HOME » NEWS » National-international » RELIANCE RETAIL TO SELL GROCERIES THROUGH LOCAL KIRANA STORES SNVS

ಲೋಕಲ್ ಶಾಪ್​​ಗಳ ಜೊತೆ ಜಿಯೋ ಮಾರ್ಟ್ ಒಪ್ಪಂದ; ಹೊಸ ಹಾದಿ ತುಳಿದ ರಿಲಾಯನ್ಸ್

ಜಿಯೋಮಾರ್ಟ್​ನ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಗ್ರಾಹಕರು ಬುಕ್ ಮಾಡಿದ ದಿನಸಿ ವಸ್ತುಗಳನ್ನ ಆ ಗ್ರಾಹಕರ ಪ್ರದೇಶದ ದಿನಸಿ ಅಂಗಡಿಗಳ ಮೂಲಕ ರಿಲಾಯನ್ಸ್ ಸಂಸ್ಥೆ ಪೂರೈಕೆ ಮಾಡಲಿದೆ. ಇದರೊಂದಿಗೆ ನೇರ ಮಾರಾಟ ವ್ಯವಸ್ಥೆಯಿಂದ ರಿಲಾಯನ್ಸ್ ಬಹುತೇಕ ಹೊರಬೀಳುತ್ತಿದೆ.

news18
Updated:January 12, 2021, 11:14 AM IST
ಲೋಕಲ್ ಶಾಪ್​​ಗಳ ಜೊತೆ ಜಿಯೋ ಮಾರ್ಟ್ ಒಪ್ಪಂದ; ಹೊಸ ಹಾದಿ ತುಳಿದ ರಿಲಾಯನ್ಸ್
ರಿಲಾಯನ್ಸ್ ಮಾರ್ಕೆಟ್
  • News18
  • Last Updated: January 12, 2021, 11:14 AM IST
  • Share this:
ಬೆಂಗಳೂರು: ರಿಲಾಯನ್ಸ್ ಇಂಡಸ್ಟ್ರೀಸ್​ನ​ ರಿಲಾಯನ್ಸ್ ರೀಟೇಲ್ ಸಂಸ್ಥೆ ಹೊಸ ವ್ಯವಹಾರ ಮಾದರಿ ಅನುಸರಿಸುವತ್ತ ಹೆಜ್ಜೆ ಹಾಕಿದೆ. ನೇರ ಮಾರಾಟದ ವ್ಯವಹಾರಕ್ಕೆ ತಿಲಾಂಜಲಿ ಹಾಡುತ್ತಿದೆ. ತನ್ನ ಜಿಯೋಮಾರ್ಟ್ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ವಸ್ತುಗಳ ಮಾರಾಟ ಮಾಡಲು ಸ್ಥಳೀಯ ಕಿರಾಣಾ ಅಂಗಡಿ (ದಿನಸಿ ಅಂಗಡಿ)ಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಇದು ದೇಶಾದ್ಯಂತ ರಿಲಾಯನ್ಸ್ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. ಜಿಯೋಮಾರ್ಟ್​ನಲ್ಲಿ ಗ್ರಾಹಕರು ಬುಕ್ ಮಾಡುವ ಉತ್ಪನ್ನಗಳನ್ನ ಆ ಗ್ರಾಹಕರ ಪ್ರದೇಶದಲ್ಲೇ ಇರುವ ದಿನಸಿ ಅಂಗಡಿಗಳೇ ಪೂರೈಕೆ ಮಾಡುತ್ತವೆ. ಒಂದು ವೇಳೆ, ದಿನಸಿ ಅಂಗಡಿಗಳಲ್ಲಿ ಆ ಉತ್ಪನ್ನ ಇಲ್ಲದಿದ್ದರೆ ರಿಲಾಯನ್ಸ್ ರೀಟೇಲ್ ಸಂಸ್ಥೆಯ ಫುಲ್​ಫಿಲ್ಮೆಂಟ್ ಸೆಂಟರ್ (ಉಗ್ರಾಣದಂಥ ಕೇಂದ್ರ)ನಿಂದ ಆ ಉತ್ಪನ್ನವನ್ನು ಅಂಗಡಿಗೆ ತಲುಪಿ ಆ ಮೂಲಕ ಗ್ರಾಹಕರಿಗೆ ಪರೋಕ್ಷವಾಗಿ ಪೂರೈಕೆ ಮಾಡಲಾಗುತ್ತದೆ.

ಜಿಯೋಮಾರ್ಟ್​​ನಲ್ಲಿ ಆರ್ಡರ್ ಆದ ಉತ್ಪನ್ನ ಕಿರಾಣ ಅಂಗಡಿಯಲ್ಲಿ ಇಲ್ಲವಾದರೆ ಆ ಅಂಗಡಿಯವರು ಆನ್​ಲೈನ್​ನಲ್ಲಿ ಆ ಉತ್ಪನ್ನವನ್ನು ಆರ್ಡರ್ ಮಾಡಬಹುದು. ಕೂಡಲೇ ಅದನ್ನು ಉಗ್ರಾಣದಿಂದ ಕಿರಾಣ ಅಂಗಡಿಗೆ ಪೂರೈಕೆ ಮಾಡಲಾಗುತ್ತದೆ. ಆ ಉತ್ಪನ್ನದ ಲಾಭ ಅಂಗಡಿ ಮತ್ತು ರಿಲಾಯನ್ಸ್ ಮಧ್ಯೆ ಸಮಾನ ಹಂಚಿಕೆ ಆಗುತ್ತದೆ.

ಜಿಯೋಮಾರ್ಟ್​ನಲ್ಲಿ ದಿನಕ್ಕೆ 3 ಲಕ್ಷ ದಿನಸಿವಸ್ತುಗಳಿಗೆ ಆರ್ಡರ್​ಗಳು ಬರುತ್ತವೆ. ಇವುಗಳಿಗೆಂದು 51 ರಿಲಾಯನ್ಸ್ ಮಾರ್ಕೆಟ್​ಗಳಿದ್ದವು. ಇವುಗಳ ಪೈಕಿ 26 ರಿಲಾಯನ್ಸ್ ಮಾರ್ಕೆಟ್​ಗಳನ್ನ ರಿಲಾಯನ್ಸ್ ಸ್ಮಾರ್ಟ್ ಸೂಪರ್ ಮಾರ್ಕೆಟ್ ಆಗಿ ಪರಿವರ್ತಿಸಲಾಗಿದೆ. ಉಳಿದವುಗಳನ್ನ ಫುಲ್​ಫಿಲ್​ಮೆಂಟ್ ಸೆಂಟರ್ ಆಗಿ ಕಾರ್ಯನಿರ್ವಹಿಸಲಾಗುತ್ತದೆ. ಈ ಫುಲ್​ಫಿಲ್ಮೆಂಟ್ ಕೇಂದ್ರಗಳು ಜಿಯೋಮಾರ್ಟ್​ನ ಉಗ್ರಾಣದಂತೆ ಕೆಲಸ ಮಾಡುತ್ತವೆ. ಕಿರಾಣ ಅಂಗಡಿಗಳಿಂದ ಬಂದ ಆರ್ಡರ್​ಗಳಿಗೆ ವಸ್ತುಗಳನ್ನ ಪೂರೈಸಲು ಇವೇ ಉಗ್ರಾಣವನ್ನು ಬಳಕೆ ಮಾಡಲಾಗುತ್ತದೆ. ಹಣ್ಣು, ತರಕಾರಿ ಇತ್ಯಾದಿ ಬೇಗ ಕೆಡುವ ವಸ್ತುಗಳನ್ನೂ ಇಲ್ಲಿ ಸಂಗ್ರಹಿಸಲಾಗುತ್ತದೆ. ಇವುಗಳನ್ನ ಕಿರಾಣ ಅಂಗಡಿಗಳಿಗೆ ಸರಬರಾಜು ಮಾಡದೇ ಗ್ರಾಹಕರಿಗೆ ರಿಲಾಯನ್ಸ್ ನೇರ ಮಾರಾಟ ಮಾಡುತ್ತದೆ.

ಜಿಯೋಮಾರ್ಟ್ ಈಗಾಗಲೇ ದೇಶಾದ್ಯಂತ 30 ನಗರಗಳಲ್ಲಿ 56 ಸಾವಿರಕ್ಕೂ ಹೆಚ್ಚು ದಿನಸಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಂದೆರಡು ತಿಂಗಳಲ್ಲಿ 100ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ. ರಿಲಾಯನ್ಸ್​ನ ಉಗ್ರಾಣಗಳಿಂದ ದಿನಸಿ ಅಂಗಡಿಗಳಿಗೆ ವಸ್ತುಗಳ ಸರಬರಾಜು ಮಾಡುವ ವ್ಯವಸ್ಥೆ ಸಂಪೂರ್ಣ ಸಜ್ಜಾಗಿದೆ.

ರಿಲಾಯನ್ಸ್ ಸಂಸ್ಥೆಯ ಈ ವಿಭಿನ್ನ ಹಾದಿಯು ಸ್ಥಳೀಯ ದಿನಸಿ ಅಂಗಡಿ ಮಾಲೀಕರಿಗೆ ಹೊಸ ವ್ಯವಹಾರ ಅವಕಾಶಕ್ಕೆ ಎಡೆ ಮಾಡಿಕೊಡುವ ನಿರೀಕ್ಷೆ ಇದೆ. ರಿಲಾಯನ್ಸ್ ರೀಟೇಲ್ ಜೊತೆ ಒಪ್ಪಂದ ಮಾಡಿಕೊಂಡು ತಮ್ಮ ವ್ಯವಹಾರ ಹೆಚ್ಚಿಸುವ ಅವಕಾಶ ಕಿರಾಣ ಅಂಗಡಿಗಳಿಗೆ ಸಿಕ್ಕಿದೆ.
Published by: Vijayasarthy SN
First published: January 12, 2021, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories