RNESL-Ambri Deal- ಅಮೆರಿಕದ ಆಂಬ್ರಿ ಸಂಸ್ಥೆಯಲ್ಲಿ ರಿಲಾಯನ್ಸ್ನ RNESL ಹೂಡಿಕೆ
ಕಡಿಮೆ ವೆಚ್ಚದಲ್ಲಿ ಬ್ಯಾಟರಿ ತಯಾರಿಸುವ ಆಂಬ್ರಿ (Ambri Inc.) ಎಂಬ ಕಂಪನಿಯ ಮೇಲೆ ಆರ್ಐಎಲ್ (RIL) ಮಾಲಕತ್ವದ ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಸಂಸ್ಥೆ 50 ಮಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡುತ್ತಿದೆ.
ಮುಂಬೈ, ಆ. 10: ಲಿಥಿಯಮ್ ಅಯಾನ್ ಸೆಲ್ಗಳಿಗಿಂತ ಕಡಿಮೆ ವೆಚ್ಚದಲ್ಲಿ ಬ್ಯಾಟರಿ ಉತ್ಪಾದನೆ ಮಾಡಬಲ್ಲ ಅಮೆರಿಕದ ಆಂಬ್ರಿ (Ambri Inc.) ಎಂಬ ಶಕ್ತಿ ಸಂಗ್ರಹ ಕಂಪನಿಯಲ್ಲಿ (Enery storage company) ರಿಲಾಯನ್ಸ್ ಹೂಡಿಕೆ ಮಾಡುತ್ತಿದೆ. ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿ (RNESL) ಸಂಸ್ಥೆ ಆಂಬ್ರಿಯಲ್ಲಿ 50 ಮಿಲಿಯನ್ ಡಾಲರ್ (ಸುಮಾರು 370 ಕೋಟಿ ರೂಪಾಯಿ) ಬಂಡವಾಳ ಹಾಕಿ 4.23 ಕೋಟಿ ಆದ್ಯತಾ ಶೇರುಗಳನ್ನ ಖರೀದಿಸಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಒಡೆತನದ ಆರ್ಎನ್ಎಇಎಸ್ಎಲ್ ಅಷ್ಟೇ ಅಲ್ಲದೆ ಬಿಲ್ ಗೇಟ್ಸ್ ಹಾಗೂ ಇತರ ಕೆಲ ಇನ್ವೆಸ್ಟರ್ಸ್ಗಳಿಂದ ಆಂಬ್ರಿ ಸಂಸ್ಥೆಯಲ್ಲಿ 144 ಮಿಲಿಯನ್ ಡಾಲರ್ (ಸುಮಾರು 1 ಸಾವಿರ ಕೋಟಿ ರೂಪಾಯಿ) ಹಣದ ಹೂಡಿಕೆಯಾಗುತ್ತಿದೆ.
“ಕಂಪನಿಯನ್ನ ವಾಣಿಜ್ಯೀಕರಣಗೊಳಿಸಲು ಹಾಗೂ ದೀರ್ಘಕಾಲಿನ ಶಕ್ತಿ ಸಂಗ್ರಹ ವ್ಯವಸ್ಥೆಯ ವ್ಯವಹಾರವನ್ನು ಜಾಗತಿಕವಾಗಿ ಬೆಳೆಸಲು ಈ ಹೂಡಿಕೆ ಸಹಾಯಕವಾಗಿದೆ” ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಹೇಳಿದೆ.
ಅಮೆರಿಕದ ಮಸಾಚುಸೆಟ್ಸ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಆಂಬ್ರಿ ಕಂಪನಿಯು ಕ್ಯಾಲ್ಷಿಯಮ್ ಮತ್ತು ಆಂಟಿಮೋನಿ ಎಲೆಕ್ಟ್ರೋಡ್ ಆಧಾರಿತ ಬ್ಯಾಟರಿಗಳನ್ನ ತಯಾರಿಸುತ್ತದೆ. ಇದು ಲಿಥಿಯಮ್-ಅಯಾನ್ ಬ್ಯಾಟರಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಾಗಬಹುದು. ಅಷ್ಟೇ ಅಲ್ಲ ಯಾವುದೇ ಹವಾಮಾನದಲ್ಲೂ ಈ ಬ್ಯಾಟರಿಗಳ ಕಾರ್ಯನಿರ್ವಹಣೆ ಸುಲಭವದ್ದಾಗಿರುತ್ತದೆ. ಯಾವುದೇ ಏರ್ ಕಂಡೀಷನಿಂಗ್ ವ್ಯವಸ್ಥೆಯ ಅಗತ್ಯ ಇರುವುದಿಲ್ಲ. 20 ವರ್ಷಗಳವರೆಗೆ ಈ ಬ್ಯಾಟರಿಗಳು ಉತ್ತಮವಾಗಿ ಬಾಳಿಕೆ ಬರುತ್ತವೆ.
ಹೀಗಾಗಿ, ರಿಲಾಯನ್ಸ್ ಸಂಸ್ಥೆಯ ಗ್ರೀನ್ ಎನರ್ಜಿ ಪ್ರಾಜೆಕ್ಟ್ಗಳಿಗೆ ಈ ಬ್ಯಾಟರಿಗಳು ಸಹಾಯಕವಾಗಬಲ್ಲುವು ಎಂದು ನಂಬಲಾಗಿದೆ. ಭಾರತದಲ್ಲಿ ದೊಡ್ಡಮಟ್ಟದಲ್ಲಿ ಬ್ಯಾಟರಿ ತಯಾರಿಕೆ ವ್ಯವಸ್ಥೆ ನಿರ್ಮಿಸಲು ಆಂಬ್ರಿ ಕಂಪನಿ ಜೊತೆ RNESL ಸಂಸ್ಥೆ ಮಾತುಕತೆ ನಡೆಸುತ್ತಿದೆ. ಇದರಿಂದ ರಿಲಾಯನ್ಸ್ ಸಂಸ್ಥೆಯ ಗ್ರೀನ್ ಎನರ್ಜಿ ಸಂಸ್ಥೆಯ ಯೋಜನೆಗಳ ವೆಚ್ಚ ಕಡಿಮೆಯಾಗುವ ನಿರೀಕ್ಷೆ ಇದೆ.
ದೀರುಭಾಯ್ ಅಂಬಾನಿ ಗ್ರೀನ್ ಎನರ್ಜಿ ಗೀಗಾ ಕಾಂಪ್ಲೆಕ್ಸ್ ಯೋಜನೆ ಭಾಗವಾಗಿ ಗುಜರಾತ್ನ ಜಾಮ್ನಗರ್ನಲ್ಲಿ ಗೀಗಾ ಫ್ಯಾಕ್ಟರಿ ನಿರ್ಮನಿಸುವ ಉದ್ದೇಶವನ್ನು ಇದೇ ಜೂನ್ ತಿಂಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ ಘೋಷಿಸಿದ್ದರು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ