ಏರ್​ ಇಂಡಿಯಾಗೆ ಬಿಗ್​ ರಿಲೀಫ್​; ಭಾರತೀಯ ವಿಮಾನಗಳಿಗೆ ಹೇರಿದ್ದ ನಿಷೇಧ ತೆರವು ಮಾಡಿದ ಪಾಕ್​

Air India: ಅಮೆರಿಕ ಹಾಗೂ ಯುರೋಪ್​ಗೆ ತೆರಳುವಾಗ ಭಾರತದ ವಿಮಾನಗಳು ಪಾಕಿಸ್ತಾನ ಮಾರ್ಗವನ್ನು ಬಳಸಬೇಕಿತ್ತು. ನಿಷೇಧದ ನಂತರ ಬೇರೆ ಮಾರ್ಗಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿತ್ತು.

Rajesh Duggumane | news18
Updated:July 16, 2019, 8:59 AM IST
ಏರ್​ ಇಂಡಿಯಾಗೆ ಬಿಗ್​ ರಿಲೀಫ್​; ಭಾರತೀಯ ವಿಮಾನಗಳಿಗೆ ಹೇರಿದ್ದ ನಿಷೇಧ ತೆರವು ಮಾಡಿದ ಪಾಕ್​
ಸಾಂದರ್ಭಿಕ ಚಿತ್ರ
  • News18
  • Last Updated: July 16, 2019, 8:59 AM IST
  • Share this:
ನವದೆಹಲಿ (ಜು.16): ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲ್​​ಕೋಟ್ ಮೇಲೆ ಏರ್​ಸ್ಟ್ರೈಕ್​ ನಡೆಸಿದ ನಂತರ ಉಭಯ ದೇಶಗಳ ಸಂಬಂಧ ಹದೆಗೆಟ್ಟಿತ್ತು. ಅಲ್ಲದೆ, ಪಾಕ್​ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸುವುದಕ್ಕೆ ನಿಷೇಧ ಹೇರಲಾಗಿತ್ತು. ಈಗ ಪಾಕ್​ ಈ ನಿಷೇಧವನ್ನು ಹಿಂಪಡೆದಿದೆ.

ಅಮೆರಿಕ ಹಾಗೂ ಯುರೋಪ್​ಗೆ ತೆರಳುವಾಗ ಭಾರತದ ವಿಮಾನಗಳು ಪಾಕಿಸ್ತಾನ ಮಾರ್ಗವನ್ನು ಬಳಸಬೇಕಿತ್ತು. ನಿಷೇಧದ ನಂತರ ಬೇರೆ ಮಾರ್ಗಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿತ್ತು. ಇದರಿಂದ ಏರ್​ ಇಂಡಿಯಾಗೆ 491 ಕೋಟಿ ರೂ. ನಷ್ಟ ಉಂಟಾಗಿತ್ತು.

“ಪಾಕಿಸ್ತಾನ ವಾಯುಪ್ರದೇಶಗಳ ಮೇಲೆ ಭಾರತೀಯ ನಾಗರಿಕ ವಿಮಾನಗಳಿಗೆ ಹೇರಿದ್ದ ನಿಷೇಧವನ್ನು ತೆಗೆಯಲಾಗಿದೆ. ಹಾಗಾಗಿ ಭಾರತೀಯ ವಿಮಾನಗಳು ಶೀಘ್ರವೇ ಸಾಮಾನ್ಯ ಮಾರ್ಗ ಬಳಕೆ ಮಾಡಲಿವೆ,” ಎಂದು ಮೂಲಗಳು ತಿಳಿಸಿವೆ.

ಪಾಕ್​ ಉಗ್ರರು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪುಲ್ವಾದಲ್ಲಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದ ಭಾರತ ಉಗ್ರರು ಅಡಗಿದ್ದ ಬಾಲ್​ಕೋಟ್​ ಮೇಲೆ ಏರ್​ಸ್ಟ್ರೈಕ್​ ನಡೆಸಿತ್ತು. ಈ ಬೆಳವಣಿಗೆಯಿಂದಾಗಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟಿತ್ತು.

First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading