ವಿಜಯವಾಡ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತನಿಖೆಯನ್ನು 12 ವರ್ಷಗಳ ನಂತರ ಮತ್ತೆ ಆರಂಭಿಸಿದ ಸಿಬಿಐ; ಇಂದು ನಡೆಯಲಿದೆ ಮರು ಶವಪರೀಕ್ಷೆ

ವಿಚಾರಣೆಯನ್ನು ಚುರುಕುಗೊಳಿಸಿದ್ದ ಅಂದಿನ ಆಂಧ್ರಪ್ರದೇಶ ಪೊಲೀಸರು ಪ್ರಕರಣದ ಸಂಬಂಧ 2008 ಆಗಸ್ಟ್ 17ರಂದು ಪ್ರಮುಖ ಆರೋಪಿ ಸತ್ಯಂ ಬಾಬು ಎಂಬವನನ್ನು ಬಂಧಿಸಿದ್ದರು. ಅಲ್ಲದೆ, ಆರೋಪಿ ಬಾಬು ಇಂತಹದ್ದೇ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋರ್ಟ್​ಗೆ ತಿಳಿಸಿದ್ದರು.

MAshok Kumar | news18-kannada
Updated:December 14, 2019, 11:53 AM IST
ವಿಜಯವಾಡ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತನಿಖೆಯನ್ನು 12 ವರ್ಷಗಳ ನಂತರ ಮತ್ತೆ ಆರಂಭಿಸಿದ ಸಿಬಿಐ; ಇಂದು ನಡೆಯಲಿದೆ ಮರು ಶವಪರೀಕ್ಷೆ
ಪ್ರಾತಿನಿಧಿಕ ಚಿತ್ರ.
  • Share this:
ಹೈದರಾಬಾದ್ (ಡಿಸೆಂಬರ್ 14); ವಿಜಯವಾಡದಲ್ಲಿ 2007ರಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣd ತನಿಖೆಯನ್ನು ಸಿಬಿಐ ಮತ್ತೆ ಆರಂಭಿಸಿದೆ. ಅಲ್ಲದೆ, ಮೃತ ಸಂತ್ರಸ್ತೆಯ ದೇಹವನ್ನು ಮತ್ತೊಮ್ಮೆ ಶನಿವಾರ (ಇಂದು) ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

2007ರಲ್ಲಿ ಇಲ್ಲಿನ ವಿಜಯವಾಡ ಜಿಲ್ಲೆಯ ಕಾಲೇಜು ಹಾಸ್ಟೆಲ್​ನಲ್ಲಿ 19 ವರ್ಷದ ಫಾರ್ಮಸಿ ವಿದ್ಯಾರ್ಥಿನಿಯನ್ನು ಅತ್ಯಂತ ಕ್ರೂರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಆಕೆಯ ಸ್ನಾನದ ಗೃಹದಲ್ಲಿ ಚಾಕುವಿನಿಂದ ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಆಕೆಯ ದೇಹವನ್ನು ಪತ್ತೆ ಮಾಡಲಾಗಿತ್ತು. ಈ ವೇಳೆ , ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬುಕ್ಕೆ ಸ್ಥಳದಲ್ಲಿದ್ದ ಪತ್ರ ಸಾಕ್ಷಿಯಾಗಿತ್ತು.

ಇಡೀ ಆಂಧ್ರಪ್ರದೇಶವನ್ನೇ ತಲ್ಲಣಗೊಳಿಸಿದ್ದ ಈ ಘಟನೆಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಮಹಿಳೆಯರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು ಅಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು.

ಪರಿಣಾಮ ವಿಚಾರಣೆಯನ್ನು ಚುರುಕುಗೊಳಿಸಿದ್ದ ಅಂದಿನ ಆಂಧ್ರಪ್ರದೇಶ ಪೊಲೀಸರು ಪ್ರಕರಣದ ಸಂಬಂಧ 2008 ಆಗಸ್ಟ್ 17ರಂದು ಪ್ರಮುಖ ಆರೋಪಿ ಸತ್ಯಂ ಬಾಬು ಎಂಬವನನ್ನು ಬಂಧಿಸಿದ್ದರು. ಅಲ್ಲದೆ, ಆರೋಪಿ ಬಾಬು ಇಂತಹದ್ದೇ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋರ್ಟ್​ಗೆ ತಿಳಿಸಿದ್ದರು.

ಆದರೆ, ನಿಜವಾದ ಆರೋಪಿಗಳನ್ನು ರಕ್ಷಿಸುವ ಬರದಲ್ಲಿ ಪೊಲೀಸರು ಸತ್ಯಂ ಬಾಬುನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆತನ ಕುಟುಂಬ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು ಪೊಲೀಸರ ವಿರುದ್ಧ ಆರೋಪಿಸಿದ್ದರು. ಅಲ್ಲದೆ, ಸತ್ಯಂ ಬಾಬು ಅವರಿಗೆ ಸರಿಯಾಗಿ ನಡೆಯಲು ಬಾರದು. ಅಲ್ಲದೆ, ಆತ ನರವೈಜ್ಞಾನಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಕೋರ್ಟ್ ಎದುರು ವಾದ ಮಂಡಿಸಿದ್ದರು.

ಇದರ ಬೆನ್ನಲ್ಲೇ ವಿಜಯವಾಡ ಮಹಿಳಾ ವಿಶೇಷ ಸೆಷನ್ಸ್ ನ್ಯಾಯಾಲಯ ಪ್ರಮುಖ ಆರೋಪಿ ಸತ್ಯಂ ಬಾಬು ಅವರಿಗೆ 14 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಆದರೆ ಸತ್ಯಂ ಬಾಬು ಈ ತೀರ್ಪನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. 31 ಮಾರ್ಚ್ 2017 ರಂದು ಮಹತ್ವದ ತೀರ್ಪು ನೀಡಿದ್ದ ಹೈಕೋರ್ಟ್ ಈ ಆರೋಪದಿಂದ ಸತ್ಯಂ ಬಾಬು ಅವರನ್ನು ಖುಲಾಸೆಗೊಳಿಸಿತ್ತು. ಅಲ್ಲದೆ, 8 ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಕ್ಕಾಗಿ 1 ಲಕ್ಷ ರೂ. ಪರಿಹಾರವನ್ನೂ ಘೋಷಣೆ ಮಾಡಿತ್ತು.ಸತ್ಯಂ ಬಾಬು ಬಿಡುಗಡೆಯೊಂದಿಗೆ ಈ ಪ್ರಕರಣ ಮತ್ತೊಂದು ಆಯಾಮ ಪಡೆದುಕೊಂಡಿದೆ. ಈತ ಕೊಲೆ ಆರೋಪಿ ಅಲ್ಲ ಎಂಬುದಾದರೆ ನಿಜವಾದ ಆರೋಪಿ ಯಾರು? ಈ ಕುರಿತು ಮರು ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್ 2018 ನವೆಂಬರ್ 29 ರಂದು ಈ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಸಿಬಿಐ ಗೆ ನಿರ್ದೇಶಿಸಿತ್ತು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಮಾಹಿತಿಯನ್ನು ಸಿಬಿಐ ಅಧಿಕಾರಿಗಳಿಗೆ ಹಸ್ತಾಂತರ ಮಾಡುವಂತೆ ಪೊಲೀಸ್ ಇಲಾಖೆಗೂ ಸೂಚನೆ ನೀಡಿತ್ತು.

ಮೂಲಗಳ ಪ್ರಕಾರ ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ನಿಜವಾದ ಹಂತಕನ ಹುಡುಕಾಟಕ್ಕೆ ಮುಂದಾಗಿದ್ದು ಇಂದು ಮೃತ ದೇಹದ ಮರು ಶವಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ವಿಶ್ವನಾಥ್ ಸಜ್ಜನರ್​; 11 ವರ್ಷದಲ್ಲಿ 3 ಎನ್​ಕೌಂಟರ್​, ಒಂದೇ ರೀತಿಯಲ್ಲಿ ಹತ್ಯೆ ಮತ್ತು ವಿವರಣೆ; ಅನುಮಾನಕ್ಕೆ ಕಾರಣವಾದ ನಡೆ
First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ