HOME » NEWS » National-international » RELIANCE SAYS ITS SUPPLIERS WOULD STRICTLY ABIDE BY MSP OR OTHER OFFICIAL PRICE MECHANISM SNVS

RIL - ಎಂಎಸ್​ಪಿ ಸೇರಿದಂತೆ ಅಧಿಕೃತ ಬೆಲೆ ವ್ಯವಸ್ಥೆಗೆ ನಾವು ಸದಾ ಬದ್ಧ: ರಿಲಾಯನ್ಸ್ ಹೇಳಿಕೆ

ಅನ್ನದಾತರ ಬಗ್ಗೆ ತಮಗೆ ಗೌರವ ಇದೆ. ರೈತರಿಂದ ತಮ್ಮ ಪೂರೈಕೆದಾರರು ಉತ್ಪನ್ನ ಖರೀದಿಸುವಾಗ ಬೆಲೆಯಲ್ಲಿ ಅನ್ಯಾಯವಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದೇವೆ. ರೈತರ ಸಬಲೀಕರಣ ತಮಗೆ ಮುಖ್ಯ ಎಂದು RIL ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

news18
Updated:January 4, 2021, 1:51 PM IST
RIL - ಎಂಎಸ್​ಪಿ ಸೇರಿದಂತೆ ಅಧಿಕೃತ ಬೆಲೆ ವ್ಯವಸ್ಥೆಗೆ ನಾವು ಸದಾ ಬದ್ಧ: ರಿಲಾಯನ್ಸ್ ಹೇಳಿಕೆ
ರಿಲಯನ್ಸ್
  • News18
  • Last Updated: January 4, 2021, 1:51 PM IST
  • Share this:
ಮುಂಬೈ(ಜ. 04): ರೈತರಿಂದ ಉತ್ಪನ್ನಗಳನ್ನ ರಿಲಾಯನ್ಸ್ ನೇರವಾಗಿ ಖರೀದಿಸುವುದಿಲ್ಲ. ತನ್ನ ಪೂರೈಕೆದಾರರ ಮೂಲಕ ಖರೀದಿಸುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ರೈತರ ಬೆಳೆಗೆ ಒಳ್ಳೆಯ ಬೆಲೆ ನಿಗದಿ ಮಾಡಲು ಸರ್ಕಾರ ನಿಗದಿಪಡಿಸಿದ ಎಂಎಸ್​ಪಿ ಅಥವಾ ಮತ್ಯಾವುದೇ ವ್ಯವಸ್ಥೆಗೆ ತಮ್ಮ ಪೂರೈಕೆದಾರರು ಬದ್ಧವಾಗಿರುತ್ತಾರೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ ಇಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ರಿಲಾಯನ್ಸ್ ಸಂಸ್ಥೆಯ ವ್ಯವಹಾರಗಳಿಂದ ಭಾರತೀಯ ಕೃಷಿಕರ ಹಿತಾಸಕ್ತಿಗೆ ಯಾವುದೇ ಧಕ್ಕೆ ತಂದಿಲ್ಲ. ಬದಲಾಗಿ ರೈತರು ಮತ್ತು ಸಾರ್ವಜನಿಕರಿಗೆ ಲಾಭ ತಂದಿದೆ. ರಿಲಾಯನ್ಸ್ ರೀಟೇಲ್ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ ವಿಶ್ವದರ್ಜೆಯ ತಂತ್ರಜ್ಞಾನ ಆಧಾರಿತ ಸರಬರಾಜು ವ್ಯವಸ್ಥೆ ಮೂಲಕ ದೇಶದ ಅತಿದೊಡ್ಡ ರೀಟೇಲ್ ಬ್ಯುಸಿನೆಸ್ ವ್ಯವಸ್ಥೆ ನಿರ್ಮಿಸಿದೆ. ಇದರಿಂದ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಇಬ್ಬರಿಗೂ ಬಹಳಷ್ಟು ಲಾಭ ತಂದಿದೆ ಎಂದು ರಿಲಾಯನ್ಸ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರಿಲಾಯನ್ಸ್​ಗೆ ಮಾಡೋಕೆ ಬೇರೆ ಕೆಲಸಗಳಿವೆ; ಕಾಂಟ್ರಾಕ್ಟ್ ಫಾರ್ಮಿಂಗ್ ವಿಚಾರ ಸುಳ್ಳು: ಪ್ರೊ| ನರಸಿಂಹಪ್ಪ

ಭಾರತೀಯ ಕೃಷಿಕರ ಗ್ರಾಹಕರಾಗಿ ನಾವು ಅವರೊಂದಿಗೆ ಸಮಾನ ಪಾಲುದಾರಿಕೆಯ ಮನಸು ಹೊಂದಿದ್ದೇವೆ. ಸಮೃದ್ಧಿ ಹಂಚಿಕೆ, ಪೂರಕ ಅಭಿವೃದ್ಧಿ ಮೂಲಕ ನಾವು ರೈತರ ಬೆಂಬಲಕ್ಕಿದ್ದೇವೆ. 130 ಕೋಟಿ ಜನರ ಅನ್ನದಾತರಾಗಿರುವ ಭಾರತೀಯ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ವ್ಯವಹಾರ ರಚನೆ ನಮ್ಮದಾಗಿದೆ. ನಮ್ಮ ಪೂರೈಕೆದಾರರು ರೈತರಿಂದ ಯಾವತ್ತೂ ಕಡಿಮೆ ಬೆಲೆಗೆ ಉತ್ಪನ್ನಗಳನ್ನ ಕೊಳ್ಳದಂತೆ ಎಚ್ಚರ ವಹಿಸುತ್ತೇವೆ ಎಂದು ಆರ್​ಐಎಲ್ ಸ್ಪಷ್ಟಪಡಿಸಿದೆ.

ಹಾಗೆಯೇ, ರಿಲಾಯನ್ಸ್ ಸಂಸ್ಥೆ ಗುತ್ತಿಗೆ ಕೃಷಿ ಮತ್ತು ಕಾರ್ಪೊರೇಟ್ ಕೃಷಿ ಕ್ಷೇತ್ರಕ್ಕೆ ಇಳಿಯುವ ಯಾವುದೇ ಯೋಜನೆ ಇಲ್ಲ. ತಾನಾಗಲೀ, ತನ್ನ ಅಧೀನದ ಸಂಸ್ಥೆಗಳಾಗಲೀ ಪಂಜಾಬ್, ಹರಿಯಾಣ ಅಥವಾ ಬೇರೆ ಎಲ್ಲಿಯಾದರೂ ಕಾರ್ಪೊರೇಟ್ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಉದ್ದೇಶದಿಂದ ಯಾವುದೇ ಕೃಷಿ ಭೂಮಿಯನ್ನ ಖರೀದಿಸಿಲ್ಲ. ಮುಂದೆಯೂ ಆ ಯೋಜನೆ ಇಲ್ಲ ಎಂದು ಹೇಳಿದೆ.

ಇದನ್ನೂ ಓದಿ: RIL - ಕೃಷಿ ಗುತ್ತಿಗೆ ಇಲ್ಲ, ಕೃಷಿಭೂಮಿ ಖರೀದಿ ಇಲ್ಲ, ರೈತರಿಂದ ನೇರ ಖರೀದಿಯೂ ಇಲ್ಲ: ರಿಲಾಯನ್ಸ್ ಸ್ಪಷ್ಟನೆ

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಿಲಾಯನ್ಸ್ ಜಿಯೋದ ನೆಟ್​ವರ್ಕ್ ಕೋಟ್ಯಂತರ ಕೃಷಿಕರು ಮತ್ತಿತರರಿಗೆ ಜೀವನಾಡಿಯಂತಾಗಿದೆ. ಡಿಜಿಟಲ್ ರೂಪದಲ್ಲಿ ವ್ಯವಹರಿಸಲು ಅನುವು ಮಾಡಿಕೊಟ್ಟಿದೆ ಎಂದೂ ಸಂಸ್ಥೆ ಹೇಳಿದೆ.
Published by: Vijayasarthy SN
First published: January 4, 2021, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories