ನವದೆಹಲಿ(ಸೆಪ್ಟೆಂಬರ್ 9): ರಿಲಾಯನ್ಸ್ ಇಂಡಸ್ಟ್ರೀಸ್ನ ಅಂಗವಾದ ರಿಲಾಯನ್ಸ್ ರೀಟೇಲ್ಗೆ 7,500 ಕೋಟಿ ಬಂಡವಾಳ ಹರಿದುಬಂದಿದೆ. ಸಿಲ್ವರ್ ಲೇಕ್ ಪಾರ್ಟ್ನರ್ಸ್ ಸಂಸ್ಥೆ ರಿಲಾಯನ್ಸ್ ರೀಟೇಲ್ನಲ್ಲಿ ಶೇ. 1.75 ಪಾಲು ಖರೀದಿ ಮಾಡಿದೆ. ಇದರೊಂದಿಗೆ 7,500 ಕೋಟಿ ರೂ ಹೂಡಿಕೆ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಫ್ಯೂಚರ್ ರೀಟೇಲ್ ಎಂಬ ಎದುರಾಳಿ ಸಂಸ್ಥೆಯನ್ನು ಖರೀದಿಸಿದ್ದ ರಿಲಾಯನ್ಸ್ ರೀಟೇಲ್ಗೆ ಸಿಲ್ವರ್ ಲೇಕ್ ಒಪ್ಪಂದ ಇನ್ನಷ್ಟು ಪುಷ್ಟಿ ಕೊಟ್ಟಂತಾಗಿದೆ. ಸಿಲ್ವರ್ ಲೇಕ್ ಹೂಡಿಕೆ ಬಗ್ಗೆ ಮಾತನಾಡಿದ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಇದು ಬಹಳ ಮಹತ್ವಪೂರ್ಣ ಹೆಜ್ಜೆ ಎಂದು ಬಣ್ಣಿಸಿದರು.
“ಸಿಲ್ವರ್ ಲೇಕ್ ಜೊತೆಗಿನ ನಮ್ಮ ಸಂಬಂಧ ಇನ್ನಷ್ಟು ಗಾಢಗೊಂಡಿರುವುದು ಖುಷಿ ತಂದಿದೆ. ಭಾರತದ ರೀಟೇಲ್ ಸೆಕ್ಟರ್ನಲ್ಲಿ ಸಣ್ಣ ವರ್ತಕರೊಂದಿಗೆ ಸಹಭಾಗಿಯಾಗಿ ಹೊಸ ಪರಿವರ್ತನೆ ತರುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಈ ಒಪ್ಪಂದ ನೆರವಾಗುತ್ತದೆ” ಎಂದು ಅಂಬಾನಿ ಹೇಳಿದರು.
ಇದನ್ನೂ ಓದಿ: Reliance Retail - Silver Lake Deal: ರಿಲಯನ್ಸ್ ರೀಟೇಲ್ ಮೇಲೆ 7,500 ಕೋಟಿ ರೂ. ಹೂಡಿಕೆ ಮಾಡಿದ ಸಿಲ್ವರ್ ಲೇಕ್
“ಈ ರೀಟೇಲ್ ವಲಯದಲ್ಲಿ ಅತ್ಯವಾಗಿರುವ ಬದಲಾವಣೆ ತರಲು ತಂತ್ರಜ್ಞಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ರೀಟೇಲ್ ವಲಯದ ಬೇರೆ ಬೇರೆ ಭಾಗಗಳು ಒಟ್ಟು ಸೇರಿ ಅಭಿವೃದ್ಧಿಯ ಪಥ ನಿರ್ಮಿಸಲು ಸಾಧ್ಯವಾಗುತ್ತದೆ. ರೀಟೇಲ್ ಕ್ಷೇತ್ರದ ನಮ್ಮ ಗುರಿ ಈಡೇರಿಸಲು ಸಿಲ್ವರ್ ಲೇಕ್ ಬಹಳ ಅಮೂಲ್ಯ ಪಾಲುದಾರ ಸಂಸ್ಥೆಯಾಗಲಿದೆ” ಎಂದು ಆರ್ಐಎಲ್ ಮುಖ್ಯಸ್ಥ ತಿಳಿಸಿದರು.
ಅಮೆರಿಕದ ಸಿಲ್ವರ್ ಲೇಕ್ ಸಂಸ್ಥೆ ವಿಶ್ವದ ಹಲವು ಪ್ರಮುಖ ಟೆಕ್ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದೆ. 43 ಬಿಲಿಯನ್ ಡಾಲರ್ನಷ್ಟು ಬಂಡವಾಳವನ್ನು ವಿವಿಧೆಡೆ ಹಾಕಿದೆ. 2013ರಲ್ಲಿ ಡೆಲ್ ಸಂಸ್ಥೆಯನ್ನು ಖರೀದಿಸಿದಾಗಿನಿಂದ ವಿಶ್ವದ ದಿಗ್ಗಜನಾಗಿ ಸಿಲ್ವರ್ ಲೇಕ್ ಬೆಳೆದು ನಿಂತಿದೆ. ರಿಲಾಯನ್ಸ್ ಸಂಸ್ಥೆ ಜೊತೆ ಕೆಲ ತಿಂಗಳ ಹಿಂದೆಯೂ ಸಿಲ್ವರ್ ಲೇಕ್ ಹೂಡಿಕೆ ಮಾಡಿತ್ತು. ಈಗ ಎರಡನೇ ಬಾರಿ ಇನ್ವೆಸ್ಟ್ಮೆಂಟ್ ಮಾಡಿದಂತಾಗಿದೆ.
ಇದನ್ನೂ ಓದಿ: EPFO: ಇಂದು ನೌಕರರ ಭವಿಷ್ಯ ನಿಧಿ ಮಂಡಳಿಯ ಸಭೆ; ಏನೆಲ್ಲಾ ನಿರೀಕ್ಷೆಗಳಿವೆ?
ಇತ್ತ, ರಿಲಾಯನ್ಸ್ ರೀಟೇಲ್ ಭಾರತದ ಟಾಪ್ ರೀಟೇಲ್ ಸಂಸ್ಥೆಯಾಗಿ ಬೆಳೆದಿದೆ. ಕಳೆದ ತಿಂಗಳು ಫ್ಯೂಚರ್ ಗ್ರೂಪ್ನ ರೀಟೇಲ್ ಅಂಗವನ್ನು 24,713 ಕೋಟಿ ರೂಪಾಯಿಗೆ ರಿಲಾಯನ್ಸ್ ಖರೀದಿಸಿತ್ತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ