259 ವರ್ಷ ಇತಿಹಾಸ ಹೊಂದಿರುವ ಲಂಡನ್​ ಆಟಿಕೆ ಕಂಪನಿ ಹ್ಯಾಮ್ಲೀಸ್​ ಕೊಳ್ಳಲು ಮುಂದಾದ ರಿಲಯನ್ಸ್​ ರಿಟೇಲ್​

ಕಳೆದ 259 ವರ್ಷದಿಂದ ತನ್ನದೇ ಛಾಪು ಮೂಡಿಸಿಕೊಂಡು ಬಂದಿರುವ ಹ್ಯಾಮ್ಲೀಸ್​ ಆಟಿಕೆ ಕಂಪನಿ ಲಂಡನ್​ನಲ್ಲಿ ಮನೆಮಾತದ ಬ್ರಾಂಡ್​ ಆಗಿ ರೂಪುಗೊಂಡಿತು

Seema.R | news18
Updated:April 17, 2019, 3:16 PM IST
259 ವರ್ಷ ಇತಿಹಾಸ ಹೊಂದಿರುವ ಲಂಡನ್​ ಆಟಿಕೆ ಕಂಪನಿ ಹ್ಯಾಮ್ಲೀಸ್​ ಕೊಳ್ಳಲು ಮುಂದಾದ ರಿಲಯನ್ಸ್​ ರಿಟೇಲ್​
ಹ್ಯಾಮ್ಲೀಸ್​ ಕಂಪನಿ
Seema.R | news18
Updated: April 17, 2019, 3:16 PM IST
ಈಸ್ಟ್​ ಇಂಡಿಯಾ ಕಂಪನಿ ಸ್ಥಾಪನೆಯಾದ ಆಸುಪಾಸಿನಲ್ಲಿ ಇಂಗ್ಲೆಂಡ್​ನಲ್ಲಿ ಹುಟ್ಟಿಕೊಂಡ ಆಟಿಕೆ ಕಂಪನಿ ಹ್ಯಾಮ್ಲೀಸ್​. ಆಟಿಕೆ ತಯಾರಿಕೆಯಲ್ಲಿ ತನ್ನದೇ ಅಧಿಪತ್ಯ ಸಾಧಿಸಿದ್ದ ಈ ಕಂಪನಿ ಈಗ ಭಾರತದ ತೆಕ್ಕೆಗೆ ಸೇರಲು ತಯಾರಾಗಿದೆ. ಭಾರತದ ರಿಟೇಲ್​​ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ರಿಲಯನ್ಸ್​ ರಿಟೈಲ್​ ಸಂಸ್ಥೆ ಹ್ಯಾಮ್ಲೀಸ್​ ಆಟಿಕೆ ಕಂಪನಿ ಕೊಳ್ಳಲು ಸಿದ್ಧತೆ ನಡೆಸಿದೆ.

ಕಳೆದ 259 ವರ್ಷದಿಂದ ತನ್ನದೇ ಛಾಪು ಮೂಡಿಸಿಕೊಂಡು ಬಂದಿರುವ ಹ್ಯಾಮ್ಲೀಸ್​ ಆಟಿಕೆ ಕಂಪನಿ ಲಂಡನ್​ನಲ್ಲಿ ಮನೆಮಾತಾದ ಬ್ರಾಂಡ್​ ಆಗಿ ರೂಪುಗೊಂಡಿದೆ. ವಾರ್ಷಿಕ ಶೇ 30ರಷ್ಟು ಲಾಭ ಹೊಂದಿರುವ ಈ ಕಂಪನಿ ಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿ ವಿಸ್ತಾರ ಮಾಡಿಕೊಳ್ಳುವ ರಿಲಯನ್ಸ್​ ಸಂಸ್ಥೆಯ ಕನಸು ನನಸಾಗಲಿದೆ ಎಂದು ಮನಿ ಕಂಟ್ರೋಲ್​ ವರದಿ ಮಾಡಿದೆ.

ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ನ ಸ್ವಾಮ್ಯದ ರಿಲಯನ್ಸ್​ ರಿಟೇಲ್​​ ಭಾರತದ ದೊಡ್ಡ ಚಿಲ್ಲರೆ ವ್ಯಾಪಾರದಲ್ಲಿ ದೈತ್ಯ ಕಂಪನಿಯಾಗಿದೆ. ಕಂಪನಿ ಮಾರಾಟದ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದ್ದು, ರಿಲಯನ್ಸ್​ ರಿಟೇಲ್​​ ಇದನ್ನು ಖರೀದಿಸಲೇಬೇಕೆಂಬ ಉದ್ದೇಶ  ಹೊಂದಿದೆ.

ಇದನ್ನು ಓದಿ: ಹುತಾತ್ಮ ಯೋಧರ ಕುಟುಂಬಗಳ ನೆರವಿಗೆ ನಿಂತ ರಿಲಯನ್ಸ್ ಫೌಂಡೇಶನ್

ಲಂಡನ್​ನಲ್ಲಿ 1760ರಲ್ಲಿ ಆರಂಭಗೊಂಡ ಹ್ಯಾಮ್ಲೀಸ್​ ಕಂಪನಿ ಸೌದಿ ಅರೇಬಿಯಾದ ಶ್ರೀಮಂತ ಕುಟುಂಬದ ನಿಷ್ಠಾವಂತ ಗ್ರಾಹಕರಿಗಾಗಿ ಸ್ಥಾಪಿತಗೊಂಡ ಆಟಿಕೆ ಕಂಪನಿ. ಇತ್ತೀಚಿನ ದಿನಗಳಲ್ಲಿ ಬ್ರಿಕ್ಸಿಟ್​ ಒಪ್ಪಂದ ಹಾಗೂ ಇಂಗ್ಲೆಂಡ್​ ಗ್ರಾಹಕರ ವಿಶ್ವಾಸ ಕಡಿಮೆಯಾದ ಪರಿಣಾಮ ಕಂಪನಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. 2017ರಲ್ಲಿ ಕಂಪನಿ 12 ಮಿಲಿಯನ್​ ಪೌಂಡ್​ ನಷ್ಟವನ್ನು ಅನುಭವಿಸಿತು. ಆದಾಗ್ಯೂ ಕೂಡ ಕಂಪನಿ ವಿಶ್ವದ ಆಟಿಕೆ ಉತ್ಪಾದನೆಯಲ್ಲಿ ಪ್ರಾಬಲ್ಯವನ್ನು ಸಾಧಿಸಿತು.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626