ನಾಲಿಗೆ ಮೇಲೆ ಹಿಡಿತವಿರಲಿ; ಕಾಂಗ್ರೆಸ್​​ ನಾಯಕ ರಾಹುಲ್​ಗೆ ಸುಪ್ರೀಂಕೋರ್ಟ್​ ಎಚ್ಚರಿಕೆ

ರಾಹುಲ್​ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್​​ ರಾಹುಲ್​ ಗಾಂಧಿಯಿಂದ ಸ್ಪಷ್ಟನೆಯನ್ನೂ ಕೇಳಿತ್ತು.

Rajesh Duggumane | news18-kannada
Updated:November 14, 2019, 11:46 AM IST
ನಾಲಿಗೆ ಮೇಲೆ ಹಿಡಿತವಿರಲಿ; ಕಾಂಗ್ರೆಸ್​​ ನಾಯಕ ರಾಹುಲ್​ಗೆ ಸುಪ್ರೀಂಕೋರ್ಟ್​ ಎಚ್ಚರಿಕೆ
ರಾಹುಲ್​ ಗಾಂಧಿ ಕಾರ್ಟೂನ್​
  • Share this:
ನವದೆಹಲಿ (ನ.14): ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಬಿಜೆಪಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಇತ್ಯರ್ಥಗೊಂಡಿದೆ. ರಫೇಲ್​ ಪ್ರಕರಣದ ತೀರ್ಪು ನೀಡಿದ ನಂತರ ನ್ಯಾಯಾಂಗ ನಿಂದನೆ ವಿಚಾರವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​ ರಾಹುಲ್​ ಗಾಂಧಿಗೆ ಎಚ್ಚರಿಕೆ ಮಾತ್ರ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿತು.

ಏಪ್ರಿಲ್ 10ರಂದು ಚುನಾವಣಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ರಫೇಲ್ ಹಗರಣದಲ್ಲಿ ಚೌಕಿದಾರ್(ಮೋದಿ) ಚೋರ್ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವೇ ಒಪ್ಪಿಕೊಂಡಿದೆ ಎಂದು ಹೇಳಿದ್ದರು. ರಫೇಲ್ ಹಗರಣದಲ್ಲಿ ಕೆಲ ದಾಖಲೆಗಳನ್ನು ವಿಚಾರಣೆಯ ವ್ಯಾಪ್ತಿಗೆ ತರಬೇಕೋ ಬೇಡವೋ ಎಂಬ ವಿಚಾರದ ಬಗ್ಗೆ ಮಾತ್ರ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಮೋದಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ ಎಂದು ಶಬ್ದವನ್ನು ರಾಹುಲ್ ಹೇಳಿದ್ದರು.

ರಾಹುಲ್​ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್​​ ರಾಹುಲ್​ ಗಾಂಧಿಯಿಂದ ಸ್ಪಷ್ಟನೆ ಕೇಳಿತ್ತು. "ಭಾಷಣ  ಮಾಡುವ ಭರದಲ್ಲಿ ಹಾಗೆ ಮಾತನಾಡಿದ್ದೆ. ಅದು ಕೇವಲ ಚುನಾವಣಾ ಘೋಷಣೆಯಾಗಿತ್ತಷ್ಟೇ. ಸುಪ್ರೀಂ ಕೋರ್ಟನ್ನು ಈ ವಿಚಾರದಲ್ಲಿ ಬಳಕೆ ಮಾಡಿಕೊಂಡಿದ್ದಕ್ಕೆ ವಿಷಾದವಿದೆ," ಎಂದು ರಾಹುಲ್ ಗಾಂಧಿ ಅವರು ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ್ದರು.

ಇದನ್ನೂ ಓದಿ: ಚೌಕಿದಾರ್​ ಚೋರ್​ ಹೈ; ಸುಪ್ರೀಂಕೋರ್ಟ್​ ಹೆಸರು ಬಳಕೆ: ನ್ಯಾಯಾಲಯದ ಕ್ಷಮೆಯಾಚಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

ಈ ಪ್ರಕರಣವನ್ನು ಇತ್ಯರ್ಥಮಾಡಿದ ನ್ಯಾಯಾಲಯ, "ರಾಹುಲ್​ ಗಾಂಧಿ ಅವರು ಈ ರೀತಿ ಹೇಳಿದ್ದು ನಿಜಕ್ಕೂ ದುರಾದೃಷ್ಟ. ಭವಿಷ್ಯದಲ್ಲಿ ಮಾತನಾಡುವ ಎಚ್ಚರಿಕೆ ಇರಲಿ, " ಎಂದು ಹೇಳಿದೆ.  ಈ ಮೂಲಕ ರಾಹುಲ್ ಗಾಂಧಿಗೆ ರಿಲೀಫ್​ ನೀಡಿದೆ. 

First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading