• Home
  • »
  • News
  • »
  • national-international
  • »
  • Republic Day 2023: ಈ ವರ್ಷದ ಆಚರಣೆಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳಿವೆ?

Republic Day 2023: ಈ ವರ್ಷದ ಆಚರಣೆಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳಿವೆ?

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ಈ ಬಾರಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ.

  • Trending Desk
  • 5-MIN READ
  • Last Updated :
  • Share this:

ಭವ್ಯ ಭಾರತದ ಅದ್ಧೂರಿ ಆಚರಣೆಯಾದ ಗಣರಾಜ್ಯೋತ್ಸವಕ್ಕೆ (Republic Day ಕೆಲವೇ ದಿನಗಳು ಬಾಕಿ ಇವೆ. ಭಾರತವು ಈ ವರ್ಷ ತನ್ನ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಬಾರಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜನವರಿ 26, 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ಈ ದಿನವನ್ನು ಭಾರತದಲ್ಲಿ ಸಂಭ್ರಮದಿಂದ (Celebration) ಆಚರಿಸಲಾಗುತ್ತದೆ. ಪ್ರತಿ ಬಾರಿಯೂ ಕೆಲವು ವಿಶೇಷತೆಗಳನ್ನು ಗಣರಾಜ್ಯೋತ್ಸವ ಒಳಗೊಂಡಿರುತ್ತದೆ. ಹಾಗಾದರೆ 74ನೇ ಗಣರಾಜ್ಯೋತ್ಸವವಾದ ಈ ವರ್ಷ ಏನೆಲ್ಲಾ ಕಾರ್ಯಕ್ರಮಗಳು ಜರುಗುತ್ತವೆ, ಯಾರು ಮುಖ್ಯ ಅತಿಥಿ ಹೀಗೆ ಒಂದೈದು ಮುಖ್ಯ ವಿಚಾರಗಳು ನಿಮಗಾಗಿ ಇಲ್ಲಿದೆ.


ಗಣರಾಜ್ಯೋತ್ಸವ ದಿನದ ಈ ಬಾರಿಯ ವಿಶೇಷತೆಗಳು?


* ಮುಖ್ಯ ಅತಿಥಿ


ಈ ಬಾರಿ ಈಜಿಪ್ಟ್ ಅಧ್ಯಕ್ಷರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 2023ರ ಗಣರಾಜ್ಯೋತ್ಸವ ದಿನದಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ವಿದೇಶಿ ಅತಿಥಿಯಾಗಲಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.


* ಮಿಲಿಟರಿ ಟ್ಯಾಟೂ ಮತ್ತು ಬುಡಕಟ್ಟು ಸಂತ ಉತ್ಸವ


ಗಣರಾಜ್ಯೋತ್ಸವದ ಅಂಗವಾಗಿ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದ ಅಂಗವಾಗಿ ಜನವರಿ 23-24 ರಂದು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಮಿಲಿಟರಿ ಟ್ಯಾಟೂ ಮತ್ತು ಬುಡಕಟ್ಟು ನೃತ್ಯ ಉತ್ಸವ ನಡೆಯಲಿದೆ.


'ಆದಿ-ಶೌರ್ಯ - ಪರ್ವ್ ಪರಾಕ್ರಮ್ ಕಾ' ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಈ ಎರಡು ದಿನಗಳ ಉತ್ಸವ ಭಾರತೀಯ ಸಶಸ್ತ್ರ ಪಡೆಗಳ ಪರಾಕ್ರಮ ಮತ್ತು ಬುಡಕಟ್ಟು ಸಂಸ್ಕೃತಿಯ ಸೌಂದರ್ಯವನ್ನು ಪ್ರದರ್ಶಿಸುತ್ತದೆ.


ಆರ್-ಡೇ 10 ಮಿಲಿಟರಿ ಟ್ಯಾಟೂ ಪ್ರದರ್ಶನಗಳು ಮತ್ತು 20 ಬುಡಕಟ್ಟು ನೃತ್ಯಗಳಿಗೆ ಸಾಕ್ಷಿಯಾಗಲಿದೆ. ರಕ್ಷಣಾ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಸಮನ್ವಯ ಸಂಸ್ಥೆಯಾಗಿದೆ.


ಇದನ್ನೂ ಓದಿ: ನಾಶದ ಹಂತದಲ್ಲಿ ಚೀನಾದ ಉದ್ಯಮಗಳು, ಓಮಿಕ್ರಾನ್ ರೂಪಾಂತರದಿಂದ ಗಂಡಾಂತರ


ಮಿಲಿಟರಿ ಟ್ಯಾಟೂ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸುಮಾರು 20 ಬುಡಕಟ್ಟು ನೃತ್ಯ ತಂಡಗಳು ಪ್ರದರ್ಶನ ನೀಡಲು ಸಿದ್ಧವಾಗಿವೆ.


* ಸಾಂಪ್ರದಾಯಿಕ ನೃತ್ಯಗಳು ಮತ್ತು ಮಿಲಿಟರಿ ಪ್ರದರ್ಶನ


ಗಣರಾಜ್ಯೋತ್ಸವದಂದು ಪ್ರಸ್ತುತಪಡಿಸುವ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಲ್ಲಿ ಗೌರ್ ಮರಿಯಾ, ಸಿದ್ದಿ ಧಮಾಲ್, ಬೈಗಾ ಪಾರ್ಧೋನಿ, ಪುರುಲಿಯಾ, ಬಾಗುರುಂಬಾ, ಘುಸಾಡಿ, ಬಾಲ್ಟಿ, ಲಂಬಾಡಿ, ಪೈಕಾ, ಗಡ್ಡಿ ನಾಟಿ, ರಥವಾ, ಬುಡಿಗಲಿ, ಸೋಂಗಿಮುಖವಾಟೆ, ಕರ್ಮ, ಮಾಂಘೋ, ಕಾಷಾದ್ ಮಸ್ತಿ, ಇತ್ಯಾದಿ ಒಳಗೊಂಡಿವೆ.


ಭಾರತೀಯ ಸಶಸ್ತ್ರ ಪಡೆಗಳು ಕುದುರೆ ಸವಾರಿ ಪಥ ಸಂಚಲನ, ಖುಕುರಿ ನೃತ್ಯ, ಗಟ್ಕಾ, ಮಲ್ಲಖಂಬ್, ಕಲರಿಪಯಟ್ಟು, ತಂಗ್-ಟ, ಮೋಟಾರ್ ಸೈಕಲ್ ಡಿಸ್ಪ್ಲೇ, ಏರ್ ವಾರಿಯರ್ ಡ್ರಿಲ್, ನೇವಿ ಬ್ಯಾಂಡ್ ಮತ್ತು ಸಮರ ಕಲೆಗಳ ಮೂಲಕ ತನ್ನ ಪರಾಕ್ರಮವನ್ನು ಪ್ರದರ್ಶಿಸಲಿವೆ.


* ಆರ್-ಡೇ ಮತ್ತು ತಂತ್ರಜ್ಞಾನ


ಈ ಗಣರಾಜ್ಯ ದಿನ ಭಾರತದ ಅತಿದೊಡ್ಡ ಡ್ರೋನ್ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ಡ್ರೋನ್‌ಗಳು ದೇಶದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆ ಮತ್ತು ಯುವಕರ ತಾಂತ್ರಿಕ ಪರಾಕ್ರಮವನ್ನು ಬಿಂಬಿಸುವ ಪ್ರಯತ್ನದಲ್ಲಿ ನಿಖರವಾದ ಸಿಂಕ್ರೊನೈಸೇಶನ್ ಮೂಲಕ ರಾಷ್ಟ್ರೀಯ ವ್ಯಕ್ತಿಗಳು ಮತ್ತು ಘಟನೆಗಳನ್ನು ಒಳಗೊಂಡಿರುತ್ತವೆ.
ಈವೆಂಟ್ ಅನ್ನು ಬಾಟ್‌ಲ್ಯಾಬ್ಸ್ ಡೈನಾಮಿಕ್ಸ್ ಆಯೋಜಿಸುತ್ತದೆ. 3,500 ಸ್ಥಳೀಯ UAV ಗಳು, 3,500 ಸ್ಥಳೀಯ ಮಾನವರಹಿತ ವಾಯು ವಾಹನಗಳು (UAV) ಆಕಾಶದಲ್ಲಿ ಬೆಳಗಲು ಸಿದ್ಧವಾಗಿವೆ.


* ವಂದೇ ಭಾರತಂ 2.0


ಗಣರಾಜ್ಯೋತ್ಸವ ಪಥಸಂಚಲನದಲ್ಲಿ 503 ನರ್ತಕರು ‘ನಾರಿ ಶಕ್ತಿ’ ಥೀಮ್ ಅನ್ನು ಪ್ರದರ್ಶಿಸುತ್ತಾರೆ. ಈ ನೃತ್ಯಗಾರರನ್ನು ಡಿಸೆಂಬರ್ 19-20 ರಂದು ನವದೆಹಲಿಯಲ್ಲಿ ನಡೆದ ಮತ್ತು 980 ನೃತ್ಯಗಾರರು ಭಾಗವಹಿಸಿದ್ದ ವಂದೇ ಭಾರತಂ ನೃತ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಿಂದ ತೀರ್ಪುಗಾರರು ಆಯ್ಕೆ ಮಾಡಿದ್ದಾರೆ.

First published: