ಮುಂಬೈ (ನ. 15): ಅರ್ಬನ್ ಲ್ಯಾಡರ್ ಹೋಮ್ ಡೆಕೋರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಅರ್ಬನ್ ಲ್ಯಾಡರ್)ನ ಈಕ್ವಿಟಿ ಶೇರ್ನ ಶೇ. 96ರಷ್ಟು ಷೇರನ್ನು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಖರೀದಿ ಮಾಡಿದೆ. ಈ ಮೂಲಕ ಅರ್ಬನ್ ಲ್ಯಾಡರ್ನಲ್ಲಿ ರಿಲಯನ್ಸ್ ರೀಟೇಲ್ಸ್ 182.12 ಕೋಟಿ ರೂ. ಹೂಡಿಕೆ ಮಾಡಿದೆ. ಇದರ ಜೊತೆಗೆ ಉಳಿದ 75 ಕೋಟಿ ರೂ.ಗಳನ್ನು ಕೂಡ ಹೂಡಿಕೆ ಮಾಡುವ ಬಗ್ಗೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಪ್ರಸ್ತಾವನೆ ಇಟ್ಟಿದೆ.
ಉಳಿದ 75 ಕೋಟಿ ರೂ. ಹಣದ ಹೂಡಿಕೆಯ ಕುರಿತು 2023ರ ಡಿಸೆಂಬರ್ ಒಳಗೆ ನಿರ್ಧಾರವಾಗುವ ಸಾಧ್ಯತೆಯಿದೆ. 2012ರ ಫೆಬ್ರವರಿ 17ರಂದು ಅರ್ಬನ್ ಲ್ಯಾಡರ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತು. ಹೋಮ್ ಫರ್ನಿಚರ್ ಮತ್ತು ಅಲಂಕಾರಿಕ ಉತ್ಪನ್ನಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಅರ್ಬನ್ ಲ್ಯಾಡರ್ ಮಾರಾಟ ಮಾಡುತ್ತದೆ. ಭಾರತದ ಬಹುತೇಕ ಎಲ್ಲ ನಗರಗಳಲ್ಲಿ ಅರ್ಬನ್ ಲ್ಯಾಡರ್ ತನ್ನ ರೀಟೇಲ್ ಸ್ಟೋರ್ಗಳನ್ನು ಹೊಂದಿದೆ.
ಇದನ್ನೂ ಓದಿ: ಬೆಂಗಳೂರಿನ ರೆಸಿಡೆನ್ಷಿಯಲ್ ಪ್ರದೇಶದಲ್ಲಿ ಕೆಮಿಕಲ್ ಗೋಡೌನ್ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಿ!
ಆಶಿಶ್ ಗೋಯೆಲ್ ಮತ್ತು ರಾಜೀವ್ ಶ್ರೀವಾಸ್ತವ್ ಅವರ ಕನಸಿನ ಸಂಸ್ಥೆ ಅರ್ಬನ್ ಲ್ಯಾಡರ್. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ಗೂ ಮೊದಲು ಹಲವು ಸಂಸ್ಥೆಗಳಿಂದ ಅರ್ಬನ್ ಲ್ಯಾಡರ್ ಆರ್ಥಿಕ ನೆರವನ್ನು ಪಡೆದುಕೊಂಡಿತ್ತು. ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅರ್ಬನ್ ಲ್ಯಾಡರ್ ಅನ್ನು ಖರೀದಿ ಮಾಡಿದೆ.
ಈ ಹೂಡಿಕೆಗೆ ಯಾವುದೇ ಸರ್ಕಾರದ ಅನುಮತಿ ಬೇಕಾಗಿಲ್ಲ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ