HOME » NEWS » National-international » RELIANCE PETITION AGAINST MOBILE TOWER DAMAGE HC ISSUES NOTICE TO PUNJAB AND CENTRAL GOVTS SNVS

ಮೊಬೈಲ್ ಟವರ್ ವಿಧ್ವಂಸ ಘಟನೆ: ರಿಲಾಯನ್ಸ್ ಅರ್ಜಿ ಮೇರೆಗೆ ಪಂಜಾಬ್ ಸರ್ಕಾರಕ್ಕೆ ಕೋರ್ಟ್ ನೋಟೀಸ್

ರೈತರ ಪ್ರತಿಭಟನೆ ವೇಳೆ ಕೆಲ ದುಷ್ಕರ್ಮಿಗಳು ಪಂಜಾಬ್​ನಲ್ಲಿ 1,500 ರಿಲಾಯನ್ಸ್ ಮೊಬೈಲ್ ಟವರ್​ಗೆ ಹಾನಿ ಮಾಡಿದ್ದರು. ಹಾಗೂ ರಿಲಾಯನ್ಸ್ ಮಳಿಗೆಗಳ ಮೇಲೆ ದಾಳಿ ಮಾಡಿ ನೌಕರರನ್ನು ಬೆದರಿಸಿ ಬಂದ್ ಮಾಡಿಸಿದ್ದರು. ಈ ಘಟನೆ ವಿರುದ್ಧ ರಿಲಾಯನ್ಸ್ ಸಲ್ಲಿಸಿದ್ದ ದೂರಿನ ಮೇರೆಗೆ ಪಂಜಾಬ್, ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನೋಟೀಸ್ ಕೊಟ್ಟಿದೆ.

news18
Updated:January 5, 2021, 3:36 PM IST
ಮೊಬೈಲ್ ಟವರ್ ವಿಧ್ವಂಸ ಘಟನೆ: ರಿಲಾಯನ್ಸ್ ಅರ್ಜಿ ಮೇರೆಗೆ ಪಂಜಾಬ್ ಸರ್ಕಾರಕ್ಕೆ ಕೋರ್ಟ್ ನೋಟೀಸ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
  • News18
  • Last Updated: January 5, 2021, 3:36 PM IST
  • Share this:
ಅಮೃತಸರ್(ಜ. 05): ರೈತರ ಪ್ರತಿಭಟನೆ ವೇಳೆ ಪಂಜಾಬ್ ರಾಜ್ಯದಲ್ಲಿ ರಿಲಾಯನ್ಸ್ ಸಂಸ್ಥೆಗೆ ಸೇರಿದ ಮೊಬೈಲ್ ಟವರ್ ಸೇರಿದಂತೆ ವಿವಿಧ ಆಸ್ತಿಪಾಸ್ತಿಗೆ ಹಾನಿ ಆದ ಘಟನೆ ಸಂಬಂಧ ಪಂಜಾಬ್ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಪಂಜಾಬ್ ಹರಿಯಾಣ ಹೈಕೋರ್ಟ್ ಇಂದು ನೋಟೀಸ್ ನೀಡಿದೆ. ದುರುದ್ದೇಶಪೂರ್ವಕವಾಗಿ ತನ್ನ ಆಸ್ತಿಪಾಸ್ತಿಗೆ ಧಕ್ಕೆ ತರಲಾಗಿದೆ, ತನ್ನ ನೌಕರರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶಿಸುವಂತೆ ಕೋರಿ ರಿಲಾಯನ್ಸ್ ಜಿಯೋ ಇನ್ಫೋಕಾಮ್ (RJIL) ನಿನ್ನೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಉಚ್ಚ ನ್ಯಾಯಾಲಯ ಈ ನೋಟೀಸ್ ಜಾರಿ ಮಾಡಿದೆ.

ಮುಂದಿನ ವಿಚಾರಣೆ ಫೆಬ್ರವರಿ 8ರಂದು ಇದ್ದು ಅಷ್ಟರಲ್ಲಿ ರಿಲಾಯನ್ಸ್ ಜಿಯೋದ ಆರೋಪದ ಬಗ್ಗೆ ವಿವರಣೆ ನೀಡಬೇಕೆಂದು ಪಂಜಾಬ್ ಸರಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.

ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಪಂಜಾಬ್ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅತುಲ್ ನಂದಾ ಅವರು ಪಂಜಾಬ್ ರಾಜ್ಯದಲ್ಲಿ ವಿದ್ವಂಸ ಘಟನೆಯನ್ನು ತಡೆಯಲು ಹಾಗು ಜಿಯೋ ಟವರ್​ಗಳಿಗೆ ರಕ್ಷಣೆ ಕೊಡಲು 1,019 ಗಸ್ತು ಪಡೆಗಳನ್ನ ನಿಯೋಜಿಸಲಾಗಿದ್ದು, ಟವರ್ ಹಾನಿಯನ್ನು ಅಂದಾಜಿಸಲು 22 ನೋಡಲ್ ಅಧಿಕಾರಿಗಳನ್ನ ಬಿಡಲಾಗಿದೆ ಎಂದು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಿಲಾಯನ್ಸ್​ಗೆ ಮಾಡೋಕೆ ಬೇರೆ ಕೆಲಸಗಳಿವೆ; ಕಾಂಟ್ರಾಕ್ಟ್ ಫಾರ್ಮಿಂಗ್ ವಿಚಾರ ಸುಳ್ಳು: ಪ್ರೊ| ನರಸಿಂಹಪ್ಪ

ರಿಲಾಯನ್ಸ್ ಜಿಯೋ ಇನ್ಫೋಕಾಮ್ ಹಾಗೂ ಅದರ ಮಾತೃ ಸಂಸ್ಥೆ ಆರ್​ಐಎಲ್ ಹಾಗೂ ಇತರ ಅಂಗ ಸಂಸ್ಥೆಗಳ ವಿರುದ್ಧ ದುರುದ್ದೇಶಪೂರ್ವಕವಾಗಿ ಕೆಲ ವ್ಯಕ್ತಿಗಳು ಮತ್ತು ಸಂಘಟನೆಗಳು ಸುಳ್ಳು ಸುದ್ದಿ ಹಬ್ಬಿಸಿವೆ. ಕೇಂದ್ರ ಸರ್ಕಾರ ತಂದ ಕೃಷಿ ಕಾಯ್ದೆಗಳಿಂದ ರಿಲಾಯನ್ಸ್​ನ ಸಂಸ್ಥೆಗಳಿಗೆ ಲಾಭ ಆಗುತ್ತವೆ ಎಂಬಂತೆ ತಪ್ಪಾಗಿ ಬಿಂಬಿಸುವ ಕೆಲಸ ಮಾಡಲಾಗಿದೆ ಎಂದು ನಿನ್ನೆ ಸಲ್ಲಿಸಿದ ಅರ್ಜಿಯಲ್ಲಿ ಜಿಯೋ ಸಂಸ್ಥೆ ಆರೋಪಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಿಗೂ ತಮ್ಮ ಸಂಸ್ಥೆಗಳಿಗೂ ಸಂಬಂಧ ಇಲ್ಲ. ಗುತ್ತಿಗೆ ಕೃಷಿ ಅಥವಾ ಕಾರ್ಪೊರೇಟ್ ಕೃಷಿಗೆ ತಾನು ಕೈ ಹಾಕುವುದಿಲ್ಲ. ಆ ಉದ್ದೇಶಕ್ಕಾಗಿ ಯಾವತ್ತೂ ಕೃಷಿ ಭೂಮಿ ಖರೀದಿಸಿದ್ದಿಲ್ಲ. ಮುಂದೆಯೂ ಖರೀದಿಸುವುದಿಲ್ಲ. ತಮ್ಮ ಸಂಸ್ಥೆಗಳು ನೇರವಾಗಿ ರೈತರಿಂದ ಉತ್ಪನ್ನ ಕೊಳ್ಳುವುದಿಲ್ಲ. ತಮ್ಮ ಪೂರೈಕೆದಾರರು ಎಂಎಸ್​ಪಿ ಅಥವಾ ಬೇರೆ ಅಧಿಕೃತ ನ್ಯಾಯಯುತ ದರದಲ್ಲಿ ರೈತರಿಂದ ಉತ್ಪನ್ನ ಖರೀದಿಸುವಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿತ್ತು.
Published by: Vijayasarthy SN
First published: January 5, 2021, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories