• Home
  • »
  • News
  • »
  • national-international
  • »
  • Kabul Bomb Attack: ಕಾಬೂಲ್‌ನ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 100 ಮಕ್ಕಳು ಸಾವನ್ನಪ್ಪಿರುವ ಶಂಕೆ!

Kabul Bomb Attack: ಕಾಬೂಲ್‌ನ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 100 ಮಕ್ಕಳು ಸಾವನ್ನಪ್ಪಿರುವ ಶಂಕೆ!

ಬಾಂಬ್ ದಾಳಿ ನಡೆದ ಸ್ಥಳ

ಬಾಂಬ್ ದಾಳಿ ನಡೆದ ಸ್ಥಳ

ಕಾಬೂಲ್‌ನ ಶಾಲೆಯೊಂದರಲ್ಲಿ ಭೀಕರ ಬಾಂಬ್ ಸ್ಫೋಟದಿಂದಾಗಿ 32ಕ್ಕೂ ಹೆಚ್ಚು ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ಹೇಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ!

ಮುಂದೆ ಓದಿ ...
  • Share this:

ಕಾಬೂಲ್, ಅಫ್ಘಾನಿಸ್ತಾನ್: ತಾಲಿಬಾನ್ (Taliban) ಆಡಳಿತವಿರುವ ಅಘ್ಫಾನಿಸ್ತಾನದಲ್ಲಿ (Afghanistan) ಉಗ್ರರ ದಾಳಿ (Terror Attack) ಜೋರಾಗಿದೆ. ಇಂದು ಕಾಬೂಲ್‌ನ (Kabul) ಶಾಲೆಯೊಂದರ (School) ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ (Suicide Bomb Attack) ನಡೆಸಿದ್ದಾರೆ. ಪರಿಣಾಮ ಬರೋಬ್ಬರಿ 100 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯದ (Shia community) ಹೆಚ್ಚಿನ ಜನರು ವಾಸಿಸುತ್ತಿರುವ ಕಾಬೂಲ್‌ನ ದಷ್ಟಿ ಬರ್ಚಿ ಪ್ರದೇಶದಲ್ಲಿ (Dashti Barchi Area) ಈ ಭೀಕರ ಬಾಂಬ್ ಸ್ಪೋಟ ಸಂಭವಿಸಿದೆ. ಭೀಕರ ಬಾಂಬ್ ಸ್ಫೋಟದಿಂದಾಗಿ 32ಕ್ಕೂ ಹೆಚ್ಚು ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ಹೇಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು (School Students) ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಘ್ಫಾನಿಸ್ತಾನ್ ಸರ್ಕಾರದ (Afghan government) ಮೂಲಗಳು ಇದನ್ನು ಖಚಿತ ಪಡಿಸಿಲ್ಲ.


ವಿದ್ಯಾರ್ಥಿಗಳ ಮಧ್ಯೆ ನಿಂತು ಬಾಂಬ್ ಸ್ಫೋಟಿಸಿದ ಉಗ್ರ


ಭಾರತೀಯ ಕಾಲಮಾನ ಬೆಳಗ್ಗೆ 7:30ಕ್ಕೆ ಕಾಜ್ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ. ಹಜಾರಾ ನೆರೆಹೊರೆಯಲ್ಲಿರುವ ಕಾಜ್ ಶೈಕ್ಷಣಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್‌, ವಿದ್ಯಾರ್ಥಿಗಳ ನಡುವೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಇನ್ನು ಬಾಂಬ್ ಸ್ಫೋಟಕ್ಕೂ ಮುನ್ನ ಸೂಸೈಡ್ ಬಾಂಬರ್ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಹೇಳಿಕೊಟ್ಟು, ಬಳಿಕ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ.100 ಮಕ್ಕಳು ಸಾವನ್ನಪ್ಪಿರುವ ಶಂಕೆ


ಅಫ್ಘಾನಿಸ್ತಾನದ ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಅವರು ಈ ಭೀಕರ ಬಾಂಬ್ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ, "ನಾವು ಇದುವರೆಗೆ ನಮ್ಮ ವಿದ್ಯಾರ್ಥಿಗಳ 100 ಮೃತ ದೇಹಗಳನ್ನು ಎಣಿಕೆ ಮಾಡಿದ್ದೇವೆ. ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ತರಗತಿಯಲ್ಲಿ ತುಂಬಿತ್ತು. ಆಗ ಆತ್ಮಹತ್ಯಾ ಬಾಂಬರ್ ಸ್ಫೋಟಿಸಿಕೊಂಡಿದ್ದಾನೆ ಅಂತ ತಿಳಿಸಿದ್ದಾರೆ.


ಇದನ್ನೂ ಓದಿ: PFI Ban: ಪಿಎಫ್‌ಐ ಒಂದೇ ಅಲ್ಲ, ಈ ಹಿಂದೆ ಹಲವು ಸಂಘಟನೆಗಳಿಗೆ ತಟ್ಟಿವೆ ಬ್ಯಾನ್ ಬಿಸಿ! ಕಾರಣ ಮಾತ್ರ ಅದೊಂದೇ!


ಪರೀಕ್ಷೆ ನಡೆಯುತ್ತಿದ್ದಾಗಲೇ ಬಾಂಬ್ ಸ್ಫೋಟ


ಬಾಂಬ್ ದಾಳಿ ನಡೆದಾಗ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಪರೀಕ್ಷೆ ಬರೆಯುತ್ತಾ ಕುಳಿತಿದ್ದರು ಎನ್ನಲಾಗಿದೆ. ಈ ಪ್ರದೇಶದಲ್ಲಿ ಇರುವವರಲ್ಲಿ ಅನೇಕರು ಅಲ್ಪಸಂಖ್ಯಾತ ಹಜಾರಾಗಳಾಗಿದ್ದು, ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳಿಂದ ಆಗಾಗ್ಗೆ ಗುರಿಯಾಗುತ್ತಾರೆ. ಇನ್ನು ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ.


ಬಾಲಕಿಯರನ್ನೇ ಗುರಿಯಾಗಿಸಿ ದಾಳಿ


ಬಹುತೇಕ ಉಗ್ರ ಸಂಘಟನೆಗಳು ಬಾಲಕಿಯರು ವಿದ್ಯಾಭ್ಯಾಸ ಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತದೆ. ತಾಲಿಬಾನ್‌ನಲ್ಲಿ ಬಾಲಕಿಯರ ವಿದ್ಯಾಭ್ಯಾಸಕ್ಕೆ ಸಾಕಷ್ಟು ಷರತ್ತುಗಳಿದ್ದರೂ, ಹುಡುಗಿಯರಿಗೂ ವಿದ್ಯಾಭ್ಯಾಸದ ಅವಕಾಶ ನೀಡಲಾಗಿದೆ. ಆದರೆ ಈ ಉಗ್ರ ಸಂಘಟನೆ ಶಾಲಾ ಬಾಲಕಿಯರನ್ನೇ ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದೆ. ಈ ಶಾಲೆಯಲ್ಲಿದ್ದ ಹೆಚ್ಚಿನವರು ಹುಡುಗಿಯರು ಎಂದು ಪ್ರತ್ಯಕ್ಷದರ್ಶಿಗಳು ಬಿಬಿಸಿಗೆ ತಿಳಿಸಿದ್ದಾರೆ. ದಾಳಿ ನಡೆದಾಗ ಕೋಣೆಯಲ್ಲಿ ಸುಮಾರು 600 ಜನರಿದ್ದರು ಎಂದು ಗಾಯಗೊಂಡ ವಿದ್ಯಾರ್ಥಿಯೊಬ್ಬ ಮಾಧ್ಯಮಗಳಿಗೆ ತಿಳಿಸಿದ್ದಾನೆ.ಅಸ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ


ಹಜಾರಾಗಳು ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ಜನಾಂಗೀಯ ಗುಂಪಾಗಿದ್ದು. ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಜಾರಾಗಳು, ಅವರಲ್ಲಿ ಹೆಚ್ಚಿನವರು ಶಿಯಾ ಮುಸ್ಲಿಮರಾಗಿದ್ದು, ಸುನ್ನಿ ಇಸ್ಲಾಂ ಧರ್ಮಕ್ಕೆ ಬದ್ಧವಾಗಿರುವ ಐಎಸ್ ಮತ್ತು ತಾಲಿಬಾನ್‌ಗಳಿಂದ ದೀರ್ಘಕಾಲದಿಂದ ಕಿರುಕುಳವನ್ನು ಎದುರಿಸುತ್ತಿದ್ದಾರೆ.


ಇದನ್ನೂ ಓದಿ: Explained: PFI Ban​ Banned: IS ಜೊತೆ ಸಂಪರ್ಕ, ತೀವ್ರವಾದ, ಟೆರರ್​ ಫಂಡಿಂಗ್: ಪಿಎಫ್​ಐ ಬ್ಯಾನ್​ಗೆ ಕಾರಣವಾದ ಅಂಶಗಳು!


ಉಗ್ರ ದಾಳಿಗೆ ವಿಶ್ವದಾದ್ಯಂತ ಖಂಡನೆ


ಈ ಭೀಕರ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆ ಮತ್ತು ಅಮೆರಿಕ ಕೂಡ ತೀವ್ರವಾಗಿ ಖಂಡಿಸಿವೆ. "ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಂದ ತುಂಬಿರುವ ಕೋಣೆಯನ್ನು ಗುರಿಯಾಗಿಸುವುದು ನಾಚಿಕೆಗೇಡಿನ ಸಂಗತಿ; ಎಲ್ಲಾ ವಿದ್ಯಾರ್ಥಿಗಳು ಶಾಂತಿಯಿಂದ ಮತ್ತು ಭಯವಿಲ್ಲದೆ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು ಅಂತ ಅಫ್ಘಾನಿಸ್ತಾನ ಸರ್ಕಾರಕ್ಕೆ ಸಲಹೆ ನೀಡಿದೆ.

Published by:Annappa Achari
First published: