HOME » NEWS » National-international » RELIANCE RETAIL 2ND FASTEST GROWING RETAILER IN WORLD HG

ರಿಲಯನ್ಸ್ ರಿಟೇಲ್ ಈಗ ಜಗತ್ತಿನ ಎರಡನೇ ಅತಿ ವೇಗದ ಬೆಳವಣಿಗೆಯ ರಿಟೇಲರ್

Reliance Retail: ಗ್ಲೋಬಲ್ ಪವರ್ಸ್ ಆಫ್ ರಿಟೇಲಿಂಗ್‌ನಲ್ಲಿ ಈ ಹಿಂದೆ 56ನೇ ಸ್ಥಾನ ಪಡೆದಿದ್ದ ಸಂಸ್ಥೆ, ಈ ಬಾರಿ 53ನೇ ಸ್ಥಾನಕ್ಕೆ ಏರಿದೆ. ಪ್ರಮುಖ 250 ರಿಟೇಲರ್‌ಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಸಂಸ್ಥೆ ರಿಲಯನ್ಸ್ ರಿಟೇಲ್.

news18-kannada
Updated:May 10, 2021, 1:07 PM IST
ರಿಲಯನ್ಸ್ ರಿಟೇಲ್ ಈಗ ಜಗತ್ತಿನ ಎರಡನೇ ಅತಿ ವೇಗದ ಬೆಳವಣಿಗೆಯ ರಿಟೇಲರ್
Reliance Retail
  • Share this:
ನವದೆಹಲಿ, ಮೇ 10: ಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ಲಿಮಿಟೆಡ್ ಡೆಲೊಯ್ಟ್‌ನ ಜಾಗತಿಕ ರಿಟೇಲ್ ಸಂಸ್ಥೆಗಳ 2021ರ ಜಗತ್ತಿನ ಅತಿ ವೇಗದ ಬೆಳವಣಿಗೆಯ ರಿಟೇಲರ್‌ಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕಿಂತ ಅದು ಒಂದು ಸ್ಥಾನ ಇಳಿಕೆಯಾಗಿದೆ.

ಗ್ಲೋಬಲ್ ಪವರ್ಸ್ ಆಫ್ ರಿಟೇಲಿಂಗ್‌ನಲ್ಲಿ ಈ ಹಿಂದೆ 56ನೇ ಸ್ಥಾನ ಪಡೆದಿದ್ದ ಸಂಸ್ಥೆ, ಈ ಬಾರಿ 53ನೇ ಸ್ಥಾನಕ್ಕೆ ಏರಿದೆ. ಪ್ರಮುಖ 250 ರಿಟೇಲರ್‌ಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಸಂಸ್ಥೆ ರಿಲಯನ್ಸ್ ರಿಟೇಲ್. ಗ್ಲೋಬಲ್ ಪವರ್ಸ್ ಆಫ್ ರಿಟೇಲಿಂಗ್ ಮತ್ತು ವರ್ಲ್ಡ್ಸ್ ಫಾಸ್ಟೆಸ್ಟ್ ರಿಟೇಲರ್‌ಗಳ ಪಟ್ಟಿಯಲ್ಲಿ ಸತತ 4ನೇ ಬಾರಿ ರಿಲಯನ್ಸ್ ರಿಟೇಲ್ ಕಾಣಿಸಿಕೊಂಡಿದೆ.

'ಕಳೆದ ವರ್ಷ ಅತಿವೇಗದ ಬೆಳವಣಿಗೆಯ 50 ಕಂಪೆನಿಗಳಲ್ಲಿ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ರಿಟೇಲ್, ಈ ಬಾರಿ ಎರಡನೆಯ ಸ್ಥಾನದಲ್ಲಿದೆ. ಕಂಪೆನಿಯು ವರ್ಷದಿಂದ ವರ್ಷಕ್ಕೆ ಶೇ 41.8ರಷ್ಟು ಬೆಳವಣಿಗೆ ಕಂಡಿದೆ. ಇಲೆಕ್ಟ್ರಾನಿಕ್ಸ್, ಫ್ಯಾಷನ್, ಲೈಫ್‌ಸ್ಟೈಲ್ ಮತ್ತು ದಿನಸಿ ಚಿಲ್ಲರೆ ಸರಪಳಿಯಲ್ಲಿನ ತನ್ನ ಮಳಿಗೆಗಳ ಸಂಖ್ಯೆಯನ್ನು ಶೇ 13.1ರಷ್ಟು ಹೆಚ್ಚಿಸಿಕೊಂಡಿದೆ. 2020-21ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ 7,000ಕ್ಕೂ ಅಧಿಕ ಪಟ್ಟಣ ಹಾಗೂ ನಗರಗಳಲ್ಲಿ 11,784 ಮಳಿಗೆಗಳನ್ನು ಹೊಂದಿದೆ' ಎಂದು ಡೆಲೊಯ್ಟ್ ತಿಳಿಸಿದೆ.
Youtube Video

'ವಾಟ್ಸಾಪ್ ಬಳಸಿಕೊಂಡು ಜಿಯೋ ಮಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿನ ರಿಲಯನ್ಸ್ ರಿಟೇಲ್ ಡಿಜಿಟಲ್ ವಾಣಿಜ್ಯ ವ್ಯವಹಾರಗಳನ್ನು ವೃದ್ಧಿಸಲು ಮತ್ತು ವಾಟ್ಸಾಪ್‌ನಲ್ಲಿ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಕಂಪೆನಿಯು ವಾಟ್ಸಾಪ್ ಜತೆ ಪಾಲುದಾರಿಗೆ ಹೊಂದುತ್ತಿದೆ' ಎಂದು ಅದು ತಿಳಿಸಿದೆ.
Published by: Harshith AS
First published: May 10, 2021, 1:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories