• Home
  • »
  • News
  • »
  • national-international
  • »
  • Deadly Virus: ಚೀನಾ ತಯಾರಿಸ್ತಿದೆ ಕೋವಿಡ್‌ಗಿಂತಲೂ ಅಪಾಯಕಾರಿ ವೈರಸ್! ಈ ಬಾರಿ ಡ್ರ್ಯಾಗನ್ ರಾಷ್ಟ್ರಕ್ಕೆ ಪಾಕಿಸ್ತಾನ ಸಾಥ್!

Deadly Virus: ಚೀನಾ ತಯಾರಿಸ್ತಿದೆ ಕೋವಿಡ್‌ಗಿಂತಲೂ ಅಪಾಯಕಾರಿ ವೈರಸ್! ಈ ಬಾರಿ ಡ್ರ್ಯಾಗನ್ ರಾಷ್ಟ್ರಕ್ಕೆ ಪಾಕಿಸ್ತಾನ ಸಾಥ್!

ಚೀನಾ-ಪಾಕಿಸ್ತಾನದಿಂದ ತಯಾರಾಗ್ತಿದ್ಯಾ ಅಪಾಯಕಾರಿ ವೈರಸ್?

ಚೀನಾ-ಪಾಕಿಸ್ತಾನದಿಂದ ತಯಾರಾಗ್ತಿದ್ಯಾ ಅಪಾಯಕಾರಿ ವೈರಸ್?

ಇಡೀ ಜಗತ್ತನ್ನೇ ಸರ್ವನಾಶದತ್ತ ಕೊಂಡೊಯ್ದಿದ್ದ ಕೋವಿಡ್ ಕಂಟ್ರೋಲ್‌ಗೆ ಬಂತಪ್ಪಾ ಎನ್ನುತ್ತಿರುವಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಕೋವಿಡ್ ಎನ್ನುವುದು ಬರೀ ಟ್ರೈಲರ್ ಅಷ್ಟೇ, ಅದಕ್ಕಿಂತ ಅಪಾಯಕಾರಿ ವೈರಸ್ ಅನ್ನು ಚೀನಾ-ಪಾಕಿಸ್ತಾನ ಜಂಟಿಯಾಗಿ ತಯಾರಿಸುತ್ತಿದೆ ಅಂತಿದೆ ರಿಪೋರ್ಟ್!

ಮುಂದೆ ಓದಿ ...
  • Share this:

ಚೀನಾ/ಪಾಕಿಸ್ತಾನ: ಕೋವಿಡ್‌ (Covid) ಅಬ್ಬರ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಕೆಲ ಕಾಲ ತಣ್ಣಗಾಗುವ ಕೊರೋನ (Corona) ಮಾರಿ, ಬಳಿಕ ಮತ್ತೆ ವೇಗವಾಗಿ ಹರಡುತ್ತದೆ. ದಿನಕ್ಕೊಂದರಂತೆ ಹೊಸ ಹೊಸ ರೂಪದಲ್ಲಿ ಬರುತ್ತಲೇ ಇದೆ. ಇಡೀ ಜಗತ್ತನ್ನೇ ಸರ್ವನಾಶದತ್ತ ಕೊಂಡೊಯ್ದಿದ್ದ ಕೋವಿಡ್ ಕಂಟ್ರೋಲ್‌ಗೆ (Control) ಬಂತಪ್ಪಾ ಎನ್ನುತ್ತಿರುವಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ (Shocking News) ಬಂದಿದೆ. ಕೋವಿಡ್ ಎನ್ನುವುದು ಬರೀ ಟ್ರೈಲರ್ (trailer) ಅಷ್ಟೇ, ಅದಕ್ಕಿಂತ ಅಪಾಯಕಾರಿ ವೈರಸ್ (dangerous virus) ಮುಂದೆ ಬರುತ್ತದೆ ಅಂತಿದೆ ರಿಪೋರ್ಟ್. ಕೋವಿಡ್ ವೈರಸ್‌ನ ಜನಕ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದ ಚೀನಾ (China) ಈ ಬಾರಿ ಕೋವಿಡ್‌ಗಿಂತಲೂ ಅಪಾಯಕಾರಿಯಾದ ವೈರಸ್ ಒಂದನ್ನು ಹುಟ್ಟುಹಾಕುತ್ತಿದೆಯಂತೆ! ಈ ಬಾರಿ ಡ್ರ್ಯಾಗನ್ ರಾಷ್ಟ್ರಕ್ಕೆ (Dragon Nation) ಪಾಕಿಸ್ತಾನ (Pakistan) ಕೂಡ ಸಾಥ್ ನೀಡುತ್ತಿದೆಯಂತೆ!


ಅಪಾಯಕಾರಿ ವೈರಸ್ ತಯಾರಿಕೆಯಲ್ಲಿ ಚೀನಾ-ಪಾಕಿಸ್ತಾನ


ಮಾರಣಾಂತಿಕ ಕೋವಿಡ್ ವೈರಸ್‌ನ ಹೊಸ ರೂಪಾಂತರಗಳನ್ನು ನಿಭಾಯಿಸಲು ಜಗತ್ತು ಹೆಣಗಾಡುತ್ತಿದೆ. ಈ ಎಲ್ಲಾ ಆತಂಕಗಳ ನಡುವೆ ಚೀನಾ ಮತ್ತು ಪಾಕಿಸ್ತಾನವು ಮತ್ತಷ್ಟು ಅಪಾಯಕಾರಿ ವೈರಸ್ ಅನ್ನು ಕಂಡು ಹಿಡಿಯೋದ್ರಲ್ಲಿ ಬ್ಯುಸಿಯಾಗಿದ್ಯಂತೆ!


ಚೀನಾ ಸೇನೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್-ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಶರೀಫ್


ರಾವಲ್ಪಿಂಡಿಯಲ್ಲಿ ರಹಸ್ಯ ಪ್ರಯೋಗ!


ವರದಿಗಳ ಪ್ರಕಾರ, ಪಾಕಿಸ್ತಾನದ ರಾವಲ್ಪಿಂಡಿಯ ಸಂಶೋಧನಾ ಪ್ರಯೋಗಾಲಯದಲ್ಲಿ ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಕೋವಿಡ್ ವೈರಸ್‌ಗಿಂತ ಮಾರಕ ರೋಗಕಾರಕ ವೈರಸ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಪಾಕಿಸ್ತಾನ ಸೇನೆಯು ನಡೆಸುತ್ತಿರುವ ಕುಖ್ಯಾತ ವುಹಾನ್ ಇನ್‌ಸ್ಟಿಟ್ಯೂಟ್ ಮತ್ತು ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್‌ಟಿಒ) ವಿಶೇಷ ಯೋಜನೆಗಾಗಿ ರಹಸ್ಯ ಪ್ರಯೋಗಾಲಯವನ್ನು ಸ್ಥಾಪಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಜಿಯೋ-ಪೊಲಿಟಿಕ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ.


ಇದನ್ನೂ ಓದಿ: Cancer: 36 ವರ್ಷದಲ್ಲಿ 12 ಬಾರಿ ಕ್ಯಾನ್ಸರ್‌ಗೆ ತುತ್ತಾದ ಮಹಿಳೆ; ಸಂಶೋಧನೆ ನಡೆಸಿದವರಿಗೆ ಕಾದಿತ್ತು ಅಚ್ಚರಿ!


ಚೀನಾದ ನೆರವಿನಿಂದ ಪಾಕಿಸ್ತಾನದಲ್ಲಿ ಪ್ರಯೋಗ


ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಪಾಕಿಸ್ತಾನದ ಸೇನೆ ನಡೆಸುತ್ತಿರುವ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್‌ಟಿಒ), ಪಾಕಿಸ್ತಾನದಲ್ಲಿ ಮಾರಣಾಂತಿಕ ರೋಗಕಾರಕಗಳ ಕುರಿತು ಸಂಶೋಧನೆ ನಡೆಸಲು ಹೆಚ್ಚು ಸುಧಾರಿತ ವೈಜ್ಞಾನಿಕ ಮೂಲಸೌಕರ್ಯವನ್ನು ಸ್ಥಾಪಿಸಿದೆ ಎಂದು ಮೂಲಗಳು ಏಜೆನ್ಸಿಗೆ ತಿಳಿಸಿವೆ.


ಪಾಕಿಸ್ತಾನಕ್ಕೆ ಹೊರಗುತ್ತಿಗೆ ನೀಡಿದ ಚೀನಾ


ಜೊತೆಗೆ ಚೀನಾವು ಪಾಕಿಸ್ತಾನದಲ್ಲಿ ಕೋವಿಡ್‌ನಂತಹ ರೋಗಕಾರಕಗಳನ್ನು ಸೃಷ್ಟಿಸುತ್ತಿದೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ, ಅದು ಕೋವಿಡ್‌ಗಿಂತ ದೊಡ್ಡ ಪ್ರಮಾಣದಲ್ಲಿ ವಿನಾಶವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಆತಂಕಕಾರಿ ವರದಿ ಹೊರಬಿದ್ದಿದೆ. SARS-CoV-2 ಗಿಂತ ಹೆಚ್ಚು ಸಾಂಕ್ರಾಮಿಕ ಪ್ರತಿಜನಕಗಳನ್ನು ರಚಿಸಬಹುದು ಮತ್ತು ಪರೀಕ್ಷಿಸಬಹುದಾದ ಪ್ರಯೋಗಾಲಯಗಳ ಜಾಲವನ್ನು ಚೀನಾ ಪಾಕಿಸ್ತಾನಕ್ಕೆ ಹೊರಗುತ್ತಿಗೆ ನೀಡಿದೆ ಎಂದು ವರದಿ ಮಾಡಿದೆ.


ಹಲವು ವಿನಾಶ ಸೃಷ್ಟಿಸುವ ಸಾಮರ್ಥ್ಯವುಳ್ಳ ವೈರಸ್!


ತಜ್ಞರ ಪ್ರಕಾರ BSL-4 ಲ್ಯಾಬ್‌ಗಳನ್ನು ಸಾಂಕ್ರಾಮಿಕ ಏಜೆಂಟ್‌ಗಳು ಮತ್ತು ಜೀವಾಣು ವಿಷಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ, ಅದು ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲದ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.


ಆರೋಪ ಅಲ್ಲಗಳೆದ ಪಾಕಿಸ್ತಾನ


ಇನ್ನು ಪಾಕಿಸ್ತಾನವು ಮಾರಣಾಂತಿಕ ರೋಗಕಾರಕ ಸಂಶೋಧನೆಯನ್ನು ಸಮರ್ಥಿಸಿದೆ, ಇದು ಹಲವು ಆಧುನಿಕ ಆರೋಗ್ಯ ಸಮಸ್ಯೆಗಳು, ರೋಗ ತನಿಖೆಯ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ರೋಗನಿರ್ಣಯ ಮತ್ತು ರಕ್ಷಣಾತ್ಮಕ ವ್ಯವಸ್ಥೆಯ ಸುಧಾರಣೆಯ ಉದ್ದೇಶಕ್ಕಾಗಿ ನಡೆಸುತ್ತಿರುವ ಪ್ರಯೋಗ ಅಂತ ಪಾಕಿಸ್ತಾನ ಹೇಳಿದೆ.


ಇದನ್ನೂ ಓದಿ: Covid Treatment: ಬರೋಬ್ಬರಿ 411 ದಿನಗಳ ಕಾಲ ಕೋವಿಡ್​ನಿಂದ ಬಳಲಿದ್ದ ವ್ಯಕ್ತಿಯನ್ನು ಗುಣಪಡಿಸಿದ UK ಡಾಕ್ಟರ್ಸ್​​


ಚೀನಾದಲ್ಲಿಇನ್ನೂ ನಿಲ್ಲದ ಕೋವಿಡ್ ಅಬ್ಬರ


ಮತ್ತೊಂದೆಡೆ, ಇತ್ತೀಚೆಗೆ ಕೋವಿಡ್ ಏಕಾಏಕಿ ಏರಿದ ನಂತರ ಚೀನಾದ ಅಧಿಕಾರಿಗಳು ವಿಶ್ವದ ಅತಿದೊಡ್ಡ ಕೈಗಾರಿಕಾ ಪ್ರದೇಶವನ್ನು ಲಾಕ್ ಮಾಡಿದ್ದಾರೆ.

Published by:Annappa Achari
First published: