ಪಾಲಿಸ್ಟರ್ ಫೈಬರ್ ಮರುಬಳಕೆ ಸಾಮರ್ಥ್ಯ ದುಪ್ಪಟ್ಟುಗೊಳಿಸಲು ಮುಂದಾದ ರಿಲಯನ್ಸ್: ಆಂಧ್ರದಲ್ಲಿ ಪಿಎಸ್ಎಫ್ ಘಟಕ ಸ್ಥಾಪನೆ

ರಿಲಯನ್ಸ್ ತನ್ನ ಹಬ್ ಎಕ್ಸಲೆನ್ಸ್ ಪಾರ್ಟ್ನರ್ಸ್ (ಎಚ್ಇಪಿ) ಮೂಲಕ ಜಗತ್ತಿನ ಅತಿ ಪರಿಸರಸ್ನೇಹಿ ಫ್ಯಾಬ್ರಿಕ್​ಗಳಲ್ಲಿ ಒಂದಾದ ರೆಕ್ರಾನ್ ಗ್ರೀನ್​ಗೋಲ್ಡ್​ ಫ್ಯಾಬ್ರಿಕ್​ಗಳನ್ನು ಉತ್ಪಾದಿಸುತ್ತಿದೆ.

ರಿಲಯನ್ಸ್​ ಇಂಡಸ್ಟ್ರೀಸ್

ರಿಲಯನ್ಸ್​ ಇಂಡಸ್ಟ್ರೀಸ್

 • Share this:
  ಮುಂಬಯಿ, ಆಗಸ್ಟ್ 4, 2021: ಭಾರತದ ಅತಿ ದೊಡ್ಡ ಖಾಸಗಿ ವಲಯದ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್​), ಆಂಧ್ರಪ್ರದೇಶದಲ್ಲಿ ಮರುಬಳಕೆಯ ಪಾಲಿಸ್ಟರ್ ಸ್ಟೇಪಲ್ ಫೈಬರ್ (ಪಿಎಸ್ಎಫ್) ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ತನ್ನ ಪಿಇಟಿ ಮರುಬಳಕೆ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿದೆ.

  ಉದ್ಯಮವನ್ನು ವರ್ತುಲ ಆರ್ಥಿಕತೆಯಲ್ಲಿ ನಡೆಸುವ, ಅದರ ಸುಸ್ಥಿರತೆಯ ಪಾಲನ್ನು ವೃದ್ಧಿಸುವ ಮತ್ತು ಪಾಲಿಸ್ಟರ್ ಮತ್ತು ಪಾಲಿಮರ್ ಮೌಲ್ಯ ಸರಪಣಿಯನ್ನು ಸಂಪೂರ್ಣವಾಗಿ ಬೆಂಬಲಿಸುವ ತನ್ನ ಬದ್ಧತೆಯ ಭಾಗವಾಗಿ ರಿಲಯನ್ಸ್ ಈ ಹೆಜ್ಜೆ ಇರಿಸಿದೆ.

  ಈ ಪ್ರಯತ್ನದ ಭಾಗವಾಗಿ ರಿಲಯನ್ಸ್ ಇಂಡಸ್ಟ್ರೀಸ್​ಗಾಗಿಯೇ ನೂತನ ಮರುಬಳಕೆಯ ಪಿಎಸ್ಎಫ್- ರೆಕ್ರಾನ್ ಗ್ರೀನ್​ ಗೋಲ್ಡ್​ ಮತ್ತು ಪಿಇಟಿ ಕಣಗಳ ಸ್ವಚ್ಚತಾ ಘಟಕವನ್ನು ಶ್ರೀಚಕ್ರ ಇಕೋಟೆಕ್ಸ್ ಇಂಡಿಯಾ ಪ್ರೈ.ಲಿ. ಆಂಧ್ರಪ್ರದೇಶದಲ್ಲಿ ನಿರ್ಮಾಣ ಮಾಡಲಿದೆ.
  ಗ್ರಾಹಕರು ಬಳಸಿದ ಪಿಇಟಿ ಬಾಟಲಿಗಳನ್ನು ಮರುಬಳಕೆ ಮಾಡುವ ತನ್ನ ಸಾಮರ್ಥ್ಯವನ್ನು 5 ಬಿಲಿಯನ್​ಗೆ ದುಪ್ಪಟ್ಟುಗೊಳಿಸಲು ರಿಲಯನ್ಸ್ ಉದ್ದೇಶಿಸಿದ್ದು, ಈ ಮೂಲಕ ಭಾರತದ ಮರುಬಳಕೆ ದರವನ್ನು ಶೇ 90ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವ ಖಾತರಿ ನೀಡಿದೆ.

  ಜಗತ್ತಿನಲ್ಲಿಯೇ ಅತ್ಯಧಿಕವಾಗಿರುವ, ಭಾರತದಲ್ಲಿನ ಗ್ರಾಹಕ ಬಳಕೆ ನಂತರದ ಪಿಇಟಿ ಮರುಬಳಕೆ ಪ್ರಮಾಣವನ್ನು ಸುಸ್ಥಿರಗೊಳಿಸಲು ರಿಲಯನ್ಸ್ ಗಮನ ಹರಿಸಿದೆ.
  ಈ ಬೆಳವಣಿಗೆ ಕುರಿತು ಮಾತನಾಡಿದ ಆಐಎಲ್​ನ ಪೆಟ್ರೋಕೆಮಿಕಲ್ಸ್ ಬಿಜಿನೆಸ್ ಸಿಒಒ ಶ್ರೀ ವಿಪುಲ್ ಶಾ, "ಪಿಇಟಿ ಮರುಬಳಕೆ ಸಾಮರ್ಥ್ಯವನ್ನು ವಿಸ್ತರಿಸುವುದು, ನಮ್ಮ ಪಾರಂಪರಿಕ ಉದ್ಯಮವನ್ನು ಸುಸ್ಥಿರ, ವರ್ತುಲ ಮತ್ತು ನಿವ್ವಳ ಶೂನ್ಯ ಇಂಗಾಲ ವಸ್ತುಗಳ ವ್ಯವಹಾರವಾಗಿ ಪರಿವರ್ತಿಸುವ ಹಾಗೂ ಮೌಲ್ಯಾಧಾರಿತ ಸರಪಣಿ ವ್ಯವಸ್ಥೆಯಲ್ಲಿ ಉದ್ಯಮಿಗಳಿಗೆ ಸವಾಲುಗಳನ್ನು ಎದುರಿಸಲು ನೆರವಾಗುವುದು  ಮುಕೇಶ್ ಅಂಬಾನಿ ಅವರ ದೂರದೃಷ್ಟಿಯ ಭಾಗವಾಗಿದೆ. ಸಂಪೂರ್ಣ ಮೌಲ್ಯಧಾರಿತ ಸರಪಣಿಯನ್ನು ಅಭಿವೃದ್ಧಿಪಡಿಸುವ ಹಾಗೂ ಅತಿ ಕಡಿಮೆ ಸಂಭಾವ್ಯ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉದ್ಯಮಿಗಳು ಉತ್ಪಾದಿಸುವಂತೆ ಪರಿಣತರು ಮತ್ತು ತಾಂತ್ರಿಕ ಜ್ಞಾನವನ್ನು ಹಂಚಿಕೊಳ್ಳಲು ಆರ್ಐಎಲ್ ಬದ್ಧವಾಗಿದೆ" ಎಂದು ತಿಳಿಸಿದ್ದಾರೆ.

  "ರಿಲಯನ್ಸ್ ಜತೆಗಿನ ಒಪ್ಪಂದವು, ಶ್ರೀಚಕ್ರ ಕಂಪೆನಿಗೆ ಪಾಲಿಸ್ಟರ್ ಸ್ಟೇಪಲ್ ಫೈಬರ್ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲು ಅದ್ಭುತ ಅವಕಾಶವನ್ನು ಒದಗಿಸಿದೆ. ಈ ಸಹಭಾಗಿತ್ವವು ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸಲು ಶ್ರೀಚಕ್ರದ ಬದ್ಧತೆಗೆ ಉತ್ತೇಜನ ನೀಡುತ್ತದೆ ಮತ್ತು ಭಾರತದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯದ ವರ್ತುಲ ಆರ್ಥಿಕತೆಯನ್ನು ಮುಂದೆ ಕೊಂಡೊಯ್ಯಲು ಎರಡೂ ಸಂಸ್ಥೆಗಳಿಗೆ ನೆರವಾಗಲಿದೆ" ಎಂದು ಶ್ರೀಚಕ್ರ ಇಕೋಟೆಕ್ಸ್ ಪ್ರೈ.ಲಿ.ಯ ನಿರ್ದೇಶಕ ಶ್ರೀ ಶ್ರೀನಿವಾಸ್ ಮಿಕ್ಕಿಲಿನೇನಿ ಹೇಳಿದ್ದಾರೆ.

  ರಿಲಯನ್ಸ್ ಪ್ರಸ್ತುತ ಬಾರಾಬಂಕಿ, ಹೋಷಿಯಾರ್ಪುರ ಮತ್ತು ನಾಗೊಥಾಣೆ ಘಟಕಗಳಲ್ಲಿ ಪಿಇಟಿ ಬಾಟಲಿಗಳ ಮರುಬಳಕೆ ಪ್ಲಾಂಟ್​ಅನ್ನು ಸಿದ್ಧಗೊಳಿಸುತ್ತಿದೆ. ಗ್ರಾಹಕರು ಬಳಸಿ ಬಿಸಾಡುವ ಪಿಇಟಿ ಬಾಟಲಿಗಳನ್ನು ಮರು-ಬಳಕೆಯ ಪಾಲಿಸ್ಟರ್ ಫೈಬರ್​ಗಳ ಉತ್ಪಾದನೆಗೆ ಕಚ್ಚಾ ವಸ್ತುಗಳನ್ನಾಗಿ ಬಳಸಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ಉತ್ಪಾದಿಸಲಾಗುತ್ತಿರುವ ಫೈಬರ್​ಗಳನ್ನು ರೆಕ್ರಾನ್ ಗ್ರೀನ್​ ಗೋಲ್ಡ್​ ಎಂದು ಬ್ರ್ಯಾಂಡ್ ಮಾಡಲಾಗಿದೆ.

  ರಿಲಯನ್ಸ್ ತನ್ನ ಹಬ್ ಎಕ್ಸಲೆನ್ಸ್ ಪಾರ್ಟ್ನರ್ಸ್ (ಎಚ್ಇಪಿ) ಮೂಲಕ ಜಗತ್ತಿನ ಅತಿ ಪರಿಸರಸ್ನೇಹಿ ಫ್ಯಾಬ್ರಿಕ್​ಗಳಲ್ಲಿ ಒಂದಾದ ರೆಕ್ರಾನ್ ಗ್ರೀನ್​ಗೋಲ್ಡ್​ ಫ್ಯಾಬ್ರಿಕ್​ಗಳನ್ನು ಉತ್ಪಾದಿಸುತ್ತಿದೆ.

  ಇದನ್ನೂ ಓದಿ: ನೂತನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಯಶಸ್ವಿಯಾದರೆ? ಹೈಕಮಾಂಡ್ ಒಳಮರ್ಮವೇನು?

  ಪ್ರಸ್ತುತ, ರಿಲಯನ್ಸ್ ವರ್ಷಕ್ಕೆ ಗ್ರಾಹಕರು ಬಳಸಿದ 2 ಬಿಲಿಯನ್ ಪಿಇಟಿ ಬಾಟಲಿಗಳನ್ನು ಫೈಬರ್ ಆಗಿ ಪರಿವರ್ತಿಸುತ್ತಿದೆ. ಶ್ರೀಚಕ್ರ ಸೌಲಭ್ಯದ ಸೇರ್ಪಡೆಯೊಂದಿಗೆ ಇದು ಸುಮಾರು 5 ಬಿಲಿಯನ್ ಹಳೆಯ ಪಿಇಟಿ ಬಾಟಲಿಗಳನ್ನು ಮೌಲ್ಯಾಧಾರಿತ ಫೈಬರ್​ಗಳನ್ನಾಗಿ ಪರಿವರ್ತಿಸಲಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: