• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ರಾಯಭಾರಿ ಸ್ಥಾನದಿಂದ ನಟಿ ಪ್ರಿಯಾಂಕಾ ವಜಾ; ಯುನಿಸೆಫ್​ಗೆ ಪತ್ರ ಬರೆದ ಪಾಕ್​ ಮಾನವ ಹಕ್ಕು ಸಚಿವೆ

ರಾಯಭಾರಿ ಸ್ಥಾನದಿಂದ ನಟಿ ಪ್ರಿಯಾಂಕಾ ವಜಾ; ಯುನಿಸೆಫ್​ಗೆ ಪತ್ರ ಬರೆದ ಪಾಕ್​ ಮಾನವ ಹಕ್ಕು ಸಚಿವೆ

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ಬಾಲಿವುಡ್​ ನಟಿಯಾಗಿರುವ ಪ್ರಿಯಾಂಕಾ ಯುನಿಸೆಫ್ ಸೌಹರ್ದ​​​ ರಾಯಭಾರಿಯಾಗಿದ್ದಾರೆ. ಆದರೆ, ಅಂತರಾಷ್ಟ್ರೀಯ ಕಾಶ್ಮೀರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಯಮ ಉಲ್ಲಂಘಿಸಿದ್ದು, ಇದನ್ನು ಪ್ರಿಯಾಂಕಾ ಕೂಡ ಬೆಂಬಲಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಈ ಸ್ಥಾನದಿಂದ ತೆಗೆದುಹಾಕಬೇಕು ಎಂದು ಎಂದು ಪಾಕಿಸ್ತಾನ ಮಾನವ ಹಕ್ಕು ಆಯೋಗ ಯುನಿಸೆಫ್​ಗೆ ಮನವಿ ಮಾಡಿದೆ

ಮುಂದೆ ಓದಿ ...
  • Share this:
    top videos

      ಬಾಲಿವುಡ್​ ನಟಿ ಪ್ರಿಯಾಂಕಾ ಗಾಂಧಿ ಮೇಲೆ ಪಾಕಿಸ್ತಾನ ಕೆಂಗಣ್ಣು ಬೀರಿದೆ. ಭಾರತೀಯ ನಟಿಯಾಗಿ ಭಾರತ ಸರ್ಕಾರದ ನಿರ್ಧಾರ ಬೆಂಬಲಿಸಿದ ಅವರ ನಿರ್ಧಾರ ತಪ್ಪು ಎಂದು ಬೊಟ್ಟು ಮಾಡಿದ್ದು, ಯುನಿಸೆಫ್​ ರಾಯಭಾರಿಯಾಗಿರುವ ಅವರನ್ನು ಈ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿ ಮಾಡಿದೆ.

      ಬಾಲಿವುಡ್​ ನಟಿಯಾಗಿರುವ ಪ್ರಿಯಾಂಕಾ ಸೌಹರ್ದ ಯುನಿಸೆಫ್​​​ ರಾಯಭಾರಿಯಾಗಿದ್ದಾರೆ. ಆದರೆ, ಅಂತರಾಷ್ಟ್ರೀಯ ಕಾಶ್ಮೀರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಯಮ ಉಲ್ಲಂಘಿಸಿದ್ದು, ಇದನ್ನು ಪ್ರಿಯಾಂಕಾ ಕೂಡ ಬೆಂಬಲಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಈ ಸ್ಥಾನದಿಂದ ತೆಗೆದುಹಾಕಬೇಕು ಎಂದು ಎಂದು ಪಾಕಿಸ್ತಾನ ಮಾನವ ಹಕ್ಕು ಆಯೋಗ ಯುನಿಸೆಫ್​ಗೆ ಮನವಿ ಮಾಡಿದೆ.

      ಈ ಕುರಿತು ಯುನಿಸೆಫ್​ಗೆ ಪತ್ರ ಬರೆದಿರುವ ಪಾಕಿಸ್ತಾನ ಮಾನವ ಹಕ್ಕು ಸಚಿವೆ ಶೆರಿನ್​ ಮಜಾರಿ, ಯುನಿಸೆಫ್​ ರಾಯಭಾರಿಯಾಗಿರುವ ಪ್ರಿಯಾಂಕಾ ದೇಶಭಕ್ತಿ ಮತ್ತು ಕಲಂ 370 ವಿಧಿ ಸ್ವಾಗತಿಸುವ ಮೂಲಕ ವಿಶ್ವಸಂಸ್ಥೆಯ ಸ್ಥಾನಕ್ಕೆ ಅವರು ಹಾನಿ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



      ವಿಶ್ವಸಂಸ್ಥೆ ಶಾಂತಿ ಸೌಹರ್ದ ರಾಯಭಾರಿಯಾಗಿರುವ ಅವರು ಜಾಗತಿಕವಾಗಿ ಅಪಹಾಸ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು, ತಕ್ಷಣಕ್ಕೆ ಅವರನ್ನು ಈ ಸ್ಥಾನದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

      ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆಯನ್ನು ಮೆಚ್ಚಿ ಜೈ ಹಿಂದ್​ ಎಂದು ಟ್ವೀಟ್​ ಮಾಡಿದ್ದ ಅವರು, ಅಣ್ವಸ್ತ್ರ ಯುದ್ಧವನ್ನು ಪರೋಕ್ಷವಾಗಿ ಉತ್ತೇಜಿಸುತ್ತಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.


      ಇತ್ತೀಚೆಗಷ್ಟೇ ಲಾಸ್​ ಎಂಜಲೀಸ್​ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಯುವತಿ ಆಯೇಷಾ ಮಲ್ಲಿಕ್​, ಪ್ರಿಯಾಂಕಾ ಚೋಪ್ರಾ ಒಬ್ಬರು ಕಪಟ ನಟಿಯಾಗಿದ್ದು ಹಾಗೂ ಪಾಕಿಸ್ತಾನದ ವಿರುದ್ಧ ಅಣ್ವಸ್ತ್ರ ಯುದ್ಧಕ್ಕೆ ಪ್ರೇರೆಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

      ಬಾಲಿವುಡ್​ ನಟಿಯಾಗಿರುವ ನಿಮ್ಮನ್ನು ನನ್ನನ್ನು ಸೇರಿದಂತೆ ಲಕ್ಷಾಂತರ ಜನರು ಬೆಂಬಲಿಸುತ್ತಾರೆ. ಆದರೆ, ಯುನಿಸೆಫ್​ನ ಶಾಂತಿ ರಾಯಭಾರಿಯಾಗಿರುವ ನೀವು ಅಣ್ವಸ್ತ್ರ ಯುದ್ಧಕ್ಕೆ ಬೆಂಬಲಿಸುತ್ತಿದ್ದೀರಾ. ಇದರಲ್ಲಿ ಯಾರು ಕೂಡ ಜಯಶಾಲಿಯಾಗುವುದಿಲ್ಲ ಎಂದಿದ್ದರು.

      ಇದನ್ನು ಓದಿ:ಆಂಧ್ರಪ್ರದೇಶ ರಾಜಧಾನಿಯಾಗಲು ಅಮರಾವತಿ ಸುರಕ್ಷಿತ ಸ್ಥಳವಲ್ಲ

      ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ಪಾಕಿಸ್ತಾನದಲ್ಲಿ ಅನೇಕ ಸ್ನೇಹಿತರು ನನಗೆ ಇದ್ದಾರೆ. ಯುದ್ಧದ ಬಗ್ಗೆ ನನಗೆ ಕಾತುರತೆ ಇಲ್ಲ. ಆದರೆ, ನಾನೊಬ್ಬಳು ದೇಶಭಕ್ತೆ. ನನ್ನ ಹೇಳಿಕೆಯಿಂದ ನನ್ನನ್ನು ಪ್ರೀತಿಸುವವರಿಗೆ ನೋವಾಗಿದ್ದರೆ ಕ್ಷಮೆ ಇರಲಿ. ನಾವಿಲ್ಲಿರುವುದು ಇಂದು ಪ್ರೀತಿಯಿಂದಾಗಿ ಅಷ್ಟೇ ಎಂದಿದ್ದರು.

      ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

      First published:

      ಸುದ್ದಿ 18ಕನ್ನಡ ಟ್ರೆಂಡಿಂಗ್

      ಮತ್ತಷ್ಟು ಓದು