• Home
 • »
 • News
 • »
 • national-international
 • »
 • Reliance Retail-Future Group Deal - ಫ್ಯೂಚರ್ ಗ್ರೂಪ್​ನ ವ್ಯವಹಾರಗಳನ್ನ 24,713 ಕೋಟಿಗೆ ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್

Reliance Retail-Future Group Deal - ಫ್ಯೂಚರ್ ಗ್ರೂಪ್​ನ ವ್ಯವಹಾರಗಳನ್ನ 24,713 ಕೋಟಿಗೆ ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್

ರಿಲಾಯನ್ಸ್ ಮಾರ್ಕೆಟ್

ರಿಲಾಯನ್ಸ್ ಮಾರ್ಕೆಟ್

ರಿಲಾಯನ್ಸ್ ರೀಟೇಲ್ ವೆಂಚರ್ಸ್ ಸಂಸ್ಥೆ ಫ್ಯೂಚರ್ ಗ್ರೂಪ್​ನ ರೀಟೇಲ್, ಹೋಲ್​ಸೇಲ್, ಲಾಜಿಸ್ಟಿಕ್ಸ್, ವೇರ್​ಹೌಸಿಂಗ್ ವ್ಯವಹಾರಗಳನ್ನ 24,713 ಕೋಟಿ ರೂಪಾಯಿಗೆ ಖರೀದಿಸುತ್ತಿದೆ.

 • News18
 • Last Updated :
 • Share this:

  ನವದೆಹಲಿ(ಆ. 30): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್​ನ ಹಲವು ವ್ಯವಹಾರಗಳನ್ನ ಖರೀದಿ ಮಾಡುತ್ತಿದೆ. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್​ನ ರೀಟೇಲ್, ವೋಲ್​ಸೇಲ್, ಲಾಜಿಸ್ಟಿಕ್ಸ್, ವೇರ್​ಹೌಸಿಂಗ್ ವ್ಯವಹಾರಗಳನ್ನ ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಇಂದು ಘೋಷಿಸಿದೆ.


  ಫ್ಯೂಚರ್ ಗ್ರೂಪ್​ನ ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಬೆಲೆ ನಿಗದಿ ಮಾಡದೇ ಒಟ್ಟಿಗೆ ಲಂಪ್​ಸಮ್ ಆಗಿ ಎಲ್ಲಾ ವ್ಯವಹಾರಗಳನ್ನ ರಿಲಾಯನ್ಸ್ ಖರೀದಿಸಿ ವಹಿಸಿಕೊಂಡಿದೆ. ಮೇಲೆ ತಿಳಿಸಿದ ವ್ಯವಹಾರಗಳನ್ನ ಹೊಂದಿರುವ ಫ್ಯೂಚರ್ ಗ್ರೂಪ್​ನ ಕಂಪನಿಗಳು ಫ್ಯೂಚರ್ ಎಂಟರ್​ಪ್ರೈಸಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ವಿಲೀನಗೊಳ್ಳಲಿವೆ.


  ಫ್ಯೂಚರ್ ಗ್ರೂಪ್​ನಿಂದ ಖರೀದಿಸಲಾದ ವ್ಯವಹಾರಗಳನ್ನ ರಿಲಾಯನ್ಸ್ ರೀಟೇಲ್ ಆ್ಯಂಡ್ ಫ್ಯಾಷನ್ ಲೈಫ್​ಸ್ಟೈಲ್ ಲಿ (RRFLL) ಕಂಪನಿಗೆ ವರ್ಗಾವಣೆಯಾಗಲಿದೆ. ಇನ್ನು ಲಾಜಿಸ್ಟಿಕ್ಸ್ ಮತ್ತು ವೇರ್​ಹೌಸಿಂಗ್ ವ್ಯವಹಾರಗಳು RRVLಗೆ ವರ್ಗವಾಗಲಿವೆ.


  ಇದನ್ನೂ ಓದಿ: RIL AGM 2020 - ರಿಲಾಯನ್ಸ್ ಎಜಿಎಂ; ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮಹಾಸಭೆ; Chatbot ಪ್ರಯೋಗ


  ಈ ಖರೀದಿ ಬಗ್ಗೆ ಮಾತನಾಡಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಸಂಸ್ಥೆಯ ನಿರ್ದೇಶಕಿ ಇಶಾ ಅಂಬಾನಿ, “ಭಾರತದ ಆಧುನಿಕ ರೀಟೇಲ್ ವ್ಯವಹಾರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಫ್ಯೂಚರ್ ಗ್ರೂಪ್​ನ ವ್ಯಾವಹಾರಿಕ ವ್ಯವಸ್ಥೆಯನ್ನ ಕಾಪಾಡಿಕೊಂಡು ಅದರ ಹೆಸರಾಂತ ಬ್ರ್ಯಾಂಡ್​ಗಳಿಗೆ ವೇದಿಕೆ ಕಲ್ಪಿಸುತ್ತಿದ್ದೇವೆ. ದೊಡ್ಡ ಬ್ರ್ಯಾಂಡ್​ಗಳ ಜೊತೆ ಸಣ್ಣ ವರ್ತಕರು ಮತ್ತು ಅಂಗಡಿಗಳೊಂದಿಗೂ ಕೈಜೋಡಿಸಿ ನಾವು ರೂಪಿಸಿರುವ ಬ್ಯುಸಿನೆಸ್ ಮಾಡೆಲ್​ನಿಂದ ರೀಟೇಲ್ ಉದ್ಯಮದ ಬೆಳವಣಿಗೆ ಮುಂದುವರಿಯುತ್ತದೆ ಎಂಬುದು ನಮ್ಮ ಆಶಯ. ದೇಶಾದ್ಯಂತ ನಮ್ಮ ಗ್ರಾಹಕರಿಗೆ ಲಾಭ ಮಾಡಿಕೊಡಲು ನಾವು ಬದ್ಧರಾಗಿದ್ದೇವೆ” ಎಂದಿದ್ದಾರೆ.


  ಇದನ್ನೂ ಓದಿ: Reliance-USAID Partnership - ಭಾರತದಲ್ಲಿ ಸ್ತ್ರೀಯರಿಗೆ ಸಮಾನ ಡಿಜಿಟಲ್ ಅವಕಾಶ ಕಲ್ಪಿಸಲು ಅಮೆರಿಕದ USAID ಮತ್ತು ರಿಲಾಯನ್ಸ್ ಒಪ್ಪಂದ


  ಇದೇ ವೇಳೆ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಸಂಸ್ಥೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಫ್ಯೂಚರ್ ಗ್ರೂಪ್ ಜೊತೆಗಿನ ಈ ಒಪ್ಪಂದವು ರಿಲಾಯನ್ಸ್ ರೀಟೇಲ್​ನ ವ್ಯವಹಾರಕ್ಕೆ ಇನ್ನಷ್ಟು ಪುಷ್ಟಿ ಕೊಡುತ್ತದೆ ಎಂದು ಆಶಿಸಲಾಗಿದೆ.


  “ಈ ಕಠಿಣ ಸಂದರ್ಭದಲ್ಲಿ ಲಕ್ಷಾಂತರ ಸಣ್ಣ ವರ್ತಕರ ಸ್ಪರ್ಧಾತ್ಮಕತೆ ಹೆಚ್ಚಿಸಲು ಹಾಗೂ ಅವರ ಆದಾಯ ಹೆಚ್ಚಿಸಲು ರಿಲಾಯನ್ಸ್ ರೀಟೇಲ್​ಗೆ ಹೆಚ್ಚ ಬಲ ಸಿಕ್ಕಂತಾಗಿದೆ” ಎಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು