HOME » NEWS » National-international » RELIEF FOR SACHIN PILOT AS HC SAYS NO ACTION AGAINST REBEL MLAS TILL FRIDAY GNR

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಬಂಡಾಯ ಶಾಸಕರಿಗೆ ಅನರ್ಹತೆ ನೋಟಿಸ್​​, ತೀರ್ಪು ಕಾಯ್ದಿರಿಸಿದ ಹೈಕೋರ್ಟ್​

ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್​​​ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್ ಮತ್ತು 18 ಶಾಸಕರು ಗೈರಾಗಿದ್ದರು. ಹೀಗಾಗಿ ಸಭೆಗೆ ಗೈರಾಗಿದ್ದ 19 ಮಂದಿಗೆ ಕಾಂಗ್ರೆಸ್​ ರೆಬೆಲ್ಸ್​ಗೆ ಸ್ಪೀಕರ್ ಸಿ.ಪಿ ಜೋಷಿ ಅನರ್ಹತೆ ನೀಡಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್​ ಬಂಡಾಯ ಶಾಸಕರು ಹೈಕೋರ್ಟ್​ನಲ್ಲಿ ಮನವಿ ಅರ್ಜಿ ಸಲ್ಲಿಸಿದ್ದರು.

news18-kannada
Updated:July 21, 2020, 6:48 PM IST
ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಬಂಡಾಯ ಶಾಸಕರಿಗೆ ಅನರ್ಹತೆ ನೋಟಿಸ್​​, ತೀರ್ಪು ಕಾಯ್ದಿರಿಸಿದ ಹೈಕೋರ್ಟ್​
ಸಚಿನ್ ಪೈಲಟ್
  • Share this:
ಜೈಪುರ(ಜು.21): ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಸ್ಪೀಕರ್​​ ಸಿ.ಪಿ ಜೋಷಿ ನೀಡಿದ್ದ ಅನರ್ಹತೆ ನೋಟಿಸ್​​​ ಪ್ರಶ್ನಿಸಿ ಮಾಜಿ ಡಿಸಿಎಂ ಸಚಿನ್ ಪೈಲಟ್​​ ಜತೆ 18 ಬಂಡಾಯ ಕಾಂಗ್ರೆಸ್​ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಕಾಂಗ್ರೆಸ್​​ ರೆಬೆಲ್ಸ್​​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​​ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ. ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​, ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸ್ಪೀಕರ್​​​​​ ಸಿ.ಪಿ ಜೋಷಿಯವರಿಗೆ ಸೂಚನೆ ನೀಡಿದೆ.

ಮುಖ್ಯಮಂತ್ರಿ ಅಶೋಕ್​​ ಗೆಹ್ಲೋಟ್​​​ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್ ಮತ್ತು 18 ಶಾಸಕರು ಗೈರಾಗಿದ್ದರು. ಹೀಗಾಗಿ ಸಭೆಗೆ ಗೈರಾಗಿದ್ದ 19 ಮಂದಿಗೆ ಕಾಂಗ್ರೆಸ್​ ರೆಬೆಲ್ಸ್​ಗೆ ಸ್ಪೀಕರ್ ಸಿ.ಪಿ ಜೋಷಿ ಅನರ್ಹತೆ ನೋಟಿಸ್​​ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್​ ಬಂಡಾಯ ಶಾಸಕರು ಹೈಕೋರ್ಟ್​ನಲ್ಲಿ ಮನವಿ ಅರ್ಜಿ ಸಲ್ಲಿಸಿದ್ದರು.

ಇಂದು ಬಂಡಾಯ​ ಶಾಸಕರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಂದ್ರಜೀತ್ ಮಹಂತಿ ನೇತೃತ್ವದ ನ್ಯಾಯಪೀಠ ಮೊದಲಿಗೆ ವಾದ-ಪ್ರತಿವಾದ ಆಲಿಸಿತು. ನಂತರ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿತು. ಮುಂದಿನ ಆದೇಶದ ತನಕ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದಂತೆ ಸ್ಪೀಕರ್​​ಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಇತ್ತೀಚೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸಮತ ಯಾಚನೆಗೆ ಅವಕಾಶ ಕೋರಿದ್ದರು. ಈ ಬೆನ್ನಲ್ಲೇ 18 ಜನ ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕರು ಹಿಂದಿನ ಶುಕ್ರವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದರು. ಬಿಜೆಪಿ ಆಡಳಿತದ ಕರ್ನಾಟಕಕ್ಕೆ ಇವರನ್ನು ರವಾನಿಸಿರಬಹುದು ಎಂಬ ಸಂದೇಹವೂ ಈಗ ಮನೆ ಮಾಡಿದೆ. ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಎರಡನೇ ಸುತ್ತಿನ ಚಟುವಟಿಕೆಗಳು ಆರಂಭವಾಗಿವೆಯೇ? ಎಂಬ ಅನುಮಾನಗಳೂ ಬಲಗೊಳ್ಳುತ್ತಿವೆ.
Youtube Video

ಇದನ್ನೂ ಓದಿ: ‘ಕರ್ನಾಟಕ ಇನ್ನು ಸಂಪೂರ್ಣ ಲಾಕ್​ಡೌನ್​ ಫ್ರೀ ರಾಜ್ಯ: ಇನ್ಮುಂದೆ ಎಲ್ಲೂ, ಎಂದೂ ಲಾಕ್​ಡೌನ್​ ಇಲ್ಲ: ಯಡಿಯೂರಪ್ಪ

ಇದಲ್ಲದೆ, ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಬಿಜೆಪಿ ನಾಯಕ ಗಜೇಂದ್ರ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದ್ದು, ಇಬ್ಬರನ್ನೂ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ಬೆಳವಣಿಗೆಯಿಂದಲೂ ಸಚಿನ್ ಪೈಲಟ್ ಬಣ ಕೆರಳಿದೆ, ಪರಿಣಾಮ 18 ಶಾಸಕರ ಬಹುಮತ ಯಾಚನೆಗೂ ಮುನ್ನ ದಿಢೀರ್ ಕಾಣೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​ ಶಾಸಕಾಂಗ ಸಭೆಗೆ ಗೈರಾದ ಕಾರಣ ಇವರಿಗೆ ಸ್ಪೀಕರ್​​ ಅನರ್ಹತೆಯ ನೋಟಿಸ್​​ ನೀಡಿದ್ಧಾರೆ.
Published by: Ganesh Nachikethu
First published: July 21, 2020, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories