಕರ್ಷಕ ಪಥಸಂಚಲನ, ದೇಶದ ಸೇನಾ ಸಾಮರ್ಥ್ಯದ ಅನಾವರಣದ ಜೊತೆಗೆ ವಿವಿಧ ರಾಜ್ಯ ಹಾಗೂ ಇಲಾಖೆಗಳ ಸ್ತಬ್ಧಚಿತ್ರಗಳು ರಾರಾಜಿಸಿವೆ. ಹಾಗಾದ್ರೆ ಈ ಪರೇಡ್​ ಯಾವಾಗಿನಿಂದ ಆರಂಭವಾಘಿದ್ದು, ಇದರ ಹಿಂದಿನ ಇತಿಹಾಸವೇನು? ಇಲ್ಲಿದೆ ವಿವರ

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ನವದೆಹಲಿ(ಜ.26): 26 ಜನವರಿ ಎಂದಾಗ ಪ್ರತಿಯೊಬ್ಬ ಭಾರತೀಯನಿಗೆ ಎರಡು ವಿಚಾರಗಳು ತಪ್ಪದೇ ನೆನಪಾಗುತ್ತವೆ. ಮೊದಲನೆಯದ್ದು ಭಾರತದ ಸಂವಿಧಾನ ಮತ್ತು ಎರಡನೆಯದಾಗಿ ಗಣರಾಜ್ಯೋತ್ಸವದಂದು (Republic Day Of India) ರಾಜಧಾನಿ ದೆಹಲಿಯಲ್ಲಿ ನಡೆಯುವ ಮಹಾ ಪರೇಡ್ (Parade). 1950 ರಲ್ಲಿ, ಜನವರಿ 26 ರಂದು, ಭಾರತದ ಸಂವಿಧಾನವು (Indian Constitution) ಜಾರಿಗೆ ಬಂದಿತ್ತು. ಅಂದರೆ, 74 ವರ್ಷಗಳ ಹಿಂದೆ, ಮೊದಲ ಬಾರಿಗೆ ಪ್ರತಿಯೊಬ್ಬ ಭಾರತೀಯನು ತನ್ನದೇ ಆದ ಶಾಸನವನ್ನು ಜಾರಿಗೊಳಿಸುವ ದಿನವಾಗಿತ್ತು. ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಯ ಪಾಲಿಗೂ ಅತ್ಯಂತ ಅಧಿಕೃತ ದಾಖಲೆಯಾಯಿತು ಮತ್ತು ಅದರಲ್ಲಿರುವ ಎಲ್ಲವೂ ದೇಶದ ಘನತೆಯಾಯಿತು.


ಸಂವಿಧಾನದ ಅನುಷ್ಠಾನದೊಂದಿಗೆ, ಭಾರತವು ಸಾರ್ವಭೌಮ ರಾಷ್ಟ್ರವಾಯಿತು. ಪ್ರತಿಯೊಂದು ವಿಷಯವೂ ತನ್ನದೇ ಆಗಿತ್ತು, ದೇಶದ ಭೌಗೋಳಿಕತೆಯಿಂದ ರಾಜಕೀಯದವರೆಗೆ ಎಲ್ಲವನ್ನೂ ಅದರ ನಾಗರಿಕರಿಗಾಗಿ ಮಾಡಲಾಯಿತು. ಈ ಸಾರ್ವಭೌಮತ್ವವನ್ನು ಮಹಾನ್ ಭಾರತೀಯ ಸೇನೆಯು ರಕ್ಷಿಸುತ್ತದೆ. ಭಾರತಾಂಬೆಯ ವೀರ ಮಕ್ಕಳು ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ಸಿದ್ಧರಾಗಿರುತ್ತಾರೆ. ಹೀಗಿರುವಾಗ ಪ್ರತಿ ವರ್ಷ ಜನವರಿ 26 ರಂದು, ರಾಜಧಾನಿಯಲ್ಲಿ ಭವ್ಯವಾದ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ, ಇದರಲ್ಲಿ ಸೈನ್ಯದ ತುಕಡಿಗಳು, ಇತಿಹಾಸ ಮತ್ತು ಹೆಮ್ಮೆಯನ್ನು ನೆನಪಿಸುತ್ತಾ ತಮ್ಮ ಸುಪ್ರೀಂ ಕಮಾಂಡರ್, ಭಾರತದ ರಾಷ್ಟ್ರಪತಿಗಳಿಗೆ ವಂದನೆ ಸಲ್ಲಿಸುತ್ತಾರೆ.


ಇದನ್ನೂ ಓದಿ: Republic Day 2023: ರಾಜ್ಯದ ವಿವಿಧೆಡೆ ಗಣರಾಜ್ಯೋತ್ಸವ ಸಂಭ್ರಮ, ಎಲ್ಲೆಡೆ ದೇಶಭಕ್ತಿಯ ಸಡಗರ


ಮೊದಲ ಬಾರಿಗೆ ರಾಜಪಥದಲ್ಲಿ


ರಾಷ್ಟ್ರಪತಿ ಭವನದಿಂದ ಪ್ರಾರಂಭವಾಗುವ ಈ ಪರೇಡ್​ ಕೆಂಪು ಕೋಟೆಯಲ್ಲಿ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಇದು ಮೊಟ್ಟ ಮೊದಲ ಗಣರಾಜ್ಯೋತ್ಸವದಿಂದಲೇ ಆಯೋಜಿಸಲಾಗುತ್ತಿದೆ ಎಂದು ಜನರು ಭಾವಿಸುತ್ತಾರೆ. ಇಲ್ಲ, 1955 ರಲ್ಲಿ ಗಣರಾಜ್ಯೋತ್ಸವದಂದು ಮೊದಲ ಬಾರಿಗೆ ಪರೇಡ್​ ಆಯೋಜಿಸಲಾಯಿತು. ರಾಜಪಥದಲ್ಲಿ ಆಯೋಜಿಸಲಾಗುತ್ತಿದ್ದ ಈ ಪರೇಡ್​ ಜನವರಿ 26, 2023 ರಂದು ಮೊದಲ ಬಾರಿ ಕರ್ತವ್ಯಪಥದಲ್ಲಿ ಸಾಗಿದೆ. ಆದರೆ 1955 ರಿಂದ, ಈ ಶಾಶ್ವತ ಪರೇಡ್​ ನಡೆಯುವ ಸ್ಥಳವನ್ನು ಒಟ್ಟು ನಾಲ್ಕು ಬಾರಿ ಬದಲಾಯಿಸಲಾಗಿದೆ.


ಬದಲಾಗುತ್ತಲೇ ಇತ್ತು ಪರೇಡ್​ ನಡೆಯುವ ಸ್ಥಳ


ಮೊದಲ ಗಣರಾಜ್ಯೋತ್ಸವದಂದು ದೆಹಲಿಯ ಇರ್ವಿನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಇದರ ನಂತರ, ಕೆಲವೊಮ್ಮೆ ರಾಮಲೀಲಾ ಮೈದಾನದಲ್ಲಿ, ಕೆಲವೊಮ್ಮೆ ಕೆಂಪು ಕೋಟೆಯಲ್ಲಿ ಮತ್ತು ಕೆಲವೊಮ್ಮೆ ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿ, ಘನತೆವೆತ್ತ ರಾಷ್ಟ್ರಪತಿಗಳು ಪರೇಡ್‌ನ ಗೌರವ ವಂದನೆ ಸ್ವೀಕರಿಸುತ್ತಿದ್ದರು.


ಇದನ್ನೂ ಓದಿ: Republic Day Special: 1947ರಲ್ಲಿ ಟ್ರೈನ್​ ಟಿಕೆಟ್ ಬೆಲೆ ಎಷ್ಟಿದೆ ಗೊತ್ತಾ? ನೋಡಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!


ಆದರೆ 1955 ರಲ್ಲಿ ಮೊದಲ ಬಾರಿಗೆ ಜನವರಿ 26 ರಂದು ರಾಜಪಥದಲ್ಲಿ ಮೆರವಣಿಗೆಯನ್ನು ಆಯೋಜಿಸಲಾಯಿತು. ಅಂದಿನಿಂದ ಈ ಪರೇಡ್​ ಇಲ್ಲೇ ಶಾಶ್ವತಗೊಳಿಸಲಾಗಿದೆ. ಇದರೊಂದಿಗೆ, ವಂದನಾ ವೇದಿಕೆಯನ್ನು ಸಹ ಶಾಶ್ವತಗೊಳಿಸಲಾಯಿತು, ಅಲ್ಲಿ ದೇಶದ ಸೈನ್ಯವು ತನ್ನ ಸುಪ್ರೀಂ ಕಮಾಂಡರ್‌ಗೆ ನಮಸ್ಕರಿಸುತ್ತದೆ.


ಮಿಲಿಟರಿ ಶಕ್ತಿಯೊಂದಿಗೆ ಸಾಂಸ್ಕೃತಿಕ ಸ್ತಬ್ಧಚಿತ್ರ


ರಾಜಪಥದಲ್ಲಿ ನಡೆಯುವ ಸೇನಾ ಪಡೆಗಳ ಪರೇಡ್ ದೇಶದ ಸ್ವಂತ ಮಿಲಿಟರಿ ಶಕ್ತಿಯನ್ನು ಅನಾವರಣಗೊಳಿಸಿದರೆ, ದೇಶ ಮತ್ತು ಪ್ರಪಂಚದ ಮುಂದೆ ಈ ಮೆರವಣಿಗೆಯಲ್ಲಿ ದೇಶದ ಸಾಂಸ್ಕೃತಿಕ ನೋಟವೂ ಕಂಡುಬರುತ್ತದೆ. ದೇಶಾದ್ಯಂತ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಕಂಡು ಬರುತ್ತವೆ. ಇದರಲ್ಲಿ ಸಂಸ್ಕೃತಿಯ ಛಾಯೆಯು ಗೋಚರಿಸುತ್ತದೆ. ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಆಕರ್ಷಕವಾಗಿವೆ.




ಮೊದಲ ಬಾರಿಗೆ 1953 ರಲ್ಲಿ, ವಿವಿಧ ರಾಜ್ಯಗಳ ಬುಡಕಟ್ಟು ನೃತ್ಯಗಳನ್ನು ಒಳಗೊಂಡಿರುವ ಸಾಂಸ್ಕೃತಿಕ ಜಾನಪದ ನೃತ್ಯದ ಸ್ತಬ್ಧಚಿತ್ರಗಳನ್ನು ಜನವರಿ 26 ರಂದು ನೋಡಲಾಯಿತು. ದೇಶದ ವಿವಿಧತೆಯಲ್ಲಿ ಏಕತೆ ಎಂಬುದಕ್ಕೆ ಸಾಂಸ್ಕೃತಿಕ ಟ್ಯಾಬ್ಲೋಗಳು ಉದಾಹರಣೆಯಾಗಿವೆ. ಅದೇ ಸಮಯದಲ್ಲಿ, ಈ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯ, ಇಲಾಖೆಗಳಿಗೆ ಅದರಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗುತ್ತದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು