Afghanistan Crisis: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ 150 ಭಾರತೀಯರ ಕಿಡ್ನ್ಯಾಪ್ ಸುದ್ದಿ ಎಷ್ಟು ಸತ್ಯ?

150 ಭಾರತೀಯರ ಕಿಡ್ನ್ಯಾಪ್​ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಇಂದು ಸ್ಪಷ್ಟನೆ ನೀಡಿದೆ. ಭಾರತೀಯರನ್ನು ಅಪಹರಿಸಿರುವ ಆರೋಪವನ್ನು ತಾಲಿಬಾನಿಗಳ ಮುಖಂಡ ಅಹ್ಮದುಲ್ಲಾ ವಸೇಕ ಕೂಡ ನಿರಾಕರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಫ್ಘಾನಿಸ್ತಾನವನ್ನು ತಾಲಿಬಾನಿ ಉಗ್ರರು ವಶಕ್ಕೆ ಪಡೆದ ಬಳಿಕ ಸೃಷ್ಟಿಯಾಗಿರುವ ಬಿಕ್ಕಟ್ಟು, ಅರಾಜಕತೆ ಬಗ್ಗೆ ದಿನಕ್ಕೊಂದು ಸುದ್ದಿ ಅಪ್ಪಳಿಸುತ್ತಲೇ ಇದೆ. ಭಾರತೀಯರ ಪಾಲಿಗೆ ಆತಂಕ ಸೃಷ್ಟಿಸಿದ್ದ ಸುದ್ದಿಯೊಂದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕಾಬೂಲ್ ಸಮೀಪದ ಹಮೀದ್​ ಖರ್ಜೈದ್​​​ ಏರ್​​ಪೋರ್ಟ್​​ನಿಂದ 150 ಭಾರತೀಯರನ್ನು ತಾಲಿಬಾನಿಗಳು ಅಪಹರಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ 150 ಭಾರತೀಯರ ಕಿಡ್ನ್ಯಾಪ್​ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಇಂದು ಸ್ಪಷ್ಟನೆ ನೀಡಿದೆ. ಭಾರತೀಯರನ್ನು ಅಪಹರಿಸಿರುವ ಆರೋಪವನ್ನು ತಾಲಿಬಾನಿಗಳ ಮುಖಂಡ ಅಹ್ಮದುಲ್ಲಾ ವಸೇಕ ಕೂಡ ನಿರಾಕರಿಸಿದ್ದಾರೆ.

ಕೇಂದ್ರ ಸರ್ಕಾರ ತನ್ನ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಕಿಡ್ನ್ಯಾಪ್​​ ಸುದ್ದಿ ಹರಿದಾಡಿದ್ದು ಭಾರತೀಯರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಶನಿವಾರ ಭಾರತೀಯ ವಾಯುಪಡೆಯ ವಿಮಾನವು ಕಾಬೂಲ್ ವಿಮಾನ ನಿಲ್ದಾಣದಿಂದ ಸುರಕ್ಷಿತವಾಗಿ ತವರಿನತ್ತ ಹಾರಿದೆ.

ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ. ನಾವು ಅವರೊಂದಿಗೆ ಮಾತನಾಡುವಷ್ಟರಲ್ಲಿ ನಿಯಮಗಳು ಬದಲಾಗುತ್ತಿವೆ. ಭಾರತ ಹಲವು ಅಭಿವೃದ್ಧಿ ಯೋಜನೆಗಳನ್ನು ಅಫ್ಘಾನಿಸ್ತಾನದಲ್ಲಿ ಕೈಗೊಂಡಿತ್ತು. ಅವುಗಳನ್ನು ಮುಂದುವರೆಸುವಂತೆ ತಾಲಿಬಾಲಿ ಮುಖ್ಯಸ್ಥರು ಹೇಳುತ್ತಿದ್ದಾರೆ. ಭಾರತದ ಬೆಂಬಲಕ್ಕೆ ನಾವಿದ್ದೇವೆ ಎಂದಿದ್ದಾರೆ ಎಂದು ಬಾಗ್ಜಿ ತಿಳಿಸಿದರು.

ಇದನ್ನೂ ಓದಿ: ನನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಮಾರಿದ ಗಂಡ; 14ನೇ ವರ್ಷಕ್ಕೆ ಮದುವೆಯಾಗಿ ನರಕ ಅನುಭವಿಸಿದೆ

ಅಫ್ಗಾನ್​​ ಪರಿಸ್ಥಿತಿ ಹದಗೆಡುತ್ತಲೇ ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಾನಿಕ್ ವೀಸಾವನ್ನು ಪರಿಚಯಿಸಿದೆ. ಇ-ತುರ್ತು ಎಕ್ಸ್-ಮಿಸ್ಕ್ ವೀಸಾದಡಿ ಭಾರತಕ್ಕೆ ಪ್ರವೇಶಿಸಲು ಸಲ್ಲಿಸುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪರಿಶೀಲಿಸಲಾಗುವುದು.  ಅಫ್ಘಾನಿಸ್ತಾನವು ಈ ಮೊದಲು ಈ ವರ್ಗಕ್ಕೆ ಒಳಪಟ್ಟಿರಲಿಲ್ಲ. ಭಾರತದ ವೀಸಾ ಪಡೆಯಬೇಕಾದವರು ಖುದ್ದು ರಾಯಭಾರ ಕಚೇರಿಗೆ ಹಾಜರಗಬೇಕಿತ್ತು. ಆದರೆ ಈಗ, ಕಾಬೂಲ್‌ನ ಪರಿಸ್ಥಿತಿಯನ್ನು ಗಮನಿಸಿ ಇ-ವೀಸಾ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಮೆರಿಕಾ ತನ್ನ ಸೇನೆಯನ್ನು ಮೇ 1ರಿಂದ ಹಿಂಪಡೆಯಲು ಆರಂಭಿಸಿತ್ತು. ಅಂದಿನಿಂದ ತಾಲಿಬಾನ್​​​ ಹಂತ ಹಂತವಾಗಿ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಯುಸ್​​ ಸೇನಾ ಬೆಂಬಲಿತ ಅಶ್ರಫ್​ ಘನಿ ಸರ್ಕಾರವನ್ನು ಹಿಮ್ಮೆಟ್ಟಿಸಿ ತಾಲಿಬಾನಿಗಳು ಅಫ್ಘನ್​ ಮೇಲೆ ಪ್ರಭುತ್ವ ಸಾಧಿಸಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಅಮೆರಿಕಾ ಸೇನಾ ಬೆಂಬಲದೊಂದಿಗೆ ಇದ್ದ ಅಧಿಕಾರವನ್ನು ತಾಲಿಬಾನಿಗಳು ಕಿತ್ತುಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ಅಜ್ಞಾನ ಸ್ಥಳಕ್ಕೆ ತೆರಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: