ಮುಂಬೈ (ಆ. 9): ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಮರುನಾಮಕರಣ ಮಾಡಬೇಕೆಂಬುದು ಜನರ ಆಸೆಯಾಗಿರಲಿಲ್ಲ. ಅದು ರಾಜಕೀಯ ಆಟವಾಗಿದೆ ಎಂದು ಶಿವಸೇನೆ ಕೇಂದ್ರದ ವಿರುದ್ಧ ಟೀಕಿಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಅಭಿಪ್ರಾಯ ತಿಳಿಸಿದೆ. ಧ್ಯಾನಚಂದ್ ಅವರು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿನ್ನಲೆ ಈ ಹೆಸರನ್ನು ನಾಮಕರಣ ಮಾಡಿರುವುದಾಗಿ ಕೇಂದ್ರ ಹೇಳಿದೆ. ಹಾಗಾದ್ರೆ ಅಹ್ಮದಾಬಾದ್ನಲ್ಲಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರನ್ನು ಇಡಲಾಗಿದೆ. ಹಾಗಾದ್ರೆ ಕ್ರೀಡಾ ಕ್ಷೇತ್ರಕ್ಕೆ ನರೇಂದ್ರ ಮೋದಿ ಕೊಡುಗೆ ಏನು ಎಂದು ಇದೇ ವೇಳೆ ಪ್ರಶ್ನಿಸಿದೆ.
ಭಾರತದ ಅತ್ಯುನ್ನತ್ತ ಕ್ರೀಡಾ ಪುರಸ್ಕಾರವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನ ಕಳೆದೆರಡು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಮರು ನಾಮಕರಣ ಮಾಡಿದ್ದರು. ಇದೇ ವೇಳೇ ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತದ ಮಹಿಳಾ ಮತ್ತು ಪುರಷರ ಹಾಕಿ ತಂಡದ ಪ್ರದರ್ಶನದ ಬಗ್ಗೆ ಕೂಡ ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದರು.
ಇದೇ ಸಂದರ್ಭದಲ್ಲಿ ಅವರು ಭಾರತದ ಅನೇಕ ನಾಗರೀಕರು ಖೇಲ್ ರತ್ನ ಪ್ರಶಸ್ತಿಗೆ ಮರು ನಾಮಕರಣ ಮಾಡುವಂತೆ ಮನವಿ ಮಾಡಿದ್ದರು. ಜನರ ಆಸೆಯಂತೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದ್ದರು.
ಈ ಕುರಿತು ಇಂದು ತಮ್ಮ ಮುಖವಾಣಿಯಲ್ಲಿ ಸುದೀರ್ಘ ಲೇಖನ ಬರೆದಿರುವ ಶಿವಸೇನಾ, ದಿವಂಗತ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಭಯೋತ್ಪಾದಕರ ಕಾರ್ಯಕ್ಕೆ ಬಲಿಯಾದವರು. ಅವರ ರಾಜಕೀಯ ನಡೆ ಕುರಿತು ಭಿನ್ನಾಭಿಪ್ರಾಯಗಳಿರಬಹುದು. ಆದರೆ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ಅಭಿವೃದ್ಧಿಯನ್ನು ಅಲ್ಲಗಳೆಯುವಂತೆ ಎಂದು ತಿಳಿಸಿದೆ.
ರಾಜೀವ್ ಗಾಂಧಿ ಅವರ ಹೆಸರಿಗೆ ಅಪಮಾನ ಮಾಡದಂತೆ ಮೇಜರ್ ಧ್ಯಾನ್ ಚಂದ್ ಅವರ ಹೆಸರಿಗೆ ಗೌರವ ಸಲ್ಲಿಸಬಹುದಿತ್ತು. ಆದರೆ, ದೇಶ ಅಂತಹ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಳೆದುಕೊಂಡಿದೆ. ಸ್ವರ್ಗದಲ್ಲಿರುವ ಧ್ಯಾನ್ ಚಂದ್ ಅವರಿಗೂ ಈ ನಡೆ ಬೇಸರ ತರಿಸಿದೆ.
ಇದನ್ನು ಓದಿ: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಮೋದಿ ಸರ್ಕಾರ ಹೆಸರು ಮರು ನಾಮಕರಣ ಮಾಡಿದ ಮಾತ್ರಕ್ಕೆ ಈ ಹಿಂದಿನ ಸರ್ಕಾರಗಳು ಧ್ಯಾನ್ ಚಂದ್ ಅವರನ್ನು ಮರೆತಿದ್ದವು ಎಂದಲ್ಲ ಎಂದು ಕೂಡ ತೀಕ್ಷ್ಣವಾಗಿ ಟೀಕಿಸಿದೆ.
ದೇಶಕ್ಕಾಗಿ ಮಹಾ ತ್ಯಾಗ ಮಾಡಿದ ರಾಜೀವ್ ಗಾಂಧಿ ಹೆಸರು ಬದಲಾವಣೆ ಮಾಡಿರುವುದು ರಾಜಕೀಯ ದ್ವೇಷದಿಂದ ಎಂದು ಇದೇ ವೇಳೆ ಆರೋಪಿಸಿದೆ.
ರಾಜೀವ್ ಗಾಂಧಿ ಎಂದಾದರೂ ಹಾಕಿ ಸ್ಟೀಕ್ ಹಿಡಿದಿದ್ದರಾ ಎಂದು ಬಿಜೆಪಿ ನಾಯಕರು ಪ್ರಶ್ನಿಸಿಸಿರುವುದು ಒಪ್ಪಿಕೊಳ್ಳುವ ವಿಷಯ. ಇದೇ ವೇಳೆ ಈ ಹಿಂದೆ ಇದ್ದ ಸರ್ದರ್ ಪಟೇಲ್ ಹೆಸರನ್ನು ಬದಲಾಯಿಸಿ ಅಹ್ಮದಾಬಾದ್ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ಮರು ನಾಮಕರಿಸಿದ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇದೇ ಪ್ರಶ್ನೆ ಫೀರಜ್ ಶಾ ಕೋಟ್ಲಾ ಮೈದಾನದ ಹೆಸರನ್ನು ಬದಲಾಯಿಸಿ ಅರುಣ್ ಜೇಟ್ಲಿ ಎಂದು ಮರು ನಾಮಕರಿಸಿದ ಕುರಿತು ಏಳುತ್ತಿದೆ.
ಮೋದಿ ಸರ್ಕಾರ ಟೋಕಿಯೋ ಒಲಂಪಿಕ್ನಲ್ಲಿ ಭಾರತದ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸುತ್ತಿದೆ. ಆದರೆ ಮೋದಿ ಸರ್ಕಾರ ಕ್ರೀಡಾ ಬಜೆಟ್ ಅನ್ನು 300 ಕೋಟಿ ಕಡಿಮೆ ಗೊಳಿಸಿದೆ. ಸಹಾರಾ ಗ್ರೂಪ್ ಪುರುಷರು ಮತ್ತು ಮಹಿಳೆಯರ ಹಾಕಿ ತಂಡಗಳ ಪ್ರಾಯೋಜಕತ್ವವನ್ನು ಹಿಂತೆಗೆದುಕೊಂಡಿತು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪೋಷಕತ್ವವನ್ನು ಸ್ವೀಕರಿಸಿದರು. ಆದ ಕಾರಣ ಒಲಂಪಿಕ್ನಲ್ಲಿ ಹಾಕಿ ತಂಡ ಗೆಲುವಿನಷ್ಟೇ ಒಡಿಶಾ ಸರ್ಕಾರದ ಕೊಡಗೆ ಮುಖ್ಯವಾಗಿದೆ.
ಖಾಶಬ ಜಾಧವ್ ದೇಶಕ್ಕೆ ಮೊದಲ ಬಾರಿ ವೈಯಕ್ತಿಕ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಾಗ, ಅವರ ಹೆಸರಿನಲ್ಲಿ ಯಾಕೆ ಯಾರು ಖೇಲ್ ರತ್ನ ಪ್ರಶಸ್ತಿ ಸ್ಥಾಪಿಸಲು ಯೋಚಿಸಲಿಲ್ಲ ಎಂದು ಇದೇ ವೇಳೆ ಸೇನೆ ಪ್ರಶ್ನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ