Blast in Jammu Airport | ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ಸ್ಟೋಟ; ಪಾಕಿಸ್ತಾನದ ಕೈವಾಡ ಶಂಕೆ?

ಪಾಕಿಸ್ತಾನ ಈ ಹಿಂದೆ 2016ರಲ್ಲಿ ಪಂಜಾಬ್​ನ ಪಠಾಣ್​ಕೋಟ್​ನ ಭಾರತೀಯ ನೆಲೆಯ ಮೇಲೆ ಇದೇ ರೀತಿಯ ದಾಳಿ ಸಂಘಟಿಸಿತ್ತು. ಹೀಗಾಗಿ ಇಂದು ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದಿರುವ ಸ್ಪೋಟದ ಹಿಂದೆಯೂ ಪಾಕಿಸ್ತಾನದ ಕೈವಾಡ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದಿರುವ ಸ್ಪೋಟ.

ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದಿರುವ ಸ್ಪೋಟ.

 • Share this:
  ಜಮ್ಮು-ಕಾಶ್ಮೀರ (ಜೂನ್ 27); ಭಾನುವಾರ ಮುಂಜಾನೆ ಜಮ್ಮು ವಿಮಾನ ನಿಲ್ದಾಣದಲ್ಲಿ ಎರಡು ಸ್ಫೋಟಗಳು ಸಂಭವಿಸಿದೆ. ಈ ಸ್ಪೋಟದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಜಮ್ಮುವಿನ ಗಡಿಯ ಉದ್ದಕ್ಕೂ ಇಂತಹ ಸ್ಪೋಟಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಉನ್ನತ ಗುಪ್ತಚರ ಮೂಲಗಳು ನ್ಯೂಸ್​18ಗೆ ಮಾಹಿತಿ ನೀಡಿದೆ. ಅಲ್ಲದೆ, ಜಮ್ಮು ವಿಮಾನ ನಿಲ್ದಾಣದ  ಸ್ಪೋಟ ನಡೆಸಲು ಡ್ರೋನ್‌ಗಳನ್ನು ಬಳಸಲಾಗಿದೆ. ಪಾಕಿಸ್ತಾನ ಈ ಹಿಂದೆ 2016ರಲ್ಲಿ ಪಂಜಾಬ್​ನ ಪಠಾಣ್​ಕೋಟ್​ನ ಭಾರತೀಯ ನೆಲೆಯ ಮೇಲೆ ಇದೇ ರೀತಿಯ ದಾಳಿ ಸಂಘಟಿಸಿತ್ತು. ಹೀಗಾಗಿ ಇಂದು ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದಿರುವ ಸ್ಪೋಟದ ಹಿಂದೆಯೂ ಪಾಕಿಸ್ತಾನದ ಕೈವಾಡ ಇರುವ ಸಾಧ್ಯತೆ ಇದೆ ಎಂದು ಆರಂಭಿಕ ತನಿಖೆ ಸೂಚಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  2016 ರಲ್ಲಿ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಶಂಕಿಸಲಾಗಿರುವ ನಾಲ್ಕರಿಂದ ಆರು ಭಯೋತ್ಪಾದಕರು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ನಂತರದ ಕಾರ್ಯಾಚರಣೆಯು 36 ಗಂಟೆಗಳಿಗೂ ಹೆಚ್ಚು ಕಾಲ ನಡೆದಿತ್ತು, ಇದರಲ್ಲಿ ಐವರು ದಾಳಿಕೋರರು ಸಾವನ್ನಪ್ಪಿದರು ಮತ್ತು ಮೂವರು ಭದ್ರತಾ ಪಡೆ ಸಿಬ್ಬಂದಿಗಳು ಸಹ ಪ್ರಾಣ ಕಳೆದುಕೊಂಡಿದ್ದರು.

  ಆರಂಭಿಕ ತನಿಖೆ ಐಇಡಿಗಳನ್ನು ಎರಡು ಡ್ರೋನ್‌ಗಳಿಂದ ಕಳುಹಿಸಲಾಗಿದ್ದು, ಅವುಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅವುಗಳಿಗೆ ನಿಖರವಾದ ಸ್ಥಳ ಮತ್ತು ಗುರಿಯನ್ನು ನೀಡಲಾಗಿದೆ. ಯುದ್ಧದ ಸಮಯ ಹೊರತು ಎರಡೂ ದೇಶಗಳು ಸೂಕ್ಷ್ಮ ಸ್ಥಾಪನೆಗಳ ಮೇಲೆ ದಾಳಿ ಮಾಡುವುದಿಲ್ಲವಾದ್ದರಿಂದ ಈ ದಾಳಿಯನ್ನು "ಗಂಭೀರ" ಎಂದು ಮೂಲಗಳು ತಿಳಿಸಿವೆ.

  ಮುಂಜಾನೆ 1.40 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಮೊದಲ ಸ್ಫೋಟವು ಕಟ್ಟಡದ ಮೇಲ್ಚಾವಣಿ ಯನ್ನು ಘಾಸಿಗೊಳಿಸಿದ್ದರೆ, ಎರಡನೆಯ ಸ್ಫೋಟ ನೆಲದ ಮೇಲೆ ಬಿದ್ದು ಸ್ಪೋಟಗೊಂಡಿದೆ. ಈ ಸ್ಫೋಟಗಳು ಎಷ್ಟು ತೀವ್ರವಾಗಿದೆಯೆಂದರೆ ಎರಡು ಕಿಲೋಮೀಟರ್ ದೂರ ಶಬ್ಧ ಕೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ; ಕೊಲೆಗೆ ಕಾರಣವೇನು? ಸತತ ವಿಚಾರಣೆಯಲ್ಲಿ ಪೊಲೀಸರು!

  ಬಾಂಬ್ ಸ್ಪೋಟದಿಂದ ಯಾವುದೇ ಸಾವುನೋವುಗಳು ಸಂಭವಿಸಿರುವ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಸ್ಫೋಟದ ಸ್ವರೂಪವನ್ನು ಕಂಡುಹಿಡಿಯಲು ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡಗಳು ಮತ್ತು ಇತರ ಭದ್ರತಾ ಸಂಸ್ಥೆಗಳು, ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಹೀಗಾಗಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

  ಓರ್ವ ಹಾರ್ಡ್‌ಕೋರ್ ಎಲ್‌ಇಟಿ ಭಯೋತ್ಪಾದಕ ಸೇರಿದಂತೆ ಇಬ್ಬರು ಜನರನ್ನು ಭಾನುವಾರ ಬಂಧಿಸಲಾಗಿದ್ದು, ಅವರಿಂದ 4.7 ಕೆಜಿ ಐಇಡಿ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳಿವೆ. ಆದರೆ, ಈ ಎರಡು ಘಟನೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.

  ಇದನ್ನೂ ಓದಿ: Corona 3rd Wave| ಕೊರೋನಾ ಮೂರನೇ ಅಲೆ ಎರಡನೇಯ ಅಲೆಯಷ್ಟು ತೀವ್ರವಾಗಿರಲಾರದು; ICMR ಅಧ್ಯಯನ ಬಹಿರಂಗ

  ಈ ತಿಂಗಳ ಆರಂಭದಲ್ಲೇ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಶ್ರೀನಗರದ ಚನ್‌ಪೊರಾ ಸರ್ಕಾರಿ ಕ್ವಾರ್ಟರ್ಸ್ ಬಳಿ ಸುಮಾರು 10 ಕೆಜಿ ತೂಕದ ಉಕ್ಕಿನ ಪಾತ್ರೆಯಲ್ಲಿದ್ದ ಸುಧಾರಿತ ಸ್ಪೋಟವನ್ನು ಪತ್ತೆ ಮಾಡಿತ್ತು. ಅಲ್ಲದೆ, ಯಾವುದೇ ಅನಾಹುತ ಸಂಭವಿಸುವ ಮುನ್ನ ಅದನ್ನೂ ನಿಷ್ಕ್ರಿಯಗೊಳಿಸಿತ್ತು. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಮತ್ತೊಂದು ಸ್ಪೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: