Reliance Retail - Silver Lake Deal: ಮುಂಬೈ (ಸೆಪ್ಟೆಂಬರ್ 9): ಜಿಯೋ ಪ್ಲಾಟ್ಫಾರ್ಮ್ ಮೇಲೆ ಹೂಡಿಕೆ ಮಾಡಿದ್ದ ವಿಶ್ವದ ಅತ್ಯಂತ ದೊಡ್ಡ ಟೆಕ್ ಇನ್ವೆಸ್ಟರ್ ಸಿಲ್ವರ್ ಲೇಕ್ ಈಗ ರಿಲಯನ್ಸ್ ರಿಟೇಲ್ ಕ್ಷೇತ್ರದ ಶೇ. 1.75 ಷೇರನ್ನು 7,500 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಈ ಹೂಡಿಕೆಯಿಂದ ರಿಲಯನ್ಸ್ ರಿಟೇಲ್ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇತ್ತೀಚೆಗಷ್ಟೇ ರಿಲಯನ್ಸ್ ಫ್ಯೂಟರ್ ರಿಟೇಲ್ ಗ್ರೂಪ್ ಅನ್ನು ಭಾರಿ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿತ್ತು. ಸಿಲ್ವರ್ ಲೇಕ್ ರಿಲಯನ್ಸ್ ಮೇಲೆ ಎರಡನೇ ಬಾರಿ ಹೂಡಿಕೆ ಮಾಡುತ್ತಿದೆ. ಈ ಮೊದಲು ಜಿಯೋದ ಶೇ. 2 ಪಾಲನ್ನು ಸುಮಾರು 10,203 ಕೋಟಿ ರೂಪಾಯಿಗೆ ಸಿಲ್ವರ್ ಲೇಕ್ ಖರೀದಿ ಮಾಡಿತ್ತು. ಮೇ ಹಾಗೂ ಜೂನ್ ತಿಂಗಳಲ್ಲಿ ಎರಡು ಹಂತದಲ್ಲಿ ಹೂಡಿಕೆ ಮಾಡಿತ್ತು.
ಅತ್ಯುತ್ತಮ ಯಶಸ್ವಿ ಹೂಡಿಕೆ ಸಂಸ್ಥೆ ಎನ್ನುವ ಖ್ಯಾತಿ ಸಿಲ್ವರ್ ಲೇಕ್ ಪಾರ್ಟ್ನರ್ಗೆ ಇದೆ. ಟ್ವಿಟ್ಟರ್, ಅಲಿಬಾಬಾ, ಡೆಲ್ ಟೆಕ್ನಾಲಕಜಿ, ಎನ್ಟಿ ಫೈನಾನ್ಶಿಯಲ್ ಸೇರಿ ಅನೇಕ ಸಂಸ್ಥೆಗಳ ಮೇಲೆ ಈ ಕಂಪೆನಿ ಹೂಡಿಕೆ ಮಾಡಿದೆ.
ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಸಿಲ್ವರ್ ಲೇಕ್ ಹೂಡಿಕೆಯಿಂದ ನಮ್ಮ ಸಂಸ್ಥೆಗೆ ಮತ್ತಷ್ಟು ಬಲ ಬಂದಿದೆ. ಭವಿಷ್ಯದ ದೃಷ್ಟಿಯಲ್ಲಿ ಈ ಹೂಡಿಕೆ ಬಹಳ ಮಹತ್ವ ಪಡೆದುಕೊಂಡಿದೆ ಎಂದಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್ನ ಹಲವು ವ್ಯವಹಾರಗಳನ್ನ ಖರೀದಿ ಮಾಡಿತ್ತು. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್ನ ರೀಟೇಲ್, ವೋಲ್ಸೇಲ್, ಲಾಜಿಸ್ಟಿಕ್ಸ್, ವೇರ್ಹೌಸಿಂಗ್ ವ್ಯವಹಾರಗಳನ್ನ ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಘೋಷಿಸಿತ್ತು.
ಫ್ಯೂಚರ್ ಗ್ರೂಪ್ನ ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಬೆಲೆ ನಿಗದಿ ಮಾಡದೇ ಒಟ್ಟಿಗೆ ಲಂಪ್ಸಮ್ ಆಗಿ ಎಲ್ಲಾ ವ್ಯವಹಾರಗಳನ್ನ ರಿಲಾಯನ್ಸ್ ಖರೀದಿಸಿ ವಹಿಸಿಕೊಂಡಿದೆ. ಮೇಲೆ ತಿಳಿಸಿದ ವ್ಯವಹಾರಗಳನ್ನ ಹೊಂದಿರುವ ಫ್ಯೂಚರ್ ಗ್ರೂಪ್ನ ಕಂಪನಿಗಳು ಫ್ಯೂಚರ್ ಎಂಟರ್ಪ್ರೈಸಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ವಿಲೀನಗೊಳ್ಳಲಿವೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ