‘ಗುಜರಾತ್​ ಹತ್ಯಾಕಾಂಡ, ಗಾಂಧಿ ಹತ್ಯೆ, ಬಾಬ್ರಿ ಮಸೀದಿ ಧ್ವಂಸ’ ಬಿಜೆಪಿ ನೆನೆಯಲಿ: ‘ಕರಾಳ ದಿನಾಚರಣೆ’ಗೆ ಓವೈಸಿ ಟಾಂಗ್​


Updated:June 27, 2018, 7:27 PM IST
‘ಗುಜರಾತ್​ ಹತ್ಯಾಕಾಂಡ, ಗಾಂಧಿ ಹತ್ಯೆ, ಬಾಬ್ರಿ ಮಸೀದಿ ಧ್ವಂಸ’ ಬಿಜೆಪಿ ನೆನೆಯಲಿ: ‘ಕರಾಳ ದಿನಾಚರಣೆ’ಗೆ ಓವೈಸಿ ಟಾಂಗ್​
ಅಸಾದುದ್ದೀನ್ ಒವೈಸಿ

Updated: June 27, 2018, 7:27 PM IST


-ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​.27): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಬಿಜೆಪಿಯಿಂದ 43 ನೇ ವರ್ಷದ ಕರಾಳ ದಿನಾಚರಣೆ ನಡೆಯುತ್ತಿದೆ. ಇದೆ ವೇಳೆ ಬಿಜೆಪಿ ಗುಜರಾತ್​ ಹತ್ಯಾಂಕಾಡ, ಬಾಬ್ರಿ ಮಸೀದಿಯ ದ್ವಂಸ, ಗಾಂಧಿಯನ್ನು ಕೊಂದಿದ್ದರ ವಿರುದ್ದವೂ ಕರಾಳ ದಿನಾಚರಣೆ ಮಾಡಲಿ ಎಂದು ಅಸಾದುದ್ದೀನ್​ ಓವೈಸಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಇಂಧಿರಾ ಗಾಂಧಿ ಅವರು ಅಸಾಂವಿಧಾನಿಕವಾಗಿ ಘೋಷಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ‘ಕರಾಳ ದಿನ’ ಆಚರಿಸುತ್ತಿದೆ. 2002 ರಲ್ಲಿ ನಡೆದ ಗುಜರಾತ್​ ಹತ್ಯಾಕಾಂಡ, ಬಾಬ್ರಿ ಮಸೀದಿಯ ಸ್ವಂಸ ಪ್ರಕರಣ, ಗಾಂಧಿಯನ್ನು ಕೊಂದ ಗೋಡ್ಸೆಯ ನಡೆಯನ್ನು ನೆನೆದು. ಅದರ ವಿರುದ್ಧ ಕರಾಳ ದಿನಾಚರಣೆ ಆಚರಿಸಲಿ. ಈಗಲೂ ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎನ್​ಡಿಎ ಸರ್ಕಾರ ಹೇರಿದೆ ಎಂದು ಆರೋಪಿಸಿದರು.

ಇನ್ನು ಪ್ರಾದೇಶಿಕ ಪಕ್ಷಗಳು 2019 ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಪಾತ್ರ ವಹಿಸಲಿವೆ. ನಮ್ಮ ಸಮುದಾಯದವರು ಮುಸ್ಲಿಂ ನಾಯಕರಿಗೆ ಮತ ಚಲಾಯಿಸಬೇಕು. ನನ್ನ ಪಕ್ಷದಿಂದ ಸ್ಪರ್ಧೆ ಮಾಡಲಿಕ್ಕೆ ಸಮರ್ಥವಾದ ಮುಸ್ಲಿಂ ಮತ್ತು ಮಸ್ಲಿಮೇತರ ಅಭ್ಯರ್ಥಿಗಳು ಬೇಕಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ. ಈ ರೀತಿಯ ಕೃತ್ಯಗಳನ್ನು ಎಸಗುವ ಮೂಲಕ ಮುಸ್ಲಿಮರನ್ನು ಹೆದರಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ಗುಂಪು ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದ ಯುವ ಪೀಳಿಗೆಗೆ ಉದ್ಯೋಗ ಕಲ್ಪಿಸುವಲ್ಲಿ ಸೋತಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗಿದೆ. ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಉತ್ತಮ ಆಡಳಿತದಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಮತ್ತೆ ಗೆಲ್ಲಲು ರಾಮ ಭಜನೆ ಮಾಡುತ್ತಿದ್ದಾರೆಂದು ಕುಟುಕಿದರು.
Loading...


First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...