ರಾಮ್​ಲೀಲಾ ಮೈದಾನಕ್ಕೆ ವಾಜಪೇಯಿ ಹೆಸರಿಡುವ ಬದಲು ನಿಮ್ಮ ಪ್ರಧಾನಿಯನ್ನೇ ಬದಲಾಯಿಸಿ; ಬಿಜೆಪಿ ಕಾಲೆಳೆದ ಕೇಜ್ರಿವಾಲ್


Updated:August 25, 2018, 6:05 PM IST
ರಾಮ್​ಲೀಲಾ ಮೈದಾನಕ್ಕೆ ವಾಜಪೇಯಿ ಹೆಸರಿಡುವ ಬದಲು ನಿಮ್ಮ ಪ್ರಧಾನಿಯನ್ನೇ ಬದಲಾಯಿಸಿ; ಬಿಜೆಪಿ ಕಾಲೆಳೆದ ಕೇಜ್ರಿವಾಲ್

Updated: August 25, 2018, 6:05 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 25): ರಾಮಲೀಲಾ ಮೈದಾನಕ್ಕೆ ಅಟಲ್​ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವುದರಿಂದ ಹೆಚ್ಚು ಮತಗಳನ್ನು ಗಳಿಸಬಹುದು ಎಂಬ ಲೆಕ್ಕಾಚಾರವಿದ್ದರೆ ಅದನ್ನು ಬಿಟ್ಟುಬಿಡಿ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.

ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರನ್ನು ರಾಮಲೀಲಾ ಮೈದಾನ ಸೇರಿದಂತೆ ಇತರೆ ಸ್ಥಳಗಳಿಗೆ ಮರುನಾಮಕರಣ ಮಾಡುವುದರಿಂದ ಹೆಚ್ಚು ಮತಗಳು ಸಿಗುತ್ತವೆ ಎಂದು ಬಿಜೆಪಿ ಭಾವಿಸಿದಂತಿದೆ. ಅದರ ಬದಲಾಗಿ ಬಿಜೆಪಿ ಈಗಿನ ಪ್ರಧಾನಮಂತ್ರಿಯನ್ನು ಬದಲಾಯಿಸುವ ಮೂಲಕ ಹೆಚ್ಚು ಮತ ಗಳಿಸಲು ಪ್ರಯತ್ನಿಸಬಹುದು. ಯಾಕೆಂದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರೂ ಮತ ಹಾಕುತ್ತಿಲ್ಲ ಎಂದು ಟ್ವೀಟ್​ ಮೂಲಕ ಕಾಲೆಳೆದಿದ್ದಾರೆ.

ಎನ್​ಡಿಎಂಸಿ ರಾಮಲೀಲಾ ಮೈದಾನಕ್ಕೆ ಅಟಲ್​ ಬಿಹಾರಿ ವಾಜಪೇಯಿ ಮೈದಾನ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯಿಟ್ಟಿತ್ತು.ಈ ಬಗ್ಗೆ ಪ್ರಸ್ತಾಪಿಸಿರುವ ಕೇಜ್ರಿವಾಲ್​ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ಟಾಂಗ್​ ನೀಡಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರನ್ನು ರಾಮ್​ಲೀಲಾ ಮೈದಾನಕ್ಕೆ ಇಡುವ ಸಂಗತಿಯನ್ನು ದೆಹಲಿ ಬಿಜೆಪಿ ಮುಖಂಡ ಮನೋಜ್​ ತಿವಾರಿ ತಳ್ಳಿಹಾಕಿದ್ದಾರೆ. ಬಿಜೆಪಿ ಆ ರೀತಿ ಮರುನಾಮಕರಣ ಮಾಡುವ ಯಾವುದೇ ವಿಷಯವನ್ನು ಚರ್ಚಿಸಿಲ್ಲ. ಇಂತಹ ಸುಳ್ಳು ವದಂತಿಗಳನ್ನು ಹರಡಲು ಕೆಲವರು ಕಾಯುತ್ತಿರುತ್ತಾರೆ. ರಾಮಲೀಲಾ ಮೈದಾನದ ಹೆಸರಿನಲ್ಲಿ ಗಾಳಿಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ